ಯಾರದ್ದೋ ಮಕ್ಕಳಿಗೆ ನಾನು ತಂದೆ ಎಂದು ಹೇಳಿಕೊಳ್ಳುವುದಿಲ್ಲ: Araga Jnanendra


Team Udayavani, Apr 15, 2023, 5:58 PM IST

1-sdsdsad

ತೀರ್ಥಹಳ್ಳಿ : ಯಾರದ್ದೋ ಮಕ್ಕಳಿಗೆ ನಾನು ತಂದೆ ಎಂದು ಹೇಳಿಕೊಳ್ಳುವ ಸಣ್ಣತನ ನನ್ನಲಿಲ್ಲ ನಾನು ಮಾಡಿರುವ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಹೇಳುತ್ತೇನೆ. ಬೇಕಾದರೆ ಅದಕ್ಕೆ ಆಧಾರವನ್ನು ಕೊಡುತ್ತೇನೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದ್ದಾರೆ.

ಶನಿವಾರ ಪಟ್ಟಣದ ಬಂಟರಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,1983 ಚುನಾವಣೆಯಿಂದ 9 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಈಗ ಹತ್ತನೇ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಕಳೆದ 9 ಬಾರಿ ಚುನಾವಣೆಯಲ್ಲಿ ನಾಲ್ಕು ಬಾರಿ ಗೆದ್ದು ಐದು ಬಾರಿ ಸೋತಿದ್ದೇನೆ. ತತ್ವ ಸಿದ್ದಾಂತಕ್ಕಾಗಿ 1975 ರಿಂದ ನನ್ನನ್ನು ನಾನು ಈ ರಾಜಕೀಯದಲ್ಲಿ ತೊಡಗಿಸಿ ಕೊಂಡಿದ್ದೇನೆ. ತುರ್ತು ಪರಿಸ್ಥಿತಿಯ ಕರಾಳ ಕಾಯ್ದೆಯನ್ನ ಈ ದೇಶದ ಮೇಲೆ ಇಂದಿರಾಗಾಂಧಿ ಯವರು ಹೇರಿದ್ದರು. ಅದನ್ನು ವಿರೋಧಿಸಿ ನಾವೆಲ್ಲರೂ ಚಳುವಳಿಯಲ್ಲಿ ಭಾಗವಹಿಸಿದ್ದವು. ಅದರ ಪರಿಣಾಮ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆಯೂ ಮಾಡಿತ್ತು. ಅಲ್ಲಿಂದ ಹೊರ ಬಂದ ನಂತರ ಹೋರಾಟ ನ್ಯಾಯಕ್ಕಾಗಿ ಸಾಮಾನ್ಯ ಜನರ ಕಣ್ಣುರಿಸುವಂತಹ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದೇನೆ. ನನ್ನ ಸ್ವಂತ ಜೀವನಕ್ಕೆ ಸ್ವಲ್ಪ ಮಾತ್ರ ಸಮಯವನ್ನು ಕೊಟ್ಟು ರಾಜಕೀಯಕ್ಕಾಗಿ ಸಮಾಜದ ಜೀವನಕ್ಕಾಗಿ ಕೊಟ್ಟಿದ್ದೇನೆ ಎಂದರು.

ಎಪ್ರಿಲ್ 17ರ ಮಂಗಳವಾರದಂದು ಬೆಳಗ್ಗೆ 10-30 ಕ್ಕೆ ನಾನು ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದೇನೆ. ಇಲ್ಲಿಯವರೆಗೆ ಪಕ್ಷಾಂತರ ನನ್ನ ಹತ್ತಿರಕ್ಕೂ ಸುಳಿಯಲಿಲ್ಲ. ಇವತ್ತು, ನಮ್ಮ ಪಕ್ಷ ದಲಿತರ ಕೇರಿಯಲ್ಲಿದೆ. ರೈತರ ಜಮೀನಿನಲ್ಲಿದೆ. ಸರ್ವವ್ಯಾಪಿ ಸರ್ವಸ್ಪರ್ಶಿ ಆಗಿರುವಂತಹ ರೀತಿಯಲ್ಲಿ ಪಕ್ಷವನ್ನು ಕಟ್ಟಿದ್ದೇವೆ. ಕಾರ್ಯಕರ್ತರನ್ನು ಸಾವಿರಾರು ಸಾವಿರಾರು ಸಂಖ್ಯೆಯಲ್ಲಿ ನಿರ್ಮಾಣ ಮಾಡಿದ್ದೇವೆ. ಪ್ರತಿಯೊಂದು ಬೂತ್ ಗಳಲ್ಲಿ ನಮ್ಮ ಕಾರ್ಯಕರ್ತರ ಒಂದು ದೊಡ್ಡ ಪಡೆಯೇ ಇದೆ. ನಾನು ಈ ಬಾರಿ ಪ್ರಗತಿ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಮತಯಾಚನೆ ಮಾಡುತ್ತಿದ್ದೇನೆ. ಅಭಿವೃದ್ಧಿಗೆ ಜನರು ಮತವನ್ನು ಕೊಡುತ್ತಾರೆ ಎಂದು ನಂಬಿದ್ದೇನೆ. ಹಾಗೇನಾದರೂ ಕೊಟ್ಟಿದ್ದೆ ಆದಲ್ಲಿ ನಮ್ಮ ಗೆಲುವು ಅತಿ ದೊಡ್ಡ ಮಟ್ಟದಲ್ಲಿ ಆಗಲಿದೆ ಎಂದರು.

