ಹೊಟೇಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನ ನೀಡಿ
Team Udayavani, Feb 27, 2023, 6:15 AM IST
ಬೆಂಗಳೂರು: ರಾಜ್ಯವ್ಯಾಪಿ ಸುಮಾರು 65 ಸಾವಿರ ನೋಂದಾಯಿತ ಹೊಟೇಲ್‌ಗಳಿವೆ. ಸಾವಿರಾರು ಸಂಖ್ಯೆಯಲ್ಲಿ ಈ ವಲಯ ಕಾರ್ಮಿಕರಿಗೆ ಉದ್ಯೋಗ ನೀಡಿದೆ.
ಇಂತಹ ವಲಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಕೈಗಾರಿಕೆ ಸ್ಥಾನಮಾನವನ್ನು ಈ ವಲಯಕ್ಕೆ ನೀಡಬೇಕು ಎಂಬ ದಶಕದ ಕೂಗು, ಕೂಗಾಗಿಯೇ ಉಳಿದುಕೊಂಡಿದೆ.
ಸ್ಕಿಲ್ಡ್ ಎಂಪ್ಲಾಯೀಸ್‌ಗಳ ಕೊರತೆ ಕೂಡ ಉದ್ಯಮವನ್ನು ಗಾಢವಾಗಿ ಕಾಡುತ್ತಿದೆ. ನುರಿತ ನೌಕರರನ್ನು ಸೃಷ್ಟಿಸುವ ಕಾರ್ಯವನ್ನು ಇಲ್ಲಿಯ ವರೆಗೂ ಸರಕಾರಗಳು ಮಾಡಿಲ್ಲ. ಈ ಬಗ್ಗೆ ಯೋಜನೆಗಳನ್ನು ಕೂಡ ರೂಪಿಸಲಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯ ಹೊಟೇಲ್ ಉದ್ಯಮದ ಹಿತಕಾಯುವ ಅಂಶಗಳು ಈ ಬಾರಿಯ ಚುನಾವಣ ಪ್ರಣಾಳಿಕೆಯಲ್ಲಿ ಇರಲಿ ಎಂದು ಹೊಟೇಲ್ ವ್ಯಾಪಾರಿಗಳು ಮನವಿ ಮಾಡುತ್ತೇವೆ.
ಜತೆಗೆ ರಾಜ್ಯದ ಹೊಟೇಲ್ ಉದ್ಯಮದ ಅಭಿವೃದ್ದಿಯ ದೃಷ್ಟಿಯಿಂದ ಈ ಕೆಳಕಂಡ ನಮ್ಮ ವಲಯದ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಅಧಿಕಾರಕ್ಕೆ ಬಂದಾಗ ಜಾರಿಗೆ ತರುವಂತೆ ಆಗ್ರಹಿಸುತ್ತೇವೆ.
ಹೊಟೇಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಬೇಕು. ಇದು ಜಾರಿಯಾದರೆ ಅನಿಲ ಸಿಲಿಂಡರ್‌ಗಳು ಸಬ್ಸಿಡಿಯಲ್ಲಿ ದೊರೆಯಲಿದೆ. ಕೈಗಾರಿಕೆಗೆ ಸಂಬಂಧಪಟ್ಟ ಎಲ್ಲ ಕಾನೂನುಗಳು ನಮಗೆ ಅನ್ವಯ ಆಗಲಿವೆ. ಆದರೆ ಈವರೆಗೂ ಸರಕಾರ ಕೈಗಾರಿಕೆ ಸ್ಥಾನ ನೀಡಿಲ್ಲ. ಈ ನಿಟ್ಟಿನಲ್ಲಿ ಗಮನ ಹರಿಸಬೇಕು.
ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಸ್ಕಿಲ್ಡ್ ಎಂಪ್ಲಾಯೀಸ್‌ಗೆ ಕೊರತೆ ಇದೆ. ಇದರಿಂದಾಗಿ ಗ್ರಾಹಕರು ಬಯಸಿದ ರೀತಿಯಲ್ಲಿ ಹೊಟೇಲ್ ಉದ್ಯಮದಲ್ಲಿ ಸೇವೆ ನೀಡಲು ಆಗುತ್ತಿಲ್ಲ. ಹೊಟೇಲ್ ಉದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ಕೌಶಲಯುತ ಉದ್ಯೋಗಿಗಳ ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆ ಮತ್ತು ತರಬೇತಿಗಳನ್ನು ರೂಪಿಸಲು ಆದ್ಯತೆ ಕೊಡಬೇಕು.
ಬೆಂಗಳೂರು ಹೊಟೇಲ್ ಮಾಲಕರ ಸಂಘಕ್ಕಾಗಿ ಸರಕಾರ ಈಗಾಗಲೇ ಹಾರೋಹ ಳ್ಳಿಯಲ್ಲಿ ಒಂದು ಎಕ್ರೆ ಜಮೀನನ್ನು ನೀಡಿದೆ. ಆದರೆ ಸರಕಾರ ಇಲ್ಲಿಯವರೆಗೂ ಸಂಘಕ್ಕೆ ಹಸ್ತಾಂತರ ಮಾಡಿಲ್ಲ. ಆ ಭೂಮಿಯನ್ನು ಸಂಘಕ್ಕೆ ಹಸ್ತಾಂತರಿಸಿ ಕಾರ್ಮಿಕರ ತರಬೇತಿ ಕೇಂದ್ರ ಸ್ಥಾಪಿಸಬೇಕು.
ಪ್ರತೀ ವರ್ಷ ಬಿಬಿಎಂಪಿ ಇಲ್ಲವೆ ಮುನ್ಸಿಪಲ್ ಸಂಸ್ಥೆಯಲ್ಲಿ ಹೊಟೇಲ್ ಪರವಾನಿಗೆ ಪ್ರತೀ ವರ್ಷ ನವೀಕರಣ ಮಾಡುವ ವ್ಯವಸ್ಥೆ ಇದೆ. ಈ ಪದ್ಧತಿಯನ್ನು ತೆಗೆದು ಹಾಕುವ ಕೆಲಸ ಆಗಬೇಕಾಗಿದೆ. ಒಂದು ಸಲ ಹೊಟೇಲ್ ಪರವಾನಿಗೆ ಪಡೆದರೆ ಅದು ನಿರಂತರವಾಗಿರಬೇಕು. ಹೊಟೇಲ್ ಉದ್ಯಮಿಗಳಿಗೆ ಕಿರಿಕಿರಿ ಉಂಟುಮಾಡುವ ನವೀಕರಣ ಪರವಾನಿಗೆ ವ್ಯವಸ್ಥೆಯನ್ನು ತೆಗೆದು ಹಾಕುವ ಭರವಸೆ ನೀಡಬೇಕು.
ಹೊಟೇಲ್ ಒಂದಕ್ಕೆ ದಿನದ 24 ಗಂಟೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಇದರ ಜತೆಗೆ ಮೆಟ್ರೋ, ಬಸ್‌ಗಳು ಕೂಡ ರಾತ್ರಿಯಿಡೀ ಸಂಚರಿಸಬೇಕು. ಮಾಲ್‌ಗಳು ಕೂಡ ತೆರೆದಿರಬೇಕು. ಈ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಬೇಕು.
-ಬಿ.ಚಂದ್ರಶೇಖರ ಹೆಬ್ಬಾರ್,
ರಾಜ್ಯ ಹೊಟೇಲ್‌ಗಳ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.