2,250 ಕೋಟಿ ರೂ. ಅನುದಾನದಿಂದ ಸಮಗ್ರ ಅಭಿವೃದ್ಧಿ: ಡಾ| ಭರತ್‌ ವೈ. ಶೆಟ್ಟಿ


Team Udayavani, Apr 26, 2023, 6:05 AM IST

2,250 ಕೋಟಿ ರೂ. ಅನುದಾನದಿಂದ ಸಮಗ್ರ ಅಭಿವೃದ್ಧಿ: ಡಾ| ಭರತ್‌ ವೈ. ಶೆಟ್ಟಿ

ಸುರತ್ಕಲ್‌: ಮೂರು ವರ್ಷ ಪ್ರಾಕೃತಿಕ ವಿಕೋಪ, ನೆರೆ, ಕೊರೊನಾ ಹಾವಳಿಯ ನಡುವೆಯೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ 2,250 ಕೋಟಿ ರೂ. ಅನುದಾನ ತರುವಲ್ಲಿ ಸಫಲನಾಗಿದ್ದೇನೆ ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತ ಪ್ರಗತಿ ಪಥ ಕೈಪಿಡಿಯನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

ಶಾಶ್ವತ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕ್ಷೇತ್ರದಾದ್ಯಂತ ಸಮರೋಪಾದಿಯಾಗಿ ಆಗಿದೆ. ಜಲಜೀವನ್‌, ಜಲಸಿರಿ ಕುಡಿ ಯುವ ನೀರು, ಬೀಚ್‌ ಟೂರಿಸಂ, ಪಾರ್ಕ್‌ ಅಭಿವೃದ್ಧಿ, ಚರಂಡಿ ಯೋಜನೆ, ಕೆರೆಗಳ ಅಭಿವೃದ್ಧಿ, ತ್ಯಾಜ್ಯ ಸಂಸ್ಕರಣೆ ಘಟಕ, ಐತಿಹಾಸಿಕ ಇತಿಹಾಸ ಸಾರುವ ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ ಇತ್ಯಾದಿಗೆ ಆದ್ಯತೆ ನೀಡಿದ್ದೇನೆ. ಮುಡಾ, ಸ್ಮಾರ್ಟ್‌ ಸಿಟಿ ಅನುದಾನವನ್ನೂ ಇದಕ್ಕಾಗಿ ಬಳಸಿಕೊಂಡು ಕೆರೆ, ಪಾರ್ಕ್‌ ಅಭಿವೃದ್ಧಿ ಮಾಡಲಾಗಿದೆ, ಕ್ಷೇತ್ರದ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸಲಾಗಿರುತ್ತದೆ ಎಂದರು.

ರಾಜ್ಯದ ಪ್ರಪ್ರಥಮ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ, ರಾಜ್ಯದ 2ನೇ ಒಣತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, 6,500 ಕುಟುಂಬಕ್ಕೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಎಂದರು.
ಕಾವೂರು ಕೆರೆಯನ್ನು ಪುನರುಜ್ಜೀವನ ಗೊಳಿಸಿ ಪ್ರವಾಸಿ ಆಕರ್ಷಣೆಯ ತಾಣ ವನ್ನಾಗಿ ಮಾಡಲಾಗಿದೆ ಎಂದರು.

ಅಕ್ರಮ ಕಸಾಯಿಖಾನೆ ಮುಟ್ಟುಗೋಲು
3 ಅಕ್ರಮ ಕಸಾಯಿಖಾನೆಗಳನ್ನು ಮುಟ್ಟುಗೋಲು ಹಾಕಿದ ಬಳಿಕ ಅಕ್ರಮ ಹತ್ಯೆಗಳ ಸರಮಾಲೆಯನ್ನು ನಿಲ್ಲಿಸಲಾಗಿದೆ ಎಂದರು. ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್‌ ರಾಜ್‌ ಕೃಷ್ಣಾಪುರ, ಶರತcಂದ್ರ ಶೆಟ್ಟಿ, ಸಂದೀಪ್‌ ಪಚ್ಚನಾಡಿ, ರಾಜೇಶ್‌ ಕೊಟ್ಟಾರಿ, ಕೃಷ್ಣ ಶೆಟ್ಟಿ ಕಡಬ ಮತ್ತಿತರರು ಉಪಸ್ಥಿತರಿದ್ದರು.

