ಅಭಿಪ್ರಾಯ ಸಂಗ್ರಹ ಮಧ್ಯೆಯೇ ಬಿ ಪ್ಲ್ರಾನ್?
ಅಭ್ಯರ್ಥಿಗಳ ಆಯ್ಕೆಯ ಹಿನ್ನೆಲೆಯಲ್ಲಿ ಹಲವು ಲೆಕ್ಕಾಚಾರಕ್ಕೆ ಮೊರೆ ಹೋದ ಬಿಜೆಪಿ ವರಿಷ್ಠರು
Team Udayavani, Apr 2, 2023, 7:42 AM IST
ಮಂಗಳೂರು: ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿಯು ಜಿಲ್ಲಾ ಶಕ್ತಿಕೇಂದ್ರಗಳ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಬೆನ್ನಲ್ಲೇ, ಚುನಾವಣೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರಿಗೇ ಮತ್ತೂಮ್ಮೆ ಅವಕಾಶ ನೀಡುವ ಬಿ ಪ್ಲ್ರಾನ್ ಗೆ ವರಿಷ್ಠರು ಮೊರೆ ಹೋಗುತ್ತಾರೆಯೇ ಎಂಬ ಪ್ರಶ್ನೆ ಪಕ್ಷದ ವಲಯದಲ್ಲಿ ಮೂಡಿದೆ.
ಈಗಾಗಲೇ ಎಲ್ಲ 224 ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಮಾ. 31ರಂದು ಬಿಜೆಪಿ ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಮೋರ್ಚಾದವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವೆಡೆ ಅಭಿ ಪ್ರಾಯ ಸಂಗ್ರಹ ತಡವಾಯಿತು. ಇವೆಲ್ಲವೂ ಒಂದು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಹಾಲಿ ಶಾಸಕರನ್ನು ಬದಲಾಯಿಸುವ ಸಾಧ್ಯತೆ ಕಡಿಮೆ ಎನ್ನುತ್ತದೆ ಪಕ್ಷದ ಆಂತರಿಕ ವಲಯದ ಮೂಲಗಳು.
ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ 90ರಿಂದ 105 ಸೀಟು ಗೆಲ್ಲಬಹುದು ಎಂದಿದೆ. ಜತೆಗೆ ಕರಾವಳಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸವಿದೆ.
ಹೀಗಿರುವಾಗ ಅಭ್ಯರ್ಥಿಗಳ ಬದಲಾವಣೆ ಅಗತ್ಯವಿದೆಯೆ? ಒಂದು ವೇಳೆ ಬದಲಾಯಿಸಿದರೆ ಗೊಂದಲ ಸೃಷ್ಟಿಯಾಗುವುದೇ? ಅದನ್ನು ಸೀಮಿತ ದಿನಗಳಲ್ಲಿ ಸರಿಪಡಿಸಲು ಸಾಧ್ಯವೇ? ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಹಿರಿಯ ನಾಯಕರು ಲೆಕ್ಕ ಹಾಕುತ್ತಿದ್ದಾರೆ ಎನ್ನಲಾಗಿದೆ.
ಆಂತರಿಕ ಸಮೀಕ್ಷೆಯ ಪ್ರಕಾರ ಪುತ್ತೂರಿನಲ್ಲಿ ಸ್ವಲ್ಪ ತ್ರಾಸದಾಯಕವಾದುದು ಎಂಬ ಅಭಿಪ್ರಾಯವಿದೆ. ಸುಳ್ಯ ಕ್ಷೇತ್ರದಲ್ಲೂ ಹಾಲಿ ಶಾಸಕರ ವಿರುದ್ಧವೂ ಕೆಲವು ಕಾರ್ಯಕರ್ತರ ಆಕ್ರೋಶ ವ್ಯಕ್ತವಾಗಿದೆ. ಆದರೆ ಹಿರಿಯ ನಾಯಕರ ಪ್ರಕಾರ ಇಲ್ಲಿ ಕಾರ್ಯಕರ್ತರಿಗೆ ಸಿಟ್ಟು ಬಿಟ್ಟರೆ ಮತದಾರರಿಗೆ ಇಲ್ಲ. ಇವೆರಡನ್ನು ಹೊರತುಪಡಿಸಿದರೆ ಉಳಿದೆಡೆ ವಿರೋಧ ಕಡಿಮೆ ಎಂಬ ಅಭಿಪ್ರಾಯವಿದೆ.
ಪರೋಕ್ಷ ಸೂಚನೆ?
ವರಿಷ್ಠರು ಇನ್ನೂ ಯಾರ ಹೆಸರನ್ನೂ ಪ್ರಕಟಿಸಿಲ್ಲ. ಹಾಗೆಂದು ಕ್ಷೇತ್ರಗಳಲ್ಲಿ ಪಕ್ಷದ ಪ್ರಚಾರ ನಿಂತಿಲ್ಲ. ಬಹುತೇಕ ಟಿಕೆಟ್ ಖಚಿತ ಎಂದೆನಿಸಿರುವ ಅಭ್ಯರ್ಥಿಗಳ ಪರ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದು, ಶಾಸಕರು ಗಣ್ಯರು, ಹಿರಿಯರನ್ನು ಭೇಟಿ ಮಾಡುತ್ತಿದ್ದಾರೆ. ಇದು ಚುನಾವಣೆಗೆ ತಯಾರಾಗಿ ಎಂಬ ವರಿಷ್ಠರ ಪರೋಕ್ಷ ಸೂಚನೆಯ ಪರಿಣಾಮ ಎನ್ನಲಾಗುತ್ತಿದೆ. ಹೆಸರು ಪ್ರಕಟವಾದ ಮೇಲೆ ಅಭ್ಯರ್ಥಿಗಳ ಮನೆ ಮನೆ ಭೇಟಿ ಅಧಿಕೃತವಾಗಿ ಪ್ರಾರಂಭವಾಗಲಿದೆ.
ದುಬಾರಿ ಆದೀತೆ?
ಸುಳ್ಯ, ಪುತ್ತೂರು ಕ್ಷೇತ್ರಗಳಲ್ಲಿ ಕಾಣಿಸಿದ ಬಿಕ್ಕ ಟ್ಟನ್ನು ಮುಂಚಿತವಾಗಿಯೇ ಹಿರಿಯ ನಾಯ ಕರು ಬಗೆಹರಿಸದಿರುವುದು ದುಬಾರಿಯಾಗಿ ಪರಿಣ ಮಿಸಬಹುದೇ ಎನ್ನುವ ಆತಂಕವೂ ಪಕ್ಷದ ಕಾರ್ಯಕರ್ತರಲ್ಲಿದೆ. ಮಂಗಳೂರು ಕ್ಷೇತ್ರ ದಲ್ಲೂ ಗುಂಪುಗಾರಿಕೆ ಇದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದೂ ಕಾರಣ. ಒಗ್ಗಟ್ಟಾಗಿ ಚುನಾ ವಣೆಗೆ ಹೋಗುವುದು ಬಿಟ್ಟು ಇಂಥ ಗುಂಪುಗಾರಿಕೆ ಸರಿಯಲ್ಲ ಎಂಬ ಅಭಿಪ್ರಾ ಯವೂ ಕಾರ್ಯಕರ್ತರಿಂದ ಕೇಳಿಬರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.