ಈ ಕ್ಷೇತ್ರದ ಸುಸಂಸ್ಕೃತ ಮತದಾರರು ಅಚ್ಚರಿ ಪಡುವಂತಹ ರೀತಿಯಲ್ಲಿ 3254 ಕೋಟಿ ರೂಗಳನ್ನು ಇಲ್ಲಿಯವರೆಗೆ ತಂದಿದ್ದೇನೆ. ಜಲಜೀವನ್ ಮಿಷನ್ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಕೇವಲ ಕುಡಿಯುವ ನೀರು ಒಂದಕ್ಕೆ 700 ಕೋಟಿ ಅಧಿಕ ಹಣವನ್ನು ತಂದಿದ್ದೇನೆ. ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರು ಹೊಸ ರಸ್ತೆಗಳು, ಕಾಲು ಸಂಖಗಳು ಸೇತುವೆಗಳು, ಸಮುದಾಯ ಭವನಗಳು, ಶಾಲಾ ಕಟ್ಟಡ ಇವೆಲ್ಲವೂ ಸಾಮಾನ್ಯ ಜನರ ಗೋಚರ ಆಗುವಂತಹ ರೀತಿಯಲ್ಲಿ ಪ್ರಗತಿಯಾಗುತ್ತಿದೆ. ಯಾವುದೇ ಜನ ಪ್ರತಿನಿಧಿ ಇಲ್ಲಿಯವರೆಗೆ ತರದಂತಹ ದಾಖಲೆ ಹಣವನ್ನು ಅಭಿವೃದ್ಧಿಗಾಗಿ ತೀರ್ಥಹಳ್ಳಿ ಕ್ಷೇತ್ರಕ್ಕೆ ತಂದಿದ್ದೇನೆ ಕಾರಣ ಹಿಂದಿನ ಚುನಾವಣೆಯಲ್ಲಿ ದಾಖಲೆ ಅಂತರದಿಂದ ನನ್ನನ್ನು ಜನರು ಗೆಲ್ಲಿಸಿದ್ದರು. ಜನರು ಇನ್ನೊಂದು ಬಾರಿ ನನಗೆ ಅವಕಾಶವನ್ನು ಮಾಡಿಕೊಡಬೇಕು ಇಷ್ಟೆಲ್ಲ ಹಣ ತಂದರೂ ಕೂಡ ಪ್ರಗತಿ ಮುಗಿದಿದೆಯಾ ಎಂದರೆ ಖಂಡಿತ ಅದು ಯಾರಿಂದಲೂ ಸಾಧ್ಯವಿಲ್ಲ. ಈ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿ ಮತ್ತು ಇನ್ನಷ್ಟು ಪ್ರಗತಿ ಮಾಡಲಿಕ್ಕೆ ಮೇ ಹತ್ತರಂದು ನಡೆಯುವ ಚುನಾವಣೆಯಲ್ಲಿ ನನಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಇನ್ನು ಅಭಿವೃದ್ಧಿಯ ಕಾಮಗಾರಿಗಳು ಕಳಪೆಯಾಗಿದೆ ಈ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮಾಜಿ ಸಚಿವರ ಕಾಲದಲ್ಲಿ ಅಭಿವೃದ್ಧಿಯನ್ನು ತಂದಿದ್ದರೆ ಕಳಪೆಯೋ ಸರಿಯೋ ಎಂದು ಗೊತ್ತಾಗುತ್ತಿತ್ತು. ಅಭಿವೃದ್ಧಿಯನ್ನೇ ತರದೆ ಇದ್ದಾಗ ಹೇಳುವುದು ಸರಿಯಲ್ಲ. ಒಂದು ವೇಳೆ ಅಂತಹ ನ್ಯೂನ್ಯತೆಗಳು ಆಗಿರಬಹುದು ಆದರೆ ಅದು ಕಂಡು ಬಂದಾಗ ಇಂಜಿನಿಯರ್ ಗಳಿಗೆ ಕಂಟ್ರಾಕ್ಟರ್ ಗಳಿಗೆ ಎಚ್ಚರಿಕೆಯನ್ನು ನೀಡಿದ್ದೇವೆ. ಆ ಕಾರಣಕ್ಕಾಗಿ ಕಾಮಗಾರಿ ತಂದಿದ್ದೆ ತಪ್ಪು ಎಂದು ಹೇಳಲು ಆಗುವುದಿಲ್ಲ. ಕಳಪೆ ಕಾಮಗಾರಿ ಆಗಿದ್ದರೆ ಬಿಲ್ ಮಾಡಬೇಡಿ ಎಂದು ನಾನೇ ಹೇಳಿದ್ದೇನೆ. ಸರಿಪಡಿಸಿದ ನಂತರವೇ ಬಿಲ್ ಕೊಡಬೇಕು ಎಂದು ಕೂಡ ತಾಕಿತು ಮಾಡಿದ್ದೇನೆ ಎಂದರು.

