ಇಂದಿನ ಗ್ರಹಬಲ: ವೈಯಕ್ತಿಕವಾಗಿ ಆಗುಹೋಗುಗಳಲ್ಲಿ ಚಿಂತಿತರಾಗದೆ ಧೈರ್ಯದಿಂದ ಮುನ್ನಡೆಯಿರಿ
Team Udayavani, Feb 15, 2021, 7:46 AM IST
15-02-2021
ಮೇಷ: ಇತರರ ಅಧಿಕಾರವನ್ನು ಸಹಿಸದ ನೀವು ಉದ್ದೇಶವನ್ನೇ ಪ್ರತಿಪಾದಿಸುವ ಮುಖಂಡತ್ವ ಸಾಧಿಸುವುದು ಖಂಡಿತ. ಸ್ವತಂತ್ರ ಜೀವನದ ಅಪೇಕ್ಷೆಯಿಂದ ಇರುವ ನೀವು ಬೇರೆಯವರ ಕೈಕೆಳಗೆ ಇರಲಾರಿರಿ.
ವೃಷಭ: ಮಾತಾಪಿತರಲ್ಲಿ ಗೌರವ, ಸ್ವಂತ ಕುಟುಂಬದಲ್ಲಿ ಆಸಕ್ತಿ- ಪ್ರೀತಿ ಹೊಂದಿರುವ ನಿಮಗೆಸಮಾಧಾನ ಸಿಗಲಿದೆ. ವೈಯಕ್ತಿಕವಾಗಿ ಆಗು- ಹೋಗುಗಳಲ್ಲಿ ಚಿಂತಿತರಾಗದೆ ಧೈರ್ಯದಿಂದ ಮುನ್ನಡೆ, ಜಯಸಾಧಿಸುವಿರಿ.
ಮಿಥುನ: ಆಗಾಗ ದೇಹಾಯಾಸ, ಆರೋಗ್ಯ ನಷ್ಟ ಕೊಟ್ಟು ಕ್ಷೇಶ ತಂದೀತು. ಆದರೆ ಧನ ಸಂಪತ್ತಿಗೆ ಕೊರತೆಯು ಕಾಣದು. ಹೆಚ್ಚಿನ ಸಮಸ್ಯೆಗಳು ಕಂಡು ಬಂದರೂ ಅದು ಮಿಂಚಿನಂತೆ ಕರಗಿ ಹೋಗಲಿದೆ. ಶುಭವಿದೆ.
ಕರ್ಕ: ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ತೋರಿಬರುವುದರಿಂದ ಮನಸ್ಸನ್ನು ಆದಷ್ಟು ನಿಗ್ರಹಿಸುವ ಅಗತ್ಯವಿದೆ. ಶತ್ರುವಿನ ಕೈವಾಡದಿಂದ ವ್ಯವಹಾರದಲ್ಲಿ ಆರ್ಥಿಕ ಕ್ಷೋಭೆ, ಗೃಹ ಕೃತ್ಯದಲ್ಲಿ ಹಲವು ಸಮಸ್ಯೆ ಎದುರಾಗಲಿದೆ.
ಸಿಂಹ: ಯಾವುದೇ ಪರಿಸ್ಥಿತಿಯನ್ನು ಚೆನ್ನಾಗಿ ಎದುರಿಸಿ ನಿಭಾಯಿಸಿ ಮುಂದುವರಿಯುವ ಸಾಧ್ಯತೆ ತಂದೀತು. ವಿವಿಧ ರೀತಿಯಲ್ಲಿ ಧನಾಗಮನಗಳು ಸಕಾಲದಲ್ಲಿ ನಡೆಯುವ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ.
ಕನ್ಯಾ: ಕುಟುಂಬದಲ್ಲಿ ಮಂಗಲ ಕಾರ್ಯಗಳಾದ ಉಪನಯನ, ವಿವಾಹ, ದೇವತಾ ಕಾರ್ಯಗಳಿಂದ ಸಂತಸ ತೋರಿಬರಲಿದೆ. ಹಾಗೇ ಜೀವನವನ್ನು ಇನ್ನಷ್ಟು ಪ್ರಗತಿ ಪಥದಲ್ಲಿ ಮುನ್ನಡೆಸಲು ಸಹಕಾರಿಯಾದೀತು.
