ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಹೃದಯದ ಭಾವನೆಗಳಿಗೆ ಉತ್ತಮ ಸ್ಪಂದನೆ ದೊರಕಲಿದೆ!
Team Udayavani, Feb 6, 2021, 7:45 AM IST
6-02-2021
ಮೇಷ: ದಿನೇ ದಿನೇ ಅಭಿವೃದ್ಧಿಗೊಳ್ಳುವ ಪಥದಲ್ಲಿ ನೀವು ಇರುತ್ತೀರಿ. ನಿಮ್ಮ ಹಿಂಜರಿಕೆ ಇಲ್ಲದ ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸವು ನಿಮ್ಮನ್ನು ಕಾಪಾಡಲಿದೆ. ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ಒದಗಬಹುದು.
ವೃಷಭ: ಇತರರೊಂದಿಗೆ ಉತ್ತಮ ಸಂವಹನ ಸಾಧಿಸಲು ವಿಫಲರಾಗುತ್ತೀರಿ. ಕೆಟ್ಟ ಚಟಗಳ ದಾಸರಾಗದಂತೆ ಜಾಗ್ರತೆ ವಹಿಸುವ ಅಗತ್ಯವಿದೆ. ನಿಯಂತ್ರಿಸುವುದು ಅಗತ್ಯವಿದೆ. ಕಾರ್ಯರಂಗದಲ್ಲಿ ಯಶಸ್ಸು ಇದೆ.
ಮಿಥುನ: ಆಪ್ತರೊಬ್ಬರ ಕುರಿತು ಅತೀ ಭಾವುಕರಾಗುವಿರಿ. ಅವರ ರಕ್ಷಣೆಗೆ ಕಷ್ಟಪಡುವಿರಿ. ಆರೋಗ್ಯ ಸಮಸ್ಯೆ ಅಲರ್ಜಿಯಂತಹ ಕಾಯಿಲೆ ಕಾಡಬಹುದು. ವೈದ್ಯರ ಅವಶ್ಯಕತೆ ಕಂಡುಬರಬಹುದು. ಶುಭವಿರುತ್ತದೆ.
ಕರ್ಕ: ವ್ಯಾಪಾರ, ವ್ಯವಹಾರದಲ್ಲಿ ಸಾಧಾರಣ ಧನಲಾಭವು ಆಗಲಿದೆ. ಎಣ್ಣೆಕಾಳು ಹಾಗೂ ಕಪ್ಪು ಬಣ್ಣದ ವಸ್ತುಗಳ ವ್ಯಾಪಾರದಿಂದ ಅಧಿಕ ಲಾಭ ಸಿಗಲಿದೆ. ವಾದವಿವಾದದಲ್ಲಿ ಗೆಲುವಿದೆ. ಮಿತ್ರರಿಂದ ಸಹಕಾರ ಸಿಗಲಿದೆ.
ಸಿಂಹ: ನಿಮ್ಮ ಹೃದಯದ ಭಾವನೆಗಳಿಗೆ ಉತ್ತಮ ಸ್ಪಂದನೆ ದೊರಕಲಿದೆ. ಯಾವುದೇ ಕೆಲಸದಲ್ಲಿ ಏಕಾಗ್ರತೆ ಯನ್ನು ಕಾಪಾಡಲು ಕಷ್ಟವಾದೀತು. ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಇದೆ.
ಕನ್ಯಾ: ಅನಿರೀಕ್ಷಿತ ವರ್ತನೆಯ ಮೂಲಕ ಇತರರಲ್ಲಿ ಅಸಹನೆ ಮೂಡಿಸುತ್ತೀರಿ. ಯಾರ ಮಾತಿಗೂ ಬೆಲೆ ಕೊಡುವುದಿಲ್ಲ. ಆದರೂ ನಿಮ್ಮ ಬಗ್ಗೆ ಇತರರು ಅಸಹನೆ ಪಡುವಷ್ಟು ಕೆಟ್ಟದಾಗಿ ವರ್ತಿಸದಿರಿ. ಶುಭವಿದೆ.
