ಅನುಭವಿಗಳ ಸಂಪುಟ ರಚನೆ: 33 ಸಚಿವ ಸ್ಥಾನಕ್ಕೆ 53 ಮಂದಿ ಲಾಬಿ

ಸಾಮಾಜಿಕ ನ್ಯಾಯ ಪಾಲಿಸುವುದು ಅನಿವಾರ್ಯ... ಸಚಿವ ಸ್ಥಾನ ಆಕಾಂಕ್ಷಿಗಳು ಯಾರ್ಯಾರು?

Team Udayavani, May 15, 2023, 7:10 AM IST

1—sdsa-d

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಗಳಿಸಿರುವ ಹಿನ್ನೆಲೆಯಲ್ಲಿ ಒಂದೆಡೆ ಸಿಎಂ ಅಭ್ಯರ್ಥಿ ಆಯ್ಕೆಗೆ ಸಾಕಷ್ಟು ಕಸರತ್ತುಗಳು ನಡೆದಿರುವುದರ ನಡುವೆಯೇ ಇನ್ನೊಂದೆಡೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಂದಲೂ ಪ್ರಬಲ ಲಾಬಿ ಆರಂಭವಾಗಿದೆ. ಈ ಸಲ ಗೆದ್ದಿರುವ ಬಹುತೇಕರಲ್ಲಿ ಹಳೆ ಮುಖಗಳೇ ಹೆಚ್ಚಿರುವುದರಿಂದ ಹಿರಿಯ ತಲೆಗಳು, ಅನುಭವಿಗಳ ಸಂಪುಟ ರಚನೆ ಸಾಧ್ಯತೆ ಇದೆ.

ಕಾಂಗ್ರೆಸ್‌ನ 135 ಶಾಸಕರಲ್ಲಿ ಲಿಂಗಾಯತರ ಸಂಖ್ಯೆ ಅತ್ಯಧಿಕ (39)ವಾಗಿದೆ. ಅನಂತರದ್ದು ಒಕ್ಕಲಿಗ (21)ರದ್ದು. ಎಸ್‌ಸಿ ಸಮುದಾಯದಿಂದ 22, ಎಸ್‌ಟಿ ಸಮುದಾಯದಿಂದ 15, ಕುರುಬ ಸಮಾಜದಿಂದ 8, ಮುಸ್ಲಿಂ ಸಮಾಜದಿಂದ 9ಹಾಗೂ ಬ್ರಾಹ್ಮಣ, ಈಡಿಗ ಸಮುದಾಯದಿಂದ ತಲಾ ಮೂವರು ಆಯ್ಕೆಯಾಗಿದ್ದಾರೆ.

ಸಂಪುಟ ರಚನೆಯಲ್ಲಿ ಜಿಲ್ಲೆ, ಜಾತಿಗಳಿಗೆ ಪ್ರಾತಿನಿಧ್ಯ ಕೊಡುವುದಕ್ಕೆ ಆದ್ಯತೆ ನೀಡುವುದರಿಂದ ಸಾಮಾಜಿಕ ನ್ಯಾಯ ಪಾಲಿಸುವುದು ಅನಿವಾರ್ಯವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುತೇಕ ಎಲ್ಲ ಜಾತಿ, ಜನಾಂಗದ ಮತಗಳು ಲಭಿಸಿರುವುದರಿಂದ ಎಲ್ಲರಿಗೂ ಪ್ರಾತಿನಿಧ್ಯ ಕಲ್ಪಿಸಿಕೊಡಬೇಕಾದ ಸವಾಲು ಎದುರಾಗಿದೆ.

