karnataka polls 2023;ಮತದಾನದಲ್ಲಿ ಮಹಿಳೆಯರೇ ಮುಂದು !


Team Udayavani, Apr 7, 2023, 4:27 PM IST

karnataka polls 2023;ಮತದಾನದಲ್ಲಿ ಮಹಿಳೆಯರೇ ಮುಂದು !

ಉಡುಪಿ: ಕಳೆದ 2 ವಿಧಾನಸಭೆ ಚುನಾವಣೆಗಳಲ್ಲಿ ಮಹಿಳಾ ಮತ ದಾರರ ಪಾಲ್ಗೊಳ್ಳುವಿಕೆ ಗಣನೀಯ ಏರಿಕೆಯಾಗಿದೆ. 2013ರ ಚುನಾ ವಣೆಯಲ್ಲಿ ಶೇ.76.71ರಷ್ಟಿದ್ದ ಮಹಿಳಾ ಮತದಾನ ಪ್ರಮಾಣ, 2018ರಲ್ಲಿ ಶೇ.80.45ಕ್ಕೆ ಏರಿಕೆಯಾಗಿತ್ತು.

2008ರ ಲೋಕಸಭಾ ಚುನಾ ವಣೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 4,09,721 ಮಂದಿ ಮಹಿಳಾ ಮತ ದಾರರ ಪೈಕಿ 3,13,819 ಮಂದಿ ಮತ ಚಲಾಯಿಸಿದ್ದರು. 2013ರ ಚುನಾವಣೆಯಲ್ಲಿ 4,60,738 ಮಂದಿ ಮಹಿಳಾ ಮತದಾರರ ಪೈಕಿ 3,53,841 ಮಂದಿ ಮತ ಚಲಾಯಿಸಿದ್ದರು. 2018ರ ಚುನಾವಣೆಯಲ್ಲಿ 5,15,062 ಮಹಿಳಾ ಮತದಾರರ ಪೈಕಿ 4,14,391 ಮಂದಿ ಮತ ಚಲಾಯಿಸಿದ್ದರು. 2013ರಲ್ಲಿ ಶೇ.76.71 ಮಹಿಳೆಯರು ಹಾಗೂ ಶೇ.75.55 ಪುರುಷ ಮತದಾರರು ಮತದಾನ ಮಾಡಿದ್ದರು. 2018ರಲ್ಲಿ ಶೇ.80.45ರಷ್ಟು ಮಹಿಳೆಯರು ಹಾಗೂ ಶೇ.77.14ರಷ್ಟು ಪುರುಷರು ಮತದಾನ ಮಾಡಿದ್ದರು.

ಮಹಿಳೆಯ ಮತ ಪ್ರಮಾಣ ಒಂದೇ ಚುನಾವಣೆಯಲ್ಲಿ ಶೇ.4ಕ್ಕೂ ಹೆಚ್ಚಿದರೆ, ಪುರುಷ ಮತ ಪ್ರಮಾಣ ಶೇ. 2ರಷ್ಟು ಹೆಚ್ಚಿದೆ. ಈ ಬಾರಿಯೂ ಮಹಿಳೆಯರ ಮತ ಪ್ರಮಾಣ ಹೆಚ್ಚುವಸಾಧ್ಯತೆಯಿದೆ.

ಅಧಿಕ ಮಹಿಳಾ ಮತದಾರರು
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 5,32,787 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿಗಿಂತ 17,725 ಮಂದಿ ಅಧಿಕ. ಬೈಂದೂರಿನಲ್ಲಿ 4,703, ಕುಂದಾಪುರ 3,974, ಉಡುಪಿ 4,030, ಕಾಪು 1,283, ಕಾರ್ಕಳ 3,735 ಮಂದಿ ಕಳೆದ ಬಾರಿಗಿಂತ ಅಧಿಕ ಮಹಿಳಾ ಮತದಾರರಿರುವುದು ವಿಶೇಷ.

ಶೇಖಡವಾರು ಹೆಚ್ಚಳ
2018ರ ಚುನಾವಣೆಯಲ್ಲಿ ಒಟ್ಟು 9,93,415 ಮಂದಿ ಮತದಾರರ ಪೈಕಿ 4,78,329 ಮಂದಿ ಪುರುಷ ಮತದಾರರು. 5,15,062 ಮಂದಿ ಮಹಿಳಾ ಮತದಾರರಿದ್ದರು. ಈ ಪೈಕಿ ಶೇ.77.14 ಮಂದಿ ಪುರುಷರು ಮತದಾನ ಮಾಡಿದ್ದರೆ, ಶೇ.80.45 ಮಂದಿ ಮಹಿಳೆಯರು ಮತದಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ನಡೆದ ಒಟ್ಟು ಮತದಾನ ಶೇ.78.86. 2013ರಲ್ಲಿ ನಡೆದ ಮಹಿಳಾ ಮತದಾನ ಶೇ. 76.71. 2018ರಲ್ಲಿ ನಡೆದ ಮಹಿಳಾ ಮತದಾನ ಶೇ.80.45.

ಬೈಂದೂರಿನಲ್ಲಿ ಗರಿಷ್ಠ
ಈ ಬಾರಿ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ 1,18,962 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ ಬೈಂದೂರಿನಲ್ಲಿದ್ದ ಮಹಿಳಾ ಮತದಾರರ ಸಂಖ್ಯೆ 1,14,259. ಮಹಿಳಾ ಮತದಾನ ಶೇ.82.78. ಕುಂದಾಪುರದಲ್ಲಿ ಈ ಬಾರಿ 1,07,625 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 1,03,648 ಮಂದಿ ಮಹಿಳಾ ಮತದಾರರಿದ್ದರು. ದಾಖ ಲಾದ ಮತದಾನ ಶೇ.80.53. ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ 1,10,945 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 1,06,913 ಮಂದಿ ಮತದಾರರಿದ್ದು, ದಾಖಲಾದ ಮತದಾನ ಶೇ.78.14. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 97,233 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 95,948 ಮಂದಿ ಮತದಾರರಿದ್ದರು. ದಾಖಲಾದ ಶೇಕಡಾವಾರು ಮತದಾನ 79.83. ಕಾರ್ಕಳದಲ್ಲಿ ಈ ಬಾರಿ 98,030 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 94,294 ಮಂದಿ ಮಹಿಳಾ ಮತದಾರರಿದ್ದು, ದಾಖಲಾದ ಮತದಾನ ಶೇ.80.81.

 ಪುನೀತ್‌ ಸಾಲ್ಯಾನ್‌

 

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.