ರಾಶಿಫಲ: ಈ ರಾಶಿಯವರು ವ್ಯಾಪಾರ, ವ್ಯವಹಾರದಲ್ಲಿ ಸದ್ಯದ ಮಟ್ಟಿಗೆ ಹೂಡಿಕೆ ಮಾಡುವುದು ಬೇಡ.
Team Udayavani, Apr 16, 2021, 7:38 AM IST
16-04-2021
ಮೇಷ: ಮಾನಸಿಕವಾಗಿ ಒತ್ತಡ, ವರಮಾನದಲ್ಲಿ ಅಸ್ಥಿರತೆ, ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಕಾರ್ಯ ನಿರ್ವಹಣೆಗಳಲ್ಲಿ ಶ್ರಮವು ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಶುಭಫಲಗಳು ಅನುಭವಕ್ಕೆ ಬರಲಿದೆ.
ವೃಷಭ: ಸಾಂಸಾರಿಕವಾಗಿ ಉತ್ತಮ ಬದಲಾವಣೆ ಇದೆ. ಶುಭ ಕಾರ್ಯದಲ್ಲಿ ಪ್ರಗತಿ ಕಂಡು ಬರುವುದು. ಉದ್ಯೋಗದಲ್ಲಿ ಸಫಲತೆ ಪ್ರಾಪ್ತಿ ಇದೆ. ಅನಿರೀಕ್ಷಿತ ರೀತಿಯಲ್ಲಿ ನಿಮ್ಮ ಕಾರ್ಯಸಾಧನೆಯಾಗಲಿದೆ. ಕಾರ್ಯದಲ್ಲಿ ವಿಳಂಬವಿದೆ.
ಮಿಥುನ: ಧನವ್ಯಯವು ಹಲವು ರೀತಿಯಲ್ಲಿ ಕಂಡು ಬರುವುದು. ಆದರೂ ಅದರಲ್ಲಿ ಸಫಲತೆ ಹಾಗೂ ಸಮಾಧಾನ ಕಂಡುಬರುವುದು. ಮನೋವ್ಯಾಕುಲತೆಗೆ ಗುರಿಯಾಗದಿರಿ. ಮನಸ್ಸಿನ ಎಣಿಕೆಯಂತೆ ಕಾರ್ಯಗಳು ನಡೆದಾವು.
ಕರ್ಕ: ಹಿಡಿದ ಕಾರ್ಯವನ್ನು ಛಲ ಹಿಡಿದು ಮುಂದುವರಿಸಿದರೆ ಸಾರ್ಥಕತೆ ಕಂಡು ಬರುವುದು. ಅತಿಥಿಗಳ ಆಗಮನದಿಂದ ಸಂತಸವಾಗಲಿದೆ. ಆರೋಗ್ಯದಲ್ಲಿ ಜಾಗ್ರತೆ ಇರಲಿ. ನೀವು ಒಳ್ಳೆಯದು ಮಾಡಲು ಹೋದರೆ ಕೆಟ್ಟ ಮಾತು ಬಂದೀತು.
ಸಿಂಹ: ಕುಟುಂಬದ ಜನರ ಸಹಕಾರವು ಉತ್ತಮವಿದ್ದು ಮಾನಸಿಕವಾಗಿ ತೃಪ್ತಿ ದೊರಕಲಿದೆ. ಹಿತಶತ್ರುಗಳ ಚಲನೆಯ ಮೇಲೆ ಕಣ್ಣಿಡಿರಿ. ಮಾತಿಗೆ ಮರುಳಾಗದಿರಿ. ಕಾರ್ಯಸಾಧನೆಯಲ್ಲಿ ಯಶಸ್ಸು ತೋರಿ ಮನೋಕಾಮನೆ ಪೂರ್ಣವಾದೀತು.
ಕನ್ಯಾ: ಕಾರ್ಯಸಾಧನೆಯಲ್ಲಿ ಹೆಚ್ಚಿನ ಯಶಸ್ಸು ತೋರಿಬಂದು ಒಳ್ಳೆಯ ಕೀರ್ತಿ ಗಳಿಸುವಿರಿ. ಇದಕ್ಕೆ ನಿಮ್ಮ ತಾಳ್ಮೆಯೇ ಕಾರಣವಾಗಲಿದೆ. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರು ಕಂಡುಬರುವುದು. ಚಿಂತಿಸಿದ ಕಾರ್ಯದಲ್ಲಿ ಸಫಲತೆ ಇದೆ.
