ಬಿಜೆಪಿ ಕಟ್ಟಿ ಬೆಳೆಸಿದ ಈಶ್ವರಪ್ಪ ವಿದಾಯ: ಮುಂದಿನ ಅಭ್ಯರ್ಥಿ ಯಾರು?
Team Udayavani, Apr 12, 2023, 6:45 AM IST
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕರ ಪೈಕಿ ಒಬ್ಬರಾದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಚುನಾವಣ ರಾಜಕಾರಣಕ್ಕೆ ಸ್ವಯಂ ನಿವೃತ್ತಿ ಘೋಷಿಸು ವುದರೊಂದಿಗೆ ಸುಮಾರು 45 ವರ್ಷಗಳ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.
ಯಡಿಯೂರಪ್ಪ, ಈಶ್ವರಪ್ಪ ಹಾಗೂ ದಿ| ಅನಂತ್‌ಕುಮಾರ್ ಬಿಜೆಪಿಯ ತ್ರಿಮೂರ್ತಿ ಗಳೆಂದೇ ರಾಜಕೀಯ ವಲಯದಲ್ಲಿ ಗುರುತಿಸ ಲ್ಪಟ್ಟವರು. ಎಬಿವಿಪಿ ಕಾಲದಿಂದ ಹೋರಾಟದ ಮುಂಚೂಣಿಯಲ್ಲಿದ್ದ ಈಶ್ವರಪ್ಪ , ಶಿವಮೊಗ್ಗದ ವಿಎಚ್‌ಪಿ ಮುಖಂಡ ನರಸಿಂಹ ಮೂರ್ತಿ ಅಯ್ಯಂಗಾರ್ ಅವರಿಂದ ಆರ್‌ಎಸ್‌ಎಸ್‌ಗೆ ಪರಿಚಯಿಸಲ್ಪಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕರಾಗಿಯೂ ಕೆಲಸ ಮಾಡಿರುವ ಈಶ್ವರಪ್ಪ ಇಂದಿಗೂ ಸಂಘ ಹಾಕಿದ ಗೆರೆಯನ್ನು ದಾಟದ ವ್ಯಕ್ತಿ ಎಂದೇ ಗುರುತಿಸಿಕೊಂಡವರು.
ತಮ್ಮ ಹೇಳಿಕೆಗಳಿಂದ ಇತ್ತೀಚಿನ ವರ್ಷಗಳಲ್ಲಿ ವಿವಾದಾತ್ಮಕ ವ್ಯಕ್ತಿ ಎಂದು ಈಶ್ವರಪ್ಪ ಗುರುತಿಸಲ್ಪಟ್ಟಿದ್ದರೂ ಆರಂಭಿಕ ದಿನಗಳಲ್ಲಿ ಅವರು ರಾಷ್ಟ್ರೀಯವಾದಿ ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಹೋರಾಟ ನಡೆಸಿದ ಕಾರಣಕ್ಕಾಗಿ 1975ರಿಂದ 77ರ ವರೆಗೆ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸಿದ ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿಯವರ ಜತೆ ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಾಟ ನಡೆಸಿದ ಹೋರಾಟಗಾರರ ಪೈಕಿ ಒಬ್ಬರಾಗಿದ್ದರು. ಈ ಕಾರಣಕ್ಕಾಗಿ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಈಶ್ವರಪ್ಪನವರನ್ನು “ಮೇರೆ ಪುರಾನಿ ಸಾಥಿ’ ಎಂದು ಅಕ್ಕರೆಯಿಂದ ಕರೆದಿದ್ದರು. ಬಿಜೆಪಿಯ ಹಿಂದು ಳಿದ ವರ್ಗದ ಪ್ರಬಲ ನಾಯಕರಾಗಿದ್ದ ಈಶ್ವರಪ್ಪ ಕಳೆದೊಂದು ವರ್ಷದಿಂದ ರಾಜಕಾರಣದ ಕವಲು ದಾರಿಯಲ್ಲಿ ನಿಂತಿದ್ದರು. ಪಕ್ಷದ ಆಂತರಿಕ ನೀತಿಯ ಭಾಗವಾಗಿ ಅವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.
