ಗಂಗಾವತಿ: ಹೆಚ್‌ಜಿ ರಾಮುಲು ನಿವಾಸಕ್ಕೆ BJP ಶಾಸಕ ದ್ವಯರ ಭೇಟಿ
ಕೈ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ರೆಬೆಲ್ ಆಗಿರುವ ಶ್ರೀನಾಥ
Team Udayavani, Apr 14, 2023, 3:48 PM IST
ಗಂಗಾವತಿ: ಮಾಜಿ ಸಂಸದ ಕಾಂಗ್ರೆಸ್ ಮುಖಂಡ ಹೆಚ್‌ಜಿ ರಾಮುಲು ನಿವಾಸಕ್ಕೆ ಬಿಜೆಪಿಯ ಹಿರಿಯ ಮುಖಂಡ ದೆಹಲಿ ಶಾಸಕ ಅಜಯ್ ಮಹಾವರ್ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ಹಿರಿಯ ಮುಖಂಡ ಶಂಕ್ರಣ್ಣ ಮುನವಳ್ಳಿ ಶುಕ್ರವಾರ ಬೆಳಗ್ಗೆ ಭೇಟಿಯಾಗಿ ಒಂದು ತಾಸಿಗೂ ಹೆಚ್.ಜಿ.ರಾಮುಲು ಹಾಗೂ ಹೆಚ್ .ಆರ್ .ಶ್ರೀನಾಥ್ ಅವರ ಜೊತೆ ರಾಜಕೀಯ ಚರ್ಚೆ ನಡೆಸಿದ್ದು ಪಕ್ಷಕ್ಕೆ ಕರೆತರುವ ಯತ್ನ ನಡೆಸಿದ್ದಾರೆನ್ನಲಾಗಿದೆ.
ಈ ಭಾರಿ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಹೆಚ್.ಆರ್.ಶ್ರೀನಾಥ ಅವರ ಬದಲಿಗೆ ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು ಶ್ರೀನಾಥ ಬಂಡಾಯವೆದಿದ್ದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಕೆಆರ್ ಪಿಪಿ ರಾಜ್ಯಾಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಅವರೂ ಸಹ ಹೆಚ್ ಆರ್ ಜಿ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನಿಸಿದ್ದರು.
ಬಿಜೆಪಿ ಟಿಕೆಟ್ ಪರಣ್ಣ ಮುನವಳ್ಳಿ ಅವರಿಗೆ ನಿಗದಿಯಾದ ಮರುದಿನವೇ ಹೆಚ್ ಆರ್ ಜಿ ನಿವಾಸಕ್ಕೆ ಬಿಜೆಪಿ ಹಿರಿಯ ಮುಖಂಡರ ನೇತೃತ್ವದಲ್ಲಿ ಭೇಟಿ ನೀಡಿ ಕಮಲಕ್ಕೆ ಸೆಲೆಯುವ ಯತ್ನ ನಡೆಸಿದ್ದಾರೆ.
ಸೌಹಾರ್ದಯುತ ಭೇಟಿ
ಶಾಸಕ ಪರಣ್ಣ ಮನವಳ್ಳಿ ತಮ್ಮ ನಿವಾಸಕ್ಕೆ ಸೌಹಾರ್ಧವಾಗಿ ಭೇಟಿ ನೀಡಿ ತಮ್ಮ ತಂದೆಯವರ ಆರೋಗ್ಯ ಕ್ಷೇಮ ವಿಚಾರ ಮಾಡಿದ್ದಾರೆ. ತಾವು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವ ಪ್ರಶ್ನೆ ಇಲ್ಲ. ಈ ಬಾರಿ ನನಗೆ ಕಾಂಗ್ರೆಸ್ ಟಿಕೆಟ್ ದೊರಕುವ ವಿಶ್ವಾಸವಿತ್ತು ಆದರೆ ಕೆಲವರ ಷಡ್ಯಂತ್ರದಿಂದ ನನಗೆ ಗಂಗಾವತಿಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿದೆ ಆದರೂ ಕಾಂಗ್ರೆಸ್ ಬಿಡುವುದಿಲ್ಲ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲಾಗುತ್ತದೆ .ಗಂಗಾವತಿಯಲ್ಲಿ ಯಾವುದೇ ಕಾರಣಕ್ಕೂ ಇಕ್ಬಾಲ್ ಅನ್ಸಾರಿ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಟಿಕೆಟ್ ವಂಚಿತ ಕಾಂಗ್ರೆಸ್ ಮುಖಂಡ ಎಚ್.ಆರ್. ಶ್ರೀನಾಥ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೆಹಲಿ ಶಾಸಕರಾದ ಅಜಯ್ ಮಹಾವರ್,ಹಾಗೂ ಪರಣ್ಣ ಮುನವಳ್ಳಿ, ಶಂಕರಣ್ಣ ಮುನವಳ್ಳಿ, ಸಂತೋಷ್ ಕೆಲೋಜಿ, ವೆಂಕಟೇಶ್ ಅಮರಜ್ಯೋತಿ, ಕಳಕನ ಗೌಡ, ವೀರಭದ್ರಪ್ಪ ನಾಯಕ, ಜೋಗದ ನಾರಯಣಪ್ಪ, ಹನುಮಂತಪ್ಪ ನಾಯಕ, ಆನಂದ ಅಕ್ಕಿ ಇದ್ದರು. ನ್ಯಾಯವಾದಿ ಈಡಿಗ ಸಮಾಜದ ಮುಖಂಡ ನಾಗರಾಜ ಗುತ್ತೇದಾರ್, ಮಹೇಶ್ ಜವಳಿ, ಬಸವಪ್ರಭು, ಹಿರಿಯರು ಮುಖಂಡರು ಪಕ್ಷದ ಪಧಾದಿಕಾರಿಗಳಿರದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.