karnataka election 2023; ಮುದುಡಿಹೋದ ಗಿಡ ವರ್ಸಸ್‌ ನೇಪಥ್ಯಕ್ಕೆ ಸರಿದ ಅನಂತ ಬಳಗ

Team Udayavani, Apr 19, 2023, 7:45 AM IST

karnataka election 2023; ಮುದುಡಿಹೋದ ಗಿಡ ವರ್ಸಸ್‌ ನೇಪಥ್ಯಕ್ಕೆ ಸರಿದ ಅನಂತ ಬಳಗ

ಬೆಂಗಳೂರು: ಸಕಾಲಿಕ ಟ್ವೀಟ್‌ಗಳ ಮೂಲಕ ಆಗಾಗ ರಾಜಕೀಯ ಆಸಕ್ತರು ಅದರಲ್ಲಿಯೂ ವಿಶೇಷವಾಗಿ ಬಿಜೆಪಿ ಅಂತರ್ವಲಯದ ನಾಯಕರ ಅಂತರಂಗ ಚುರ್ರೆನ್ನಿಸುವಂತೆ ಮಾಡಿ ಮತ್ತೆ ಮೌನಕ್ಕೆ ಶರಣಾಗಿ ಬಿಡುವ ತೇಜಸ್ವಿನಿ ಅನಂತಕುಮಾರ್‌ ಮಂಗಳವಾರ ಒಂದು ಮಾರ್ಮಿಕ ಟ್ವೀಟ್‌ ಮಾಡಿದ್ದರು. ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಒಣಗಿ ಹೋಗುತ್ತಿರುವ ಗಿಡವೊಂದರ ಫೋಟೋವನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡ ಅವರು “ಈ ಗಿಡ ಜೂನ್‌ 5, 2015ರಂದು ಲಾಲ್‌ ಬಾಗ್‌ ಪಶ್ಚಿಮದ್ವಾರದ ಬಳಿ ಶ್ರೀ ಅನಂತಕುಮಾರ್‌ ಅವರು ನೆಟ್ಟಿದ್ದು. ಯಾಕೋ ಮುದುರಿ ಹೋಗಿದೆ. ಲಾಲ್‌ ಬಾಗ್‌ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಅನಂತಕುಮಾರ್‌ ಅನುಪಸ್ಥಿತಿಯಲ್ಲಿ ಈ ಗಿಡವನ್ನು ಉಳಿಸುವ ಜವಾಬ್ದಾರಿ ನಮ್ಮದು ಎಂಬುದು ನನ್ನ ಭಾವನೆ’…

ಕಾಕತಾಳೀಯವೋ ಎಂಬಂತೆ ತೇಜಸ್ವಿನಿ ಅನಂತಕುಮಾರ್‌ ಅವರು ಈ ಟ್ವೀಟ್‌ ಮಾಡುವ ಹಿಂದಿನ ದಿನ ಬಿಜೆಪಿ ಎಂಬ ಮಹಾವೃಕ್ಷದ ಅಂಚುಗಳಲ್ಲಿ ಅನಂತಕುಮಾರ್‌ ನೆಟ್ಟು ಬೆಳೆಸಿದ ರಾಜಕೀಯದ ಗಿಡಗಳೆಲ್ಲವೂ ಇದೇ ರೀತಿ ಮುದುರಿ, ಬಾಡಿ, ಧರಾಶಾಯಿಯಾಗಿದ್ದವು!

