ಜಾತಿವಾದ, ಭ್ರಷ್ಟತೆಯೇ ಕಾಂಗ್ರೆಸ್ ಮಾದರಿ: ಮೆಹ್ಸಾನಾ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ
Team Udayavani, Nov 24, 2022, 12:29 AM IST
ಮೆಹ್ಸಾನಾ: “ಕಾಂಗ್ರೆಸ್ ಮಾದರಿ ಎಂದರೆ ಜನರ ನಡುವೆ ಕಂದಕ ಸೃಷ್ಟಿಸುವಂಥ ಜಾತಿವಾದ, ಮತಬ್ಯಾಂಕ್ ರಾಜಕಾರಣವೇ ಆಗಿದೆ. ಇಡೀ ದೇಶವನ್ನೇ ಹಾಳು ಮಾಡಿರುವಂಥ ಮಾದರಿಯಿದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುಜರಾತ್‌ನ ಮೆಹ್ಸಾನಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬುಧವಾರ ನಡೆದ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ಯಾವತ್ತೂ ತಾರತಮ್ಯ ಮತ್ತು ಓಲೈಕೆ ರಾಜಕಾರಣ ಮಾಡಿಲ್ಲ. ಅದೇ ಕಾರಣಕ್ಕೆ ಆಡಳಿತಾರೂಢ ಪಕ್ಷದ ಮೇಲೆ ಯುವಜನರು ನಂಬಿಕೆಯಿಟ್ಟಿರುವುದು. ಕಾಂಗ್ರೆಸ್ ಮಾದರಿ ಎಂದರೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಂಶಾಡಳಿತ, ಜಾತಿವಾದ’ ಎಂದು ಹೇಳಿದರು.
ಬಳಿಕ, ದಾಹೋದ್‌ನಲ್ಲಿ ರ್‍ಯಾಲಿ ನಡೆಸಿದ ಮೋದಿ, “ವಿಪಕ್ಷ ಕಾಂಗ್ರೆಸ್‌ಗೆ ಬುಡಕಟ್ಟು ಜನಾಂಗದವರ ಮೇಲೆ ಅಷ್ಟೊಂದು ಗೌರವವಿದ್ದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಏಕೆ ಬೆಂಬಲ ನೀಡಲಿಲ್ಲ’ ಎಂದು ಪ್ರಶ್ನಿಸಿದರು.
ಆಪ್‌ನ ಶೋಲೆ ಡೈಲಾಗ್: ಆಮ್ ಆದ್ಮಿ ಪಕ್ಷದ ಪರವಾಗಿ ಬುಧವಾರ ಅಹ್ಮದಾಬಾದ್‌ನಲ್ಲಿ ಪ್ರಚಾರ ನಡೆಸಿದ ಸಂಸದ ರಾಘವ್ ಛಡ್ಡಾ, ಬಾಲಿವುಡ್ ಬ್ಲಾಕ್‌ಬಸ್ಟರ್ “ಶೋಲೆ’ ಸಿನೆಮಾದ ಡೈಲಾಗ್ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಭ್ರಷ್ಟರಿಗೆ ಕೇಜ್ರಿವಾಲ್ ಅವರು ಸಿಂಹಸ್ವಪ್ನ ಎಂದ ಅವರು, “ಶೋಲೆ ಸಿನೆಮಾದಲ್ಲಿ ಸೋ ಜಾ ಬೇಟಾ ವರ್ನಾ ಗಬ್ಬರ್ ಆ ಜಾಯೇಗಾ’ ಎಂಬ ಡೈಲಾಗ್ ಇದೆ. ಈಗ ಗುಜರಾತ್‌ನಲ್ಲೂ ಯಾವುದೇ ಭ್ರಷ್ಟ ರಾಜಕಾರಣಿ ಸದ್ದು ಮಾಡಲು ಯತ್ನಿಸಿದರೆ, ಆತನ ತಾಯಿ, “ಸೋ ಜಾ ಬೇಟಾ ವರ್ನಾ ಕೇಜ್ರಿವಾಲ್ ಆ ಜಾಯೇಗಾ'(ಮಲಗು ಮಗನೇ, ಇಲ್ಲದಿದ್ದರೆ ಕೇಜ್ರಿವಾಲ್ ಬರುತ್ತಾರೆ ಮತ್ತು ನಿನ್ನನ್ನು ಜೈಲಿಗಟ್ಟುತ್ತಾರೆ) ಎಂದು ಹೇಳುತ್ತಾರೆ. ಕೇಜ್ರಿವಾಲ್ ಹುಟ್ಟಿರುವುದೇ ಭ್ರಷ್ಟಾಚಾರ ಕೊನೆಗಾಣಿಸಲು ಎಂದೂ ರಾಘವ್ ಹೇಳಿದ್ದಾರೆ.
