ನಿಮ್ಮ ಗ್ರಹಬಲ: ಈ ರಾಶಿಯ ಉದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಬದಲಾವಣೆ ಇದ್ದೀತು.
Team Udayavani, Feb 18, 2021, 7:40 AM IST
18-02-2021
ಮೇಷ: ನಿಮ್ಮ ಇಷ್ಟಾರ್ಥ ಸಿದ್ಧಿಗೆ ಸೂಚನೆ ದೊರಕಲಿದೆ. ಕಾರ್ಯರಂಗದಲ್ಲಿ ನಾನಾ ರೀತಿಯ ಉತ್ಸಾಹದ ಚಟುವಟಿಕೆಗಳು ಗೋಚರಕ್ಕೆ ಬರುತ್ತದೆ. ಆರ್ಥಿಕವಾಗಿ ಆದಾಯವಿರುತ್ತದೆ. ಕಿರು ಸಂಚಾರವಿರುತ್ತದೆ.
ವೃಷಭ: ಗೃಹದಲ್ಲಿ ಶುಭಮಂಗಲ ಯಾ ದೇವತಾ ಕಾರ್ಯಗಳು ಜರಗಿ ಸಂಭ್ರಮವೆನಿಸಲಿದೆ. ಮಿತ್ರ ವರ್ಗ ಯಾ ಬಂಧುಬಳಗದವರ ಸಮ್ಮಿಲನದಿಂದ ಸಂತಸವಾಗಲಿದೆ. ಆರೋಗ್ಯವು ಸುಧಾರಣೆಯಾಗಲಿದೆ.
ಮಿಥುನ: ವ್ಯಾಪಾರ, ವ್ಯವಹಾರಗಳಲ್ಲಿ ಕೊಂಚ ಉತ್ತೇಜನ ತೋರಿ ಬರುವುದು. ಮನೆಯಲ್ಲಿ ಪತ್ನಿಯಿಂದ ಒಳ್ಳೆಯ ಸಹಕಾರವು ತೋರಿಬರುವುದು. ಉದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಬದಲಾವಣೆ ಇದ್ದೀತು.
ಕರ್ಕ: ಸಂಚಾರದಲ್ಲಿ ಜಾಗ್ರತೆ ಮಾಡಿರಿ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ಕಂಡುಬರುವುದು. ಯಾವ ಕೆಲಸಕ್ಕೆ ಕೈಹಾಕುವ ಮುನ್ನ ಆಲೋಚಿಸಿ ಮುನ್ನಡೆಯಿರಿ. ಬಂಧುಗಳ ಆಗಮನದಿಂದ ಸಮಾಧಾನವಾಗಲಿದೆ.
ಸಿಂಹ: ತಾತ್ಕಾಲಿಕ ಹುದ್ದೆಯವರಿಗೆ ಸಂತಸ ದೊರಕಲಿದೆ. ದೂರ ಸಂಚಾರದಿಂದ ಕಾರ್ಯಾನುಕೂಲವಾಗಲಿದೆ. ವಾರಾಂತ್ಯದಲ್ಲಿ ಆಭರಣ ಯಾ ವಸ್ತುಗಳ ಖರೀದಿಯು ಕಂಡುಬಂದೀತು. ಗೆಳೆಯರಿಂದ ಸಲಹೆ ಸಿಗಲಿದೆ.
ಕನ್ಯಾ: ಉದ್ವೇಗ ಹಾಗೂ ಆತಂಕಗಳು ಹಂತಹಂತವಾಗಿ ಕಡಿಮೆಯಾಗಲಿದೆ. ನೂತನ ಸಂಬಂಧದ ಮಾತುಕತೆಗಳು ಫಲಪ್ರದವಾಗಲಿದೆ. ಆರೋಗ್ಯದ ಬಗ್ಗೆ ಆಗಾಗ ಕೊರತೆ ಕಾಣಿಸಿದರೂ ದೈವಾನುಗ್ರಹದಿಂದ ಸರಿ ಹೋದೀತು.
