ಕೃಷ್ಣಾ ನದಿ ತಟದಲ್ಲಿ ಕದನ ಕುತೂಹಲ


Team Udayavani, Feb 10, 2023, 6:10 AM IST

tdy-37

ರಾಜ್ಯದಲ್ಲಿ ಅತೀದೊಡ್ಡ ಲೋಕಸಭಾ ಕ್ಷೇತ್ರವಾಗಿರುವ ಬೆಳಗಾವಿಯ 2ನೇ ಹಂತದ ಕ್ಷೇತ್ರಗಳ ಪರಿಚಯ ಇಲ್ಲಿದೆ. ಚಿಕ್ಕೋಡಿ ಭಾಗದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಕಾಳಗವಿದೆ. ಕೆಲವು ಕ್ಷೇತ್ರಗಳಲ್ಲಿ ಕುಟುಂಬಗಳ ಪ್ರಾಬಲ್ಯವೂ ಇದೆ. ದಿ| ಉಮೇಶ್‌ ಕತ್ತಿಯವರು ಹುಕ್ಕೇರಿಯಿಂದ ಗೆಲ್ಲುತ್ತಲೇ ಬಂದಿದ್ದರು. ಹಾಗೆಯೇ ಯಮಕನಮರಡಿ ಕೂಡ ಜಾರಕಿಹೊಳಿ ಕುಟುಂಬದ ಭದ್ರಕೋಟೆಯಾಗಿದೆ. ಅಥಣಿಯಲ್ಲಿ ಬಿಜೆಪಿ ಪ್ರಾಬಲ್ಯವಿದೆ.

ಬೆಳಗಾವಿ: ಕೃಷ್ಣಾ ಮತ್ತು ಘಟಪ್ರಭಾ ನದಿ ತಟದಲ್ಲಿರುವ ಚಿಕ್ಕೋಡಿ ಭಾಗದ ಎಂಟು ವಿಧಾನಸಭಾ ಕ್ಷೇತ್ರಗಳು ರಾಜ್ಯ ರಾಜಕಾರಣದಲ್ಲಿ ಬಹಳ ಪ್ರಭಾವ ಹೊಂದಿರುವ ಕ್ಷೇತ್ರಗಳು. ಈ ಎಂಟು ಕ್ಷೇತ್ರಗಳಲ್ಲಿ ಪಕ್ಷ ಪಕ್ಷಗಳ ನಡುವೆ ಕಾದಾಟ ಎನ್ನುವುದಕ್ಕಿಂತ ವೈಯಕ್ತಿಕ ಪ್ರತಿಷ್ಠೆಯ ನಡುವಿನ ಕದನ ಎಂದರೆ ತಪ್ಪಿಲ್ಲ. ವಿಶೇಷ ಎಂದರೆ ಚಿಕ್ಕೋಡಿ ವಿಭಾಗ ಕಾಂಗ್ರೆಸ್‌, ಬಿಜೆಪಿ, ಜನತಾ ಪಕ್ಷ ಸಹಿತ ಎಲ್ಲ ಪಕ್ಷಗಳಿಗೂ ನೆಲೆ ಒದಗಿಸಿದೆ. ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಭದ್ರಕೋಟೆ ಸ್ಥಾಪಿಸಿದ್ದರೂ ಈಗ ಅದು ಬಿಜೆಪಿ ವಶವಾಗಿದೆ. ಒಂದೆರಡು ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣ ಬಹಳ ಗಟ್ಟಿಯಾಗಿ ತಳವೂರಿದೆ.