ಆದರೆ ಮುಖ್ಯಮಂತ್ರಿ ಹೊರತುಪಡಿಸಿ ಉಳಿದ 33 ಸ್ಥಾನಗಳಿಗೆ ಅಂದಾಜು 53 ಮಂದಿ ಅರ್ಹ ಅನುಭವಿಗಳು ಕಣ್ಣಿಟ್ಟಿದ್ದಾರೆ. ಹೀಗಾಗಿ ಎಲ್ಲರನ್ನು ಸಮಾಧಾನಪಡಿಸಿ ಸಂಪುಟ ರಚಿಸುವ ಕರ್ತವ್ಯ ಮುಖ್ಯಮಂತ್ರಿ ಯಾಗುವವರ ಮೇಲಿದೆ. 53 ಮಂದಿಯನ್ನು 33 ಮಂದಿಗೆ ಸಚಿವ ಸ್ಥಾನ ದೊರೆತರೂ ಇನ್ನೂ 20 ಮಂದಿ ಅರ್ಹರು ಹೊರಗುಳಿಯುತ್ತಾರೆ. ಅವರಿಗೆ ಸಂಪುಟ ದರ್ಜೆ ನಿಗಮ, ಮಂಡಳಿಗಳಲ್ಲಿ ಅವಕಾಶ ಕೊಡುವ ಬಗ್ಗೆ ಯೋಚಿಸಲಾಗುತ್ತಿದೆ.

