ಬೈಂದೂರಿಗೆ ಬಿಜೆಪಿ ಅಭ್ಯರ್ಥಿ ಪ್ರಕಟ: ಜಿದ್ದಾಜಿದ್ದಿನ ಪೈಪೋಟಿಗೆ ಕ್ಷೇತ್ರ ಸಜ್ಜು


Team Udayavani, Apr 13, 2023, 8:00 AM IST

ಬೈಂದೂರಿಗೆ ಬಿಜೆಪಿ ಅಭ್ಯರ್ಥಿ ಪ್ರಕಟ: ಜಿದ್ದಾಜಿದ್ದಿನ ಪೈಪೋಟಿಗೆ ಕ್ಷೇತ್ರ ಸಜ್ಜು

ಕುಂದಾಪುರ: ಕರಾವಳಿಯ ಎರಡು ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಬಾಕಿ ಉಳಿದಿದ್ದ ಏಕೈಕ ಕ್ಷೇತ್ರವಾದ ಬೈಂದೂರಿಗೆ ಕೊನೆಗೂ ಟಿಕೆಟ್‌ ಘೋಷಿಸಿದ್ದು ಹೊಸ ಮುಖ ಗುರುರಾಜ್‌ ಗಂಟಿಹೊಳೆ ಅವರಿಗೆ ಆವಕಾಶ ದೊರೆತಿದೆ. ಈ ಹಿನ್ನೆಲೆಯಲ್ಲಿ ಚುನಾವಣ ಕಣದಲ್ಲಿ ಕಾವೇರಲಿದೆ.

ಬಾಕಿ ಇದ್ದ 35 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿತು. ಈ ಪೈಕಿ 14 ಹಾಲಿ ಶಾಸಕರ ಕ್ಷೇತ್ರಗಳಾಗಿದ್ದವು. ಇದರಲ್ಲಿ ಬೈಂದೂರು ಸಹ ಒಂದಾಗಿತ್ತು. ಇಲ್ಲಿಯ ಟಿಕೆಟ್‌ ಘೋಷಣೆ ಸಂಬಂಧ ಹೈಕಮಾಂಡ್‌ ಕಡೆಯಿಂದ ಬುಧವಾರ ಸಂಜೆವರೆಗೂ ನಿರ್ಧಾರ ಹೊರಬಿದ್ದಿರಲಿಲ್ಲ. ಆದರೆ ತಡರಾತ್ರಿ 11ರ ವೇಳೆಗೆ ಪ್ರಕಟಿಸಲಾಗಿದೆ.
ಕ್ಷಣಕ್ಕೊಂದು ಸುದ್ದಿ ಕೇಳಿ ಬರುತ್ತಿದ್ದು, ಹಾಲಿ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರಿಗೆ ಪಕ್ಷದಿಂದ ನಾಯಕರು ಕರೆ ಮಾಡಿದ್ದಾರೆನ್ನಲಾಗಿದೆ. ಆದರೆ ಇವರ ಬೆಂಬಲಿಗರು ಆಕ್ರೋಶಗೊಂಡಿದ್ದು, ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮಂಗಳವಾರ ತಡರಾತ್ರಿಯವರೆಗೂ ಶಾಸಕರ ನಿವಾಸದಲ್ಲಿ ನೂರಾರು ಮಂದಿ ಬೆಂಬಲಿಗರು ಸೇರಿದ್ದರು.

ರಾಘವೇಂದ್ರ, ವಿಜಯೇಂದ್ರ ಭೇಟಿ
ಸುಕುಮಾರ್‌ ಶೆಟ್ಟರು ತಮ್ಮ ಬೆಂಬಲಿಗರೊಂದಿಗೆ ಶಿಕಾರಿಪುರಕ್ಕೆ ತೆರಳಿದ್ದು, ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದು, ಆಶಾದಾಯಕ ಭರವಸೆ ಸಿಕ್ಕಿದೆ ಎನ್ನುವುದು ಅವರ ಬೆಂಬಲಿಗರ ಅಭಿಮತ. ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ನಡೆಯಲಿದೆ. ಬೈಂದೂರು ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು, ಆ ನಿಟ್ಟಿನಲ್ಲಿಯೂ ಇಲ್ಲಿನ ಟಿಕೆಟ್‌ ಹಂಚಿಕೆಗೆ ತೂಗಿ ಅಳೆಯಲಾಗುತ್ತಿತ್ತು.

ಹಾಲಿಯೋ? ಹೊಸಮುಖವೋ?
ಬೈಂದೂರು ಬಿಜೆಪಿ ಟಿಕೆಟ್‌ಗೆ ಸಂಬಂಧಿಸಿದಂತೆ ಈಗ ಹಾಲಿಯೋ ಅಥವಾ ಹೊಸಮುಖವೋ ಅನ್ನುವ ಚರ್ಚೆ ಸಾಕಷ್ಟು ನಡೆದಿತ್ತು. ಉಡುಪಿ ಜಿÇÉೆಯಲ್ಲಿ ಮೂವರು ಸೇರಿದಂತೆ, ಕರಾವಳಿಯಲ್ಲಿ ಈಗಾಗಲೇ 6 ಮಂದಿ ಹೊಸಮುಖಗಳಿಗೆ ಅವಕಾಶ ನೀಡಿದೆ.