ಕಳೆದ ಚುನಾವಣೆಯಲ್ಲಿ ಅಥಣಿ, ಹುಕ್ಕೇರಿ, ಕಾಗವಾಡ, ಕುಡಚಿ, ರಾಯಬಾಗ, ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಕಾಂಗ್ರೆಸ್‌ ಚಿಕ್ಕೋಡಿ ಮತ್ತು ಯಮಕನ ಮರಡಿ ಕ್ಷೇತ್ರಗಳಲ್ಲಿ ಮಾತ್ರ ತೃಪ್ತಿಪಟ್ಟಿಕೊಂಡಿತ್ತು. 2008ರಲ್ಲಿ ಉದಯವಾದ ಕುಡಚಿ ಮತ್ತು ಯಮಕನಮರಡಿ ಕ್ಷೇತ್ರಗಳು ಬಿಜೆಪಿ ಹಾಗೂ ಕಾಂಗ್ರೆಸ್‌ ವಶದಲ್ಲಿರುವುದು ವಿಶೇಷ. ದಾಖಲೆಯ ಎಂಟು ಬಾರಿ ಶಾಸಕರಾಗಿದ್ದ ಉಮೇಶ ಕತ್ತಿ ಈ ವಿಭಾಗದವರು ಎಂಬುದು ಗಮನಿ ಸಬೇಕಾದ ಅಂಶ. ಆದರೆ ಈ ಬಾರಿ ಉಮೇಶ್‌ ಕತ್ತಿಯವರಿಲ್ಲದೇ ಚುನಾವಣೆ ನಡೆಯುತ್ತಿದೆ.

ಕುಡಚಿ  :  ಬಿಜೆಪಿಯ ಪಿ.ರಾಜೀವ್‌ ಹಾಲಿ ಶಾಸಕರು. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಅನಂತರ ಅಸ್ತಿತ್ವಕ್ಕೆ ಬಂದ ಮೀಸಲು ಕ್ಷೇತ್ರ ಕುಡಚಿಯಲ್ಲಿ ಆಗ ಕಾಂಗ್ರೆಸ್‌ ಶಾಮ ಘಾಟಗೆ ಮೂಲಕ ಖಾತೆ ತೆರೆದಿತ್ತು. 2013ರಲ್ಲಿ ಬಿಎಸ್‌ ಆರ್‌ ಪಕ್ಷದಿಂದ ಸ್ಪರ್ಧೆ ಮಾಡಿ ಮೊದಲ ಸಲ ವಿಧಾನಸಭೆ ಮೆಟ್ಟಿಲು ಹತ್ತಿದ್ದ ಪಿ.ರಾಜೀವ್‌ ಅನಂತರ ಬಿಜೆಪಿ ಸೇರಿ 2018ರಲ್ಲಿ ಎರಡನೇ ಬಾರಿಗೆ ಶಾಸಕರಾದರು. ಈಗ ಹ್ಯಾಟ್ರಿಕ್‌ ಸಾಧನೆಯ ಹಾದಿಯಲ್ಲಿದ್ದಾರೆ.

ಯಮಕನಮರಡಿ :  ಕ್ಷೇತ್ರ ಪುನರ್‌ ವಿಂಗಡಣೆ ಅನಂತರ 2008ರಲ್ಲಿ ಹುಕ್ಕೇರಿ ಮತ್ತು ಸಂಕೇಶ್ವರ ಕ್ಷೇತ್ರಗಳ ಹಳ್ಳಿಗಳನ್ನು ಸೇರಿಸಿ ಉದಯವಾದ ಯಮಕನಮರಡಿ ಕಾಂಗ್ರೆಸ್‌ನ ಭದ್ರಕೋಟೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಈ ಕ್ಷೇತ್ರದ ಹಾಲಿ ಶಾಸಕ ಹಾಗೂ ಪ್ರಭಾವಿ ನಾಯಕ. ಹೊಸದಾಗಿ ಉದಯವಾಗಿ ಮೀಸಲು ಕ್ಷೇತ್ರವಾದ ಬಳಿಕ ಇಲ್ಲಿ ಕಾಲೂರಿದ ಸತೀಶ್‌ ಜಾರಕಿಹೊಳಿ ಸತತ ಮೂರು ಬಾರಿ ಗೆದ್ದು ತಮ್ಮ ಸ್ಥಾನ ಭದ್ರ ಮಾಡಿಕೊಂಡಿದ್ದಾರೆ. ಬಿಜೆಪಿಯಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮಾರುತಿ ಅಷ್ಟಗಿ ಅತ್ಯಲ್ಪ ಮತಗಳ ಅಂತರದಿಂದ  ಅಚ್ಚರಿಯ ಫಲಿತಾಂಶ ನೀಡುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು.