“ಮಾತು ಬೆಳ್ಳಿ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಮೌನ ಮಾತ್ರ ಬಂಗಾರ. ಏನಂತೀರಿ ? ಎಂದು ಹಿಂದಿನ ದಿನವಷ್ಟೇ ಪ್ರಶ್ನಾರ್ಥಕ ಟ್ವೀಟ್‌ ಹಂಚಿಕೊಂಡಿದ್ದ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಬಹುಶಃ “ಅನಂತಕುಮಾರ್‌ ರಾಜಕೀಯದಲ್ಲಿ ನೆಟ್ಟ ಗಿಡಗಳೆಲ್ಲವೂ ಮುದುರಿ ಹೋಗಿದ್ದನ್ನು ಕಂಡು ಅಂತಃಕರಣ ಕಲಕಿದ್ದರ ಪರಿಣಾಮವೇ ಈ ಟ್ವೀಟ್‌ ಆಗಿರಲಿಕ್ಕೂ ಸಾಕು. ಆದರೆ ರಾಜ್ಯ ರಾಜಕಾರಣದಲ್ಲಿ ಅನಂತಕುಮಾರ್‌ ಕುಟುಂಬ ಹಾಗೂ ಅವರ ಶಿಷ್ಯ ವರ್ಗ ಸಂಪೂರ್ಣವಾಗಿ ನೆಲಕಚ್ಚಿ ಅಸ್ತಿತ್ವ ಕಳೆದುಕೊಂಡಿದ್ದಂತೂ ಸುಳ್ಳಲ್ಲ.
ಹೌದು. ರಾಜ್ಯ ಬಿಜೆಪಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 60 ಹೊಸಮುಖಗಳಿಗೆ ಅವಕಾಶ ನೀಡಿದೆ. ಅದರ ಜತೆಗೆ ಮೊದಲನೆ ಜನರೇಷನ್‌ನ ಎಲ್ಲ ಹಿರಿಯರನ್ನು ಬದಿಗೆ ಸರಿಸಿದೆ. ಇದೆಲ್ಲದರ ಮಧ್ಯೆ ಗಮನಿಸಬೇಕಾದ ಮತ್ತೂಂದು ಸಂಗತಿ ಎಂದರೆ ಅದು ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಶಿಷ್ಯ ವರ್ಗವನ್ನು ಪಕ್ಷದ ಎಲ್ಲ ಆಯಕಟ್ಟಿನ ಸ್ಥಾನಗಳಷ್ಟೇ ಅಲ್ಲ ಚುನಾವಣಾ ರಾಜಕಾರಣದಿಂದಲೇ ಬದಿಗೆ ಸರಿಸಲಾಗಿದೆ. ಜಗದೀಶ್‌ ಶೆಟ್ಟರ್‌, ಅರವಿಂದ ಲಿಂಬಾವಳಿ, ರಾಮದಾಸ್‌ ಮಾತ್ರವಲ್ಲ ಒಂದು ಕಾಲದಲ್ಲಿ ಅನಂತಕುಮಾರ್‌ ಆಪ್ತ ಎಂದೇ ಪರಿಗಣಿಸಲ್ಪಟ್ಟಿದ್ದ ಕೆ.ಎಸ್‌.ಈಶ್ವರಪ್ಪ ಕೂಡಾ ರಾಜಕೀಯದ ನೇಪಥ್ಯಕ್ಕೆ ಸರಿಸಲ್ಪಟ್ಟಿದ್ದಾರೆ. 1999, 2004ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡ ಇನ್ನು ಕೆಲವು “ಅನಂತ ಶಿಷ್ಯರು’ ಕೂಡಾ ಈ ಹಿಟ್‌ ಲಿಸ್ಟ್‌ನಲ್ಲಿ ಇದ್ದಾರೆ ಎಂದೇ ಬಿಜೆಪಿ ಆಂತರಿಕ ಮೂಲಗಳು ವ್ಯಾಖ್ಯಾನಿಸುತ್ತಿವೆ. ಈಗ ಅವರೆಲ್ಲರೂ ನಾನು ಅನಂತಕುಮಾರ್‌ ಶಿಷ್ಯ ಎಂದು ಹೇಳಿಕೊಳ್ಳುವುದಕ್ಕೇ ಅಂಜುವಂಥ ಸ್ಥಿತಿ ಬಿಜೆಪಿಯಲ್ಲಿದೆ. ಅಲ್ಲಿಗೆ ರಾಜ್ಯ ಬಿಜೆಪಿಯ ನಾಯಕರೆಲ್ಲರೂ ಹೊಸ ತಲೆಮಾರು, ಹೊಸ ಚಿಂತನೆ ಹಾಗೂ ಹೊಸ ಗುರುಗಳ ಶಿಷ್ಯರಾದಂತಾಗಲಿದೆ.

ಈ ರೀತಿಯ ನಿರಾಕರಣೆ ಖುದ್ದು ತೇಜಸ್ವಿನಿಯವರಿಗೂ ಆಗಿದೆ. ಅನಂತಕುಮಾರ್‌ ಅವರ ಅಕಾಲಿಕ ಮರಣದ ಬಳಿಕ ಬೆಂಗಳೂರು ದಕ್ಷಿಣ ಲೋಕಸಭಾ ಸ್ಥಾನಕ್ಕೆ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ “ಡಿಎನ್‌ಎ ಪಾಲಿಟಿಕ್ಸ್‌ಗೆ’ ಬಿಜೆಪಿಯಲ್ಲಿ ಜಾಗವಿಲ್ಲ ಎಂಬ ವಾದ ಅವರಿಗೆ ಟಿಕೆಟ್‌ ತಪ್ಪಿಸಿತು. ಆದಾದ ಬಳಿಕ ಈಗ ಎದುರಾಗಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಟಿಕೆಟ್‌ ವಂಚಿತರಾಗಿದ್ದಾರೆ. ಆದರೆ ಯಾವ ವಾದದ ಮೂಲಕ ಅನಂತಕುಮಾರ್‌ ಕುಟುಂಬ ಹಾಗೂ ಅವರ ಶಿಷ್ಯ ವರ್ಗವನ್ನು ಸಕ್ರಿಯ ರಾಜಕಾರಣದಿಂದ ಬಿಜೆಪಿ ದೂರ ತಳ್ಳಿದೆಯೋ, ಆ ಮಾನದಂಡ ಎಲ್ಲರಿಗೂ ಅನ್ವಯವಾಗಿಲ್ಲ ಎಂಬ ಅಸಮಾಧಾನ ಕೇಳಿಬರುತ್ತಿದೆ.

-ರಾಘವೇಂದ್ರ ಭಟ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.