ತುಲಾ: ಇತರರೊಂದಿಗೆ ಮುಕ್ತವಾಗಿ ಬೆರೆಯುವ ಅವಶ್ಯಕತೆಯ ಅಗತ್ಯವಿರುತ್ತದೆ. ಏನಾದರೊಂದು ನಿರ್ಧಾರವನ್ನು ಕೈಗೊಳ್ಳುವ ಮೊದಲು ಸ್ವಲ್ಪ ಆಲೋಚಿಸಿ ಮುನ್ನಡೆಯಿರಿ. ನಿಮ್ಮ ಭಾವನೆಯನ್ನು ಇತರರೊಂದಿಗೆ ಹಂಚಿಕೊಳ್ಳಿರಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಕಂಡುಬಂದು ತಲೆ ಕೆಟ್ಟುಹೋದೀತು. ಗೃಹದಲ್ಲಿ ಪತ್ನಿಗೆ ಖರ್ಚು ಕಡಿಮೆ ಮಾಡಲು ಸೂಚನೆ ನೀಡಿರಿ. ಮಕ್ಕಳ ಬಗ್ಗೆ ಅತೀ ಅಂಧವಿಶ್ವಾಸ ಸಲ್ಲದು. ಪರಾಮರ್ಶಿಸಿ ಮುನ್ನಡೆಯಿರಿ.
ಧನು: ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದರೂ ಖರ್ಚಿನ ಭಾಗ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಸೌಹಾರ್ದ ಕದಡಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಗೃಹದಲ್ಲಿ ಪತ್ನಿಯಿಂದ ಉತ್ತಮ ಸಲಹೆಗಳು.
ಮಕರ: ದೂರ ಪ್ರಯಾಣದ ಸಂಭವ ಕಂಡುಬರಬಹುದು. ಕೋರ್ಟುಕಚೇರಿ ಕಾರ್ಯ ಭಾಗದಲ್ಲಿ ತೊಡಕಿನಲ್ಲಿ ಸಿಕ್ಕಿ ಹಾಕಿಕೊಳ್ಳುವಿರಿ. ಅಸಹನೆಯು ನಿಮ್ಮನ್ನು ಕಾಡಲಿದೆ. ಅನಪೇಕ್ಷಿತ ವರ್ತನೆಗೆ ಕಾರಣವಾಗಬಹುದು.
ಕುಂಭ: ಪ್ರಮುಖವಾದ ನಿರ್ಧಾರವನ್ನು ತೆಗೆದುಕೊಳ್ಳಲು ಅವಸರಿಸದಿರಿ. ನಿಮ್ಮ ಸಮಯವು ಸರಿಯಿಲ್ಲ. ಆರ್ಥಿಕ ಸಂಕಷ್ಟವಾಗಿ ಕಂಡುಬರಬಹುದು. ಖರ್ಚುವೆಚ್ಚಗಳನ್ನು ಕಡಿಮೆ ಮಾಡಿರಿ. ಸಮತೋಲನ ಸಾಗಲಿದೆ.
ಮೀನ: ಸಂಬಂಧಗಳು ಸುಗಮಗೊಳ್ಳುತ್ತವೆ. ಕೌಟುಂಬಿಕವಾಗಿ ಸ್ವಲ್ಪ ಏರುಪೇರುಗಳು ಕಂಡುಬರ ಬಹುದು. ಆರ್ಥಿಕವಾಗಿ ಸುಧಾರಣೆ ಕಂಡುಬರುವುದು. ಮನಸ್ಸನ್ನು ಗಟ್ಟಿಗೊಳಿಸಿರಿ. ಹಿರಿಯರ ಮಾತಿಗೆ ಬೆಲೆ ಕೊಡಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.