 ಅಥಣಿ : 1957ರಿಂದ ಒಂದು ಉಪಚುನಾವಣೆ ಸಹಿತ ಇದುವರೆಗೆ 15 ಚುನಾವಣೆಗಳನ್ನು ಎದುರಿಸಿರುವ ಅಥಣಿ ಕ್ಷೇತ್ರ ಬಿಜೆಪಿಯ ಭದ್ರಕೋಟೆ. 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜೆ.ಬಿ.ಪವಾರ ಜಯಗಳಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜೆ.ಬಿ.ಪವಾರ ಅಥಣಿಯನ್ನು ಕಾಂಗ್ರೆಸ್‌ ತೆಕ್ಕೆಗೆ ತಂದು ಕೊಟ್ಟರು. 1967ರಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‌ ಇಲ್ಲಿ ಅಧಿಪತ್ಯ ಸ್ಥಾಪಿಸಿತ್ತು. 1967, 1978 ಮತ್ತು 1983ರಲ್ಲಿ ಜೆ.ಬಿ.ಪವಾರ ಕಾಂಗ್ರೆಸ್‌ನಿಂದ ಶಾಸಕರಾದರೆ, ಎ.ಎ.ದೇಸಾಯಿ 1972ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 1985ರಲ್ಲಿ ಜನತಾಪಕ್ಷದ ಲೀಲಾದೇವಿ ಪ್ರಸಾದ ಕಾಂಗ್ರೆಸ್‌ ಅಧಿಪತ್ಯಕ್ಕೆ ಕೊನೆ ಹಾಡಿದರು. ಜತೆಗೆ ಕ್ಷೇತ್ರದಿಂದ ಗೆದ್ದು ಬಂದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದರು. 1989ರಲ್ಲಿ ಐ.ಎಂ.ಶೇಡಬಾಳ ಮತ್ತೆ ಈ ಕ್ಷೇತ್ರವನ್ನು ಕಾಂಗ್ರೆಸ್‌ ವಶಕ್ಕೆ ತಂದುಕೊಟ್ಟರು. 1994ರಲ್ಲಿ ಜನತಾದಳದ ಲೀಲಾದೇವಿ ಪ್ರಸಾದ ಎರಡನೇ ಬಾರಿಗೆ ಶಾಸಕರಾದರೆ, 1999ರಲ್ಲಿ ಕಾಂಗ್ರೆಸ್‌ನ ಶಹಜಹಾನ ಡೊಂಗರಗಾವ್‌ ಪ್ರಥಮ ಬಾರಿಗೆ ಶಾಸಕರಾದರು. 2004ರಿಂದ ಸತತ ಮೂರು ಬಾರಿ ಆಯ್ಕೆಯಾದ ಲಕ್ಷ್ಮಣ ಸವದಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಲ್ಲದೆ ಅಥಣಿಯನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿದರು. 2018ರಲ್ಲಿ ಶಾಸಕ ಮಹೇಶ ಕುಮಟಳ್ಳಿ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದು ಉಪಚುನಾವಣೆಯಲ್ಲಿ ಗೆದ್ದು ಮತ್ತೆ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಎಂಟು ಬಾರಿ, ಜನತಾಪಕ್ಷ ಒಂದು, ಜನತಾದಳ ಒಂದು, ಪಕ್ಷೇತರ ಒಂದು ಹಾಗೂ ನಾಲ್ಕು ಸಲ ಬಿಜೆಪಿ ಜಯ ಗಳಿಸಿದೆ.

