ಈ ರಾಶಿಯ ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು!
Team Udayavani, Jan 31, 2021, 8:11 AM IST
31-01-2021
ಮೇಷ: ಅವಿವಾಹಿತರಿಗೆ ಮಂಗಲಕಾರ್ಯದ ಶುಭವಾರ್ತೆ. ವಿವಾಹಿತರಿಗೆ ಸಂತಾನ ಲಾಭದ ಸಂಭ್ರಮವಿದೆ. ಪೋಷಕರ ಆರೋಗ್ಯಕ್ಕಾಗಿ ಖರ್ಚುವೆಚ್ಚ, ಜೊತೆ ಪ್ರಯಾಣವು ಕೂಡಿ ಬರುವುದು. ದಿನಾಂತ್ಯ ಶುಭವಿದೆ.
ವೃಷಭ: ದೂರ ಪ್ರಯಾಣದಿಂದ ಆರೋಗ್ಯ ಹಾನಿಯಾದೀತು. ಗೃಹಾಲಂಕಾರ ಯಾ ಅಭಿವೃದ್ಧಿಯ ಬಗ್ಗೆ ಖರ್ಚು ತಂದೀತು. ವಿವಾಹಿತರಿಗೆ ಸಂತತಿ ಲಾಭವಿದೆ. ಕಾರ್ಯಕ್ಷೇತ್ರದಲ್ಲಿ ಸ್ಥಾನ ಪ್ರಾಪ್ತಿಯೂ, ಭಡ್ತಿಯು ದೊರಕುವುದು.
ಮಿಥುನ: ಸೋದರ ವರ್ಗದವರೊಡನೆ ಮನಸ್ತಾಪ ಕಂಡುಬಾರದಂತೆ ಜಾಗ್ರತೆ ಮಾಡಿರಿ. ಕಚೇರಿಯಲ್ಲಿ ಕಾರ್ಯಭಾರದ ಹೊರೆಯಿಂದ ಬೇಸರ ಬಂದೀತು. ಸಾಹಸ ಪ್ರವೃತ್ತಿಯವರಿಗೆ ಮುಂಭಡ್ತಿ ಹಾಗೂ ಸೂಕ್ತ ಅವಕಾಶವಿದೆ.
ಕರ್ಕ: ಕೋಪಕ್ಕೆ ಎಡೆಗೊಟ್ಟು ಆಪ್ತೇಷ್ಟರ ಆತ್ಮೀಯತೆಗೆ ಕುತ್ತು ತಂದುಕೊಳ್ಳುವಿರಿ. ಪತ್ನಿಯೊಡನೆ ಮಾತಿಗೆ ಮಾತು ಬೆಳೆದು ಬೇಸರವಾದೀತು. ಆದಾಯವು ಚೆನ್ನಾಗಿದ್ದರೂ ಖರ್ಚು ಅಷ್ಟೇ ಇರುತ್ತದೆ. ಧೈರ್ಯವಾಗಿರಿ.
ಸಿಂಹ: ಹೊಸದಾದ ಶತ್ರು ಹುಟ್ಟಿ ನಿಮ್ಮ ಕಾರ್ಯಕ್ಕೆ ತಡೆ ತಂದಾನು. ಸಲ್ಲದ ಆರೋಪಕ್ಕೆ ಗುರಿಯಾಗದಿರಿ. ಜಾಗ್ರತೆ. ಪ್ರೇಮ ಪ್ರಕರಣಕ್ಕೆ ಎಡೆಗೊಡಬೇಡಿರಿ. ಮೇಲಾಧಿಕಾರಿಗಳಿಂದ ವಿನಾಕಾರಣ ಪೀಡೆ ಕಂಡುಬರುವುದು. ಶುಭವಿದೆ.
ಕನ್ಯಾ: ಆಶಾಭಂಗವಾಗಿ ಸ್ಥಾನಪಲ್ಲಟ ಯೋಗವೂ ಕಂಡುಬಂದೀತು. ಸಾಹಸದ ಯಾವ ಕೆಲಸಕ್ಕೂ ಕೈಹಾಕದಿರಿ. ಧನವಿನಿಯೋಗವೂ ವಿವೇಚನೆಗೆ ಒಳಗಾಗಲಿ. ಮಿತ್ರನ ಸಹಾಯ, ಬಂಧುಗಳ ಸಹಾಯದಿಂದ ಕಾರ್ಯ ಕೈಗೂಡಲಿದೆ.