ಸಚಿವ ಸ್ಥಾನ ಆಕಾಂಕ್ಷಿಗಳು
ಯು.ಟಿ.ಖಾದರ್‌ (ಮಂಗಳೂರು), ಲಕ್ಷ್ಮಣ ಸವದಿ (ಅಥಣಿ), ಸತೀಶ್‌ ಜಾರಕಿಹೊಳಿ (ಯಮಕನಮರಡಿ), ಲಕ್ಷ್ಮೀ ಹೆಬ್ಟಾಳ್ಕರ್‌ (ಬೆಳಗಾವಿ ಗ್ರಾಮೀಣ), ಅಶೋಕ್‌ ಪಟ್ಟಣ (ರಾಮದುರ್ಗಾ), ಆರ್‌.ಬಿ.ತಿಮ್ಮಾಪುರ (ಮುಧೋಳ), ವಿಜಯಾನಂದ ಕಾಶಪ್ಪನವರ್‌ (ಹುನಗುಂದ), ಜಿ.ಟಿ.ಪಾಟೀಲ್‌ (ಬೀಳಗಿ), ಸಿ.ಎಸ್‌.ನಾಡಗೌಡ (ಮುದ್ದೇಬಿಹಾಳ), ಶಿವಾನಂದ ಪಾಟೀಲ್‌ (ಬಸವನಬಾಗೇವಾಡಿ), ಎಂ.ಬಿ.ಪಾಟೀಲ್‌ (ಬಬಲೇಶ್ವರ), ಯಶವಂತರಾಯ ಗೌಡ ಪಾಟೀಲ್‌ (ಇಂಡಿ), ಡಾ| ಅಜಯ್‌ ಸಿಂಗ್‌ (ಜೇವರ್ಗಿ), ಪ್ರಿಯಾಂಕ್‌ ಖರ್ಗೆ (ಚಿತ್ತಾಪುರ), ಡಾ| ಶರಣ ಪ್ರಕಾಶ್‌ ಪಾಟೀಲ್‌ (ಸೇಡಂ), ಬಿ.ಆರ್‌. ಪಾಟೀಲ್‌ (ಆಳಂದ), ರಾಜ ವೆಂಕಟಪ್ಪ ನಾಯಕ (ಸುರಪುರ), ಶರಣ ಬಸಪ್ಪ ಗೌಡ ದರ್ಶನಾಪುರ (ಶಹಾಪುರ), ರಹೀಂ ಖಾನ್‌ (ಬೀದರ್‌ ಉತ್ತರ), ಈಶ್ವರ ಖಂಡ್ರೆ (ಭಾಲ್ಕಿ), ಹಂಪನಗೌಡ ಬಾದರ್ಲಿ (ಸಿಂಧನೂರು), ಶಿವರಾಜ ತಂಗಡಗಿ (ಕನಕಗಿರಿ), ಬಸವರಾಜ ರಾಯರೆಡ್ಡಿ (ಯಲಬುರ್ಗಾ), ಎಚ್‌.ಕೆ. ಪಾಟೀಲ್‌ (ಗದಗ), ಜಿ.ಎಸ್‌.ಪಾಟೀಲ್‌ (ರೋಣ), ವಿನಯ ಕುಲಕರ್ಣಿ (ಧಾರವಾಡ), ಸಂತೋಷ್‌ ಲಾಡ್‌ (ಕಲಘಟಗಿ), ಆರ್‌.ವಿ.ದೇಶಪಾಂಡೆ (ಹಳಿಯಾಳ), ಬಸವರಾಜ ಶಿವಣ್ಣವರ (ಬ್ಯಾಡಗಿ), ಎನ್‌.ವೈ. ಗೋಪಾಲಕೃಷ್ಣ (ಮೊಳಕಾಲ್ಮೂರು), ನಾಗೇಂದ್ರ (ಬಳ್ಳಾರಿ), ಡಿ.ಸುಧಾಕರ (ಹಿರಿಯೂರು), ಎಸ್‌.ಎಸ್‌.ಮಲ್ಲಿಕಾರ್ಜುನ (ದಾವಣಗೆರೆ ಉತ್ತರ), ಬಿ.ಕೆ.ಸಂಗಮೇಶ (ಭದ್ರಾವತಿ), ಮಧು ಬಂಗಾರಪ್ಪ (ಸೊರಬ), ಟಿ.ಡಿ.ರಾಜೇಗೌಡ (ಶೃಂಗೇರಿ), ಡಾ| ಜಿ. ಪರಮೇಶ್ವರ್‌ (ಕೊರಟಗೆರೆ), ಟಿ.ಬಿ.ಜಯಚಂದ್ರ (ಶಿರಾ), ಕೆ.ಎನ್‌.ರಾಜಣ್ಣ (ಮಧುಗಿರಿ), ಡಾ| ಎಂ.ಸಿ.ಸುಧಾಕರ್‌ (ಚಿಂತಾಮಣಿ), ಕೆ.ಎಚ್‌.ಮುನಿಯಪ್ಪ (ದೇವನಹಳ್ಳಿ), ಪಿ.ಎಂ.ನರೇಂದ್ರಸ್ವಾಮಿ (ಮಳವಳ್ಳಿ), ಚಲುವರಾಯಸ್ವಾಮಿ (ನಾಗಮಂಗಲ), ಕೆ.ಎಂ.ಶಿವಲಿಂಗೇಗೌಡ (ಅರಸೀಕೆರೆ), ಡಾ| ಎಚ್‌. ಸಿ. ಮಹದೇವಪ್ಪ (ಟಿ.ನರಸೀಪುರ), ತನ್ವೀರ್‌ ಸೇಠ (ನರಸಿಂಹರಾಜ), ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ), ಕೆ.ಜೆ.ಜಾರ್ಜ್‌ (ಸರ್ವಜ್ಞ ನಗರ), ಎನ್‌.ಎ.ಹ್ಯಾರೀಸ್‌ (ಶಾಂತಿನಗರ), ದಿನೇಶ್‌ ಗುಂಡೂರಾವ್‌ (ಗಾಂಧಿನಗರ), ಎಂ.ಕೃಷ್ಣಪ್ಪ (ವಿಜಯನಗರ), ಜಮೀರ್‌ ಅಹ್ಮದ್‌(ಚಾಮರಾಜಪೇಟೆ), ರಾಮಲಿಂಗಾ ರೆಡ್ಡಿ (ಬಿ.ಟಿ.ಎಂ.ಲೇಔಟ್‌)

ಟಾಪ್ ನ್ಯೂಸ್

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.