karnataka polls 2023: ಅಂತಿಮ ಕಣದಲ್ಲಿ 2,613 ಅಭ್ಯರ್ಥಿಗಳು

ಬಳ್ಳಾರಿಯಲ್ಲಿ ಅತ್ಯಧಿಕ 24, ಹೊಸಕೋಟೆಯಲ್ಲಿ 15 ಮಂದಿ ಪಕ್ಷೇತರರು

Team Udayavani, Apr 25, 2023, 6:27 AM IST

karnataka polls 2023: ಅಂತಿಮ ಕಣದಲ್ಲಿ 2,613 ಅಭ್ಯರ್ಥಿಗಳು

ಬೆಂಗಳೂರು: ರಾಜ್ಯದ 16ನೇ ವಿಧಾನಸಭೆ ಚುನಾವಣೆಗೆ ಕಣ ಚಿತ್ರಣ ಸ್ಪಷ್ಟಗೊಂಡಿದ್ದು, ಒಟ್ಟು 2,613 ಅಭ್ಯರ್ಥಿಗಳು ಅಂತಿಮ ಅಖಾಡದಲ್ಲಿ ಉಳಿದಿದ್ದಾರೆ.

ಉಮೇದುವಾರಿಕೆ ವಾಪಸ್‌ ಪಡೆದುಕೊಳ್ಳಲು ಸೋಮವಾರ (ಏ.24) ಕೊನೇ ದಿನವಾಗಿತ್ತು. ಅದರಂತೆ ಒಟ್ಟು 517 ಅಭ್ಯರ್ಥಿಗಳು ನಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಈಗ 2,427 ಪುರುಷ, 184 ಮಹಿಳಾ ಹಾಗೂ ಇಬ್ಬರು ಇತರರು ಸೇರಿ ಒಟ್ಟು 2,613 ಅಭ್ಯರ್ಥಿಗಳು ಕಣದಲ್ಲಿ ಬಾಕಿ ಉಳಿದುಕೊಂಡಿದ್ದಾರೆ.

ಬಿಜೆಪಿಯಿಂದ 224, ಕಾಂಗ್ರೆಸ್‌ನಿಂದ 223, ಆಮ್‌ ಆದ್ಮಿ ಪಕ್ಷದಿಂದ 209, ಜೆಡಿಎಸ್‌ನಿಂದ 207, ಬಿಎಸ್‌ಪಿಯಿಂದ 133, ಸಿಪಿಎಂ 1, ಜೆಡಿಯು 8, ಎನ್‌ಪಿಪಿ 2, ನೊಂದಾಯಿತ ಮಾನ್ಯತೆ ಹೊಂದಿಲ್ಲದ ಪಕ್ಷಗಳಿಂದ 685 ಹಾಗೂ ಪಕ್ಷೇತರರು 918 ಅಭ್ಯರ್ಥಿಗಳು ಈ ಬಾರಿಯ ಚುನಾವಣಾ ಕಣದಲ್ಲಿ ಇದ್ದಾರೆ.