ಉಳಿದಂತೆ ಬೈಂದೂರಲ್ಲಿ ಬಂಟ ಸಮುದಾಯಕ್ಕೆ ನೀಡುವುದು ನಿಶ್ಚಿತ. ಇಲ್ಲಿ ಹೊಸಮುಖಗಳಾದ ಬಿಜೆಪಿ ಜಿÇÉಾ ಮಾಜಿ ಪ್ರಧಾನ ಕಾರ್ಯದರ್ಶಿ ಗುರುರಾಜ್‌ ಗಂಟಿಹೊಳೆ ಹಾಗೂ ಬೈಂದೂರು ಮಂಡಲದ ಅಧ್ಯಕ್ಷರಾಗಿದ್ದ ಪ್ರಣಯ್‌ ಕುಮಾರ್‌ ಶೆಟ್ಟಿ ಅವರಲ್ಲಿ ಯಾರಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಬೆಂಬಲಿಗರ ಒತ್ತಡ ಹಾಗೂ ಒತ್ತಾಯಕ್ಕೆ ಹೈಕಮಾಂಡ್‌ ಯಾರಿಗೆ ಮಣೆ ಹಾಕುವುದು ಎಂಬ ಕುತೂಹಲ ಕೊನೆಯವರೆಗೂ ತಣಿದಿತ್ತು. ಈಗ ಅವೆಲ್ಲದಕ್ಕೂ ಹೈಕಮಾಂಡ್‌ ಅಂತ್ಯ ಹಾಡಿದ್ದು, ಹೊಸಬರಿಗೆ ಅವಕಾಶ ನೀಡಿದೆ. ಬಿ.ಎಂ. ಸುಕುಮಾರ ಶೆಟ್ಟರ ಪ್ರಯತ್ನ ಕೊನೆಗೂ ಫ‌ಲಿಸದಾಗಿದೆ.

ಬೈಂದೂರಿಗೂ ಹೊಸಮುಖ: ಗುರುರಾಜ್‌ ಗಂಟಿಹೊಳೆಗೆ ಟಿಕೆಟ್‌
ಹಾಲಿ ಶಾಸಕ ಸುಕುಮಾರ ಶೆಟ್ಟರಿಗೆ ತಪ್ಪಿದ ಟಿಕೆಟ್‌
ಕುಂದಾಪುರ: ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೊಸಮುಖ ಗುರುರಾಜ್‌ ಗಂಟಿಹೊಳೆ ಅವರಿಗೆ ಟಿಕೆಟ್‌ ನೀಡಿದೆ. ಕೊನೆಗೂ ಬಿಜೆಪಿ ಹೈಕಮಾಂಡ್‌ ಅಳೆದು – ತೂಗಿ ಕುತೂಹಲ ಕೆರಳಿಸಿದ್ದ ಬೈಂದೂರಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಈ ಮೂಲಕ ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟರಿಗೆ ಈ ಬಾರಿ ಟಿಕೆಟ್‌ ತಪ್ಪಿದಂತಾಗಿದೆ.

ಆರೆಸ್ಸೆಸ್‌ ಹಿನ್ನೆಲೆಯ ಗುರುರಾಜ್‌ ಹಿಂದೂ ಸಂಘಟನೆ ಮುಖಂಡರಾಗಿ ಸಕ್ರಿಯರಾಗಿದ್ದು, ಹಿಂದೆ ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ರ್ಕಾ‍ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ಬಿಜೂರು ಸಮೀಪದ ಗಂಟಿಹೊಳೆ ಇವರ ಹುಟ್ಟೂರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಗುರುರಾಜ್‌ ಆರೆಸ್ಸೆಸ್‌ನಲ್ಲಿ ನಾನಾ ಕಡೆ ಪ್ರಚಾರಕರಾಗಿ ಸಂಘಟನೆಯನ್ನು ಬಲಪಡಿಸಿದವರು. ಬಿಜೆಪಿಯ ಉಡುಪಿ ಜಿಲ್ಲಾ ಸಂಘಟನ ಕಾರ್ಯದರ್ಶಿಯಾಗಿ ವಿವಿಧ ಸ್ಥಳದ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಆರೆಸ್ಸೆಸ್‌ನಲ್ಲಿ 10 ವರ್ಷಗಳ ಕಾಲ ಪ್ರಚಾರಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅಖೀಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಇದ್ದರು.

ಟಾಪ್ ನ್ಯೂಸ್

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Kundapura: ವೈದ್ಯರ ಮೇಲೆ ಹಲ್ಲೆಗೆ ಯತ್ನ; ಬೆದರಿಕೆ; ದೂರು ದಾಖಲು

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

6

Koteshwara: ಕೊಡಿಹಬ್ಬದ ಪೂರ್ವಭಾವಿಯಾಗಿ ಶ್ರೀ ಕೋಟಿಲಿಂಗೇಶ್ವರನಿಗೆ ಸಮುದ್ರ ಸ್ನಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.