ಕೈಗೆ ತಲೆನೋವಾಗಿರುವ ದಳ ಮುಸ್ಲಿಂ ಅಭ್ಯರ್ಥಿಗಳು
Team Udayavani, May 8, 2023, 12:51 PM IST
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತರಿಗೆ ಗಾಳ ಹಾಕಿ ಟಕ್ಕರ್ ನೀಡಿದ ಜೆಡಿಎಸ್, ಹದಿನೈದು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿರುವುದು ಕಾಂಗ್ರೆಸ್‌ನಲ್ಲಿ ಮತ ವಿಭಜನೆಯ ಆತಂಕ ಮೂಡಿಸಿದೆ.
ಒಂದೆಡೆ ಎಸ್‌ಡಿಪಿಐ ಬಹುತೇಕ ಕಡೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಮತ್ತೂಂದೆಡೆ ಜೆಡಿಎಸ್ ಸಹ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಇವರು ಮತ ಹೆಚ್ಚು ಪಡೆದಷ್ಟೂ ಕಾಂಗ್ರೆಸ್‌ನ ಗೆಲುವಿನ ಹಾದಿ ಕಠಿಣವಾಗಲಿದೆ. ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಗಳು ಕಣಕ್ಕಿಳಿದಿರುವ ಕ್ಷೇತ್ರಗಳಲ್ಲಿ ಮತ ವಿಭಜನೆ ಆಗಿದ್ದೇ ಆದರೆ ಅದು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗಿ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು ಎಂಬ ವ್ಯಾಖ್ಯಾನಗಳು ಇವೆ.
ಮಂಗಳೂರು ಉತ್ತರ, ನರಸಿಂಹರಾಜ, ವಿರಾಜಪೇಟೆ, ಬೆಳ್ತಂಗಡಿ, ಹೆಬ್ಟಾಳ, ಚಿಕ್ಕಪೇಟೆ, ಖಾನಾಪುರ, ಹುಮ್ನಾಬಾದ್, ಕುಂದಗೋಳ, ಗುಲ್ಬರ್ಗ ಉತ್ತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳು ಪೈಪೋಟಿ ನೀಡುತ್ತಿದ್ದು, ಹದಿನೈದು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕರು ರೇ ಕಣಕ್ಕಿಳಿದಿರುವ ಕಡೆಯೇ ಮುಸ್ಲಿಂ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕಿಳಿಸಿದೆ.
ಕಾಂಗ್ರೆಸ್‌ನ ಮ್ಯಾಜಿಕ್ ನಂಬರ್ ಕನಸು ಭಗ್ನಗೊಳಿಸುವ ಸಲುವಾಗಿಯೇ ಜೆಡಿಎಸ್ ಈ ಕಾರ್ಯತಂತ್ರ ರೂಪಿಸಿದೆ. ಹುಮ್ನಾಬಾದ್‌ನಲ್ಲಿ ಕಾಂಗ್ರೆಸ್‌ನ ರಾಜಶೇಖರ ಪಾಟೀಲ್ ಹುಮ್ನಾಬಾದ್ ಕಣಕ್ಕಿಳಿದಿದ್ದು ಇಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ.ಫೈಜ್ ಖಾನ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅದೇ ರೀತಿ ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಮೊಯಿದ್ದೀನ್ ಬಾವಾ ಅವರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದ್ದು ಅಲ್ಲಿ ಕಾಂಗ್ರೆಸ್‌ನ ಇನಾಯತ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಕುಂದಗೋಳದಲ್ಲಿ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ವಿರುದ್ಧ ಹಜರತ್ ಅಲಿ ಅಲ್ಲಾಸಾಬ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅದೇ ರೀತಿ ಗುಲ್ಬರ್ಗ ಉತ್ತರದಲ್ಲಿ ಖನೀಜ್ ಫಾತೀಮಾ ವಿರುದ್ಧ ನಸೀರ್ ಹುಸೇನ್ ಉಸ್ತಾದ್, ನರಸಿಂಹರಾಜ ಕ್ಷೇತ್ರದಲ್ಲಿ ತನ್ವೀರ್ ಸೇಠ್ ವಿರುದ್ಧ ಅಬ್ದುಲ್ ಖಾದರ್ ಶಾಹೀದ್ ಜೆಡಿಎಸ್ ಅಭ್ಯರ್ಥಿಗಳಾಗಿದ್ದಾರೆ. ಬೆಂಗಳೂರಿನ ಹೆಬ್ಟಾಳದಲ್ಲಿ ಬೈರತಿ ಸುರೇಶ್ ವಿರುದ್ಧ ಮೊಯಿದ್ದೀನ್ ಅಲ್ತಾಫ್, ಚಿಕ್ಕಪೇಟೆಯಲ್ಲಿ ಮಾಜಿ ಶಾಸಕ ಆರ್.ವಿ. ದೇವರಾಜ್ ವಿರುದ್ಧ ಇಮ್ರಾನ್ ಪಾಶಾ, ಹೆಬ್ಟಾಳದಲ್ಲಿ ಮೊಯಿದ್ದೀನ್ ಆಲ್ತಾಫ್ ಅಭ್ಯರ್ಥಿಗಳಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ತೊಡರುಗಾಲು ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಬಲರಿಗೆ ಮಣೆ: ಈ ಮಧ್ಯೆ, ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತ ಪ್ರಬಲರಿಗೆ ಜೆಡಿಎಸ್ ತನ್ನತ್ತ ಸೆಳೆದು ಟಿಕೆಟ್ ನೀಡಿದ್ದು ಅವರ ಜತೆ ಕಾಂಗ್ರೆಸ್ ಪಕ್ಷದ ಶೇ.20 ರಷ್ಟು ಕಾರ್ಯಕರ್ತರು ಹಾಗೂ ಮುಖಂಡರನ್ನು ಸೆಳೆಯಲಾಗಿದೆ. ಬಳ್ಳಾರಿಯಲ್ಲಿ ಅನಿಲ್ ಲಾಡ್, ಯಾದಗಿರಿಯಲ್ಲಿ ಮಾಲಕರೆಡ್ಡಿ, ಚಿತ್ರದುರ್ಗದಲ್ಲಿ ರಘು ಆಚಾರ್, ಹಳಿಯಾಳದಲ್ಲಿ ಘೋಕ್ಲೃಕರ್, ಹಾನಗಲ್‌ನಲ್ಲಿ ಮನೋಹರ್ ತಹಸೀಲ್ದಾರ್, ಬಾಗಲಕೋಟೆಯಲ್ಲಿ ಡಾ.ದೇವರಾಜ್ ಪಾಟೀಲ್ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು ಅವರೊಂದಿಗೆ ಹಲವು ಕಾಂಗ್ರೆಸ್ ನಾಯಕರನ್ನೂ ಜೆಡಿಎಸ್ ಸೆಳೆದು ಸೆಡ್ಡು ಹೊಡೆದಿದೆ. ಶಿವಮೊಗ್ಗದಲ್ಲಿ ಬಿಜೆಪಿಯಿಂದ ಜೆಡಿಎಸ್‌ಗೆ ಹೋದ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ವಂಚಿತ ಮಾಜಿ ಶಾಸಕ ಪ್ರಸನ್ನಕುಮಾರ್ ಜತೆಗೂಡಿರುವುದು ಅಲ್ಲಿ ಕಾಂಗ್ರೆಸ್ ಗೆಲುವಿನ ಹಾದಿ ಕಠಿಣಗೊಳಿಸಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮತ್ತೂಂದೆಡೆ ಎಸ್‌ಡಿಪಿಐ ಸಹ ಕಾಂಗ್ರೆಸ್ ಶಾಸಕರಿರುವ ನರಸಿಂಹರಾಜ, ಪುಲಕೇಶಿನಗರ, ಸರ್ವಜ್ಞನಗರ ಸೇರಿ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ ಕಾಂಗ್ರೆಸ್ ತಲೆಬಿಸಿಗೆ ಕಾರಣವಾಗಿದೆ.
ಮುಸ್ಲಿಂ ಅಭ್ಯರ್ಥಿಗಳು: ಕಣಕ್ಕಿಳಿದಿರುವ ಕ್ಷೇತ್ರಗಳು ಖಾನಾಪುರ, ಗುಲ್ಬರ್ಗ ಉತ್ತರ, ಹುಮ್ನಾಬಾದ್, ರೋಣ, ಕುಂದಗೋಳ, ಸಾಗರ, ಮಂಗಳೂರು ಉತ್ತರ, ಬೈಂದೂರು, ಕಾಪು, ಬೆಳ್ತಂಗಡಿ, ವಿರಾಜಪೇಟೆ, ನರಸಿಂಹರಾಜ, ಹೆಬ್ಟಾಳ, ಸರ್ವಜ್ಞನಗರ, ಚಿಕ್ಕಪೇಟೆ
-ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.