ಬೈಂದೂರಿನಲ್ಲಿ ಬಿಜೆಪಿ ಅಲೆ: ಗುರುರಾಜ್‌ ಗಂಟಿಹೊಳೆಗೆ ಗೆಲುವು; ರಘಪತಿ ಭಟ್‌

ಗ್ಯಾರಂಟಿ ಆಮಿಷಗಳಿಗೆ ಮರುಳಾದರೆ ಮಕ್ಕಳ ಭವಿಷ್ಯಕ್ಕೆ ಕುತ್ತು

Team Udayavani, May 9, 2023, 4:08 PM IST

ಬೈಂದೂರಿನಲ್ಲಿ ಬಿಜೆಪಿ ಅಲೆ: ಗುರುರಾಜ್‌ ಗಂಟಿಹೊಳೆಗೆ ಗೆಲುವು; ರಘಪತಿ ಭಟ್‌

ಉಪ್ಪುಂದ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಭರವಸೆಗಳನ್ನು ಜಾರಿಗೊಳಿಸಿದರೆ ಲಕ್ಷ ಕೋಟಿ ವೆಚ್ಚ ಮಾಡಿದರು ಸಾಕಾಗುವುದಿಲ್ಲ, ಆಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣವಾಗುತ್ತದೆ. ಇದರಿಂದ ರಾಜ್ಯ ದಿವಾಳಿಯಾಗುವ ಆತಂಕವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. ಮತದಾರರು ಮತದಾನ ಮಾಡುವಾಗ ಯೋಚಿಸಬೇಕು, ಗ್ಯಾರಂಟಿ ಆಮಿಷಗಳಿಗೆ ಮರುಳಾದರೆ ಮುಂದಿನ ನಮ್ಮ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯದ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಶಾಸಕ ರಘಪತಿ ಭಟ್‌ ಹೇಳಿದರು.

ಅವರು ಉಪ್ಪುಂದದಲ್ಲಿ ನಡೆದ ಚುನಾವಣೆಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ಬೈಂದೂರಿನ ಜನತೆ ಮೇಲೆ ಮೋದಿ ನಂಬಿಕೆ:
ರಾಜ್ಯ ರಾಜಕೀಯದಲ್ಲಿ ಹೊಸತನವನ್ನು ಪರಿಚಯಿಸುವ ದೂರದೃಷ್ಟಿಯಿಂದ, ಮೋದಿ, ಅಮಿತಾ ಶಾ ಅವರು ಸಮರ್ಥ, ಯೋಗ್ಯ ಅಭ್ಯರ್ಥಿಯನ್ನು ಬೈಂದೂರಿಗೆ ನೀಡಿದ್ದಾರೆ. ಮೋದಿ ಅವರು ಬೈಂದೂರಿನ ಜನತೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಗುರುರಾಜ್‌ ಅವರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ ಎಂದರು.

ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿಗೆ ಮತ
ಕ್ರಾಂಗ್ರೆಸ್‌ ಅಭ್ಯರ್ಥಿ 18 ವರ್ಷ ಅಧಿಕಾರ ನಡೆಸಿದ್ದಾರೆ, ಈದೀಗ ವಯಸ್ಸು ಆಗಿದೆ, ಕೊನೆಯ ಚುನಾವಣೆ ಎನ್ನುತ್ತಿದ್ದಾರೆ ಅವರಿಂದ ಅಭಿವೃದ್ಧಿ ಸಾಧ್ಯವೆ ಜನರು ಯೋಚಿಸಬೇಕು. ಬಿಜೆಪಿ ದೂರದೃಷ್ಟಿಯ ಯುವ ಅಭ್ಯರ್ಥಿಯನ್ನು ಬೈಂದೂರಿಗೆ ನೀಡಿದೆ, ಬಿಜೆಪಿಗೆ ಮತ ನೀಡಿ ಬೈಂದೂರಿನ ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ಕಾರಣರಾಗಬೇಕಿದೆ ಎಂದು ಯಶ್‌ಪಾಲ್‌ ಸುವರ್ಣ ಹೇಳಿದರು.

ದೇಶ, ಧರ್ಮ ರಕ್ಷಣೆಗೆ ಮತ ನೀಡಿ:
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸಿ, ಗೋ ಹತ್ಯೆ ನಿಷೇಧ ಕಾಯ್ದಿಯನ್ನು ವಾಪಾಸ್ಸು ತಗೆದುಕೊಳ್ಳುತ್ತದೆ, ಆಗ ರಾತ್ರಿ ಮನೆಗಳಿಗೆ ನುಗ್ಗಿ ಗೋ-ಕಳ್ಳತನ ವ್ಯಾಪಕಗೊಳ್ಳುವ ಸಾಧ್ಯತೆ ಹೆಚ್ಚು ಆದರಿಂದ ಮತದಾರರು ದೇಶ, ಧರ್ಮ ರಕ್ಷಣೆಗಾಗಿ ಮತದಾನ ಮಾಡಬೇಕು. ಗುರುರಾಜ್‌ ಗಂಟಿಹೊಳೆ ಅವರನ್ನು ಗೆಲ್ಲಿಸುವ ಮೂಲಕ ದೇಶಕ್ಕೆ ಒಂದು ಸಂದೇಶ ನೀಡುವ ಜವಬ್ದಾರಿ ನಮ್ಮ ಮೇಲಿದೆ ಎಂದರು.

