ಮೊದಲ ಗೆಲುವನ್ನು ಮರಳಿ ಪಡೆಯುವ ಬಿಜೆಪಿಗೆ ಕಾಂಗ್ರೆಸ್‌ ಕೊಂಚ ಅಡ್ಡಗಾಲು


Team Udayavani, May 6, 2023, 7:40 AM IST

ಮೊದಲ ಗೆಲುವನ್ನು ಮರಳಿ ಪಡೆಯುವ ಬಿಜೆಪಿಗೆ ಕಾಂಗ್ರೆಸ್‌ ಕೊಂಚ ಅಡ್ಡಗಾಲು

ಮೂಡುಬಿದಿರೆ‌: ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಗೆದ್ದು ಬಾವುಟ ಹಾರಿಸಿತ್ತು. ಈ ಬಾರಿ ಅದನ್ನು ಉಳಿಸಿಕೊಳ್ಳುವ ಹೋರಾಟ ಬಿಜೆಪಿಯದ್ದು. ಆದರೆ ಕೈ ತಪ್ಪಿ ಹೋದ ಕ್ಷೇತ್ರವನ್ನು ಮರಳಿ ಪಡೆದೇ ತೀರಬೇಕೆಂಬುದು ಕಾಂಗ್ರೆಸ್‌ನ ಪ್ರಯತ್ನ. ಹಾಗಾಗಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ ಉಭಯ ಪಕ್ಷಗಳ ಮಧ್ಯೆ.

ಶಿಕ್ಷಣ ಕಾಶಿ, ಜೈನ ಕಾಶಿ ಎಂದೆಲ್ಲ ಖ್ಯಾತಿ ಪಡೆದಿರುವ ಈ ಕ್ಷೇತ್ರದಲ್ಲಿ 1999, 2004, 2008, 2013-ನಾಲ್ಕು ಬಾರಿ ಕೆ.ಅಭಯಚಂದ್ರ ಅವರು ಗೆದ್ದು ಬೀಗಿದ್ದರು. ಆದರೆ 2018ರಲ್ಲಿ ಬಿಜೆಪಿ ಅಲೆಯನ್ನೇರಿದ ಉಮಾನಾಥ ಕೋಟ್ಯಾನ್‌ ಬಿಜೆಪಿ ಅಧಿಪತ್ಯ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ 1994ರಲ್ಲಿ ಜತನಾದಳದಿಂದ ಕೆ. ಅಮರನಾಥ ಶೆಟ್ಟಿ ಗೆದ್ದಿದ್ದರು. 1983 ಮತ್ತು 85ರಲ್ಲಿ ಇವರೇ ಜನತಾಪಕ್ಷದ ಪರವಾಗಿ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಿದ್ದರು.

ಈ ಬಾರಿ ಬಿಜೆಪಿಯಿಂದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್‌ ಅವರೇ ಅಭ್ಯರ್ಥಿ. ಇದು ಅವರ ಮೂರನೇ ಚುನಾವಣೆ. 2013ರಲ್ಲಿ ಸೋಲು ಕಂಡಿದ್ದ ಕೋಟ್ಯಾನ್‌, 2018ರಲ್ಲಿ ಗೆದ್ದಿದ್ದರು. ಇನ್ನೊಂದೆಡೆ ಕಾಂಗ್ರೆಸ್‌ ಮಾಜಿ ಶಾಸಕ ಅಭಯಚಂದ್ರ ಅವರು ಚುನಾವಣ ನಿವೃತ್ತಿ ಘೋಷಿಸಿ, ತಮ್ಮ ಶಿಷ್ಯ ಮಿಥುನ್‌ ರೈ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಅದರಂತೆ ಮಿಥುನ್‌ ರೈ ಇಲ್ಲಿ ಅಭ್ಯರ್ಥಿ. ಮಿಥುನ್‌ 2019ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

2018ರ ವೇಳೆ ಕರಾವಳಿಯಲ್ಲಿ ಪ್ರಬಲವಾಗಿದ್ದ ಹಿಂದುತ್ವ ಮತ್ತು ಆಡಳಿತ ವಿರೋಧಿ ಅಲೆಯಲ್ಲಿ ಉಮಾನಾಥ ಕೋಟ್ಯಾನ್‌ ಅವರಿಗೆ ಅದೃಷ್ಣ ಕೈ ಹಿಡಿಯಿತು. ಅವರೀಗ ತಮ್ಮ ಅವಧಿಯಲ್ಲಿ ಆದ ಗ್ರಾಮೀಣ ರಸ್ತೆ, ಕಿಂಡಿ ಅಣೆಕಟ್ಟುಗಳು, ತಾಲೂಕು ಆಡಳಿತ ಸೌಧ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ಮತಯಾಚಿಸುತ್ತಿದ್ದಾರೆ.

ಮಿಥುನ್‌ ರೈ ಅವರು ನಾಲ್ಕೈದು ವರ್ಷಗಳಿಂದ ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಲು ಶ್ರಮಿಸಿದ್ದರು. ಯುವ ಸಮುದಾಯವನ್ನು ತನ್ನತ್ತ ಸೆಳೆಯಲೂ ಪ್ರಯತ್ನಿಸಿದ್ದರು. ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ ಐಟಿ ಪಾರ್ಕ್‌ ನಿರ್ಮಾಣ, ಹೈಟೆಕ್‌ ಸರಕಾರಿ ಆಸ್ಪತ್ರೆ, ಕ್ರಿಕೆಟ್‌ ತರಬೇತಿ ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳ ಕನಸನ್ನು ಮತದಾರರಿಗೆ ವಿವರಿಸುತ್ತಾ ಬೆಂಬಲಿಸುವಂತೆ ಕೋರುತ್ತಿದ್ದಾರೆ.