ತುಲಾ: ಉದ್ಯೋಗಿಗಳಿಗೆ ಕೆಲಸದಲ್ಲಿನ ಶ್ರದ್ಧೆಯು ಮುಂಭಡ್ತಿಗೆ ಕಾರಣವಾಗಲಿದೆ. ಕಾರ್ಯರಂಗದಲ್ಲಿ ಪದೇ ಪದೇ ಕಿರುಕುಳ ಕೊಡುತ್ತಿದ್ದ ಶತ್ರುಗಳು ಹೇಳ ಹೆಸರಿಲ್ಲದಂತೆ ದೂರವಾದಾರು. ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಆಯವು ಅಧಿಕ ವಿದ್ದರೂ ವ್ಯಯವು ಅಷ್ಟೇ ಕಂಡುಬರುವುದು. ಕೆಲಸ ಕಾರ್ಯದ ಜವಾಬ್ದಾರಿ, ಸಂಚಾರಗಳು ಅಧಿಕವಾದೀತು. ನಿಮ್ಮ ಪ್ರಭಾವಕ್ಕೆ, ಉನ್ನತಿಗೆ ಹಿತಶತ್ರುಗಳು ಅಸೂಯೆಪಟ್ಟಾರು.
ಧನು: ಆಗಾಗ ಅಭಿವೃದ್ಧಿದಾಯಕ ವಾತಾವರಣ ತೋರಿಬಂದರೂ ಅಸುಖ, ಅತೃಪ್ತಿ ಹಣದ ಮುಗ್ಗಟ್ಟು ಅನುಭವಕ್ಕೆ ಬರಲಿದೆ. ದೂರಸಂಚಾರದಲ್ಲಿ ಜಾಗ್ರತೆ ಮಾಡಿರಿ. ಅನಿರೀಕ್ಷಿತ ಅವಘಡಗಳು ಸಂಭವಿಸೀತು. ಜಾಗ್ರತೆ ಮಾಡಿರಿ.
ಮಕರ: ಕಾರ್ಯಶೀಲರಾದ ನಿಮಗೆ ನಿಮ್ಮ ಪ್ರಯತ್ನಬಲವನ್ನು ಹಾಗೂ ವಿಶ್ವಾಸವನ್ನು ಒರೆಗಲ್ಲಿಗೆ ತಿಕ್ಕಿ ನೋಡುವ ಪ್ರಸಂಗಗಳು ಎದುರಾಗಲಿದೆ. ಮಕ್ಕಳಿಂದ ಸಂತಸ, ಸಮಾಧಾನವು ದೊರಕಲಿದೆ. ಸಹನೆ ಇರಲಿ.
ಕುಂಭ: ನಿರುದ್ಯೋಗಿಗಳಿಗೆ ಜೀವನ ಕಹಿ ಎನಿಸಲಿದೆ. ಬ್ಯಾಂಕಿಂಗ್ ವ್ಯವಹಾರದಲ್ಲಿ ಪ್ರಗತಿ ಇರದು. ರಾಜಕೀಯ ದಲ್ಲಿ ಗೊಂದಲಗಳಿದ್ದರೂ ಹೊಸ ಸ್ಥಾನಮಾನ ಕಲ್ಪಿಸಲಿದೆ. ಕ್ರಿಯಾಶೀಲತೆಯಲ್ಲಿ ನೀವಿಟ್ಟ ವಿಶ್ವಾಸ ಸಫಲವಾಗಲಿದೆ.
ಮೀನ: ವೃತ್ತಿರಂಗದಲ್ಲಿ ಹಿತಶತ್ರುಗಳ ಪೀಡೆ ಕಂಡುಬರಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯದ ಚಟುವಟಿಕೆ ಕಂಡುಬರಲಿದೆ. ಆದಾಯದ ಕೊರತೆ ಇಲ್ಲವಾದರೂ ಖರ್ಚುವೆಚ್ಚಗಳು ನಿರಂತರವಾಗಿರುತ್ತದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.