ಇನ್ನು ಭಾರತಿಪುರ ತಿರುವಿನಲ್ಲಿ ಆಗುತ್ತಿರುವ ಕಾಮಗಾರಿ ಬಗ್ಗೆ ಮಾತನಾಡಿದ ಅವರು ಭಾರತಿಪುರ ತಿರುವಿನಲ್ಲಿ ಎಷ್ಟು ಬಸ್ಸು ಬಿದ್ದಿದೆ ಎಷ್ಟು ಅಪಘಾತ ಆಗಿದೆ ಎಂದು ನಿಮಗೆ ಗೊತ್ತಿದೆ. 1991 ನೇ ಇಸವಿಯಲ್ಲಿ ನನ್ನ ಮಗಳು ಮತ್ತು ಅತ್ತೆ ಎಂದು ಹೇಳುತ್ತಿದ್ದಂತೆ ಪತ್ರಕರ್ತರು ಎಲ್ಲರೂ ಅವರನ್ನ ಅಲ್ಲಿಗೆ ತಡೆದು ದಯವಿಟ್ಟು ಆ ವಿಷಯವನ್ನು ಪ್ರಸ್ತಾಪ ಮಾಡಬೇಡಿ ಎಂದರು. ನಂತರ ಮಾತನ್ನು ಮುಂದುವರೆಸಿ ಯಾವ ಕುಟುಂಬಕ್ಕೂ ಅಂತಹ ದುಃಖ ಬರಬಾರದು ನಾನು ಅಂದೆ ಯೋಚನೆ ಮಾಡಿದ್ದೆ ಭಗವಂತ ಏನಾದರೂ ನನಗೆ ಅಂತಹ ಅವಕಾಶ ನೀಡಿದರೆ ಇನ್ಯಾರಿಗೂ ಆ ರೀತಿ, ದುಃಖ ಬರದ ಹಾಗೆ ಮಾಡಬೇಕು ಎಂದು ತೀರ್ಮಾನಿಸಿದ್ದೆ ಆ ತಿರುವನ್ನು ಸರಿಪಡಿಸುವುದು ಅನಿವಾರ್ಯ ಎಂದರು.

ಇನ್ನು ರಾಜ್ಯದಲ್ಲಿ ಈ ಬಾರಿ ಬಿಜೆಪಿ ಎಷ್ಟು ಸೀಟು ಗೆಲ್ಲುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಹೀಗಿರುವ ಪ್ರಕಾರ 130 ರಿಂದ 140 ಸ್ಥಾನ ಬಿಜೆಪಿ ಪಕ್ಷ ಗೆಲ್ಲಲಿದೆ. ಯಾವುದೇ ಅನುಮಾನ ಬೇಡ. ಕೆಲವೊಬ್ಬರಿಗೆ ಪಕ್ಷದಲ್ಲಿ ಬಾರಿ ನಿರಾಕರಣೆ ಆಗಿದೆ. ಈಗಾಗಲೇ ಉಡುಪಿಯಲ್ಲಿ ರಘುಪತಿ ಭಟ್ ಅವರು ತಿಳಿಸಿದ್ದಾರೆ ಯಾವುದೇ ಕಾರಣಕ್ಕೂ ನಾನು ಪಕ್ಷವನ್ನು ಬಿಡುವುದಿಲ್ಲ ಯಾರಿಗೆ ಟಿಕೆಟ್ ನೀಡಿದ್ದಾರೋ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ ಬಿಜೆಪಿಯಲ್ಲಿ ಇನ್ನೂ ಹಲವರು ಇದೇ ರೀತಿಯಾಗಿ ಹೇಳಿದ್ದಾರೆ. ಕೆಲವೊಂದು ಆಪಾದನೆ ಇರುತ್ತೆ ಅದನ್ನು ಏನು ಮಾಡಲು ಆಗುವುದಿಲ್ಲ ಎಂದರು.

ಇನ್ನು ತೀರ್ಥಹಳ್ಳಿ ಕೊಪ್ಪ ಸರ್ಕಲ್ ನಿಂದ ಮಲ್ಪೆಯವರೆಗೆ ರಸ್ತೆ ಮಾಡಿಸಿದ್ದು ನಾನು ಎಂಬ ಹೇಳಿಕೆ ನೀಡಿದಂತಹ ಮಾಜಿ ಸಚಿವರಿಗೆ ನಾನು ಮಂಜೂರು ಮಾಡಿಸಲಿಕ್ಕೆ ನನ್ನ ಹತ್ತಿರ ದಾಖಲೆ ಇದೆ ಎಲ್ಲೇ ಕರೆದರೂ ದಾಖಲೆ ಸಮೇತ ಕೊಡುತ್ತೇನೆ ಜೊತೆಗೆ ಮಂಜೂರು ಮಾಡಿಸಿದಂತಹ ದಿನಾಂಕದ ಸಮೇತ ಕೊಡುತ್ತೇನೆ ಯಾವಾಗ ಯಾರೇ ಕೇಳಿದರೂ ನಾನು ಅದನ್ನು ಕೊಡಲು ರೆಡಿ ಇದ್ದೇನೆ ಎಂದರು

ಎರಡು ಅವಧಿಯಲ್ಲಿ ಅವರು ಏನು ಮಾಡಿದ್ದಾರೆ ಎಂದು ಹೇಳುತ್ತಾ ಹೋಗಲಿ. ನಾನು ಐದು ವರ್ಷದಲ್ಲಿ ಒಂದುವರೆ ವರ್ಷಗಳ ಕಾಲ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಸರ್ಕಾರ ಇತ್ತು. ಉಳಿದ ಎರಡು ವರ್ಷಗಳಲ್ಲಿ ಕರೋನ ಬಂತು. ಉಳಿದ ಒಂದು ಮುಕ್ಕಾಲು ವರ್ಷದಲ್ಲಿ ನಾನು ಇಷ್ಟೊಂದು ದಾಖಲೆ ಹಣವನ್ನು ತಂದಿದ್ದೇನೆ.. ನನಗೆ ಐದು ವರ್ಷಗಳ ಕಾಲ ಕ್ಲಿಯರ್ ಇದ್ದಿದ್ದರೆ ಕೋವಿಡ್ ಬರೆದಿದ್ದರೆ ನಾನು ತೋರಿಸುತ್ತಿದ್ದೆ. ಈಗಲೂ ಕೂಡ ಪೂರ್ಣ ಆಗಿದೆ ಎಂದು ನಾನು ಹೇಳುತ್ತಿಲ್ಲ. ಇವರು ಎರಡು ಬಾರಿ ಗೆದ್ದಾಗ ರಸ್ತೆ ಮಾಡಿಸಿದ್ದಿದ್ದರೆ ನಾನು ಇಷ್ಟು ಹೊತ್ತಿಗೆ ಪೂರಣ ಮುಗಿಸಿ ಬಿಡುತ್ತಿದ್ದೆ. ಇವರ ಹತ್ತು ವರ್ಷಗಳ ಕಾಲ ಏನು ಮಾಡದೆ ತೀರ್ಥಹಳ್ಳಿ ಕ್ಷೇತ್ರ ಹಿಂದಕ್ಕೆ ಹೋಗಿತ್ತು. ಸುಮ್ಮನೆ ಯಾರದ್ದು ಮಾತನಾಡಿ ಟೀಕೆ ಮಾಡುವುದು ಆಡಬಾರದ ಮಾತುಗಳನ್ನು ಆಡಿ ಬೇರೆಯವರನ್ನ ತೆಗಳುವುದೇ ಮಾಡುತ್ತಿದ್ದಾರೆ ಇದನ್ನು ತೀರ್ಥಹಳ್ಳಿ ಜನರ ಕ್ಷಮಿಸುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ, ಬೇಗುವಳ್ಳಿ ಕವಿರಾಜ್, ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ ಹೆದ್ದೂರು, ಸಂದೇಶ್ ಜವಳಿ,ರಕ್ಷಿತ್ ಮೇಗರವಳ್ಳಿ ಸೇರಿ ಹಲವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

3-raichur

Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ

Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ

B. S. Yediyurappa: ಯಾವುದೇ ಕ್ಷಣದಲ್ಲಿ ಸಿಎಂ ರಾಜೀನಾಮೆ

B. S. Yediyurappa: ವಿಜಯೇಂದ್ರ ಬೆಳವಣಿಗೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ

BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ

BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

3-raichur

Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

2-kadaba

Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ

17

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.