ಈ ಪೈಕಿ ಅತಿ ಹೆಚ್ಚು 24 ಅಭ್ಯರ್ಥಿಗಳು ಬಳ್ಳಾರಿ ನಗರ ಕ್ಷೇತ್ರದಲ್ಲಿ ಇದ್ದರೆ, ಅತಿ ಕಡಿಮೆ ಯಮಕನಮರಡಿ ಕ್ಷೇತ್ರ ಸೇರಿ ಏಳು ಕ್ಷೇತ್ರಗಳಲ್ಲಿ ತಲಾ 5ರಂತೆ ಅತಿ ಕಡಿಮೆ ಅಭ್ಯರ್ಥಿಗಳು ಇದ್ದಾರೆ. ಒಟ್ಟು 14 ಕ್ಷೇತ್ರಗಳಲ್ಲಿ ಹೆಚ್ಚು ಮಹಿಳಾ ಅಭ್ಯರ್ಥಿಗಳು ಮೂರು ಕ್ಷೇತ್ರಗಳಲ್ಲಿ 6 ಮಂದಿ ಇದ್ದಾರೆ. ಉಳಿದಂತೆ ನಾಲ್ಕು ಕ್ಷೇತ್ರಗಳಲ್ಲಿ ತಲಾ 5 ಮಹಿಳಾ ಅಭ್ಯರ್ಥಿಗಳು, 7 ಕ್ಷೇತ್ರಗಳಲ್ಲಿ ತಲಾ 4 ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಅತಿಹೆಚ್ಚು ಪಕ್ಷೇತರರು 15 ಅಭ್ಯರ್ಥಿಗಳು ಹೊಸಕೋಟೆ ಕ್ಷೇತ್ರದಲ್ಲಿ ಇದ್ದಾರೆ. ಅತಿ ಕಡಿಮೆ ಪಕ್ಷೇತರರು ಇರುವ ಕ್ಷೇತ್ರ – ಗುರುಮಿಠಕಲ್‌, ಮಾನ್ವಿ, ಲಿಂಗಸಗೂರು, ಬ್ಯಾಡಗಿ, ಉಡುಪಿ, ಕಾಪು, ತೀರ್ಥಹಳ್ಳಿ, ಕಂಪ್ಲಿ, ಬಂಟ್ವಾಳ, ಮುದ್ದೆಬಿಹಾಳ.

ಐದೇ ಮಂದಿ ಸ್ಪರ್ಧಾ ಕಣದಲ್ಲಿ!: ಅತಿ ಕಡಿಮೆ ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ.

ಮಹಿಳೆಯರಿಗೆ ಮಹಿಳೆಯರೇ ಸವಾಲು: ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಮಹಿಳಾ ಪ್ರಮುಖ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಪಕ್ಷೇತರ ಮಹಿಳೆಯರೇ ಸವಾಲು ಹಾಕಿದ್ದಾರೆ.

ರಾಜರಾಜೇಶ್ವರಿನಗರದಿಂದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌. ಕುಸುಮಾ ಸ್ಪರ್ಧಿಸಿದ್ದರೆ ಅಲ್ಲಿ 6 ಮಂದಿ ಪಕ್ಷೇತರು ಮಹಿಳೆಯರು ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಕಣದಲ್ಲಿರುವ ಜಯನಗರ ಕ್ಷೇತ್ರದಿಂದ ಸಹ 6 ಪಕ್ಷೇತರ ಮಹಿಳೆಯರು ಇದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಸ್ಪರ್ಧಿಸಿರುವ ನಿಪ್ಪಾಣಿ ಕ್ಷೇತ್ರದಲ್ಲಿ 6 ಮಂದಿ ಮಹಿಳೆಯರು ಪಕ್ಷೇತರರು ಇದ್ದಾರೆ. ಕಾಂಗ್ರೆಸ್‌ನ ರೂಪಕಲಾ ಶಶಿಧರ ಹಾಗೂ ಬಿಜೆಪಿಯ ಅಶ್ವಿ‌ನಿ ಸಂಪಗಿ ಸ್ಪರ್ಧಿಸಿರುವ ಕೆಜಿಎಫ್ ಕ್ಷೇತ್ರದಲ್ಲಿ 6 ಮಹಿಳೆಯರು ಪಕ್ಷೇತರರು ಇದ್ದಾರೆ. ಕಾಂಗ್ರೆಸ್‌ ಲಕ್ಷ್ಮೀ ಹೆಬ್ಟಾಳ್ಕರ್‌ ಅವರು ಸ್ಪರ್ಧಿಸಿರುವ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲೂ ನಾಲ್ವರು ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಎರಡು ಬಿಯು ಬಳಕೆ
ಅಂತಿಮ ಕಣದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವ ರಾಜ್ಯದ 16 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ 2 ಬ್ಯಾಲೆಟ್‌ ಯೂನಿಟ್‌ (ಬಿಯು) ಬಳಕೆ ಮಾಡಲಾಗುತ್ತದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. ರಾಜಾಜಿನಗರ, ಹೊಸಕೋಟೆ, ಯಲಹಂಕ, ಬ್ಯಾಟರಾಯನಪುರ, ಬಳ್ಳಾರಿ ನಗರ, ಹನೂರು, ಗೌರಿಬಿದನೂರು, ಚಿಕ್ಕಮಗಳೂರು, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌, ಕೋಲಾರ, ಗಂಗಾವತಿ, ಶ್ರೀರಂಗಪಟ್ಟಣ, ಕೃಷ್ಣರಾಜ, ನರಸಿಂಹರಾಜ, ರಾಯಚೂರು ಕ್ಷೇತ್ರಗಳಲ್ಲಿ ಈ ಬಾರಿ ಎರಡು ಬ್ಯಾಲೆಟ್‌ ಯೂನಿಟ್‌ ಬಳಸಲಾಗುತ್ತದೆ.

