karnataka polls 2023; ಮರಗಳಿದ್ದರೂ ಹಾರಲಿಕ್ಕೆ ರೆಂಬೆ-ಕೊಂಬೆಗಳೇ ಕಡಿಮೆ
Team Udayavani, Apr 8, 2023, 3:38 PM IST
ಮಂಗಳೂರು: ಒಂದು ಪಕ್ಷದಲ್ಲಿ ಭಿನ್ನಾಭಿಪ್ರಾಯ ಜೋರಾ ದಾಗ ನಾಯಕನೊಬ್ಬ ಆ ಪಕ್ಷಕ್ಕೆ ವಿದಾಯ ಹೇಳಿ ಇನ್ನೊಂದು ಪಕ್ಷ ಸೇರುವುದು, ಅಥವಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ರಾಜ್ಯದಲ್ಲಿ ಈಗೀಗ ಸಾಮಾನ್ಯ.
ಈ ಚುನಾವಣೆ ಸಂದರ್ಭದಲ್ಲಂತೂ ಅವಕಾಶವಾದಿಗಳಾಗಿ ಗೋಚರಿಸುವ ರಾಜಕಾರಣಿಗಳು ಸಾಕಷ್ಟು ಮಂದಿ ಇದ್ದಾರೆ. ಕೆಲವರು ಅಸಮಾಧಾನವನ್ನು ಚುನಾ ವಣೆ ಸಂದರ್ಭದಲ್ಲಿ ಪಕ್ಷಾಂತರ ಮಾಡುವ ಮೂಲಕ ಹೊರಹಾಕುತ್ತಾರೆ.
ಹಾಗೆ ನೋಡಿದರೆ ಹಿಂದಿನಿಂದಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷಾಂತರ ಇಲ್ಲವೇ ಇಲ್ಲ ಎಂದಲ್ಲ, ಆದರೆ ಅಂತಹ ಬೆಳವಣಿಗೆಗಳು ಅಪರೂಪ. ಬರುತ್ತಾ ಬರುತ್ತಾ ಎರಡೇ ಪಕ್ಷಗಳ ನೇರ ಹೋರಾಟದ ಕಣವಾಗಿ ಮಾರ್ಪಟ್ಟಿರುವ ಇಲ್ಲಿ ಸೈದ್ಧಾಂತಿಕವಾಗಿ ಒಂದು ಪಕ್ಷವನ್ನು ಒಪ್ಪಿಕೊಂಡವರು ಮತ್ತೆ ಅದರಿಂದ ಹೊರಗೆ ಬರುವುದು ಕಷ್ಟ. ಹಾಗಾಗಿ ಈಚೆಗಿನ ವರ್ಷಗಳಲ್ಲಿ ಪಕ್ಷಾಂತರ ರಾಜಕೀಯ ಕಡಿಮೆ.
ಬೆಳ್ತಂಗಡಿಯಲ್ಲೇ ಇಬ್ಬರು
ಪ್ರಮುಖವಾಗಿ ನೋಡಿದರೆ ಬೆಳ್ತಂಗಡಿಯ ಹಿರಿಯ ರಾಜ ಕಾರಣಿ ವಸಂತ ಬಂಗೇರ 3 ಪಕ್ಷಗಳಲ್ಲಿ ಈಜಿದವರು. ಆರಂಭದಲ್ಲಿ ಬಿಜೆಪಿಯಲ್ಲಿದ್ದು ಸ್ಪರ್ಧಿಸಿ ಶಾಸಕರಾದವರು. 1983 ಹಾಗೂ 1985ರಲ್ಲಿ ಎರಡು ಬಾರಿ ಬಿಜೆಪಿಯನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿ ದವರು. ಆ ಬಳಿಕ ಬಿಜೆಪಿಯಿಂದ ಹೊರಗೆ ಬಂದು ಜನತಾ ಪರಿವಾರ ಸೇರಿದರು. 1989ರಲ್ಲಿ ಜನತಾ ದಳದಿಂದ ಸ್ಪರ್ಧಿ ಸಿದರೂ ಗೆಲುವು ದಕ್ಕಲಿಲ್ಲ, ಆದರೆ 1994ರಲ್ಲಿ ಮತ್ತೆ ಅದೇ ಪಕ್ಷದಲ್ಲಿದ್ದು ಗೆದ್ದು ಬಂದರು. 1999ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. 2004ರಲ್ಲೂ ಜೆಡಿಎಸ್‌ನಿಂದಲೇ ಮತ್ತೆ ಸ್ಪರ್ಧೆ, 3ನೇ ಸ್ಥಾನಕ್ಕೇ ತೃಪ್ತಿ. 2008ರಲ್ಲಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿ ಮತ್ತೆ ಶಾಸಕರಾದರು. 2013ರಲ್ಲೂ ಅಲ್ಲೇ ಶಾಸಕರಾದರು.