ಕಾಗವಾಡ :  ಈ ಕ್ಷೇತ್ರ ಬಿಜೆಪಿ ಪಾಲಿಗೆ ಇದು ಭದ್ರಕೋಟೆ. ಶ್ರೀಮಂತ ಪಾಟೀಲ ಹಾಲಿ ಶಾಸಕರು. 15 ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಳು ಬಾರಿ ಗೆದ್ದಿದ್ದರೂ ಅದೇ ಸ್ಥಿತಿ ಈಗಿಲ್ಲ. 1962ರಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್‌ ಈ ಕ್ಷೇತ್ರದಿಂದ ಗೆದ್ದಿತ್ತು. 1962ರಲ್ಲಿ ಕಾಂಗ್ರೆಸ್‌ನಿಂದ ಎಸ್‌.ವಿ.ಪಾಟೀಲ ಜಯ ಗಳಿಸಿ ಖಾತೆ ತೆರೆದಿದ್ದರು. 1967ರಲ್ಲಿ ಚಂಪಾಬಾಯಿ ಬೋಗಲೆ ಕಾಂಗ್ರೆಸ್‌ನಿಂದ ಗೆದ್ದರೆ, 1972ರಲ್ಲಿ ಆರ್‌.ಡಿ.ಕಿತ್ತೂರ, 1978ರಲ್ಲಿ ಎ.ಬಿ.ಜಕನೂರ ಕಾಂಗ್ರೆಸ್‌ನಿಂದ ಗೆದ್ದರು. 1983ರಲ್ಲಿ ಕಾಂಗ್ರೆಸ್‌ ಕೋಟೆ ಮುರಿದ ಜನತಾ ಪಕ್ಷ ವಿ.ಎಲ್‌. ಪಾಟೀಲ ಮೂಲಕ ತನ್ನ ಖಾತೆ ತೆರೆಯಿತು. 1985ರಲ್ಲಿ ಸಹ ವಿ.ಎಲ್‌. ಪಾಟೀಲ ಸತತ ಎರಡನೇ ಬಾರಿ ಜಯ ಗಳಿಸಿದರು. 1989ರಲ್ಲಿ ಕಾಂಗ್ರೆಸ್‌ನ ಎ.ಬಿ.ಜಕನೂರ, 1994ರಲ್ಲಿ ಜನತಾದಳದ ಮೋಹನ ಶಹಾ, 1999ರಲ್ಲಿ ಕಾಂಗ್ರೆಸ್‌ನ ಪಾಸಗೌಡ ಪಾಟೀಲ ಜಯ ಗಳಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಶ್ರೀಮಂತ ಪಾಟೀಲ ಅನಂತರ ಆಪರೇಶ‌ನ್‌ ಕಮಲಕ್ಕೊಳಗಾಗಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಬಂದ ಬಳಿಕ ಇದು ಬಿಜೆಪಿ ಕ್ಷೇತ್ರವಾಗಿ ಬದಲಾಗಿದೆ. ಈ ಮೊದಲು 2004ರಿಂದ ಬಿಜೆಪಿಯಿಂದ ಮೂರು ಬಾರಿ ಗೆದ್ದಿದ್ದ ರಾಜು ಕಾಗೆ ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರೂ ಜನರು ಅವರ ಕೈ ಹಿಡಿಯಲಿಲ್ಲ. 2004ರಿಂದ ಬಿಜೆಪಿ ನಾಲ್ಕು, 1983 ಹಾಗೂ 1985ರಲ್ಲಿ ಜನತಾಪಕ್ಷ ಮತ್ತು 1999 ಹಾಗೂ 2000ರ ಉಪ ಚುನಾವಣೆಯಲ್ಲಿ ಜನತಾದಳ ಗೆದ್ದಿವೆ.