ತುಲಾ: ಶುಭ ವಾರ್ತೆಯು ಪ್ರಕಟವಾಗಿ ಸಂತಸದಿಂದ ಸಂಭ್ರಮಿಸುವಿರಿ. ಕಾರ್ಯಕ್ಷೇತ್ರದಲ್ಲಿ ದೃಢ ಮನಸ್ಸಿನಿಂದ ಮುಂದುವರಿಯಿರಿ. ನೂತನ ದಂಪತಿಗಳಿಗೆ ಹರುಷ ತರಲಿದೆ. ಸಣ್ಣ ಮಟ್ಟಿನ ಸಂಚಾರವು ಒದಗಿ ಬರುವುದು.
ವೃಶ್ಚಿಕ: ನಿಮ್ಮೆಣಿಕೆಯಂತೆ ಕಾರ್ಯ ಜಯವಾಗುವುದರಿಂದ ಆ ಕುರಿತು ಚಿಂತೆ ಬೇಡ. ವೈವಾಹಿಕ ಜೀವನವು ಉತ್ತಮವಿದ್ದು ಸಂತಸವಿದೆ. ಅಧಿಕ ಲಾಭವಿದ್ದರೂ ಖರ್ಚುವೆಚ್ಚಗಳು ಅಧಿಕವಾಗಿ ಕಂಡುಬರಲಿದೆ. ಜಾಗ್ರತೆ ಮಾಡಿರಿ.
ಧನು: ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಹೊರೆ ಬೀಳಲಿದೆ. ವ್ಯಾಪಾರ, ವ್ಯವಹಾರದಲ್ಲಿ ಸದ್ಯದ ಮಟ್ಟಿಗೆ ಹೂಡಿಕೆ ಬೇಡ. ಆರ್ಥಿಕ ಸ್ಥಿತಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಂಡು ಬರಲಿದೆ. ಇದ್ದುದನ್ನು ಇದ್ದ ಹಾಗೆ ನಡೆಸಿಕೊಂಡು ಹೋಗಿರಿ.
ಮಕರ: ಗುರುಹಿರಿಯರ ಮಾರ್ಗದರ್ಶನದಿಂದ ಮುನ್ನ ತೋರಿಬರುವುದು. ಉದ್ಯೋಗ ವ್ಯವಹಾರದಲ್ಲಿ ಸ್ಥಿರತೆ ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ. ದೂರ ಪ್ರಯಾಣದಲ್ಲಿ ಜಾಗ್ರತೆ ಮಾಡಿರಿ. ವಾಹನದಿಂದ ಅನುಕೂಲವಾಗಲಿದೆ.
ಕುಂಭ: ಕೆಲವೊಂದು ಪ್ರತಿಕೂಲ ಸ್ಥಿತಿಯಲ್ಲೂ ನಿಮ್ಮ ಕಠಿಣ ಪರಿಶ್ರಮ ಹಾಗೂ ಧ್ಯೆಯವು ಕೂಡಿ ವಿಜಯ ಪ್ರಾಪ್ತಿಯಾಗಲಿದೆ. ಆರ್ಥಿಕ ವ್ಯವಹಾರದಲ್ಲಿ ಅಡಚಣೆ ಕಂಡುಬರುವುದು. ಮಾನಸಿಕವಾಗಿ ಅಸ್ಥಿರತೆಯು ಕಾಡಲಿದೆ.
ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ದಾಯಾದಿಗಳಿಂದ ಅವಮಾನ ಪ್ರಸಂಗವಿದೆ. ಆರ್ಥಿಕ ವಾಗಿ ತುಂಬಾ ಖರ್ಚು ಕಂಡುಬರುವುದು. ಮಾನಸಿಕವಾಗಿ ಅಸ್ಥಿರತೆ ಕಾಡಲಿದೆ. ಒಂದಿಲ್ಲೊಂದು ಸಮಸ್ಯೆ ಕಾಡಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.