ಕ್ಷೇತ್ರದ ಜನರ ಭಾವನೆಗಳಿಗೆ ಆಡಳಿತ ರೂಪ: ವಿ.ಸುನಿಲ್‌ಕುಮಾರ್
ಬಿಜೆಪಿ ಅಭ್ಯರ್ಥಿ ಸುನಿಲ್‌ರಿಂದ ಜನತಾ ಪ್ರಣಾಳಿಕೆ ಬಿಡುಗಡೆ
Team Udayavani, May 9, 2023, 1:43 PM IST
ಕಾರ್ಕಳ: ಕ್ಷೇತ್ರದ ಜನರ ಅಭಿಪ್ರಾಯ, ಸಲಹೆಯಂತೆ ಜನರ ಭಾವನೆಗಳನ್ನು ಆಡಳಿತ ರೂಪದಲ್ಲಿ ಕೊಡಬೇಕೆನ್ನುವ ನಿಟ್ಟಿನಲ್ಲಿ ಒಂದಷ್ಟು ಹೊಸ ಯೋಜನೆಗಳೊಂದಿಗೆ ಜನñ ಪ್ರಣಾಳಿಕೆ ಸಿದ್ಧಪಡಿಸಿ ಬಿಡುಗಡೆಗೊಳಿಸಿದ್ದೇವೆ ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್‌ಕುಮಾರ್ ಹೇಳಿದರು.
ವಿಕಾಸ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕ್ಷೇತ್ರದಲ್ಲಿ ಹಿಂದೆ ಮಾಡಿದ ಸಾಧನಾ ರಿಪೋರ್ಟ್ ಕಾರ್ಡ್ ಇದೆ. ಅದೇ ಆತ್ಮವಿಶ್ವಾಸದಿಂದ ಹಿಂದಿನದನ್ನು ಮುಂದುವರೆಸುತ್ತ ಮತ್ತಷ್ಟೂ ಕೊಡುಗೆ ನೀಡಿ ಮುಂದುವರೆಯಲು ಬಯಸಿದ್ದೇವೆ. ಜನತಾ ಪ್ರಣಾಳಿಕೆ ಕೇವಲ ಘೋಷಣೆ, ಭರವಸೆ ಅಲ್ಲ ಎಂದರು.
ಗೆಲುವಿನ ಹಾದಿಯ ಸನಿಹದಲ್ಲಿ
ಚುನಾಣೆಯ ಅಂತಿಮ ಹಂತಕ್ಕೆ ಬಂದಿದ್ದೇವೆ. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ 3 ಬಾರಿ ಮತದಾರರನ್ನು ಯಶಸ್ವಿಯಾಗಿ ಭೇಟಿಯಾಗಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಪರ ಒಲವಿದೆ. ಕ್ಷೇತ್ರದ ಮತದಾರರ ಅಭಿವೃದ್ಧಿಯನ್ನು ಅಪ್ಪಿಕೊಂಡಿದ್ದಾರೆ. ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ಧಿ ಹಂಬಲ ಮತದಾರರಲ್ಲಿದೆ. ಬಿಜೆಪಿಯೇ ಭರವಸೆ ಎನ್ನುವ ವಿಶ್ವಾಸ ಸಾಮಾನ್ಯ ಜನರಿಂದ ವ್ಯಕ್ತವಾಗುತ್ತಿದೆ. ದಾರಿ ಗೆಲುವಿನ ಸನಿಹಕ್ಕೆ ಸಾಗಿದೆ ಎಂದರು.
ಮತ್ತೊಮ್ಮೆ ಅವಕಾಶ ನೀಡಿ, ಸ್ವರ್ಣ ಕಾರ್ಕಳ ತೋರಿಸುವೆ
5 ವರ್ಷಗಳ ಶಾಸಕತ್ವದ ಅವಧಿಯಲ್ಲಿ ಸ್ವರ್ಣ ಕಾರ್ಕಳ ಪರಿಕಲ್ಪನೆಯಲ್ಲಿ ಚುನಾಯಿತ ಪ್ರತಿನಿಧಿಗಳ, ಸಂಘ ಸಂಸ್ಥೆಗಳ ಸಹಕಾರದಲ್ಲಿ ಹೆಜ್ಜೆ ಇಟ್ಟಿದ್ದೇವೆ, ಸ್ವರ್ಣ ಕಾರ್ಕಳ ಮುಂದುವರೆಸುವ ಕಾರ್ಯಕ್ಕೋಸ್ಕರ ಮತದಾರರಿಗೆ ಮತ್ತೂಮ್ಮೆ ವಿನಂತಿ ಮಾಡುತ್ತ ಈ ವರೆಗೆ ಕಾರ್ಕಳದಲ್ಲಿ ಆಗಿರುವಂತಹ ಅಭಿವೃದ್ಧಿಯ ಕಾರ್ಯಕ್ರಮಗಳು ಇನ್ನಷ್ಟೂ ಮುಂದುವರೆಸುತ್ತ ಈಗಿರುವ ಕಾರ್ಯಕ್ರಮಗಳಲ್ಲಿ ವ್ಯತ್ಯಾಸವಾಗದಂತೆ ಮುಂದುವರೆಯಲು ಒಂದಿಷ್ಟು ಹೊಸ ಪ್ರಣಾಳಿಕೆಗಳನ್ನು ಕ್ಷೇತ್ರದ ಜನರ ಮುಂದೆ ವಚನ ರೂಪದಲ್ಲಿ ನೀಡಿದ್ದೇವೆ. ಮತ್ತೆ ನನಗೆ ಅವಕಾಶ ನೀಡಿದರೆ ಸ್ವರ್ಣ ಕಾರ್ಕಳ ಏನೆನ್ನುವುದನ್ನು ತೋರಿಸಿ ಕೊಡುವೆ ಎಂದು ಸುನಿಲ್ ಹೇಳಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಕುಡುಪುಲಾಜೆ, ಹಿರಿಯ ಬಿಜೆಪಿಗ ಕೆ.ಪಿ ಶೆಣೈ, ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು.