ಇನ್ನು ಅವರದ್ದೇ ಕ್ಷೇತ್ರದವರು, ಮಾಜಿ ಸಚಿವ ಗಂಗಾಧರ ಗೌಡರೂ ಕಾಂಗ್ರೆಸ್‌ನಲ್ಲಿದ್ದು 1978, 1989 ಎರಡು ಬಾರಿ ಶಾಸಕರಾದವರು. ಆದರೆ 2008ರಲ್ಲಿ ಜೆಡಿಎಸ್ ಸೇರಿ ಸ್ಪರ್ಧಿಸಿ, ಅವರೂ ತೃತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬಳಿಕ 2013ರ ವೇಳೆಗೆ ಬಿಜೆಪಿ ಸೇರಿದ ಅವರ ಪುತ್ರ ರಂಜನ್ ಗೌಡ ಸ್ಪರ್ಧಿಸಿ ಸೋತರು. ಬಳಿಕ ರಂಜನ್ ರಾಜಕೀಯದಲ್ಲಿ ಸಕ್ರಿಯರಾಗಿಲ್ಲ, ಗಂಗಾಧರ ಗೌಡ ಮತ್ತೆ ಕಾಂಗ್ರೆಸ್ ಸೇರಿ ಸಕ್ರಿಯರಾಗಿದ್ದಾರೆ.
ಶಕುಂತಳಾ ಶೆಟ್ಟಿ
ಈಚೆಗಿನ ರಾಜಕೀಯದಲ್ಲಿ ಮತ್ತೂಂದು ಪಕ್ಷಾಂತರದ ಉದಾಹರಣೆ ಶಕುಂತಳಾ ಶೆಟ್ಟಿ. ಪ್ರಬಲ ಹಿಂದುತ್ವದೊಂದಿಗೆ ಬಿಜೆಪಿ ಶಾಸಕಿಯಾಗಿ ಪುತ್ತೂರಿನಿಂದ 2004ರಲ್ಲಿ ಗೆದ್ದು ಬಂದವರು. 2008ರಲ್ಲಿ ಟಿಕೆಟ್ ಸಿಗದಿದ್ದಾಗ ತಮ್ಮ ರಾಜಕೀಯ ಗುರು ಮಾಜಿ ಶಾಸಕ ಉರಿಮಜಲು ರಾಮ ಭಟ್ಟರ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿದರೂ ಯಶಸ್ವಿಯಾಗಲಿಲ್ಲ. ಮತ್ತೆ ಶಕುಂತಳಾ ಶೆಟ್ಟಿ ಸೇರಿದ್ದು ಕಾಂಗ್ರೆಸ್ ಪಾಳಯವನ್ನು. 2013ರಲ್ಲಿ ಶಕುಂತಳಾ ಶೆಟ್ಟರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾದರು. 2018ರಲ್ಲಿ ಸೋತಿದ್ದಾರೆ, ಈ ಬಾರಿಯೂ ಕಣದಲ್ಲಿ ಆಕಾಂಕ್ಷಿಯಾಗಿದ್ದಾರೆ.
ಬಿ. ನಾಗರಾಜ ಶೆಟ್ಟಿ
ಉಳಿದಂತೆ ಪ್ರಮುಖರು ಪಕ್ಷಾಂತರವಾಗಿದ್ದು, ಆಗಿ ಯಶಸ್ಸು ಕಂಡಿದ್ದು ಕಡಿಮೆ. ಬಿಜೆಪಿಯಲ್ಲಿ ಸಚಿವರಾಗಿದ್ದ ಬಿ.ನಾಗರಾಜ ಶೆಟ್ಟಿಯವರು ಬಿಜೆಪಿಯಲ್ಲಿ ಅಸಮಾಧಾನಗೊಂಡು ಜೆಡಿಎಸ್‌ಗೆ 2012ರಲ್ಲಿ ಸೇರ್ಪಡೆಯಾದರು. ಆದರೆ ಅಲ್ಲಿನ ರಾಜಕೀಯಕ್ಕೆ ಬೇಸತ್ತು ಮರುವರ್ಷವೇ ರಾಜೀನಾಮೆ ಕೊಟ್ಟರು. ಮತ್ತೆ
ಬಿಜೆಪಿಗೆ ಸೇರಿದರು.
ವೇಣುವಿನೋದ್ ಕೆ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.