ಬುಧವಾರದ ನಿಮ್ಮ ರಾಶಿಫಲದಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ
Team Udayavani, May 12, 2021, 7:07 AM IST
ಮೇಷ: ನಿಮ್ಮ ಮನಸ್ಸು ಇಬ್ಬಗೆಯ ನೀತಿಯಿಂದ ತೊಳಲಾಡುತ್ತದೆ. ಇಂತಹ ಇಕ್ಕಟ್ಟಿನ ಸ್ಥಿತಿಯನ್ನು ನೀವು ಹೇಗೆ ಬಗೆಹರಿಸುವುದೆಂದು ಆಲೋಚಿಸಿರಿ. ಇದರಲ್ಲಿ ನಿಮಗೆ ಸೂಕ್ತ ಪರಿಹಾರವು ದೊರಕಲಿದೆ.
ವೃಷಭ: ಅಭಿವೃದ್ಧಿಯ ದಿನಗಳಿವು. ಸೂಕ್ತವಾಗಿ ಉಪಯೋಗಿಸಿಕೊಂಡಲ್ಲಿ ಆರ್ಥಿಕವಾಗಿ ಅಭಿವೃದ್ಧಿ ತೋರಿ ಬರುವುದು. ಶ್ರೀ ದೇವರ ದರ್ಶನ ಮಾಡಿದರೆ ಉತ್ತಮ. ಧನಾತ್ಮಕವಾಗಿ ಆಲೋಚನೆ ಮಾಡಿದರೆ ಉತ್ತಮ.
ಮಿಥುನ: ಮಾನಸಿಕವಾಗಿ ತೊಳಲಾಟವನ್ನು ನಿಯಂತ್ರಿಸಿ ಮುನ್ನಡೆದರೆ ಶಾಂತಿ ದೊರಕಲಿದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ದೂರಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಮಾಡಿರಿ.
ಕರ್ಕ: ಕುಟುಂಬದ ಹಿರಿಯರಿಂದ ಸೂಕ್ತ ಮಾರ್ಗದರ್ಶನ ದೊರಕಿ ಮುನ್ನಡೆಗೆ ಸಾಧಕವಾಗಲಿದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿದಾಯಕವಾದೀತು. ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಒಳ್ಳೆಯದು.
ಸಿಂಹ: ಕೆಲಸಕಾರ್ಯಗಳಲ್ಲಿ ಪ್ರಯತ್ನಬಲ ಹಾಗೂ ಆತ್ಮವಿಶ್ವಾಸವಿದ್ದು ಮುಂದುವರಿದಲ್ಲಿ ಉತ್ತಮ ಪರಿಣಾಮ ದೊರಕಲಿದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಮುನ್ನಡೆದರೆ ಉತ್ತಮ ಫಲಿತಾಂಶ ದೊರಕುವುದು.
ಕನ್ಯಾ: ಆಗಾಗ ಅಡೆತಡೆಗಳು ತೋರಿಬಂದು ಕಾರ್ಯಸಾಧನೆಗೆ ತಡೆ ತಂದೀತು. ಕುಟುಂಬದಲ್ಲಿ ಹಿರಿಯರ ಹಿತೋಕ್ತಿಗಳನ್ನು ಆರಿಸಿ ಮುನ್ನಡೆದರೆ ನಿಮಗೆ ಶಾಂತಿ ದೊರಕಲಿದೆ. ಕಾರ್ಯರಂಗದಲ್ಲಿ ಕಿರಿಕಿರಿ ಇದೆ.
ತುಲಾ: ದಿನಗಳು ಸರಾಗವಾಗಿ ಕಳೆದು ಮನಸ್ಸಿಗೆ ಸಮಾಧಾನ ಸಿಗುವುದು. ಶುಭಮಂಗಲ ಕಾರ್ಯಕ್ಕೂ ಅನುಕೂಲವಾದ ದಿನಗಳಿವು. ನಿಮ್ಮೆಣಿಕೆಯಂತೆ ಉದ್ಯೋಗವು ದೊರೆತು ಸಮಾಧಾನವಾಗಲಿದೆ. ಶುಭವಿದೆ.
ವೃಶ್ಚಿಕ: ಕೌಟುಂಬಿಕವಾಗಿ ಬಂಧುಮಿತ್ರರ ಓಲೈಕೆ ಹಿತವೆನಿಸಲಿದೆ. ಓತಪ್ರೇತವಾಗಿ ಧನಾಗಮನವು ಲಾಭಾದಿಕ್ಯಕ್ಕೆ ಕಾರಣವಾದೀತು. ದಾಯಾದಿಗಳ ಕಲಹ, ವೈರ ಶಾಂತವಾಗದು. ತಾಳ್ಮೆ ಇರಲಿ. ಮುನ್ನಡೆಯಿರಿ.
ಧನು: ಅನಿರೀಕ್ಷಿತವಾಗಿ ಆಪ್ತರೊಬ್ಬರಿಗೆ ಆರ್ಥಿಕ ನೆರವು ನೀಡಬೇಕಾಗಬಹುದು. ಹಾಳು ಅಭ್ಯಾಸದ ಮಿತ್ರರಿಂದ ದೂರವಿರಿ. ಗುರುಕರುಣೆ ಇದ್ದರೂ ಶನಿ ಬಿಡನು. ಹಿರಿಯರ ಸೇವಾಶುಶ್ರೂಷಾ ಕಾಲ.
ಮಕರ: ನಿವೇಶನ ಖರೀದಿಗೆ ನಾನಾ ರೀತಿಯ ಅವಕಾಶಗಳು ಒದಗಿ ಬರುವುದು. ವಿದ್ಯಾಭ್ಯಾಸದಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಗೊಂದಲಗಳು ಕೆಲವೊಂದು ವಿಚಾರದಲ್ಲಿ ನಿಮಗೆ ಕಂಡುಬರಬಹುದು. ಎಲ್ಲಕ್ಕೂ ಮೌನವಾಗಿರಿ.
ಕುಂಭ: ತಾಳ್ಮೆಯಿಂದ ವ್ಯವಹರಿಸುವುದರಿಂದ ಕಾರ್ಯಾನುಕೂಲವಾಗಲಿದೆ. ಹಣಕಾಸಿನ ವಿಚಾರದಲ್ಲಿ ಬೆಳವಣಿಗೆ ಕಂಡುಬರುವುದು. ಖರ್ಚುವೆಚ್ಚಗಳ ವಿಚಾರದಲ್ಲಿ ಜಾಗೃತವಾಗಿರಿ. ಸಾಮಾಜಿಕ ಸಂಪರ್ಕವನ್ನು ಗಟ್ಟಿಗೊಳಿಸಿರಿ.
ಮೀನ: ಅವಿವಾಹಿತರು ತಮ್ಮ ಮುಂದಿರುವ ಆಯ್ಕೆಗಳನ್ನು ಪರಿಶೀಲಿಸಿ ಮುಂದುವರಿಯಬೇಕು. ಉತ್ತಮ ಆರೋಗ್ಯವು ಎಲ್ಲಾ ವಿಚಾರಗಳಿಗಿಂತ ಹೆಚ್ಚು ಎಂಬುದನ್ನು ಅರಿತುಕೊಳ್ಳಿರಿ. ನೀವು ನಂಬಿದವರೇ ಕೈಕೊಟ್ಟಾರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.