Election 2023; ನಾನು ಸೋತೆ, ಹಾಗಂತ ಯಾರನ್ನು ಹೊಣೆ ಮಾಡೋಲ್ಲ: ಖರ್ಗೆ
ನಾವು ಫೋರ್ಸ್ ಹಾಕಿ ಶೆಟ್ಟರ್ ಗೆದ್ದು ಬರಲು ಯತ್ನಿಸುತ್ತೇವೆ...
Team Udayavani, Apr 26, 2023, 10:16 PM IST
ಹುಬ್ಬಳ್ಳಿ: ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನ ರಕ್ಷಣೆಗಾಗಿ ನಮ್ಮ ಹೋರಾಟವಿದೆ. ಈ ಚುನಾವಣೆಯಲ್ಲಿ ಬದಲಾವಣೆಯಾದರೆ ದೇಶಾದ್ಯಂತ ವಿಶ್ವಾಸ ಬರುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಕಿತ್ತೊಗೆಯಲು ಜನ ನಿರ್ಧರಿಸಿದ್ದಾರೆ. ಅಧಿಕಾರ ಮಾಡುವ ಅರ್ಹತೆ ಅದಕ್ಕೆ ಇಲ್ಲ. ನನ್ನ ಮುಖ ನೋಡಿ ಮತ ಹಾಕಿ ಅಂತ ಮೋದಿ ಹೇಳುತ್ತಾರೆ. ಮತದಾರರು ಎಷ್ಟು ಬಾರಿ ಇವರ ಮುಖ ನೋಡಬೇಕು? ಮೋದಿ ಕರ್ನಾಟಕದ ಸಿಎಂ ಆಗುತ್ತಾರಾ? ಅಮಿತ್ ಶಾ ರಾಜ್ಯದ ಗೃಹ ಸಚಿವ ಆಗುತ್ತಾರಾ? ಮೋದಿ, ಶಾ ನೋಡಿ ಮತ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಹ ಹೇಳುತ್ತಾರೆ. ಹಾಗಿದ್ದರೆ ಇವರು ಏನು ಕೆಲಸ ಮಾಡಿಲ್ಲ ಎಂಬ ಅರ್ಥವೇ? ನೀವು ಮಾಡಿದ ಕೆಲಸ ಹೇಳಿ ಮತ ಕೇಳಿ ಎಂದು ಕುಟುಕಿದರು.
ರಾಹುಲ್ ಗಾಂಧಿ ಮೇಲೆ ಡಿಫಾರ್ಮೇಶನ್ ಕೇಸ್ ಹಾಕಿದ್ದರು. ಶಿಕ್ಷೆ ಪ್ರಕಟವಾದ ಬೆನ್ನಹಿಂದೆಯೇ ಅನರ್ಹತೆ ಮಾಡಿದರು. ಮೋದಿ ಮತ್ತು ಶಾ ಕಾನೂನನ್ನುದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಆಗಿ ಬಳಸಲು ಹವಣಿಸುತ್ತಿದೆಯಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಖಜಾನೆಯೇ ಅವರ ಬಳಿ ಇದೆ. ಪೆಗಾಸಿಸ್ ಇಟ್ಟುಕೊಂಡು ಎಲ್ಲರ ಮೇಲೆ ಕಣ್ಗಾವಲು ಇಟ್ಟಿದ್ದಾರೆ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಟಿಎಂ ಅವರ ಬಳಿಯೇ ಇದೆ ಎಂದು ಕುಟುಕಿದರು.
ಖರ್ಗೆ ಸೋಲಿಗೆ ಕಾಂಗ್ರೆಸ್ ನಾಯಕರು ಕಾರಣ ಎಂಬ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ನಾನು ಸೋತೆ. ಹಾಗಂತ ಯಾರನ್ನು ಹೊಣೆ ಮಾಡೋಲ್ಲ. ಇವರು ನನಗೇ ಏಕೆ ಟಾರ್ಗೆಟ್ ಮಾಡಬೇಕಿತ್ತು. ಕರ್ನಾಟಕದ ವಿಪಕ್ಷ ನಾಯಕನಾಗಿ, ರಾಜ್ಯದ ಪ್ರತಿನಿಧಿಯಾಗಿ ಕೆಲಸ ಮಾಡಿದೆ ಎಂದರು.
ಖರ್ಗೆ ರೀತಿ ಜಗದೀಶ ಶೆಟ್ಟರ ಅವರನ್ನು ಟಾರ್ಗೆಟ್ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶೆಟ್ಟರ್ ತಮ್ಮಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಂಗ್ರೆಸ್ ಗೆ ಬಂದಿದ್ದಾರೆ. ಹೀಗಾಗಿ ಅವರನ್ನುಟಾರ್ಗೆಟ್ ಮಾಡುವುದು ಸಹಜ. ನಾವು ಸಹ ಅವರಷ್ಟೇ ಫೋರ್ಸ್ ಹಾಕಿ ಗೆದ್ದು ಬರಲು ಯತ್ನಿಸುತ್ತೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ಸೃಷ್ಟಿಯಾಗಿದೆ. ಖಂಡಿತ ಪಕ್ಷವು ಅಧಿಕಾರಕ್ಕೆ ಬರುತ್ತದೆ. ಜನವೇ ಬಿಜೆಪಿ ಸರ್ಕಾರ ಕಿತ್ತೊಗೆಯುವ ಪಣ ತೊಟ್ಟಿದ್ದಾರೆ. ಇದು ದೇಶದ ಚುನಾವಣೆ ಅಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾ ಇಲ್ಲಿಗೆ ಬಂದು ಲೋಕಸಭೆಗಿಂತ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆಗಳು ಆಗುತ್ತವೆ ಎಂದು ಅಮಿತ್ ಶಾ ಹೇಳಿದ್ದಾರೆ. ಅದರ ಅರ್ಥ ಕರ್ನಾಟಕದ ಜನ ಅಷ್ಟು ಕೆಟ್ಟವರಿದ್ದಾರಾ ಪ್ರಚೋದನಕಾರಿ ಮಾತುಗಳನ್ನು ಶಾ ಬಿಡಬೇಕು. ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.