ಪಕ್ಷ ಸಂಘಟನೆ: 1982ರಲ್ಲಿ ಭಾರತೀಯ ಜನತಾ ಪಕ್ಷದ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿ ಕೊಂಡ ಅವರು ಶಿವಮೊಗ್ಗ ನಗರ ಘಟಕದ ಅಧ್ಯಕ್ಷರಾದರು. 1989ರಲ್ಲಿ ವಿಧಾನಸಭಾ ಚುನಾ ವಣೆಗೆ ಶಿವಮೊಗ್ಗದಿಂದ ಮೊದಲ ಬಾರಿಗೆ ಕಣಕ್ಕಿಳಿದ ಅವರು, ಆ ಕಾಲದ ಕಾಂಗ್ರೆಸ್ “ಹೆವಿವೇಟ್’ ಮಾಜಿ ಆರೋಗ್ಯ ಕೆ.ಎಚ್.ಶ್ರೀನಿ ವಾಸ್ ಅವರನ್ನು ಸೋಲಿಸುವ ಮೂಲಕ ಶುಭಾ ರಂಭ ಮಾಡಿದರು. 1992ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. ಆದರೆ 1999ರ ಚುನಾವಣೆಯಲ್ಲಿ ಸೋಲನುಭವಿಸಬೇಕಾ ಯಿತು. ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಿಲ್ಕ್ ಬೋರ್ಡ್ ಅಧ್ಯಕ್ಷರಾ ಗಿಯೂ ಸೇವೆ ಸಲ್ಲಿಸಿದ ಈಶ್ವರಪ್ಪ, ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದಲ್ಲಿ ಜಲಸಂಪ ನ್ಮೂಲ ಸಚಿವರಾಗಿ, ಅನಂತರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದರು. 2010ರಲ್ಲಿ ವರಿಷ್ಠರ ಸೂಚನೆ ಪ್ರಕಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಿಯುಕ್ತಿ ಗೊಂಡರು. ಆ ಬಳಿಕ ನಡೆದ ರಾಜಕೀಯ ಸ್ಥಿತ್ಯಂತ ರದಲ್ಲಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ಕಂದಾಯ ಇಲಾಖೆ ಯಂಥ ಮಹತ್ವದ ಹುದ್ದೆ ನಿಭಾಯಿಸಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರೂ 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಮೇಲ್ಮನೆ ವಿಪಕ್ಷ ನಾಯಕನಾಗಿ ನೇಮಕಗೊಂಡಿದ್ದು, ಈಶ್ವರಪ್ಪನವರ ಮೇಲೆ ವರಿಷ್ಠರು ಇಟ್ಟ ನಂಬಿಕೆಗೆ ಸಾಕ್ಷಿ. ಯಡಿಯೂರಪ್ಪ ಮರಳಿ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ರಾಯಣ್ಣ ಬ್ರಿಗೇಡ್ ಮೂಲಕ ಆಗಾಗ ಟಕ್ಕರ್ ಕೊಟ್ಟ ಈಶ್ವರಪ್ಪ 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಗೆಲುವು ಕಂಡರು. ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಖಾತೆಯನ್ನು ಯಶಸ್ವಿಯಾಗಿಯೇ ನಿರ್ವ ಹಿಸಿದ ಅವರು, ಬೊಮ್ಮಾಯಿ ಸಂಪುಟದಲ್ಲೂ ಅದೇ ಖಾತೆಯಲ್ಲಿ ಮುಂದುವರಿದರು. ಆದರೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮಾತ್ರ ಅವರ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ತನಿಖೆಯಲ್ಲಿ ಈಶ್ವರಪ್ಪಗೆ ಕ್ಲೀನ್‌ಚಿಟ್ ಸಿಕ್ಕರೂ ಮರಳಿ ಸಂಪುಟ ಸೇರಿ ರಾಜಕೀಯ ನಿವೃತ್ತಿಯಾಗುವ ಆಸೆ ಕೈಗೂಡಲಿಲ್ಲ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಮೊದಲಿನಿಂದಲೂ ಸ್ಪಷ್ಟತೆ ಹೊಂದಿರದ ಅವರು, ತಮ್ಮ ಪುತ್ರನಿಗೆ ಟಿಕೆಟ್ ಕೊಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದರು. 80 ವರ್ಷವಾದರೂ ರಾಜಕಾರಣದಲ್ಲಿ ಇರಬೇಕೇನ್ರಿ ? ಎಂದು ಪ್ರಶ್ನಿಸುತ್ತಿದ್ದ ಈಶ್ವರಪ್ಪನವರ ನಡೆ ಪಕ್ಷದ ಇನ್ನಿತರ ಹಿರಿಯರಿಗೆ ಮಾದರಿಯಾಗುವ ಸಾಧ್ಯತೆ ಇದ್ದು, ಸುಮಾರು 45 ವರ್ಷಗಳ ವರ್ಣರಂಜಿತ ಹಾಗೂ ಹೋರಾಟದ ರಾಜಕಾರಣ ಯಡಿಯೂ ರಪ್ಪನವರ ಜತೆಗೇ ನೇಪಥ್ಯಕ್ಕೆ ಸರಿದಿದೆ.
ಅಭ್ಯರ್ಥಿ ಯಾರು?
ಈಶ್ವರಪ್ಪ ಅವರೇನೋ ಕಣದಿಂದ ಹಿಂದೆ ಸರಿದರು. ಆದರೆ ಆ ಕ್ಷೇತ್ರದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲಕ್ಕೆ ಮೊದಲ ಪಟ್ಟಿಯಲ್ಲಿ ಉತ್ತರ ಸಿಕ್ಕಿಲ್ಲ. ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ಅವರಿಗಾಗಿ ನಿವೃತ್ತಿ ಘೋಷಿಸಿದರು ಎಂದು ಹೇಳಲಾಗಿತ್ತಾದರೂ ಮೊದಲ ಪಟ್ಟಿಯಲ್ಲಿ ಹೆಸರನ್ನು ಘೋಷಿಸಿಲ್ಲ. ಇನ್ನೊಂದೆಡೆ ವಿಪ ಸದಸ್ಯ ಆಯನೂರು ಮಂಜುನಾಥ್ ಬಂಡೆದಿದ್ದರು.
ಶಿವಮೊಗ್ಗ ಕಣದಲ್ಲಿ ತ್ರಿಮೂರ್ತಿಗಳಿಲ್ಲ
ಶಿವಮೊಗ್ಗ: ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ, ಡಿ.ಎಚ್.ಶಂಕರ ಮೂರ್ತಿ ಇಲ್ಲದ ರಾಜಕೀಯ ಚಿತ್ರಣ ನೆನಪಿಸಿಕೊಳ್ಳಲು ಅಸಾಧ್ಯ. ಈಗಾಗಲೇ ಡಿ.ಎಚ್.ಶಂಕರಮೂರ್ತಿ ತೆರೆಗೆ ಸರಿದಿದ್ದು, ಬಿಎಸ್‌ವೈ ಕೂಡ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಈಗ ಈಶ್ವರಪ್ಪ ಕೂಡ ಅದೇ ಹಾದಿಯಲ್ಲಿ ಸಾಗಲು ಮುಂದಾಗಿದ್ದು, ಜಿಲ್ಲೆಯ ಪಾಲಿಗೆ ದೊಡ್ಡ ಹಿನ್ನಡೆಯಂತಿದೆ. 4 ದಶಕಗಳಿಂದ ಸೈಕಲ್ ತುಳಿದು ಪಕ್ಷ ಕಟ್ಟಿ ರಾಜ್ಯದಲ್ಲಿ ಅಧಿಕಾರ ಹಿಡಿಯುವವರೆಗೂ ಶಿವಮೊಗ್ಗದ ಈ ಮೂವರು ನಾಯಕರ ಕೊಡುಗೆ ಅಪಾರ. ಮೂರೂ ನಾಯಕರ ಚುನಾವಣೆ ನಿವೃತ್ತಿ ಬಳಿಕ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದು ಕಾಲವೇ ನಿರ್ಧರಿಸಲಿದೆ.