ತುಲಾ: ಸ್ವತಂತ್ರ ವೃತ್ತಿಪರರಿಗೂ ಧನಚಿಂತೆ ಕಾಡಲಿದೆ. ದೀರ್ಘಕಾಲೀನ ಧನವಿನಿಯೋಗವು ಫಲ ನೀಡಲಿದೆ. ಗೃಹಕೃತ್ಯ ಹಾಗೂ ಕಾರ್ಯಕ್ಷೇತ್ರದಲ್ಲಿ ತೃಪ್ತಿ ಇದೆ. ಉಷ್ಣಭಾದೆಯಿಂದ ಆರೋಗ್ಯದಲ್ಲಿ ಏರುಪೇರು ಇದ್ದೀತು.
ವೃಶ್ಚಿಕ: ಹೊಸ ಉದ್ಯೋಗ ಪ್ರಾಪ್ತಿ ಸಂಭವವಿದೆ. ಕಾರ್ಯನಿಮಿತ್ತ ದೂರ ಪ್ರಯಾಣದ ಸಂಭವವಿದೆ. ಅನಪೇಕ್ಷಿತ ಸಹಾಯಹಸ್ತ ಮುಂದೆ ಧರ್ಮಸಂಕಟಕ್ಕೆಡೆ ಮಾಡಲಿದೆ. ಕಾರ್ಯ ಬಾಹುಳ್ಯದಿಂದ ದೇಹಭಾದೆ ಕಾಡಲಿದೆ.
ಧನು: ನೆಂಟರಿಷ್ಟರ ಆಗಮನದಿಂದ ಕೊಂಚ ಸಂತಸವಿದ್ದರೂ ಬೇಡಿಕೆಗೂ, ಪೂರೈಕೆಗೂ ಅಜಗಜಾಂತರ. ಚಿಂತೆ ತಪ್ಪದು. ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು. ಜಾಗ್ರತೆ.
ಮಕರ: ನೂತನ ಕಾರ್ಯಸಿದ್ಧಿ ಇದೆ. ಆದರೂ ಕಾರ್ಯ ವಿಳಂಬವಾದೀತು. ಆಸ್ತಿ ಯಾ ಗೃಹ ಯಾ ನಿವೇಶನ ಖರೀದಿ ಯೋಗ ಕಂಡುಬಂದೀತು. ಗುಡಿ ಕೈಗಾರಿಕೆಯವರಿಗೆ ಅಭಿವೃದ್ಧಿ ಕಂಡುಬರುವುದು. ಆದರೂ ಜಾಗ್ರತೆ ಅಗತ್ಯವಿದೆ.
ಕುಂಭ: ಪುಣ್ಯ ಕಾರ್ಯಗಳಿಗೆ ಸದಾವಕಾಶವಿದೆ. ತೀರ್ಥಯಾತ್ರೆ ಯಾ ಪ್ರವಾಸ ಯಾ ಚಾರಣವೋ ಖುಶಿ ಕೊಡಲಿದೆ. ಪದೇ ಪದೇ ಎಡತಾಕುವ ಹಿತಶತ್ರುಗಳ ಕಾಟದಿಂದ ಬೇಸತ್ತು ಜೀವನವೇ ಸಾಕೆನಿಸಲಿದೆ. ಶುಭವಿದೆ.
ಮೀನ: ಕೈ ಕೆಳಗಿನವರಲ್ಲಿ ಪರಸ್ಪರ ಸಂಘರ್ಷವೇರ್ಪಟ್ಟು ಮನೆ ಕೆಲಸ ಕಾರ್ಯದಲ್ಲಿ ಭಂಗ ಬರಲಿದೆ. ಋಣಭಾರ ಹೆಚ್ಚಾಗಿ ಮಾನ ಹೋಗುವ ಪ್ರಸಂಗ ಎದುರಾದೀತು. ಗೆಳೆಯನ ಸಕಾಲ ಸಹಾಯದಿಂದ ಪಾರಾಗುವಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.