ಅತಿ ಹೆಚ್ಚು ಅಭ್ಯರ್ಥಿಗಳು
ಬಳ್ಳಾರಿ ನಗರ-24
ಆನೇಕಲ್‌-23
ಹೊಸಕೋಟೆ-23
ಚಿತ್ರದುರ್ಗ-21
ಯಲಹಂಕ-20
ಗಂಗಾವತಿ-19
ರಾಯಚೂರು-18
ಗೌರಿಬಿದನೂರು-18
ಕೋಲಾರ-18
ಹನೂರು-18
ರಾಜಾಜಿನಗರ-18
ಕೃಷ್ಣರಾಜ-17
ನರಸಿಂಹರಾಜ-17
ಶ್ರೀರಂಗಪಟ್ಟಣ-17
ಹುಬ್ಬಳ್ಳಿ ಧಾರವಾಡ -ಸೆಂಟ್ರಲ್‌-16
ಚಿಕ್ಕಮಗಳೂರು-16

ಹೆಚ್ಚು ಮಹಿಳಾ ಅಭ್ಯರ್ಥಿಗಳು
ರಾಜಾರಾಜೇಶ್ವರಿನಗರ-6
ಜಯನಗರ-6
ಕೆಜಿಎಫ್-6
ನಿಪ್ಪಾಣಿ-5
ಹರಪನಹಳ್ಳಿ-5
ಮಾಲೂರು-5
ಚಿಕ್ಕಪೇಟೆ-5
ಬೆಳಗಾವಿ ಗ್ರಾಮಾಂತರ-4
ಬಸವನಬಾಗೇವಾಡಿ-4
ನಾಗಠಾಣ-4
ಗಾಂಧಿನಗರ-4
ಮಹಾಲಕ್ಷ್ಮೀಲೇಔಟ್‌-4
ಹೆಬ್ಬಾಳ-4
ವರುಣಾ-4

ಹೆಚ್ಚು ಪಕ್ಷೇತರರು
ಹೊಸಕೋಟೆ-15
ಬಳ್ಳಾರಿ ನಗರ-12
ಶ್ರೀರಂಗಪಟ್ಟಣ-12
ಚಿತ್ರದುರ್ಗ-11
ಗೌರಿಬಿದನೂರು-10
ಕೋಲಾರ-10
ಯಲಹಂಕ-10

ಅಂತಿಮ ಕಣದಲ್ಲಿ ಬಂಡುಕೋರರು…
ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಮನವೊಲಿಕೆಗೂ ಬಗ್ಗದೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿ (ಪಕ್ಷೇತರ) ಗಳಾಗಿ ಕಣದಲ್ಲಿ ಉಳಿದಿರುವ ಬಂಡುಕೋರರು…

