ಬೈಂದೂರು, ಉಡುಪಿ ಹೆಚ್ಚು ಶಾಸಕರನ್ನು ಕಂಡ ಕ್ಷೇತ್ರಗಳು!
Team Udayavani, Apr 7, 2023, 4:24 PM IST
ಬೈಂದೂರಿನಲ್ಲಿ 1972ರಿಂದ 2018ರ ಅವಧಿವರೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 7 ಮಂದಿ ಶಾಸಕರು ಆಡಳಿತ ನಡೆಸಿದ್ದರೆ, ಉಡುಪಿ ಕ್ಷೇತ್ರವು ಇದೇ ಅವಧಿಯಲ್ಲಿ 5 ಮಂದಿ ಶಾಸಕರನ್ನು ಕಂಡಿತ್ತು.
ಉಡುಪಿ: ಜಿಲ್ಲೆಯಾದ್ಯಂತ ಚುನಾವಣೆ ರಣಕಣ ರಂಗೇರುತ್ತಿದೆ. ಯಾರಿಗೆ ಟಿಕೆಟ್, ಯಾರು ಶಾಸಕರಾಗಲಿದ್ದಾರೆ ಎಂಬ ಚರ್ಚೆಯೂ ನಡೆಯು ತ್ತಿದೆ. ಈ ಮಧ್ಯೆ ಕಳೆದ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿ, ಒಮ್ಮೆ ಶಾಸಕರಾದವರು, ಹಲವು ಬಾರಿ ಶಾಸಕರಾದವರೂ ಇದ್ದಾರೆ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಈವರೆಗೂ ಹೆಚ್ಚು ಶಾಸಕರನ್ನು ಕಂಡಿದ್ದು ಬೈಂದೂರು ಮತ್ತು ಉಡುಪಿ ಕ್ಷೇತ್ರ.
ಬೈಂದೂರಿನಲ್ಲಿ 1972ರಿಂದ 2018ರ ವರೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 7 ಮಂದಿ ಶಾಸಕರು ಆಡಳಿತ ನಡೆಸಿದ್ದಾರೆ. 1972, 1978ರಲ್ಲಿ ಎ. ಜಿ. ಕೊಡ್ಗಿ, 1983ರಲ್ಲಿ ಅಪ್ಪಣ್ಣ ಹೆಗ್ಡೆ, 1985, 1989ರಲ್ಲಿ ಜಿ. ಎಸ್. ಆಚಾರ್, 1994ರಲ್ಲಿ ಜಯರಾಮ ಶೆಟ್ಟಿ, 1999, 2004, 2013ರಲ್ಲಿ ಗೋಪಾಲ ಪೂಜಾರಿ, 2008ರಲ್ಲಿ ಲಕ್ಷ್ಮೀನಾರಾಯಣ, 2018ರಲ್ಲಿ ಬಿ. ಎಂ. ಸುಕುಮಾರ್ ಶೆಟ್ಟಿ ಶಾಸಕರಾಗಿದ್ದರು.ಗೋಪಾಲ ಪೂಜಾರಿ ಅವರು ಉಪಚುನಾವಣೆ ಯಲ್ಲೂ ಒಮ್ಮೆ ಗೆದ್ದಿರುವುದರಿಂದ ನಾಲ್ಕು ಬಾರಿ ಕ್ಷೇತ್ರದ ಶಾಸಕರಾಗಿರುವ ಹೆಗ್ಗಳಿಕೆಯಿದೆ.
ಉಡುಪಿ ಕ್ಷೇತ್ರ 1972ರಿಂದ 2018ರ ವರೆಗೆ 5 ಶಾಸಕರನ್ನು ಕಂಡಿದೆ. ಮನೋರಮಾ ಮಧ್ವರಾಜ್ ನಾಲ್ಕು ಬಾರಿ ಹಾಗೂ ಕೆ. ರಘುಪತಿ ಭಟ್ ಮೂರು ಬಾರಿ ಶಾಸಕರಾಗಿದ್ದಾರೆ. 1972, 1978, 1985, 1989ರಲ್ಲಿ ಮನೋರಮಾ ಮಧ್ವರಾಜ್, 1983 ಡಾ| ವಿ.ಎಸ್. ಆಚಾರ್ಯ, 1994, 1999ರಲ್ಲಿ ಯು. ಆರ್. ಸಭಾಪತಿ, 2004, 2008, 2018ರಲ್ಲಿ ಕೆ. ರಘುಪತಿ ಭಟ್ ಹಾಗೂ 2013 ಪ್ರಮೋದ್ ಮಧ್ವರಾಜ್ ಶಾಸಕರಾಗಿದ್ದರು.