ಬಿಜೆಪಿಯ ಜನತಾ ಪ್ರಣಾಳಿಕೆಯಲ್ಲೇನಿದೆ?
ಕಾರ್ಕಳ, ಹೆಬ್ರಿ ರಡೂ ಕಡೆ ಪರಿಸರ ಸ್ನೇಹಿ ಕೈಗಾರಿಕಾ ಕಾರಿಡಾರ್, ಕ್ಷೇತ್ರದ ಎಲ್ಲ ನಿವೇಶನ ರಹಿತರಿಗೆ ನಿವೇಶನ, ಸೂರಿಲ್ಲದವರಿಗೆ ನೆರವು. ಎಲ್ಲ ಹಳ್ಳಿಗಳಲ್ಲಿ ಹಿಂದೂ ರುದ್ರಭೂಮಿ, ತಾ|ನಾದ್ಯಂತ ಭಜನಾ ಮಂಡಳಿಗಳ ಕಾರ್ಯಚಟುವಟಿಕೆಗೆ ಉತ್ತೇಜನ, ವಾಟರ್ ಗೇಮ್ಸ್ ಒಳಗೊಂಡಂತೆ ರಾಮಸಮುದ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ, ವಾಣಿಜ್ಯೋದಮ್ಯ ವೃದ್ಧಿ, ಕಾರ್ಕಳದ ಪ್ರತಿ ಗ್ರಾಮಗಳಿಗೆ ಸರಕಾರಿ ಸಾರಿಗೆ ಬಸ್, ಹೆಬ್ರಿಯಲ್ಲಿ ಐಟಿಐ ಕಾಲೇಜು ಸ್ಥಾಪನೆ, ಕ್ಷೇತ್ರದ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ, ಸಂಜೀವಿನಿ- ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಧಾರ್ಮಿಕ ಕೇಂದ್ರಗಳ ಜತೆ ಸತ್ಯಸಾರಮಣಿ, ಮುಗೆರ್ಕಳ ದೈವಸ್ಥಾನಗಳ ಅಭಿವೃದ್ಧಿ, ಹೆಬ್ರಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ಪ್ರತಿ ಗ್ರಾ.ಪಂ ಮಟ್ಟದಲ್ಲಿ ಕಿರು ಆಟದ ಮೈದಾನ ನಿರ್ಮಾಣ, ರಿಕ್ಷಾ- ಟ್ಯಾಕ್ಸಿ ಚಾಲಕರಿಗೆ ಆರೋಗ್ಯ ಭದ್ರತೆ ಒದಗಿಸಲು ಬದ್ಧನಾಗಿರುವುದಾಗಿ ಹೇಳಿದರು.
ಚುನಾವಣೆಗೋಸ್ಕರ ಬರುವ ಪಕ್ಷ ಕಾಂಗ್ರೆಸ್
ಅಪಪ್ರಚಾರ, ಟೀಕೆ ಕಾಂಗ್ರೆಸ್ ಸಂಸ್ಕೃತಿ. ಇದು ಒಳಿತಲ್ಲ. ಕಾರ್ಕಳದ ಜನತೆ ಇದನ್ನು ಒಪ್ಪುವವರಲ್ಲ. ಕಾರ್ಕಳದ ಒಳಿತು ಕಾಂಗ್ರೆಸ್ಸಿಗೆ ಬೇಕಿಲ್ಲ. ಕಾಂಗ್ರೆಸ್ಸಿನ ಎ ಮತ್ತು ಬಿ. ಟೀಂ ಕ್ಷೇತ್ರದಲ್ಲಿ ದೌರ್ಜನ್ಯ, ತೇಜೋವಧೆ, ನಿಂದನೆಗಳಲ್ಲಿ ತೊಡಗಿಸಿಕೊಂಡಿದ್ದು, ಬೆಂಬಲಿಸಿದರೆ ಅದನ್ನೆ ಕಾರ್ಕಳದಲ್ಲಿ ಮುಂದುವರೆಸುತ್ತಾರೆ. ಚುನಾವಣೆಗೋಸ್ಕರ ಬಂದಿರುವ ಕಾಂಗ್ರೆಸ್ ಅನ್ನು ಈ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.