 ಹುಕ್ಕೇರಿ  :

ಇದು ಬಿಜೆಪಿಯ ಭದ್ರಕೋಟೆ. ಎರಡು ಉಪಚುನಾವಣೆ ಸಹಿತ 16 ಚುನಾವಣೆಗಳನ್ನು ಎದುರಿಸಿದೆ. ಉಮೇಶ ಕತ್ತಿ ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿದ್ದರು. 2004ರ ಚುನಾವಣೆ ಒಂದು ಹೊರತುಪಡಿಸಿದರೆ 1985ರಿಂದ 2018ರವರೆಗೆ ಹುಕ್ಕೇರಿಯಲ್ಲಿ ಉಮೇಶ ಕತ್ತಿಯದ್ದೇ ದರ್ಬಾರ್‌. ದಾಖಲೆಯ ಎಂಟು ಬಾರಿ ಜಯ ಗಳಿಸಿದ್ದು ಉಮೇಶ ಕತ್ತಿ ಅವರ ಸಾಧನೆ. 2008ರಲ್ಲಿ ಮೊದಲು ಜೆಡಿಎಸ್‌ದಿಂದ ಗೆದ್ದಿದ್ದ ಉಮೇಶ ಕತ್ತಿ ಅನಂತರ ಬಿಜೆಪಿ ಸೇರಿ ಉಪಚನಾವಣೆಯಲ್ಲಿ ಆಯ್ಕೆಯಾದರು. ಮುಖ್ಯಮಂತ್ರಿ ಗಾದಿ ಮೇಲೆ ಬಹಳ ಕಣ್ಣಿಟ್ಟಿದ್ದರು. ಉಮೇಶ ಕತ್ತಿಗೆ ಪಕ್ಷ ಮುಖ್ಯವಲ್ಲ. ಬದಲಾಗಿ ಪಕ್ಷಗಳಿಗೆ ಕತ್ತಿ ಮುಖ್ಯ ಎಂಬುದನ್ನು ಅವರು ಅನೇಕ ಸಲ ತೋರಿಸಿಕೊಟ್ಟಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ಅನಂತರ ಸಂಕೇಶ್ವರ ಕ್ಷೇತ್ರ ಹುಕ್ಕೇರಿ ಮತ್ತು ಯಮಕನಮರಡಿ ಕ್ಷೇತ್ರದಲ್ಲಿ ವಿಲೀನವಾಯಿತು.

 ರಾಯಬಾಗ: 

1957ರಿಂದ ಇದುವರೆಗೆ 14 ಚುನಾವಣೆಗಳನ್ನು ನೋಡಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ 1962ರ ಚುನಾವಣೆ ಸೇರಿ ಆರು ಬಾರಿ ಗೆದ್ದಿದ್ದರೆ, ಬಿಜೆಪಿ 2008ರಿಂದ ಸತತ ಮೂರು ಸಲ ಜಯ ಗಳಿಸಿದೆ. 1978, 1983 ಹಾಗೂ 1985ರಲ್ಲಿ ಜನತಾಪಕ್ಷ ಸಹ ಮೂರು ಬಾರಿ ಜಯ ಗಳಿಸಿದೆ. 2004ರಲ್ಲಿ ಜೆಡಿಯು ಮತ್ತು 1957ರಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ. ಈ ಕ್ಷೇತ್ರದ ಮೇಲೆ ಬಿಗಿಹಿಡಿತ ಹೊಂದಿದ್ದ ಹಾಗೂ ರಾಯಬಾಗದ ಹುಲಿ ಎಂದೇ ಖ್ಯಾತರಾಗಿದ್ದ ವಿ.ಎಲ್‌. ಪಾಟೀಲ 1957ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರು. 1962ರಲ್ಲಿ ಕಾಂಗ್ರೆಸ್‌ನ ಬಿ.ಎಸ್‌.ಸೌದಾಗರ ಶಾಸಕರಾಗಿ ಆಯ್ಕೆಯಾದರು. 1967 ಹಾಗೂ 1972ರಲ್ಲಿ ಕಾಂಗ್ರೆಸ್‌ನಿಂದ ವಿ.ಎಲ್‌. ಪಾಟೀಲ ಸತತ ಎರಡು ಬಾರಿ ಗೆದ್ದರು. 1978ರಲ್ಲಿ ಈ ಕ್ಷೇತ್ರವನ್ನು ಆರ್‌.ಎಸ್‌. ನಡೋಣಿ ಮೂಲಕ ಜನತಾಪಕ್ಷ ತನ್ನ ವಶಮಾಡಿಕೊಂಡಿತು. 1983ರಲ್ಲಿ ಜನತಾಪಕ್ಷದ ಎಸ್‌.ಎಸ್‌. ಕಾಂಬಳೆ ಜಯ ಗಳಿಸಿದರು. 1985ರಲ್ಲಿ ಜನತಾ ಪಕ್ಷದ ಮಾರುತಿ ಗಂಗಪ್ಪ ಘೇವಾರಿ ಗೆದ್ದರು. 1999ರಿಂದ ಸತತ ಮೂರು ಬಾರಿ ಕಾಂಗ್ರೆಸ್‌ನ ಶಾಮ ಘಾಟಗೆ ಕಾಂಗ್ರೆಸ್‌ನಿಂದ ಜಯಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದರು. 2008ರಿಂದ ಬಿಜೆಪಿಯ ದುರ್ಯೋಧನ ಐಹೊಳೆ ಸತತ ಮೂರು ಸಲ ಜಯ ಗಳಿಸಿದ್ದಾರೆ.

