ಹರಿಹರದಿಂದ ಗೆದ್ದ ಮೂವರು ಸಚಿವರು
Team Udayavani, Mar 21, 2023, 5:45 AM IST
ಜೀವನದಿ ತುಂಗಭದ್ರಾ ತಟದಲ್ಲಿರುವ ಹರಿಹರ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರುವಾಸಿ. ಸ್ವಾತಂತ್ರ್ಯ ಅನಂತರ ಹಲವು ದಶಕಗಳ ಕಾಲ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದು ಇತಿಹಾಸ. ಆದರೆ ಹರಿಹರ ಕ್ಷೇತ್ರ ಇದಕ್ಕೆ ಅಪವಾದ. 1952ರ ಮೊದಲ ವಿಧಾನ ಸಭಾ ಚುನಾವಣೆಯಿಂದ ಇದುವರೆಗಿನ 15 ಚುನಾವಣೆಗಳಲ್ಲೂ ಕಾಂಗ್ರೆಸ್ ಎದುರಾಳಿ ಪಕ್ಷದಿಂದ ಪ್ರಬಲ ಪೈಪೋಟಿ ಎದುರಿಸುತ್ತಲೇ ಬಂದಿದೆ. ಕಠಿನ ಪರಿಶ್ರಮದಿಂದಲೇ ಕಾಂಗ್ರೆಸ್ ಎಂಟು ಬಾರಿ ಗೆಲುವು ಸಾಧಿಸಿದ್ದು ಕಾಂಗ್ರೆಸೇತರ ಅಭ್ಯರ್ಥಿಗಳು ಏಳು ಸಲ ಕ್ಷೇತ್ರ ಪ್ರತಿನಿಧಿಸಿದ್ದಾರೆ.
1952ರಿಂದ 1972ರವರೆಗೆ ಎಚ್.ಸಿ. ಸಿದ್ಧವೀರಪ್ಪ ಹಾಗೂ ಗಾಂಜಿ ವೀರಪ್ಪನವರ ಮಧ್ಯೆ ಜಿದ್ದಾಜಿದ್ದಿ ಪೈಪೋಟಿಯ ಕ್ಷೇತ್ರವಾಗಿತ್ತು. 1989ರ ಅನಂತರ ಎರಡು ದಶಕಗಳ ಕಾಲ ಎಚ್.ಶಿವಪ್ಪ ಹಾಗೂ ಡಾ| ವೈ.ನಾಗಪ್ಪನವರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಸತತ ಎರಡು, ಅನಂತರ ಮತ್ತೊಂದು ಅವಧಿ ಸೇರಿ ಮೂರು ಬಾರಿ ಆಯ್ಕೆಯಾದ ಎಚ್.ಸಿ.ಸಿದ್ಧವೀರಪ್ಪ ಹಾಗೂ ಡಾ|ವೈ.ನಾಗಪ್ಪ ಮತ್ತು ಎರಡು ಬಾರಿ ಆಯ್ಕೆ ಯಾಗಿದ್ದ ಎಚ್.ಶಿವಪ್ಪ ಸಹಿತ ಕ್ಷೇತ್ರದ ಮೂವರು ರಾಜ್ಯ ಸರಕಾರದಲ್ಲಿ ಸಚಿವ ರಾಗಿ ಸೇವೆ ಸಲ್ಲಿಸಿದ್ದಾರೆ.
ಹಿಂದಿನ ನಾಯಕರ ಜಿದ್ದಾಜಿದ್ದಿನ ರಾಜಕಾರಣ ಪರಂ ಪರೆ ಈಗಲೂ ಮುಂದುವರೆದಿದೆ. ಹರಿ ಮತ್ತು ಹರನ ಸಂಗಮ ಕ್ಷೇತ್ರ ಎನಿಸಿದ ಹರಿಹರ ಕ್ಷೇತ್ರದಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳ ಜತೆಗೆ ಪಕ್ಷೇತರರನ್ನೂ ಆಯ್ಕೆ ಮಾಡುವ ಮೂಲಕ ಪೈಪೋಟಿ ಹೆಚ್ಚಿಸಿಕೊಂಡು ಬಂದಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.