ಬಿಜೆಪಿ ಬಂಡಾಯ
ಬೈಲಹೊಂಗಲ- ಮಾಜಿ ಶಾಸಕ ವಿಶ್ವನಾಥ ಪಾಟೀಲ
ಚನ್ನಗಿರಿ: ಮಾಡಾಳು ಮಲ್ಲಿಕಾರ್ಜುನ್‌
ಕಾರವಾರ: ಮಾಜಿ ಶಾಸಕ ಗಂಗಾಧರ ಭಟ್‌
ಅಫ‌ಜಲಪುರ: ನಿತೀನ್‌ ಗುತ್ತೇದಾರ
ಕುಂದಗೋಳ: ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ
ರಾಣಿಬೆನ್ನೂರು: ಸಂತೋಷಕುಮಾರ ಪಾಟೀಲ
ಹೊಸದುರ್ಗ: ಗೂಳಿಹಟ್ಟಿ ಶೇಖರ
ಹೊಳಲ್ಕೆರೆ: ಡಾ|ಜಯಸಿಂಹ
ಬಾಗಲಕೋಟೆ: ಮಲ್ಲಿಕಾರ್ಜುನ ಚರಂತಿಮಠ
ನಾಗಮಂಗಲ- ಫೈಟರ್‌ ರವಿ
ಕೊಳ್ಳೇಗಾಲ- ಕಿನಕಹಳ್ಳಿ ರಾಚಯ್ಯ
ಗಾಂಧಿನಗರ- ಕೃಷ್ಣಯ್ಯ ಶೆಟ್ಟಿ
ಮಾಲೂರು-ಹೂಡಿ ವಿಜಯಕುಮಾರ್‌
ತುಮಕೂರು-ಸೊಗಡು ಶಿವಣ್ಣ,
ಪುತ್ತೂರು- ಅರುಣ್‌ಕುಮಾರ್‌ ಪುತ್ತಿಲ
ಕೊರಟಗೆರೆ- ಮುನಿಯಪ್ಪ

ಕಾಂಗ್ರೆಸ್‌ ಬಂಡಾಯ
ಅರಭಾವಿ- ಭೀಮಪ್ಪ ಗಡಾದ
ರಾಯಬಾಗ- ಶಂಭು ಕೃಷ್ಣಾ ಕಲ್ಲೋಳಿಕರ
ಬೀದರ ದಕ್ಷಿಣ- ಚಂದ್ರಾ ಸಿಂಗ್‌
ಶಿರ‌ಹಟ್ಟಿ: ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ
ಜಗಳೂರು: ಮಾಜಿ ಶಾಸಕ ಎಚ್‌.ಪಿ.ರಾಜೇಶ
ಶಿವಮೊಗ್ಗ ಗ್ರಾಮಾಂತರ: ಭೀಮಪ್ಪ
ಶಿಕಾರಿಪುರ: ನಾಗರಾಜ ಗೌಡ
ಚಿತ್ರದುರ್ಗ: ಸೌಭಾಗ್ಯ ಬಸವರಾಜನ್‌
ಮುಧೋಳ: ಸತೀಶ ಬಂಡಿವಡ್ಡರ
ಜಮಖಂಡಿ: ಸುಶೀಲಕುಮಾರ ಬೆಳಗಲಿ
ತರೀಕೆರೆ: ಎಚ್‌.ಎಂ.ಗೋಪಿಕೃಷ್ಣ
ಹರಪನಹಳ್ಳಿ: ಎಂ.ಪಿ.ಲತಾ
ಅರಕಲಗೂಡು-ಎಂ.ಟಿ.ಕೃಷ್ಣೇಗೌಡ
ಶ್ರೀರಂಗಪಟ್ಟಣ- ಪಾಲಹಳ್ಳಿ ಚಂದ್ರಶೇಖರ್‌
ಮಾಯಕೊಂಡ; ಡಾ. ಸವಿತಾಬಾಯಿ ಮಲ್ಲೇಶ ನಾಯ್ಕ
ತೇರದಾಳ-ಡಾ.ಪದ್ಮಜಿತ್‌ ನಾಡಗೌಡ ಪಾಟೀಲ
ಕುಣಿಗಲ್‌-ರಾಮಸ್ವಾಮಿಗೌಡ
ಶಿಡ್ಲಘಟ್ಟ-ಪುಟ್ಟುಆಂಜಿನಪ್ಪ

ಜೆಡಿಎಸ್‌
ಯಾದಗಿರಿ: ಹನುಮೇಗೌಡ ಬೀರನಕಲ್‌
ಮಂಡ್ಯ- ಕೆ.ಎಸ್‌.ವಿಜಯ್‌ ಆನಂದ
ಶ್ರೀರಂಗಪಟ್ಟಣ- ತಗ್ಗಹಳ್ಳಿ ವೆಂಕಟೇಶ್‌
ತುಮಕೂರು-ನರಸೇಗೌಡ

 

ಟಾಪ್ ನ್ಯೂಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

24-tma-pai

Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

11

Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.