ನಿಪ್ಪಾಣಿ :

ಸಚಿವೆ ಶಶಿಕಲಾ ಜೊಲ್ಲೆ ಈಗ ಈ ಕ್ಷೇತ್ರದ ಶಾಸಕರು. ಹಿಂದೆ ಇದು ಮಹಾರಾಷ್ಟ್ರ ಏಕೀಕರಣ ಸಮಿತಿ ಅನಂತರ ಕಾಂಗ್ರೆಸ್‌ನ ಭದ್ರಕೋಟೆ. 14 ಚುನಾವಣೆಗಳನ್ನು ಎದುರಿಸಿರುವ ಕ್ಷೇತ್ರದಲ್ಲಿ ಪಕ್ಷೇತರರು ಹಾಗೂ ಕಾಂಗ್ರೆಸ್‌ ತಲಾ ಐದು ಬಾರಿ ಗೆದ್ದಿರುವುದೇ ಇದಕ್ಕೆ ನಿದರ್ಶನ. 1957ರಿಂದ 1967ರ ವರೆಗೆ ಪಕ್ಷೇತರರು ಗೆದ್ದಿದ್ದಾರೆ. 1972ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಆರ್‌.ವಿ.ಕದಂ ಗೆದ್ದುಕೊಂಡರು. ಆದರೆ 1978 ಮತ್ತು 1983ರಲ್ಲಿ ಪುನಃ ಪಕ್ಷೇತರರು ಜಯ ಗಳಿಸಿದರು. 1985ರಲ್ಲಿ ಕಾಂಗ್ರೆಸ್‌ನ ವೀರಕುಮಾರ ಪಾಟೀಲ್‌ ಗೆದ್ದು ಮಹಾರಾಷ್ಟ್ರ ಏಕೀಕರಣ ಸಮಿತಿ ಅಧಿಪತ್ಯಕ್ಕೆ ಕೊನೆ ಹಾಡಿದರು. 1989 ಹಾಗೂ 1994ರಲ್ಲಿ ಜನತಾದಳದ ಸುಭಾಷ ಜೋಶಿ ಗೆದ್ದರು. 1999ರಿಂದ ಸತತ ಮೂರು ಬಾರಿ ಗೆದ್ದ ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ ಹ್ಯಾಟ್ರಿಕ್‌ ಸಾಧನೆ ಮಾಡಿದರು. 2013 ಹಾಗೂ 2018ರಿಂದ ಇದು ಬಿಜೆಪಿ ಭದ್ರಕೋಟೆಯಾಗಿದೆ. ಹಾಲಿ ಶಾಸಕಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಹ್ಯಾಟ್ರಿಕ್‌ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.

-ಕೇಶವ ಆದಿ

ಟಾಪ್ ನ್ಯೂಸ್

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

BGV-Congress

Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.