ಮತ ಹಾಕದಿದ್ರೆ ಫೈನ್!
ರಾಜ್‌ಕೋಟ್‌ನ ರಾಜ್ ಸಮಾಧಿಯಾಲಾ ಎಂಬ ಗ್ರಾಮದಲ್ಲಿ ವಿಚಿತ್ರ ನಿಯಮವೊಂದನ್ನು ಜಾರಿ ಮಾಡಲಾಗಿದೆ. ಈ ಗ್ರಾಮದಲ್ಲಿ ರಾಜಕೀಯ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ. ಪಕ್ಷಗಳು ಪ್ರಚಾರಕ್ಕೆ ಬರುವುದರಿಂದ ಗ್ರಾಮಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಯಾವುದೇ ಅಭ್ಯರ್ಥಿಯನ್ನೂ ಇಲ್ಲಿಗೆ ಬರಲು ಬಿಡುತ್ತಿಲ್ಲ. ಆದರೆ ಗ್ರಾಮಸ್ಥರೆಲ್ಲರೂ ಹಕ್ಕು ಚಲಾಯಿಸಬೇಕು ಎಂಬ ಆದೇಶವನ್ನೂ ನೀಡಲಾಗಿದೆ. ಯಾರು ಮತ ಚಲಾಯಿಸುವುದಿಲ್ಲವೋ ಅವರಿಗೆ 51 ರೂ. ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ.
ರಾಹುಲ್ ಸದ್ದಾಂ ಹುಸೇನ್‌ರಂತೆ ಕಾಣುತ್ತಾರೆ!
ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಈಗ “ಸರ್ವಾಧಿಕಾರಿ ಸದ್ದಾಂ ಹುಸೇನ್’ರಂತೆ ಕಾಣುತ್ತಾರೆ. ಲುಕ್ ಬದಲಿಸಬೇಕೆಂದರೆ ವಲ್ಲಭಭಾಯಿ ಪಟೇಲ್‌ರಂತೆ ಅಥವಾ ನೆಹರೂರಂತಾದರೂ ಪ್ರಯತ್ನ ಮಾಡಬಹುದಿತ್ತು. ಆದರೆ ನೀವು ಸದ್ದಾಂ ಹುಸೇನ್‌ರಂತೆ ಕಾಣುತ್ತಿರುವುದೇಕೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, “ನಿಮ್ಮ ನಾಯಕ(ಪ್ರಧಾನಿ ಮೋದಿ) ಅಷ್ಟುದ್ದ ಗಡ್ಡ ಬಿಟ್ಟಾಗ ನಾವು ಯಾವುದೇ ಹೇಳಿಕೆ ನೀಡಿರಲಿಲ್ಲ. ಏಕೆಂದರೆ ನಾವು ನೈಜ ಸಮಸ್ಯೆಗಳ ಬಗ್ಗೆ ಮಾತ್ರವೇ ಗಮನಹರಿಸುತ್ತೇವೆ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.