ಮೋದಿ ಭೇಟಿ ಸಂಚಲನ-ಪ್ರಿಯಾಂಕಾ ನಿರೀಕ್ಷೆ
ಇಬ್ಬರೂ ಅಭ್ಯರ್ಥಿಗಳು ಹೆಚ್ಚು ನೆಚ್ಚಿಕೊಂಡಿರುವುದು ಮನೆ ಮನೆ ಭೇಟಿಯನ್ನೇ. ಪ್ರಧಾನಿ ನರೇಂದ್ರ ಮೋದಿ ಅವರು ಮೂಲ್ಕಿಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡದ್ದು ಕ್ಷೇತ್ರದ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ. ಇನ್ನೊಂದೆಡೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರೂ ಸದ್ಯವೇ ಮೂಲ್ಕಿಯಲ್ಲಿ ಪ್ರಚಾರ ನಡೆಸಲಿದ್ದು, ಇದು ಕೊನೇ ಗಳಿಗೆಯಲ್ಲಿ ಕಾಂಗ್ರೆಸ್‌ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಬಳ್ಕುಂಜೆಯಲ್ಲಿ ಕೈಗಾರಿಕೆ ನಿರ್ಮಾಣ ಉದ್ದೇಶಕ್ಕೆ ಭೂ ಸ್ವಾಧೀನ ವಿಷಯ ಚುನಾವಣೆಯ ವಿಷಯವಾಗಿಸಿದೆ ಕಾಂಗ್ರೆಸ್‌. ಕಾಂಗ್ರೆಸ್‌ ಪ್ರಣಾಳಿಕೆಯ “ಬಜರಂಗದಳ ನಿಷೇಧ’ ವಿಷಯ ಕೊನೇ ಹೊತ್ತಿನಲ್ಲಿ ಬಿಜೆಪಿಗೆ ಆನಾಯಾಸವಾಗಿ ಸಿಕ್ಕಿರುವ ಅಸ್ತ್ರ. ಹಾಗಾಗಿ ಅಭಿವೃದ್ಧಿಯ ಜತೆ ಭಾವನಾತ್ಮಕ ಸಂಗತಿಗಳೂ ಫ‌ಲಿತಾಂಶ ನಿರ್ಣಯದಲ್ಲಿ ಪಾಲು ಪಡೆಯುವುದು ಖಚಿತ.
ಜೆಡಿಎಸ್‌ನ ಡಾ| ಅಮರಶ್ರೀ ಅಮರನಾಥ ಶೆಟ್ಟಿ ಅವರು ತಮ್ಮ ತಂದೆ ಮಾಜಿ ಶಾಸಕ ದಿ| ಕೆ. ಅಮರನಾಥ ಶೆಟ್ಟಿ ಅವರ ವರ್ಚಸ್ಸಿನಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಉಳಿದವರು ಫ‌ಲಿತಾಂಶ ನಿರ್ಣಯದಲ್ಲಿ ಪಾತ್ರ ವಹಿಸುವ ಸಾಧ್ಯತೆ ತೀರಾ ಕಡಿಮೆ.

ಕಣದಲ್ಲಿರುವ ಅಭ್ಯರ್ಥಿಗಳು 8
-  ಉಮಾನಾಥ ಕೋಟ್ಯಾನ್‌ (ಬಿಜೆಪಿ)
-  ಮಿಥುನ್‌ ರೈ (ಕಾಂಗ್ರೆಸ್‌)
-  ಡಾ| ಅಮರಶ್ರೀ ಅಮರನಾಥ ಶೆಟ್ಟಿ (ಜೆಡಿಎಸ್‌)
-  ವಿಜಯನಾಥ ವಿಠ್ಠಲ ಶೆಟ್ಟಿ (ಎಎಪಿ)
-  ಆಲೊ#àನ್ಸ್‌ ಫ್ರಾಂಕೋ (ಎಸ್‌ಡಿಪಿಐ)
-  ದಯಾನಂದ (ಕರ್ನಾಟಕ ರಾಷ್ಟ್ರ ಸಮಿತಿ )
-  ಈಶ್ವರ ಎಸ್‌. ಮೂಡುಶೆಡ್ಡೆ (ಪಕ್ಷೇತರ)
-  ದುರ್ಗಾ ಪ್ರಸಾದ್‌ (ಪಕ್ಷೇತರ)

ಲೆಕ್ಕಾಚಾರ ಏನು?
ಈ ಬಾರಿ ಎರಡೂ ಪಕ್ಷಗಳಿಗೂ ಜಿದ್ದಾ ಜಿದ್ದಿಯ ಪೈಪೋಟಿ ಇದೆ. ಬಿಜೆಪಿ ಮರಳಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ದ್ದರೂ ಹಿಂದಿನ ಬಾರಿಗಿಂತ ಕೊಂಚ ಹೆಚ್ಚಿನ ಶ್ರಮ ಹಾಕಬೇಕಾದ ಸ್ಥಿತಿ ಇದೆ. ಕಾಂಗ್ರೆಸ್‌ ಗೆ 2013 ರ ಗೆಲುವೇ ಸ್ಫೂರ್ತಿ. ಭವಿಷ್ಯದ ಕನಸುಗಳನ್ನು ಮನವರಿಕೆ ಮಾಡಿ ಮತಗಳನ್ನಾಗಿಸುವುದೇ ದೊಡ್ಡ ಸವಾಲು.

– ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.