ಸಚಿವ ಸ್ಥಾನವೇ ಸಿಗದ ಕ್ಷೇತ್ರವಿದು!
Team Udayavani, Mar 15, 2023, 5:30 AM IST
ವಿಭಿನ್ನ ರಾಜಕಾರಣಕ್ಕೆ ಹೆಸರಾಗಿರುವ ಶಿವಮೊಗ್ಗ ಜಿಲ್ಲೆ ಭದ್ರಾವತಿ ಕ್ಷೇತ್ರದಿಂದ ಈ ವರೆಗೂ ಒಬ್ಬರೂ ಸಚಿವರಾಗಿಲ್ಲ. ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಒಬ್ಬರಾದರೂ ಸಚಿವರಾಗಿದ್ದಾರೆ.
ಆದರೆ ಇಲ್ಲಿ ಯಾರೇ ಗೆದ್ದರೂ ಸರಕಾರ ಮಾತ್ರ ಬೇರೆಯದ್ದೆ ಆಗಿರುತ್ತದೆ. 60, 70ರ ದಶಕದಲ್ಲಿ ಅವಕಾಶಗಳಿದ್ದರೂ ಒಮ್ಮೆ ಗೆದ್ದವರು ಮತ್ತೆ ಆಯ್ಕೆಯಾಗಿಲ್ಲ. 1952ರಲ್ಲಿ ಬಿ.ಮಾಧವಾಚಾರ್ (ಕಾಂಗ್ರೆಸ್), 1957 ಡಿ.ಟಿ. ಸೀತಾರಾಮ್‌ರಾವ್ (ಕಾಂಗ್ರೆಸ್), 1962 ಟಿ.ಡಿ. ದೇವೇಂದ್ರಪ್ಪ (ಕಾಂಗ್ರೆಸ್), 1967 ಎ.ಕೆ.ಅನ್ವರ್ (ಪಿಎಸ್‌ಪಿ), 1972 ಅಬ್ದುಲ್ ಕುದ್ದೂಸ್ ಅನ್ವರ್ (ಕಾಂಗ್ರೆಸ್), 1978 ಜಿ.ರಾಜಶೇಖರ್ (ಕಾಂಗ್ರೆಸ್), 1983 ಎಸ್.ಎಸ್.ಸಿದ್ದಪ್ಪ (ಜೆಎನ್‌ಪಿ), 1985 ಎಸ್.ಎಸ್. ಸಿದ್ದಪ್ಪ (ಪಕ್ಷೇತರ), 1989 ಇಸಾಮಿಯಾ (ಕಾಂಗ್ರೆಸ್), 1994 ಎಂ.ಜೆ.ಅಪ್ಪಾಜಿ (ಪಕ್ಷೇತರ), 1999 ಎಂ.ಜೆ.ಅಪ್ಪಾಜಿ (ಪಕ್ಷೇತರ), 2004 ಬಿ.ಕೆ.ಸಂಗಮೇಶ್ವರ (ಪಕ್ಷೇತರ), 2008 ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್), 2013 ಎಂ.ಜೆ.ಅಪ್ಪಾಜಿ (ಜೆಡಿಎಸ್), 2018 ರಲ್ಲಿ ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ. 1989ರವರೆಗೂ ಇಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿದ್ದರು. ಆದರೆ ಯಾರೂ ಇಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಒಂದಕ್ಕಿಂತ ಹೆಚ್ಚು ಬಾರಿ ಗೆಲುವು ಸಾಧಿ ಸಿಲ್ಲ. ಎಸ್.ಎಸ್.ಸಿದ್ದಪ್ಪ ಅವರು ಒಂದು ಬಾರಿ ಜನತಾ ಪಾರ್ಟಿ, ಮತ್ತೊಮ್ಮೆ ಪಕ್ಷೇತರರಾಗಿ ಗೆದ್ದಿದ್ದರು.
ಎಂ.ಜೆ.ಅಪ್ಪಾಜಿ ಎರಡು ಬಾರಿ ಪಕ್ಷೇತರ, ಒಂದು ಬಾರಿ ಜೆಡಿಎಸ್‌ನಿಂದ ಗೆದ್ದಿದ್ದರು. ಹಾಲಿ ಶಾಸಕ ಬಿ.ಕೆ. ಸಂಗಮೇಶ್ವರ ಕೂಡ ಎರಡು ಬಾರಿ ಕಾಂಗ್ರೆಸ್‌ನಿಂದ, ಒಂದು ಬಾರಿ ಪಕ್ಷೇತರರಾಗಿ ಗೆಲುವು ಸಾಧಿ ಸಿದ್ದಾರೆ. 2018ರ ಸಮ್ಮಿಶ್ರ ಸರಕಾರದಲ್ಲಿ ಸಂಗಮೇಶ್ವರ ಅವರಿಗೆ ಅವಕಾಶವಿತ್ತಾದರೂ ಪರಿಗಣಿಸಲಿಲ್ಲ. ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆ ಮುಚ್ಚುತ್ತಿರುವುದಕ್ಕೂ ಭದ್ರಾವತಿಯ ರಾಜಕಾರಣ ಕಳೆಗುಂದಿರುವುದಕ್ಕೂ ಜನ ಹಿಡಿಶಾಪ ಹಾಕುತ್ತಿದ್ದಾರೆ. 2023ರ ಚುನಾವಣೆ ಅನಂತರವಾದರೂ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿಯುವುದೇ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.