B. Sriramulu ಪತ್ನಿ ಹೆಸರಿನಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಕಬ್ಜ: ಸಿದ್ದರಾಮಯ್ಯ
ಈ ಬಾರಿ ಸೋಲು ಖಚಿತ : ವಿಪಕ್ಷ ನಾಯಕ ಗಂಭೀರ ಆರೋಪ
Team Udayavani, Apr 26, 2023, 10:37 PM IST
ಕುರುಗೋಡು: ಶ್ರೀರಾಮುಲು ತಮ್ಮ ಪತ್ನಿಯ ಹೆಸರಿನಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಖಬ್ಜಾ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತತ್ ಕ್ಷಣ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ವಶಕ್ಕೆ ಪಡೆದು, ಸರ್ಕಾರ ಮತ್ತು ಸಹಕಾರದ ನೇತೃತ್ವದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ, ರೈತರಿಗೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.
ಪಟ್ಟಣದ ಇಂಡಿಯನ್ ಪೆಟ್ರೋಲ್ ಬಂಕ್ ಹಿಂಭಾಗದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, ವಿರೋಧ ಪಕ್ಷದಲ್ಲಿ ಇದ್ದರೂ, ಐದು ವರ್ಷದ ಅವಧಿಯಲ್ಲಿ ಒಂದು ಸಾವಿರ ಕೋಟಿ ಅನುದಾನ ತಂದು, ಕಂಪ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಗಣೇಶ್ ಆಡಳಿತ ಪಕ್ಷದ ಶಾಸಕರಾಗುತ್ತಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ 5 ಸಾವಿರ ಕೋಟಿ ಅನುದಾನ ನೀಡಲಾಗುವುದು. ಗಣೇಶನ ಮಾತು ಕಡಿಮೆ, ಆದರೆ, ನಿಶಬ್ಧವಾಗಿ ಜನರ ಕೆಲಸ ಮಾಡಿದ್ದಾರೆ. ನನ್ನ ಮಾತಿನ ಮೇಲೆ ನಡೆದುಕೊಂಡು ಕಂಪ್ಲಿ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಮಾಡಿದ್ದಾರೆ. ಸಾಮಾನ್ಯ ಮನೆತನದಿಂದ ಬಂದಂತಹ ಗಣೇಶ್ ಅವರು ಜನರ ಕಷ್ಟ ಕಾರ್ಪುಣ್ಯಗಳನ್ನು ಅರಿತು, ಕೆಲಸ ಮಾಡಿದ್ದಾರೆ ಎಂದರು.
ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಶ್ರೀರಾಮುಲು ತಮ್ಮ ಪತ್ನಿ ಭಾಗ್ಯಲಕ್ಷ್ಮಿ ಹೆಸರಿಗೆ ಮಾಡುವ ಮೂಲಕ ಕಂಪ್ಲಿ ಜನತೆಗೆ ಮೋಸ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆ ಖಬ್ಜಾ ಮಾಡಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂತ ತಕ್ಷಣ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ವಶಕ್ಕೆ ಪಡೆದು, ರೈತರ ಹಾಗೂ ಸಹಕಾರ ಸಂಘದ ನೇತೃತ್ವದಲ್ಲಿ ಕಂಪ್ಲಿ ಸಕ್ಕರೆ ಪುನರ್ ಆರಂಭಿಸಲಾಗುವುದು. ಶ್ರೀರಾಮಲು ಹಾಗೂ ಸೋದರ ಅಳಿಯ ಸುರೇಶ್ ಬಾಬು ಅವರ ಆಟ ಈ ಚುನಾವಣೆಯಲ್ಲಿ ನಡೆಯುವದಿಲ್ಲ. ಶ್ರೀರಾಮುಲು ಮತ್ತು ಸುರೇಶ್ ಬಾಬು ಈ ಬಾರಿ ಇಬ್ಬರು ಸೋಲುವುದು ಶತಸಿದ್ಧ. ಗಣೇಶ್ ಗೆ ಮತ ನೀಡಿದರೆ, ಸಿದ್ದರಾಮಯ್ಯಗೆ ಮತ ನೀಡಿದಂತೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯನೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಬಸವಣ್ಣನ ಸಿದ್ದಾಂತದ ಹಾದಿಯಲ್ಲಿ ಕಾಂಗ್ರೆಸ್ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿದ್ದು, ಅದರಂತೆಯೇ ಕಂಪ್ಲಿಯಲ್ಲಿಯೂ ಸಹ ಬೀಸಿದೆ. ನನ್ನ ಐದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಏಕಪಕ್ಷವಾಗಿ ಅಧಿಕಾರ ನಡೆಸಿದಾಗ, 165 ಭರವಸೆಗಳಲ್ಲಿ 150 ಭರವಸೆಗಳನ್ನು ಈಡೇರಿಸಿದ್ದು, ಆದರೆ, ಬಿಜೆಪಿ ಸರ್ಕಾರ 158 ಭರವಸೆಗಳಲ್ಲಿ ಕೇವಲ 58 ಭವರಸೆಗಳನ್ನು ಈಡೇರಿಸಿದೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಅಗತ್ಯ ವಸ್ತು ಬೆಲೆ ಏರಿಕೆಗಳನ್ನು ಕಡಿಮೆ ಮಾಡುವಲ್ಲಿ ಸಂಪೂರ್ಣವಾಗಿ ಮೋದಿ ಸರ್ಕಾರ ವಿಫಲವಾಗಿದೆ. ಬಿಜೆಪಿ ಸರ್ಕಾರ ಜನರ ಹೊಟ್ಟೆ ಮೇಲೆ ಬರೆ ಎಳೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪ್ರಣಾಳಿಕೆಯಲ್ಲಿ ನೀಡಿದ ಯೋಜನೆಗಳನ್ನು ಜನತೆಗೆ ಸಮರ್ಪಕವಾಗಿ ಒದಗಿಸಲಾಗುವುದು. ನಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲಾ ನಿಗಮದ ಸಾಲ ಮನ್ನಾ ಮಾಡಿರುವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಎಚ್ಎಲ್ಸಿ ಡಿ7ಗೆ ಏತಾನೀರಾವರಿ ಕಲ್ಪಿಸಿ, ರೈತರಿಗೆ ನೀರು ಒದಗಿಸಲಾಗುವುದು. ಶ್ರೀರಾಮುಲು, ಸುರೇಶ್ ಬಾಬು ಹಣದ ಆಮಿಷ ಒಡ್ಡಿದರೂ, ಗಣೇಶನಿಗೆ ಮತ ನೀಡಿ. ಕಳೆದ ಬಾರಿ ಕಂಪ್ಲಿ ಕ್ಷೇತ್ರದ ಕುರುಗೋಡಿಗೆ ಬಂದಾಗ ತೋರಿದಂತಹ ಉತ್ಸಾಹಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದನ್ನು ನೋಡಿದರೆ, ಈ ಚುನಾವಣೆಯಲ್ಲಿ ಗಣೇಶ್ ಮತ್ತೊಮ್ಮೆ ಬಹುಮತದಿಂದ ಗೆಲ್ಲುವ ಭರವಸೆಯಿದೆ ಎಂದರು.
ಅಭ್ಯರ್ಥಿ, ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಐದು ವರ್ಷದ ಅವಧಿಯಲ್ಲಿ ಕೋವಿಡ್ ಪರಿಣಾಮ ಮೂರು ವರ್ಷ ಮಾತ್ರ ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿರುವೆ. ವಿರೋಧ ಪಕ್ಷದಲ್ಲಿದ್ದರೂ ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ರೈತರಿಗೆ ನೀರು ಒದಗಿಸಲಾಗಿದೆ. ನಮ್ಮ ಸರ್ಕಾರ ಬಂದರೆ, ಕ್ಷೇತ್ರದಲ್ಲಿ ಉಳಿರುವ ಭಾಗದಲ್ಲಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಖಬ್ಜಾ ಮಾಡಿದ್ದು, ಅಧಿಕಾರ ಬಂದ ತತ್ ಕ್ಷಣ ಕಾರ್ಖಾನೆಯನ್ನು ವಶಕ್ಕೆ ಪಡೆದು, ಸರ್ಕಾರ ಮತ್ತು ಸಹಕಾರ ನೇತೃತ್ವದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಅಲ್ಲಂ ವೀರಭದ್ರಪ್ಪ, ಮುಂಡರಿಗಿ ನಾಗರಾಜ, ಮಾನಯ್ಯ, ಚೊಕ್ಕ ಬಸವನಗೌಡ, ಬಂಗಿ ಮಲ್ಲಯ್ಯ, ಶ್ರೀನಿವಾಸರಾವ್, ವಿಜಯಕುಮಾರ್, ರಾಜೇಶ, ಸುಧೀರ್, ಚನ್ನಬಸವರಾಜ, ಸಿದ್ದು ಹಳ್ಳೇಗೌಡ, ಡಾ.ಎ.ಸಿ.ದಾನಪ್ಪ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.