ಈ ರಾಶಿಯವರಿಗಿಂದು ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತವಾಗಿ ಯಶಸ್ಸು ತೋರಿಬರುವುದು
Team Udayavani, Mar 22, 2021, 7:37 AM IST
22-03-2021
ಮೇಷ: ನಿಮ್ಮಂಥ ಸುಖೀಗಳು ಯಾರು ಇಲ್ಲ ಎಂಬಂತಹ ಅನುಭವ ಗೋಚರಕ್ಕೆ ಬರುತ್ತದೆ. ಸಾಂಸಾರಿಕ ಸಾಮರಸ್ಯ ಇಲ್ಲದೆ ನಿಮ್ಮ ಮನಸ್ಸು ಕೆಡಲಿದೆ. ವೃತ್ತಿರಂಗದಲ್ಲಿ ಬೇರೆಯವರ ವಿಚಾರ, ಮಧ್ಯಸ್ಥಿಕೆ ಬೇಡ.
ವೃಷಭ: ನಿರಾಶಾ ಮನೋಭಾವನೆಯನ್ನು ದೂರಮಾಡಿರಿ. ಆರ್ಥಿಕವಾಗಿ ಚೇತರಿಕೆ ಕಂಡುಬಂದರೂ ಹಿಡಿತ ಬಿಗಿಗೊಳಿಸಿರಿ. ದಾಂಪತ್ಯ ಜೀವನದಲ್ಲಿ ಮುಖ್ಯವಾಗಿ ಸಂಯಮ ಕಾಪಾಡಿಕೊಳ್ಳಿರಿ, ಆರೋಗ್ಯದಲ್ಲಿ ಚೇತರಿಕೆ.
ಮಿಥುನ: ಕಾರ್ಯಕ್ಷೇತ್ರದಲ್ಲಿ ಆತ್ಮವಿಶ್ವಾಸದ ಬಲ ನಿಮಗೆ ಶ್ರೀರಕ್ಷೆಯಾದೀತು. ವ್ಯವಹಾರದಲ್ಲಿ ಬುದ್ಧಿವಂತಿಕೆ ಇದ್ದರೂ ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ. ಅವಿವಾಹಿತರಿಗೆ ಅಚ್ಚರಿಯ ವಾರ್ತೆ ಹರುಷ ತರಲಿದೆ.
ಕರ್ಕ: ಸಣ್ಣಪುಟ್ಟ ಸಂಚಾರದಿಂದ ದೇಹಾಯಾಸ ತೋರಿಬರುವುದು. ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತವಾಗಿ ಯಶಸ್ಸು ತೋರಿಬರುವುದು. ಆತ್ಮವಿಶ್ವಾಸ ಹಾಗೂ ಪ್ರಯತ್ನ ಬಲ ನಿಮಗೆ ಪೂರಕವಾಗಿ ನಿಲ್ಲಲಿದೆ.
ಸಿಂಹ: ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದ ಬೇಕಾಗಿದೆ. ಸ್ವಲ್ಪ ಪರಿಸ್ಥಿತಿಯನ್ನು ನೋಡಿಕೊಂಡು ಹೋಗುವುದು ಉತ್ತಮ. ಆರ್ಥಿಕವಾಗಿ ಭಿನ್ನಾಭಿಪ್ರಾಯದಿಂದ ಗೊಂದಲ ಏರ್ಪಡದ ಹಾಗೆ ಜಾಗ್ರತೆ ಮಾಡಿ.
ಕನ್ಯಾ: ಪತ್ನಿಯ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಹಣಕಾಸಿನ ಹಾಗೂ ಆರೋಗ್ಯದ ವಿಚಾರದಲ್ಲಿ ಮೈಮರೆಯದಿರಿ. ನಿಮ್ಮ ತಾಳ್ಮೆಗೆ ಸವಾಲು ಏರ್ಪಟ್ಟಿàತು. ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನವಿರಲಿ. ಆಹಾರದಲ್ಲಿ ಜಾಗ್ರತೆಯಾಗಿರಿ.