ತುಲಾ: ಗುರುವಿನ ಪ್ರತಿಕೂಲತೆ ಆಗಾಗ ಸಮಸ್ಯೆಗಳನ್ನು ತಂದೊಡ್ಡಬಹುದು. ನಿಮ್ಮಿಂದ ಸಹಾಯ ಪಡೆದಮಿತ್ರರು ನಿಮಗೆ ವಂಚಿಸಲಿದ್ದಾರೆ. ಅಧಿಕಾರಿ ವರ್ಗದವರಿಂದ ಅಹಂಭಾವ ತಲೆಯನ್ನು ಕೆಡಿಸಲಿದೆ.
ವೃಶ್ಚಿಕ: ಕೌಟುಂಬಿಕವಾಗಿ ಸ್ತ್ರೀಮೂಲವಾದ ವಿವಾದವೊಂದು ತಲೆಹರಟೆ ತಂದೀತು. ಅಡಿಗೆ ವೃತ್ತಿಯವರಿಗೆ ಉತ್ತಮ ಲಾಭವು ದೊರಕಲಿದೆ. ಬ್ಯಾಂಕಿಂಗ್ ಉದ್ಯಮದವರಿಗೆ ಪ್ರಗತಿ ಇರುತ್ತದೆ. ವಿಲಾಸೀ ವಸ್ತು ಖರೀದಿ ಇದೆ.
ಧನು: ಉದ್ಯಮಿಗಳಿಗೆ ಚೇತರಿಕೆಯು ಕಂಡು ಬರುವುದು. ಆದರೆ ಮಾನಸಿಕವಾಗಿ ಸಮಾಧಾನವಿರದು. ಕೈಹಾಕಿದ ಕೆಲಸ ಕಾರ್ಯಗಳು ಅರ್ಧದಲ್ಲೇ ನಿಂತು ಹೋದಾವು. ಸತತ ಪರಿಶ್ರಮದಿಂದ ವಿಜಯಶಾಲಿಯಾಗುವಿರಿ.
ಮಕರ: ಪ್ರವಾಸ, ಯಾತ್ರಾದಿಗಳಿಂದ ಸತ್ಪಲ ದೊರಕಲಿದೆ. ಸ್ವರ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಿದ್ದು ಸಂತಸ ತರಲಿದೆ. ನೂತನ ದಂಪತಿಗಳಿಗೆ ಸಂತಾನಪ್ರಾಪ್ತಿ ಇದೆ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದೆ.
ಕುಂಭ: ಆದಾಯವು ಉತ್ತಮವಿದ್ದರೂ ಸಮಸ್ಯೆಗಳು ತೊಡಕುಗಳು ತಲೆ ತಿನ್ನಲಿವೆ. ಆರೋಗ್ಯದ ಏರುಪೇರು ಕಡಿಮೆಯಾಗಿ ಸಮಾಧಾನವಾಗಲಿದೆ. ನಿಶ್ಚಿಂತೆಯಿಂದ ಎದುರಾದ ಸಮಸ್ಯೆಗಳಿಗೆ ಪರಿಹಾರ ಹುಡುಕುವಿರಿ.
ಮೀನ: ಕುಟುಂಬ ಸ್ಥಾನದಲ್ಲಿ ನಿಮ್ಮ ಸ್ಥಾನಮಾನ, ಗೌರವಕ್ಕೆ ಚ್ಯುತಿಯಾಗದು. ಚಿನ್ನ, ಬೆಳ್ಳಿ ಖರೀದಿಗೆ ಇದು ಸಕಾಲವಾಗಲಿದೆ. ಗಂಡಂದಿರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಕಾರ್ಯಸಾಧನೆಯಾಗಲಿದೆ. ಶುಭವಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.