25 ಕಾಂಗ್ರೆಸ್ ಅಭ್ಯರ್ಥಿಗಳಿಗೆ “ಬಿ- ಫಾರಂ’
Team Udayavani, Apr 14, 2023, 6:37 AM IST
ಬೆಂಗಳೂರು: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ ಕಾಂಗ್ರೆಸ್‌ನ 25ಕ್ಕೂ ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಿಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಿಸಿ ಗೆಲುವಿಗೆ ಶುಭ ಕೋರಿದರು.
ಇದಕ್ಕೂ ಮುನ್ನ ದೇವರ ಮೊರೆಹೋದ ಕೆಪಿಸಿಸಿ ಅಧ್ಯಕ್ಷರು, ಕಚೇರಿಯ ತಮ್ಮ ಕೊಠಡಿಯಲ್ಲಿದ್ದ ನೊಣವಿನಕೆರೆ ಅಜ್ಜಯ್ಯ ಫೋಟೋಗೆ ನಮಿಸಿದರು. ಅನಂತರ ಎಲ್ಲ ಫಾರಂಗಳನ್ನು ಸ್ವಲ್ಪ ಹೊತ್ತು ದೇವರ ಫೋಟೋಗಳ ಮುಂದಿಟ್ಟು ಪ್ರಾರ್ಥಿಸಿದರು. ಅನಂತರ ಕ್ಷಣಕಾಲ ಕಣ್ಣಿಗೊತ್ತಿ ಒಬ್ಬೊಬ್ಬ ಅಭ್ಯರ್ಥಿಗಳನ್ನು ಕರೆದು ವಿತರಣೆ ಮಾಡಿ, “ಗುಡ್ ಲಕ್…’, “ಆಲ್ ದಿ ಬೆಸ್ಟ್’ ಎಂದು ಬೆನ್ನುತಟ್ಟಿದರು. ಇದಕ್ಕೆ ಪ್ರತಿಯಾಗಿ ಫಾರಂ ಸ್ವೀಕರಿಸಿದ ಬಹುತೇಕ ಉಮೇದುವಾರರು, ಅಧ್ಯಕ್ಷರಿಗೆ ನಮಸ್ಕರಿಸಿ ಥ್ಯಾಂಕ್ಸ್ ಹೇಳಿದರೆ, ಕೆಲವರು ಕಾಲಿಗೆರಗಿ ಧನ್ಯವಾದ ಸಲ್ಲಿಸಿದರು. ಮೊದಲ ಬಿ.ಫಾರಂ ಅನ್ನು ಹೆಬ್ಟಾಳ ಶಾಸಕ ಬೈರತಿ ಸುರೇಶ್‌ಗೆ ನೀಡಿದರು.
ಮೊದಲ ದಿನ ಚಾಮರಾಜಪೇಟೆ ಯಿಂದ ಸ್ಪರ್ಧಿಸಲಿರುವ ಜಮೀರ್ ಅಹಮ್ಮದ್ ಖಾನ್, ಚಿತ್ತಾಪುರದ ಪ್ರಿಯಾಂಕ ಖರ್ಗೆ, ಹೆಬ್ಟಾಳದ ಬೈರತಿ ಸುರೇಶ್, ಆರ್.ಆರ್. ನಗರದ ಕುಸುಮಾ ಹನುಮಂತರಾಯಪ್ಪ, ಗೋವಿಂದರಾಜನಗರದ ಪ್ರಿಯಕೃಷ್ಣ, ಶಿವಾಜಿನಗರದ ರಿಜ್ವಾನ್ ಅರ್ಷದ್, ಮಧುಗಿರಿಯ ಕೆ.ಎನ್.ರಾಜಣ್ಣ, ಕೆಜಿಎಫ್ಗೆ ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಬಸವನಗುಡಿಗೆ ಯು.ಬಿ. ವೆಂಕಟೇಶ್ ಸೇರಿದಂತೆ ಹಲವು ಘಟಾನುಘಟಿಗಳು ಬಿ-ಫಾರಂ ಪಡೆದರು. ಶುಕ್ರವಾರ ಇನ್ನೂ ಕೆಲವರು ಬಿ-ಫಾರಂ ಪಡೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.