ತಡರಾತ್ರಿ ವರೆಗೂ ನಡೆದ ಡಿಮಸ್ಟರಿಂಗ್ : ಎನ್‌ಐಟಿಕೆಗೆ ತಲುಪಿದ ಮತಯಂತ್ರ
Team Udayavani, May 11, 2023, 7:10 AM IST
ಮಂಗಳೂರು: ಈ ಬಾರಿಯ ಮತದಾನವನ್ನು ಯಶಸ್ವಿಯಾಗಿ ನೆರವೇರಿಸಿದ ಎಲ್ಲ ಸಿಬಂದಿ ಬುಧವಾರ ರಾತ್ರಿ ಇವಿಎಂ, ವಿವಿಪಾಟ್, ದಾಖಲೆಗಳನ್ನೂ ಎಲ್ಲ 8 ಡಿಮಸ್ಟರಿಂಗ್ ಕೇಂದ್ರಕ್ಕೆ ಒಪ್ಪಿಸಿದರು. ತಡರಾತ್ರಿಯೇ ಇವಿಎಂಗಳನ್ನು ಎನ್‌ಐಟಿಕೆಯ ಸ್ಟ್ರಾಂಗ್ ರೂಮ್‌ಗೆ ಕೇಂದ್ರೀಯ ಅರೆಸೇನಾ ಪಡೆ ಭದ್ರತೆಯೊಂದಿಗೆ ಕೊಂಡೊಯ್ಯಲಾಗಿದೆ.
ಮಂಗಳವಾರ ಮಸ್ಟರಿಂಗ್ ಕೇಂದ್ರದಿಂದ ಇವಿಎಂ, ವಿವಿಪಾಟ್ ಹಾಗೂ ಇತರ ಸಾಮಗ್ರಿಗಳೊಂದಿಗೆ ಮತಗಟ್ಟೆಗೆ ಸಿಬಂದಿ ತೆರಳಿದ್ದರು. ಬುಧವಾರ ಮತದಾನ ಮುಗಿದ ಬಳಿಕ ಆಯಾ ಡಿಮಸ್ಟರಿಂಗ್ ಕೇಂದ್ರಗಳಿಗೆ ತಂದು ಹಿರಿಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಮಂಗಳೂರಿನ ರೊಸಾರಿಯೋ ಶಾಲೆ, ಉರ್ವ ಕೆನರಾ ಶಾಲೆ, ಮೂಡುಬಿದಿರೆಯ ಮಹಾವೀರ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯ, ಎಸ್‌ಡಿಎಂ ಉಜಿರೆ, ಮೊಡಂಕಾಪು ಇನ್‌ಫ್ಯಾಂಟ್ ಜೀಸಸ್ ಶಾಲೆ, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಡಿಮಸ್ಟರಿಂಗ್ ಕೇಂದ್ರಗಳಿಗೆ ಮತಯಂತ್ರಗಳನ್ನು ತಂದು ಡಿಮಸ್ಟರಿಂಗ್ ಪ್ರಕ್ರಿಯೆ ಮುಗಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಡಿಮಸ್ಟರಿಂಗ್ ಕಾರ್ಯ ಪೂರ್ಣ
ಉಡುಪಿ: ಮಂಗಳವಾರವಷ್ಟೇ ಮತಯಂತ್ರ ಹಿಡಿದು ಮತಗಟ್ಟೆಗೆ ಹೋಗಿದ್ದ ಅಧಿಕಾರಿ, ಸಿಬಂದಿ ವರ್ಗ ಬುಧವಾರ ಸಂಜೆ ಮತ ಯಂತ್ರ ಬಾಕ್ಸ್, ದಾಖಲೆ ಪತ್ರ, ವಿವಿಧ ಪರಿಕರಗ
ಳೊಂದಿಗೆ ಎಲ್ಲ ಐದು ಕ್ಷೇತ್ರಗಳ ಡಿಮಸ್ಟ ರಿಂಗ್ ಕೇಂದ್ರಕ್ಕೆ ಬಂದು ಮತಯಂತ್ರಗಳನ್ನು ಒಪ್ಪಿಸಿ ದಾಖಲೆ ನೀಡಿ ಸಹಿ ಹಾಕಿ ಮನೆ ಕಡೆಗೆ ತೆರಳಿದರು.
ಬೆಳಗ್ಗೆ 7 ಗಂಟೆಗೂ ಮೊದಲು ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದ ಅಧಿಕಾರಿ, ಸಿಬಂದಿ ಸಂಜೆ 6 ಗಂಟೆಗೆ ಮತದಾನ ಪೂರ್ಣಗೊಳಿಸಿ, ನಿರ್ದಿಷ್ಟ ನಿಯಮಾನುಸಾರ ಮತಯಂತ್ರಗಳನ್ನು ಪ್ಯಾಕ್ ಮಾಡಿ, ದಾಖಲೆ ಪತ್ರ ಸಮೇತವಾಗಿ ಡಿಮಸ್ಟರಿಂಗ್ ಸೆಂಟರ್ ತಲುಪಿ, ಅಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ಒದಗಿಸಿ, ಮತಯಂತ್ರ ಒಪ್ಪಿಸಿ ವಾಪಸಾಗಿದ್ದಾರೆ.
ಬುಧವಾರ ತಡರಾತ್ರಿಯವರೆಗೂ ಬೈಂದೂರಿನ ಸ.ಪ.ಪೂ. ಕಾಲೇಜು, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು, ಉಡುಪಿಯ ಸೈಂಟ್ ಸಿಸಿಲೀಸ್, ಕಾಪುವಿನ ದಂಡತೀರ್ಥ ಪದವಿಪೂರ್ವ ಕಾಲೇಜು ಹಾಗೂ ಕಾರ್ಕಳದ ಮಂಜುನಾಥ್ ಪೈ ಸ್ಮಾರಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಡಿಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರ ತರಲಾಯಿತು. ಇಲ್ಲಿಂದ ಮತಯಂತ್ರಗಳನ್ನು ತಡರಾತ್ರಿ ಮತ ಎಣಿಕೆ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಕುಂದಾಪುರ, ಬೈಂದೂರು, ಕಾರ್ಕಳ ಕಡೆಗೆ ತೆರಳುವ ಸಿಬಂದಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಐದೂ ಕ್ಷೇತ್ರಗಳ ಮತ ಎಣಿಕೆ ಮೇ 13 ರಂದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.