ಬಿಜೆಪಿಯಲ್ಲೀಗ ಭಿನ್ನಮತ ಭುಗಿಲು ಬಿ.ಕೆ. ಹರಿಪ್ರಸಾದ್
Team Udayavani, Apr 14, 2023, 6:17 AM IST
ಉಡುಪಿ: ಬಿಜೆಪಿಗೆ ಜನರ ಬದುಕಿನ ಬಗ್ಗೆ ಚಿಂತೆಯಿಲ್ಲ. ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಲಾಗದೆ ಅಭ್ಯರ್ಥಿಗಳನ್ನೇ ಬದಲಿಸಿ, ಆಕ್ರೋಶದ ಜ್ವಾಲೆಯನ್ನು ಎದುರಿಸುತ್ತಿದೆ ಎಂದು
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿ ಪ್ರಸಾದ್ ವಾಗ್ಧಾಳಿ ನಡೆಸಿದರು.
ಶಿಸ್ತಿನ ಪಕ್ಷ, ದೇಶಭಕ್ತರ ಪಕ್ಷ ಎಂದದ್ದಷ್ಟೇ. ಈಗ ಎದ್ದಿರುವ ಭಿನ್ನಮತ ನೋಡಿದರೆ ಇದು ಬೂಟಾ ಟಿಕೆಯ ಪಕ್ಷ ಎಂಬುದು ಸ್ಪಷ್ಟವಾಗುತ್ತಿದೆ. ಕ್ರಿಮಿನಲ್ ಹಿನ್ನೆಲೆ ಇರುವ 22 ಶಾಸಕರು ಅದರಲ್ಲಿದ್ದಾರೆ. ಜೆಡಿಎಸ್‌ನಲ್ಲಿ 7, ಕಾಂಗ್ರೆಸ್‌ನಲ್ಲಿ ಐವರು ಮಾತ್ರ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಅಭ್ಯರ್ಥಿ ಇಲ್ಲದ ಕಡೆ ಒಬ್ಬರನ್ನೇ ಎರಡೆರೆಡು ಕಡೆ ನಿಲ್ಲಿಸಿದೆ ಎಂದು ಟೀಕಿಸಿದ ಅವರು ಎಲ್ಲ ಕ್ಷೇತ್ರಗಳ ರಾಜಕೀಯ ಬೆಳವಣಿಗೆಯನ್ನು ಗಮನಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಿ ದ್ದೇವೆ. ಡಾ| ಎಂ. ವೀರಪ್ಪ ಮೊಲಿ ನಮ್ಮ ಪಕ್ಷದ ಪ್ರಭಾವಿ ನಾಯಕರು. ಅವರು ಕೆಲವು ಹೆಸರನ್ನು ಸೂಚಿಸಿದ್ದಾರೆ. ಅದನ್ನು ಪಕ್ಷ ಗಮನಿಸುತ್ತದೆ. ಚುನಾವಣೆ ಪ್ರಚಾರದಲ್ಲೂ ಅವರನ್ನು ಸಕ್ರಿಯ ವಾಗಿ ತೊಡಗಿಸಿಕೊಳ್ಳಲಿದ್ದೇವೆ ಎಂದರು.
ಭಿನ್ನಮತ ಶಮನ
ಉಡುಪಿ ಕ್ಷೇತ್ರದಲ್ಲಿ ಎದ್ದಿರುವ ಭಿನ್ನಮತ ಶಮನಕ್ಕೆ ಬೇಕಾದ ಎಲ್ಲ ಕ್ರಮ ತೆಗೆದುಕೊಂಡಿ ದ್ದೇವೆ. ಅಸಮಾಧಾನಗೊಂಡಿ ರುವ ಆಕಾಂಕ್ಷಿಯ ಜತೆಗೆ ಮಾತುಕತೆ ನಡೆಸಿದ್ದು, ಒಂದೆರಡು ದಿನ ದಲ್ಲಿ ನಮ್ಮೊಂದಿಗೆ ಸೇರುವರು ಎಂದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಪ್ರಮುಖರಾದ ಎಂ.ಎ. ಗಫೂರ್, ಪ್ರಖ್ಯಾತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಾಪ ಪ್ರಾಯಶ್ಚಿತ್ತ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅವಧಿಯಲ್ಲಿ ಮಾಡಿರುವ ಪಾಪ ಕಾರ್ಯಗಳ ಪ್ರಾಯಶ್ಚಿತ್ತಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ನಡೆಸಿದ ದುರಾಡಳಿತಕ್ಕೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಾಗದು. ಕಾಂಗ್ರೆಸ್‌ನ ತಣ್ತೀ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತವಿದೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.