ತುಲಾ: ನಿಮ್ಮ ಕೆಲಸ ಬಿಟ್ಟು ಪರರ ಕಾರ್ಯಗಳಲ್ಲಿ ನಿರತವಾಗುವುದನ್ನು ತಪ್ಪಿಸಿರಿ. ಯೋಗ್ಯ ಸಂಬಂಧಗಳು ಒದಗಿ ಬಂದರೂ ಕಂಕಣಬಲಕ್ಕೆ ಪೂರಕವಾದಾವು. ನ್ಯಾಯಾಲಯ ವಿಚಾರದಲ್ಲಿ ಅಪಮಾನವಾಗಲಿದೆ.
ವೃಶ್ಚಿಕ: ನಿಮ್ಮ ಪ್ರಯತ್ನ ಬಲದ ಫಲದಿಂದ ಉತ್ತಮ ಪರಿಣಾಮಗಳು ಗೋಚರಕ್ಕೆ ಬರಲಿದೆ. ಹಲವು ಕಾರಣಗಳಿಂದ ನಿಮ್ಮ ಆರೋಗ್ಯಕ್ಕೆ ಭಂಗ ತರಲಿದೆ. ಶ್ರಮಪಟ್ಟರೂ ಕೆಲಸಕಾರ್ಯಗಳು ಮಂದಗತಿಯಲ್ಲಿ ಸಾಗಲಿದೆ.
ಧನು: ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿಯು ಕಂಡುಬರುವುದು. ಎಷ್ಟು ಶ್ರಮಪಟ್ಟರೂ ಕೆಲಸಕಾರ್ಯಗಳಲ್ಲಿ ನಿಧಾನಗತಿಯಲ್ಲಿ ಸಾಗಲಿದೆ. ಹಿತಶತ್ರುಗಳ ಬಗ್ಗೆ ಉದಾಸೀನತೆ ಮಾಡದಿರಿ. ಆರ್ಥಿಕವಾಗಿ ಸಮಾಧಾನವಿರುತ್ತದೆ.
ಮಕರ: ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ಮಾಡಿರಿ. ನಿಮ್ಮ ಒಳ್ಳೆತನದ ಉಪಯೋಗವನ್ನು ಪಡೆದಾರು. ನಿಮ್ಮ ಸಮಯವು ನಿಮಗೆ ಪೂರಕವಾಗಿರುವುದಿಲ್ಲ. ಆದ್ದರಿಂದ ಸ್ವಲ್ಪ ತಾಳ್ಮೆ ವಹಿಸುವುದು ಉತ್ತಮ .
ಕುಂಭ: ಕೆಲಸ ಕಾರ್ಯಗಳಲ್ಲಿ ಪ್ರಗತಿ ಎಣಿಕೆಯಷ್ಟು ಇರದು. ಬದುಕು ಹೇಗೆ ಬರುವುದೋ ಹಾಗೆ ಸ್ವೀಕರಿಸಿರಿ ಆದರೂ ಅನಾವಶ್ಯಕವಾಗಿ ದುಂದುವೆಚ್ಚ ಮಾಡದಿರಿ. ಹಿರಿಯರ ಸಲಹೆಗಳು ಮಾರ್ಗವನ್ನು ಕಲ್ಪಿಸಲಿದೆ.
ಮೀನ: ನಿಮ್ಮ ಬಗ್ಗೆ ಪೋಷಕರ ಗೌರವವು ಹೆಚ್ಚಲಿದೆ. ಉದ್ಯೋಗಸ್ಥರಿಗೆ ಭಡ್ತಿ ಲಭಿಸಲಿದೆ. ಮಹಿಳೆಯರ ಬಹುದಿನದ ಬೇಡಿಕೆಗಳು ಈಡೇರಲಿದೆ. ಕಲಾವಿದರು, ಸಾಹಿತಿಗಳು ಯಶಸ್ಸು ಕಾಣುವಿರಿ. ಆರೋಗ್ಯ ಕಾಪಾಡಿಕೊಳ್ಳಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.