ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ನಾಳೆಯಂತೆ


Team Udayavani, Apr 11, 2023, 6:16 AM IST

ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ನಾಳೆಯಂತೆ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ 8 ಹಾಗೂ ಉಡುಪಿ ಜಿಲ್ಲೆಯ 5 ಕ್ಷೇತ್ರಗಳಿಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಸೋಮವಾರವೂ ಬಿಡುಗಡೆಯಾಗಲಿಲ್ಲ. ಮಂಗಳವಾರ ತಡರಾತ್ರಿ ಅಥವಾ ಬುಧವಾರ ಪ್ರಕಟವಾಗುವ ನಿರೀಕ್ಷೆಯಿದೆ.

ಉಭಯ ಜಿಲ್ಲೆಗಳಲ್ಲೂ ಕೆಲವು ಹಾಲಿ ಶಾಸಕರಿಗೆ ಅವಕಾಶ ಸಿಗದು ಹಾಗೂ ಹೊಸ ಮುಖಗಳ ಪ್ರಯೋಗ ನಡೆಯಲಿದೆ ಎಂಬ ಅಂಶ ಬಹಳ ಚಾಲ್ತಿಯಲ್ಲಿರುವ ಕಾರಣ ಕುತೂಹಲ ಹೆಚ್ಚಾಗಿದೆ. ಎ.13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಇಷ್ಟಾ ದರೂ ಇನ್ನೂ ಅಭ್ಯರ್ಥಿಗಳ ಘೋಷಣೆಯೇ ಆಗದಿರುವುದು ಕಾರ್ಯ ಕರ್ತರ ಪಾಳಯ ದಲ್ಲೂ ಕಳವಳಕ್ಕೆ ಕಾರಣವಾಗಿದೆ.

ಬೆಳಗ್ಗೆ 10 ಗಂಟೆಗೆ ಬರಬಹುದು, ಮಧ್ಯಾಹ್ನ, ಸಂಜೆ ಎಂಬ ಬಹುತೇಕರ ನಿರೀಕ್ಷೆ ಸುಳ್ಳಾಯಿತು. ಇದಕ್ಕೆ ಪೂರಕವಾಗಿ ದಿಲ್ಲಿಯಲ್ಲಿ ಬಿಜೆಪಿ ವರಿಷ್ಠರು ರಾಜ್ಯ ಮುಖಂಡರೊಂದಿಗೆ ಸತತ ಸಭೆಗಳನ್ನು ನಡೆಸಿದರು. ಆದರೂ ಸೋಮವಾರ ತಡರಾತ್ರಿಯವರೆಗೂ ಪಟ್ಟಿ ಹೊರ ಬೀಳಲೇ ಇಲ್ಲ.

ಬೆಳಗ್ಗೆ ಹುರುಪಿತ್ತು !
ಮಂಗಳೂರಿನಲ್ಲಿ ಬೆಳಗ್ಗೆ ಮಂಗಳೂರು ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ ವೇಳೆ ಸಂಜೆ ವೇಳೆಗೆ ಟಿಕೆಟ್‌ ಘೋಷಣೆಯಾಗಿರುತ್ತದೆ ಎಂಬ ಹುರುಪಿತ್ತು. ಆದರೆ ನಾಳೆ ಬಿಡುಗಡೆಯ ಸಾಧ್ಯತೆ ಎಂಬ ವರದಿ ಬಂದ ಮೇಲೆ ಉತ್ಸಾಹ ಕುಸಿಯಿತು.

ದಕ್ಷಿಣ ಕನ್ನಡ ಬಿಜೆಪಿ ರಾಜ್ಯಾಧ್ಯಕ್ಷರ ಜಿಲ್ಲೆಯೇ ಆಗಿರುವುದು ಒಂದು ಅಂಶವಾದರೆ ಆಂತರಿಕ ಸಮೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಇರುವುದು ಇನ್ನೊಂದು ಅಂಶ.
ಇವೆರಡನ್ನೂ ಅಳೆದು ತೂಗಿ ಯಾವುದೇ ರೀತಿಯಲ್ಲೂ ಹಿನ್ನಡೆಯಾಗಬಾರದೆಂಬ ಲೆಕ್ಕಾಚಾರವೂ ಇದೆ.

ಕಾಂಗ್ರೆಸ್‌ನ ಮತ್ತೂಂದು ಪಟ್ಟಿಯೂ ಇಲ್ಲ
ಕಾಂಗ್ರೆಸ್‌ ನಿರಾಯಾಸವಾಗಿ ಮೊದಲ ಪಟ್ಟಿಯಲ್ಲಿ ಜಿಲ್ಲೆಯ 5 ಅಭ್ಯರ್ಥಿ ಗಳ ಹೆಸರನ್ನು ಘೋಷಿಸಿದ್ದರೆ, ಉಳಿದ ಮೂವರ ಹೆಸರು ಪ್ರಕಟಣೆಗೆ ವಿಳಂಬ ಮಾಡುತ್ತಿದೆ. ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಹಾಗೂ ಪುತ್ತೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಬೇಕಿದೆ. ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಅಂತಿಮಗೊಳ್ಳಬೇಕಿದೆ.

ಟಾಪ್ ನ್ಯೂಸ್

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

Electric

Belagavi: ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ದುರ್ಮರಣ

BBK-11: ಬಿಗ್ ಬಾಸ್‌ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’

BBK-11: ಬಿಗ್ ಬಾಸ್‌ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’

1-bahga

K.S.Bhagawan ವಿವಾದ;ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Kulur ಫ್ಲೈ ಓವರ್‌ ಕೆಳಗೆ ಅನಧಿಕೃತ ಅಂಗಡಿ, ದುರ್ನಾತ

10(1)

Mangaluru: ಹಂಪ್ಸ್‌  ಬಣ್ಣ ಮಾಯ, ಕಿತ್ತು ಹೋದ ಡಾಮರು

7

Mangaluru: ಟ್ರಾಫಿಕ್‌ ಸಿಗ್ನಲ್‌ ಕಾರ್ಯಾಚರಣೆ ಯಾವಾಗ?; ಇಲಾಖೆಗೆ ಸಿಕ್ಕಿಲ್ಲ ಕಂಟ್ರೋಲ್‌

3

Kinnigoli: ಅಂಗಡಿಗಳಿಂದ ಆದಾಯ ಬಂದರೂ ದುರಸ್ತಿ ಇಲ್ಲ

2(1)

Mudbidri: ಚರಂಡಿ ವ್ಯವಸ್ಥೆ ಇಲ್ಲದೆ ಕುಸಿದ ಆವರಣ ಗೋಡೆಗಳು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ

arest

Puttur: ವಂಚನೆ ಪ್ರಕರಣದ ಆರೋಪಿ ತೆಲಂಗಾಣದಲ್ಲಿ ಬಂಧನ

accident

Kundapura: ಬೈಕ್‌ಗಳ ಮುಖಾಮುಖೀ ಢಿಕ್ಕಿ ಒಬ್ಬ ಸಾವು, ಇಬ್ಬರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.