ಬೈಂದೂರಿನಲ್ಲಿ ಬಿಜೆಪಿ ಅಲೆ
ಮೋದಿ ಅವರು ರಾಜ್ಯ ರಾಜಕೀಯ ಕ್ಷೇತ್ರಕ್ಕೆ ಹೊಸತನ, ತಾರುಣ್ಯ ಮತ್ತು ಮುಂದಿನ ಯುವಕರಿಗೆ ಪ್ರೇರಣೆ ಮೂಡಿಸುವುದಕ್ಕಾಗಿ ಮಹತ್ವದ ಸಂದೇಶ ಎಂಬಂತೆ ಬೈಂದೂರಿಗೆ ಜನಸಾಮಾನ್ಯ ವ್ಯಕ್ತಿಯ ಆಯ್ಕೆಗೆ ಜನತೆಯಲ್ಲಿ ಹೊಸ ಹುರುಪು, ಉತ್ಸಾಹ ಮೂಡಿಸಿರುವುದು ಕಂಡುಬಂದಿದೆ. ಕಾರ್ಯಕರ್ತರ ಅಬ್ಬರದ ಪ್ರಚಾರ, ಬಿಜೆಪಿಯ ಅçೆಯ ನಡುವೆ ಚಪ್ಪಲಿ ಹಾಕದ ಅಭ್ಯರ್ಥಿಯ ಶ್ರದ್ಧೆ, ಭಕ್ತಿಗೆ ಜನರು ಅಭಿಮಾನಗೊಂಡು ಬೆಂಬಲ ನೀಡುತ್ತಿರುವುದು ಕಾಂಗ್ರೆಸ್‌ ಮಂಕಾಗಿದೆ ಎನ್ನುತ್ತಾರೆ ಕಾರ್ಯಕರ್ತರು.

ಹುಟ್ಟು ಕಡು ಬಡತನ, ಹಸಿವು, ಸಂಪರ್ಕವೇ ಇಲ್ಲದ ಹಳ್ಳಿ ಬದುಕು, ಅನಕ್ಷರಸ್ಥ ಕುಟುಂಬ, ಕಷ್ಟಪಟ್ಟು ಅಲೆದು ಅಲೆದು ಪಡೆದ ಶಿಕ್ಷಣ ನನ್ನನ್ನು ಈ ಸಮಾಜವನ್ನೇ ಬದಲಾಯಿಸಬೇಕೆಂಬ ಏಕೈಕ ಗುರಿಯೊಂದಿಗೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಕ್ಷೇತ್ರದ ಮೂಲೆ ಮೂಲೆಯಲ್ಲೂ ಜನರು ಬೆಂಬಲಿಸುತ್ತಿದ್ದಾರೆ, ಈಗ ನೀವು ನನಗಾಗಿ ಹೋರಾಟ ಮಾಡುತ್ತಿದೀªರಿ ಗೆಲುವಿನ ಬಳಿಕ ನಾನು ನಿಮಗಾಗಿ ಹೋರಾಡುತ್ತೇನೆ ಇದು ನನ್ನ ಸಂಕಲ್ಪ.
ಗುರುರಾಜ್‌ ಗಂಟಿಹೊಳೆ ಬಿಜೆಪಿ ಅಭ್ಯರ್ಥಿ

ಸುಮಾರು 20ವರ್ಷ ಸಂಘಟನೆಗಾಗಿ ಸೇವೆ ಸಲ್ಲಿಸಿ ಈಶಾನ್ಯ ರಾಜ್ಯಗಳಿಗೆ ತೆರಳಿ ದಾರಿ ತಪ್ಪುವ ಯುವ ಜನರನ್ನು ಮನ ಒಲಿಸಿ, ವಿಧ್ಯಾಭ್ಯಾಸ ನೀಡಿ ಮಾದರಿಯಾಗಿದ್ದಾರೆ. ಬಿಜೆಪಿ ಇಂತಹ ವ್ಯಕ್ತಿಗೆ ಟಿಕೆಟ್‌ ನೀಡಿದೆ, ನಾಗರಿಕರು ಯೋಚಿಸಬೇಕು ನವ ಬೈಂದೂರಿನ ನಿರ್ಮಾಣಕ್ಕೆ ಶ್ರಮಿಕ ಜೀವಿಗೆ ಮತನೀಡಿ ದೊಡ್ಡ ಅಂತರದಿಂದ ಗೆಲ್ಲಿಸಬೇಕು.
ವಿಜಯ ಕೊಡವೂರು

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

sand

Kundapura: ಮರಳು ಅಕ್ರಮ ಸಾಗಾಟ ಪತ್ತೆ

4

Kundapura: ಕೆಲಸವಿಲ್ಲದೆ ಜುಗುಪ್ಸೆ: ಯುವಕ ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.