Karnataka Elections 2023; ವಲಸಿಗ ಮತದಾರರ ಮನವೊಲಿಕೆಗೆ ಸಿದ್ಧತೆ
Team Udayavani, Apr 11, 2023, 6:15 AM IST
ಬೆಂಗಳೂರು: “ಉದ್ಯೋಗ ಅರಸಿ ಹೊರರಾಜ್ಯಗಳಿಗೆ ವಲಸೆ ಹೋದವರೇ ಮೇ 10ರಂದು ನಿಮ್ಮ ಸ್ವಂತ ಸ್ಥಳಕ್ಕೆ ವಾಪಸ್ ಆಗಿ ಓಟ್ ಹಾಕಿ’ ಇದು ವಲಸಿಗ ಮತ್ತು ಗೂಳೆ ಹೋದ ಮತದಾರರಿಗೆ ಚುನಾವಣ ಆಯೋಗ ಮಾಡುತ್ತಿರುವ ಮನವಿ.
“ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು’ ಎಂದು 2018ರ ವಿಧಾನಸಭೆ ಚುನಾವಣೆಗೆ ಘೋಷಣೆ ಇಟ್ಟುಕೊಂಡಿದ್ದ ಚುನಾವಣ ಆಯೋಗ ಮತದಾನದ ಪ್ರಮಾಣವನ್ನು ಸಾರ್ವಕಾಲಿಕ ದಾಖಲೆಯ ಶೇ. 72.13 ತಲುಪಿಸಿತ್ತು. ಈ ಬಾರಿ ಇದನ್ನು ಮೀರಿಸಿ ಹೊಸ ಇತಿಹಾಸ ಸೃಷ್ಟಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಲಸಿಗ ಮತದಾರರ ಮನವೊಲಿಕೆ ಅದರ ಒಂದು ಭಾಗವಾಗಿದೆ.
ಉದ್ಯೋಗಕ್ಕಾಗಿ ರಾಜ್ಯದಿಂದ ಬೇರೆ ರಾಜ್ಯ ಗಳಿಗೆ ವಲಸೆ ಹೋಗುವ ಕಾರ್ಮಿಕ ವರ್ಗವನ್ನು ಮತದಾನಕ್ಕೆ ಕರೆತರಲು ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ನಡೆಸುವುದು ಸಾಮಾನ್ಯ. ಆದರೆ, ಖುದ್ದು ಚುನಾವಣ ಆಯೋಗ ಈ ಬಾರಿ ವಲಸಿಗ ಮತದಾರರ ಮನವೊಲಿಕೆಗೆ ಮುಂದಾಗಿದೆ. ಮತದಾನದ ದಿನವಾದ ಮೇ 10ರಂದು ಪ್ರಜಾಪ್ರಭುತ್ವದ ಹಬ್ಬ ದಿನವಾಗಿದೆ. ಈ ಹಬ್ಬದಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಿ ಸಂಭ್ರಮ ಆಚರಿಸುವುದರ ಜೊತೆಗೆ ನಿಮ್ಮ ಕರ್ತ ವ್ಯವಾದ ಓಟಿನ ಹಕ್ಕನ್ನೂ ಚಲಾಯಿಸಿ ಎಂದು ಚುನಾವಣ ಆಯೋಗ ಮನವಿ ಮಾಡುತ್ತಿದೆ.
ಮತದಾನ ಪ್ರಮಾಣವನ್ನು ಹೆಚ್ಚಿಸಲು ಪೂರಕವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಭಿಯಾನಕ್ಕೆ ವಿಶೇಷ ಒತ್ತು ಕೊಟ್ಟ ಚುನಾವಣ ಆಯೋಗ, 18 ವರ್ಷದವರಿಗೆ ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿದೆ. ಯುವ ಮತದಾರರ ಹೆಸರು ಸೇರ್ಪಡೆಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಿದೆ. ಜೊತೆಗೆ, ತೃತೀಯ ಲಿಂಗಿಗಳು, ದುರ್ಬಲ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಮನೆ ಬಾಗಿಲಿಗೆ ಹೋಗಿ ಮತದಾರರ ಹೆಸರು ಸೇರ್ಪಡೆ ಮಾಡಲಾಗಿದೆ. ವಿಕಲಚೇತನರು ಮತ್ತು 80 ವರ್ಷದ ದಾಟಿದವರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನೂ ತರಲಾಗಿದೆ. ಇದರ ಜತೆಗೆ, ವಲಸಿಗ ಮತ್ತು ಗುಳೇ ಹೋದವರನ್ನು ಮತದಾನಕ್ಕೆ ಕರೆತರಲು ಆಯೋಗ ಕಾರ್ಯಪ್ರವೃತ್ತವಾಗಿದೆ.