ಬ್ರಹ್ಮಾವರ ಕ್ಷೇತ್ರ ಇತಿಹಾಸ ಪುಟಕ್ಕೆ
ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ 1972ರಿಂದ 2004ರ ಅವಧಿಯಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮೂರು ಬಾರಿ ಶಾಸಕರಾಗಿದ್ದಾರೆ. 1972ರಲ್ಲಿ ಜಯಪ್ರಕಾಶ್ ಎಸ್. ಕೊಳ್ಕೆಬೈಲು, 1978ರಲ್ಲಿ ಆನಂದ ಕುಂದ ಹೆಗ್ಡೆ, 1983 ಬಿ.ಬಿ. ಶೆಟ್ಟಿ, 1985 ಬಸವರಾಜ್, 1989 ಪಿ. ಬಸವರಾಜ್, 1994ರಿಂದ 2004ರ ವರೆಗೆ ಜಯಪ್ರಕಾಶ್ ಹೆಗ್ಡೆ ಶಾಸಕರಾಗಿದ್ದರು. ಅನಂತರ ಕ್ಷೇತ್ರ ಪುನರ್‌ವಿಂಗಡಣೆಯಾಗಿ ಕುಂದಾಪುರ, ಉಡುಪಿ, ಕಾರ್ಕಳದೊಂದಿಗೆ ವಿಲೀನಗೊಂಡಿದೆ. ಈ ಕ್ಷೇತ್ರದಲ್ಲಿ ಬಂಟ ಸಮುದಾಯದವರೇ ಹೆಚ್ಚು ಬಾರಿ ಶಾಸಕರಾಗಿದ್ದರು.
ಕಾರ್ಕಳದಲ್ಲಿ ಮೂವರು
ಕಾರ್ಕಳ ವಿಧಾನಸಭಾ ಕ್ಷೇತ್ರ 1972ರಿಂದ 2018ರ ಅವಧಿಯಲ್ಲಿ ಕಂಡಿದ್ದು ಮೂವರು ಶಾಸಕರನ್ನು ಮಾತ್ರ. 1972ರಿಂದ 1994ರ ವರೆಗೆ ಎಂ. ವೀರಪ್ಪ ಮೊಲಿ, 1990, 2008ರಲ್ಲಿ ಎಚ್. ಗೋಪಾಲ ಭಂಡಾರಿ, 2004, 2013, 2018ರಲ್ಲಿ ವಿ. ಸುನಿಲ್ ಕುಮಾರ್ ಶಾಸಕರಾಗಿದ್ದರು.
ಕಾಪು, ಕುಂದಾಪುರದಲ್ಲಿ ತಲಾ ನಾಲ್ವರು
ಕಾಪು ಕ್ಷೇತ್ರದಲ್ಲಿ 1972ರಿಂದ 2018ರ ವರೆಗೆ ನಾಲ್ವರು ಶಾಸಕರು ಆಡಳಿತ ನಡೆಸಿದ್ದಾರೆ. 1972, 1978ರಲ್ಲಿ ಬಿ. ಭಾಸ್ಕರ್ ಶೆಟ್ಟಿ 1983ರಿಂದ 1999ರ ವರೆಗೆ ವಸಂತ ಸಾಲ್ಯಾನ್, 2004, 2008, 2018 ರಲ್ಲಿ ಲಾಲಾಜಿ ಆರ್. ಮೆಂಡನ್, 2013ರಲ್ಲಿ ವಿನಯ ಕುಮಾರ್ ಸೊರಕೆ ಶಾಸಕರಾಗಿದ್ದರು. ಬಿಲ್ಲವರು ಹೆಚ್ಚು ಅವಧಿಗೆ, ಅನಂತರ ಮೊಗವೀರರು ಮತ್ತು ಬಂಟ ಸಮುದಾಯದವರು ಇಲ್ಲಿ ಶಾಸಕರಾಗಿದ್ದರು.
ಕುಂದಾಪುರ ಕ್ಷೇತ್ರ 1972ರಿಂದ 2018ರ ವರೆಗೆ ನಾಲ್ವರು ಶಾಸಕರನ್ನು ಕಂಡಿದೆ. 1972 ವಿನ್ನಿ ಫೆರ್ನಾಂಡಿಸ್, 1978 ಕಾಪು ಸಂಜೀವ ಶೆಟ್ಟಿ, 1983ರಿಂದ 1994ರ ವರೆಗೆ ಕೆ. ಪ್ರತಾಪ್‌ಚಂದ್ರ ಶೆಟ್ಟಿ, 1999ರಿಂದ 2018ರ ವರೆಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರಾಗಿದ್ದರು.
-ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.