ಗೋ ಹತ್ಯೆಗೆ ಕಡಿವಾಣ
ಬಿಜೆಪಿಯ ಬೃಹತ್‌ ರೋಡ್‌ ಶೋ ಉದ್ಘಾಟಿಸಿ ಮಾತನಾಡಿದ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಯುವಶಕ್ತಿಯ ಪ್ರತೀಕ ಡಾ| ಭರತ್‌ಶೆಟ್ಟಿ. ಅವರು ಇಲ್ಲಿನ ಶಾಸಕರಾದ ಬಳಿಕ ಕೋಮು ವೈಷಮ್ಯ, ಅಪರಾಧಿಗಳ ಆಸ್ತಿ ಮುಟ್ಟುಗೋಲು ಮಾಡಿದ ಬಳಿಕ ಗೋ ಹತ್ಯೆ ನಿಂತಿದೆ. ದ.ಕ. ಜಿಲ್ಲೆಯಲ್ಲಿಯೇ ಭರತ್‌ ಶೆಟ್ಟಿ ಗರಿಷ್ಠ ಮತಗಳಿಂದ ಗೆಲ್ಲುತ್ತಾರೆ ಎಂದರು. ವೇದಿಕೆಯಲ್ಲಿ ಶಾಸಕರಾದ ಡಾ| ಭರತ್‌ ಶೆಟ್ಟಿ ವೈ, ರಾಮಚಂದ್ರ ಬೈಕಂಪಾಡಿ, ಮೇಯರ್‌ ಜಯಾನಂದ ಅಂಚನ್‌, ಬಿಜೆಪಿ ಮುಖಂಡರು, ಮನಪಾ ಸದಸ್ಯರು ಉಪಸ್ಥಿತರಿದ್ದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ಯತ್ನ
ಸರೋಜಿನಿ ಮಹಿಷಿ ವರದಿ ಜಾರಿಗೆ ಈಗಾಗಲೇ ಆಗ್ರಹಿಸಲಾಗಿದ್ದು, ಸಚಿವ ಸುನಿಲ್‌ ಕುಮಾರ್‌ ಈ ಆದೇಶ ಜಾರಿಗೆ ಈ ಹಿಂದೆಯೇ ಸಂಬಂಧಪಟ್ಟ ಡಿಸಿಗಳಿಗೆ ಸೂಚಿಸಿದ್ದಾರೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಹೆಚ್ಚಲಿದೆ. ಉನ್ನತ ಶಿಕ್ಷಣ ಪಡೆದವರಿಗೆ ಐಐಟಿ, ಐಎಎಸ್‌ ಮತ್ತಿತರ ಸಮಗ್ರ ಕೋಚಿಂಗ್‌ ತರಬೇತಿ ಯೋಜನೆ, 10 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್‌, ಹಿಂದೂ ಭವನ ನಿರ್ಮಾಣ, ಯಾತ್ರಿ ನಿವಾಸ, ಸಾರ್ವಜನಿಕರಿಗೆ ಸಿಂಗಲ್‌ ವಿಂಡೋ ಸರಕಾರಿ ದಾಖಲೆ ಪತ್ರ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆಗೆ ಅತ್ಯಾಧುನಿಕ ಸಂಸ್ಕರಣ ಘಟಕ ನಿರ್ಮಿಸುವ ಗುರಿಯಿದೆ ಎಂದು ಎಂದು ಡಾ| ಭರತ್‌ ಶೆಟ್ಟಿ ಹೇಳಿದರು.

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

5

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

4(1

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.