![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 29, 2023, 6:20 PM IST
ಹುಬ್ಬಳ್ಳಿ: ”ಇದುವರೆಗೆ ಬಹಳಷ್ಟು ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ. ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ ಇಂದಿನ ಪ್ರಧಾನಿ ತಮ್ಮ ಸಮಸ್ಯೆಗಳು ಹಾಗೂ ಜನರಿಗೆ ಬೇಡವಾದ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಪ್ರಧಾನಿಯನ್ನು ನೋಡಿದ್ದು ಇದೇ ಮೊದಲು” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವಲಗುಂದದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ”ಇಂತಹ ಪ್ರಧಾನಿ, ಸರಕಾರ ಆಡಳಿತ ಮಾಡುತ್ತಿದೆ. ಇಂದು ಪ್ರತಿಯೊಂದು ಹುದ್ದೆಗಳಿಗೂ ಲಂಚ. ಲಂಚವಿಲ್ಲದೆ ಯಾವುದೇ ನೌಕರಿ ಇಲ್ಲದಂತಾಗಿದೆ. ಕಷ್ಟಪಟ್ಟು ಶಿಕ್ಷಣ ಪಡೆದರೂ ಹಣವಿಲ್ಲದೆ ಸರಕಾರಿ ನೌಕರಿ ಇಲ್ಲದಂತಾಗಿದೆ. ಭ್ರಷ್ಟಾಚಾರ, ಹಗರಣಗಳಿಂದ ಜನರ ಸಮಸ್ಯೆಗಳು ಹೆಚ್ಚಾಗಿವೆ. ಇಂತಹ ವಿಚಾರಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ವಿಚಾರಗಳನ್ನು ಜನರ ಮನಸ್ಸಿಗೆ ತುರುಕುವ ಕೆಲಸ ಮಾಡುತ್ತಿದ್ದಾರೆ. ಕಳೆದ 3.5 ವರ್ಷಗಳಿಂದ ರಾಜ್ಯದಲ್ಲಿ ಏನೆಲ್ಲಾ ಭ್ರಷ್ಟಾಚಾರ ಮಾಡಿದ್ದಾರೆ ಎಂಬುವುದನ್ನು ನೋಡಿ ಮತ ಹಾಕಬೇಕು” ಎಂದರು.
”ರಾಷ್ಟ್ರದಲ್ಲಿ ಅತ್ಯುತ್ತಮ ರಾಜ್ಯವನಿಸಿಕೊಂಡಿದ್ದ ಕರ್ನಾಟಕದ ಗೌರವವನ್ನು ಭ್ರಷ್ಟಾಚಾರದಿಂದ ಹಾಳು ಮಾಡಿದ್ದಾರೆ. ತಮ್ಮ ಗೌರವ ಕಳೆದುಕೊಳ್ಳುವ ಜತೆಗೆ ರಾಜ್ಯದ, ಮತದಾರರ ಗೌರವವನ್ನು ಕಳೆದಿದ್ದಾರೆ. ಬಿಜೆಪಿಯಲ್ಲಿ ದುಡಿದ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಿಲ್ಲ. ಆದರೆ ಭ್ರಷ್ಟಾಚಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡವರಿಗೆ ಪ್ರಧಾನಿ ಕರೆ ಮಾಡಿ ಮಾತನಾಡುತ್ತಾರೆ. ಆದರೆ ಪ್ರಾಮಾಣಿಕರಿಗೆ ಟಿಕೆಟ್ ಇಲ್ಲ. ಶೆಟ್ಟರ ಅವರ ಸ್ವಾಭಿಮಾನ ಅಷ್ಟೇ ಅಲ್ಲ. ಇಂತಹ ನಾಯಕರನ್ನು ಕಡೆಗಣಿಸುವ ಮೂಲಕ ಲಿಂಗಾಯತ ಸಮಾಜವನ್ನು ಅವಮಾನ ಮಾಡಿದ್ದಾರೆ. ಇಂತಹ ಪಕ್ಷಕ್ಕೆ ಮತದಾನದ ಮೂಲಕ ತಕ್ಕ ಉತ್ತರ ನೀಡಬೇಕು” ಎಂದರು.
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
You seem to have an Ad Blocker on.
To continue reading, please turn it off or whitelist Udayavani.