ಮನವೊಲಿಕೆ ಹೇಗೆ?: ಕರ್ನಾಟಕದಿಂದ ಉದ್ಯೋಗಕ್ಕಾಗಿ ನೆರೆ ರಾಜ್ಯಗಳಿಗೆ ವಲಸೆ ಹೋದವರ ಸ್ವಂತ ಊರುಗಳಲ್ಲಿರುವ ಅವರ ಕುಟುಂಬದ ಇತರ ಸದಸ್ಯರನ್ನು ಚುನಾವಣ ಆಯೋಗದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಭೇಟಿ ಮಾಡಿ, ವಲಸೆ ಹೋದವರನ್ನು ಮತದಾನದ ದಿನ ಊರಿಗೆ ಬರುವಂತೆ ಮನವೊಲಿಸಲು ವಿನಂತಿ ಮಾಡಲಾಗುತ್ತದೆ. ಅಲ್ಲದೇ ಆಯ್ದ ಜಿಲ್ಲೆಗಳ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಬೇರೆ ರಾಜ್ಯಗಳಿಗೆ ಹೋಗುವ ಮತ್ತು ಅಲ್ಲಿಂದ ಬರುವ ವಲಸೆ ಕಾರ್ಮಿಕರನ್ನು ಭೇಟಿ ಮಾಡಿ ಹೋಗುವವರನ್ನು ಮತದಾನದ ದಿನ ಬನ್ನಿ ಎಂದು ಮನವಿ ಮಾಡಿದರೆ, ಬಂದವರನ್ನು ಮತದಾನ ಆದ ಮೇಲೆ ಹೋಗಿ ಎಂದು ಅಧಿಕಾರಿಗಳು ವಿನಂತಿ ಮಾಡುತ್ತಿದ್ದಾರೆ.
ವಲಸೆ ಸಮಸ್ಯೆ: ಎಲ್ಲಿ ಹೆಚ್ಚು?: ವಲಸೆ ಸಮಸ್ಯೆ ಉತ್ತರ ಕರ್ನಾಟಕ ಅದರಲ್ಲೂ ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿದೆ. ಈ ಜಿಲ್ಲೆಯ ಬಡ-ಮಧ್ಯಮ ಕಾರ್ಮಿಕ ವರ್ಗ ಹೆಚ್ಚಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತದೆ. ಜತೆಗೆ ಬೆಂಗಳೂರಿಗೂ ವಲಸೆ ಬರುವವರ ಸಂಖ್ಯೆ ದೊಡ್ಡಮಟ್ಟದಲ್ಲಿರುತ್ತದೆ. ವಲಸೆ ಸಮಸ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ವಿಶೇಷ ಒತ್ತುಕೊಟ್ಟು ಜಾಗೃತಿ ಮತ್ತು ಮನವೊಲಿಕೆ ಕಾರ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಿನ ಪರಿಸ್ಥಿತಿ ಆಧರಿಸಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹೇಳುತ್ತಾರೆ.
ವಲಸೆ ಹೋದವರ ಕುಟುಂಬದ ಸದಸ್ಯರನ್ನು ಚುನಾವಣ ಆಯೋಗದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮನೆಗೆ ಭೇಟಿ ಕೊಟ್ಟು ತಮ್ಮ ಕುಂಟುಬದ ವಲಸಿಗ ಸದಸ್ಯರನ್ನು ಮತದಾನದ ದಿನ ವಾಪಸ್ ಬಂದು ಮತ ಚಲಾಯಿಸುವಂತೆ ಹೇಳಲು ಮನವಿ ಮಾಡಲಾಗುತ್ತದೆ.
-ಮನೋಜ್ ಕುಮಾರ್ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ.
-ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.