ಹಿಂದೂ ಹುಲಿ, ಪಕ್ಷದ ಕಟ್ಟಾಳು ಎಂದೇ ಕರೆಸಿಕೊಂಡಿರುವ ಈಶ್ವರಪ್ಪ ಇಲ್ಲದ ಶಿವಮೊಗ್ಗ ನಗರದ ಚುನಾವಣೆಯನ್ನು ಕನಸಲ್ಲೂ ಊಹಿಸುವುದು ಕಷ್ಟ. 1989ರಲ್ಲಿ ಕಾಂಗ್ರೆಸ್‌ನ ಪ್ರಬಲ ಶಾಸಕರಾಗಿದ್ದ ಕೆ.ಎಚ್.ಶ್ರೀನಿವಾಸ್‌ರನ್ನು ಮಣಿಸಿ ತಾವೊಬ್ಬ ಉತ್ತಮ ಸಂಘಟನಾ ಚತುರ, ರಾಜಕಾರಣಿ ಎಂದು ಈಶ್ವರಪ್ಪ ತೋರಿಸಿಕೊಟ್ಟಿದ್ದರು. ಅಲ್ಲಿಂದ ಶುರುವಾಗಿದ್ದೆ ಗೆಲುವಿನ ಓಟ. ಶಾಸಕರು ಕೈಗೆ ಸಿಗುವುದೇ ಕಷ್ಟ. ಸಿಕ್ಕರೂ ಕೆಲಸ ಆಗುವುದು ಇನ್ನೂ ಕಷ್ಟ ಎಂಬಂತಹ ದಿನಗಳಲ್ಲಿ ಈಶ್ವರಪ್ಪ, ಜನಸಾಮಾನ್ಯರ ನಡುವಿನ ಶಾಸಕರಾಗಿ ಗಮನ ಸೆಳೆದರು. ಏನಣ್ಣಾ’ ಎಂದು ಹೆಗಲ ಮೇಲೆ ಕೈ ಹಾಕಿ, ಆತ್ಮೀಯತೆಯಿಂದ ಮಾತನಾಡಿಸುವ ಶಾಸಕರಾಗಿ ಅಚ್ಚರಿ ಮೂಡಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಎರಡು ಬಾರಿ ಮಾತ್ರ ಸೋತಿದ್ದು ಬಿಟ್ಟರೆ ಶಿವಮೊಗ್ಗದಂತಹ ಕ್ಷೇತ್ರವನ್ನು ಗೆದ್ದಿದ್ದು ಅವರ ಚಾಣಕ್ಯತನದಿಂದ ಮಾತ್ರ.
ಒಮ್ಮೊಮ್ಮೆ ಏನೋ ಮಾತನಾಡಿ ಎಷ್ಟೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡರೂ ಅದಕ್ಕೆ ತಲೆಕೆಡಿಸಿಕೊಂಡವರಲ್ಲ. ಪಕ್ಷ ತಾಯಿ ಇದ್ದಂತೆ ಎನ್ನುತ್ತಿದ್ದ ಅವರು ಕೊನೆವರೆಗೂ ಅದೇ ರೀತಿ ನಡೆದುಕೊಂಡಿದ್ದು ರಾಜಕೀಯದಲ್ಲಿ ಒಂದು ಅಚ್ಚರಿ. ಈಗ ಚುನಾವಣ ರಾಜಕೀಯದಿಂದ ದೂರ ಸರಿಯುವ ನಿರ್ಧಾರದಿಂದಲೂ ಈಶ್ವರಪ್ಪ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.