Karnataka Poll: ಮೋದಿ ಸಮಾವೇಶಕ್ಕೆ ಕೊಲ್ನಾಡಿನಲ್ಲಿ ಭರದ ಸಿದ್ಧತೆ
ಮೇ 3: ಬಿಜೆಪಿ ಬೃಹತ್ ಚುನಾವಣ ಸಮಾವೇಶ
Team Udayavani, Apr 26, 2023, 8:20 AM IST
ಮಂಗಳೂರು: ಚುನಾವಣೆಯ ಕಾವು ಕರಾವಳಿಯಲ್ಲಿ ಹೆಚ್ಚಾಗುತ್ತಿದ್ದಂತೆ ಅಬ್ಬರದ ಪ್ರಚಾರಕ್ಕೆ ಪಕ್ಷಗಳು ಅಣಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಕರಾವಳಿಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಬಿಜೆಪಿ ಪಾಳಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸಮಾವೇಶ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಲಾ°ಡಿನಲ್ಲಿ ನಡೆಯಲಿದ್ದು, ಸಕಲ ತಯಾರಿ ಭರದಿಂದ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿಯ ಕೊಲ್ನಾಡು ಬಸ್ ತಂಗುದಾಣದ ಬಳಿಯ ಗದ್ದೆ ಪ್ರದೇಶವನ್ನು ಶನಿವಾರದೊಳಗೆ ಸಮತಟ್ಟು ಮಾಡಿ ಸಮಾವೇಶಕ್ಕೆ ಸಜ್ಜುಗೊಳಿಸಲಾಗುತ್ತದೆ. ಸಭಾಂಗಣ, ವಾಹನ ನಿಲುಗಡೆಗೆ 50 ಎಕ್ರೆ ಮೀಸಲಿಡಲಾಗಿದ್ದು, 2 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಜರ್ಮನ್ ಮಾದರಿ ಪೆಂಡಾಲ್
ಜರ್ಮನ್ ಮಾದರಿಯ ಪೆಂಡಾಲ್ ಅಳ ವಡಿಸಲು ಮುಂಬಯಿ ಮೂಲದ ಸಂಸ್ಥೆಯ ಪ್ರಮುಖರು ಬುಧವಾರ ಸ್ಥಳ ಪರಿಶೀಲಿಸಿ ಕೆಲಸ ಆರಂಭಿಸುವರು. ಸುಮಾರು 300 ಮೀ. ಉದ್ದ, 100-150 ಮೀ. ಅಗಲದ ಪೆಂಡಾಲ್ ನಿರ್ಮಾಣವಾಗಲಿದೆ. ಪ್ರವಾಸ ಪಟ್ಟಿ ಅಂತಿಮವಾದ ಬಳಿಕ ಪ್ರಧಾನಿ ಭದ್ರ ತೆಯ ಎಸ್‌ಪಿಜಿಯವರು ಸಮಾವೇಶದ ಸ್ಥಳ ಪರಿಶೀಲಿಸಿ ಮಾರ್ಪಾಡು ಸೂಚಿಸುವರು.
ಸಮಾವೇಶ ಸ್ಥಳಕ್ಕೆ ಸಾರ್ವಜನಿಕರಿಗೆ, ವಿಐಪಿ, ವಿವಿಐಪಿ ಮತ್ತು ಮೋದಿಯವರ ಪ್ರವೇಶಕ್ಕೆ ಪ್ರತ್ಯೇಕ ರಸ್ತೆಗಳನ್ನು ನಿರ್ಮಿಸ ಲಾಗುತ್ತಿದೆ. ಮಂಗಳೂರು ಹಾಗೂ ಉಡುಪಿ ಕಡೆಯಿಂದ ಆಗಮಿಸುವವರಿಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಮೈದಾನದ ಪಕ್ಕದಲ್ಲಿ ಮತ್ತು ಆಸುಪಾಸಿನಲ್ಲಿ ಮಾಡಲಾಗುತ್ತಿದೆ.
ಪ್ರತ್ಯೇಕ ಹೆಲಿಪ್ಯಾಡ್
ಕೊಲ್ನಾಡಿನಲ್ಲಿ ಕಳೆದ ವರ್ಷ ಕೃಷಿ ಮೇಳ ಆಯೋಜನೆಗೊಂಡಿದ್ದ ಸ್ಥಳದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. 3 ಕಾಪ್ಟರ್‌ಗಳ ಅವತರಣಕ್ಕೆ ವ್ಯವಸ್ಥೆ ಮಾಡಬೇಕಿದೆ. ಈ ಮಧ್ಯೆ ಪರ್ಯಾಯವಾಗಿ ಎನ್‌ಎಂಪಿಎ ಹೆಲಿಪ್ಯಾಡನ್ನು ಬಳಸುವ ಚಿಂತನೆಯೂ ಇದೆ. ಇಲ್ಲಿಂದ ಸಮಾವೇಶ ಸ್ಥಳಕ್ಕೆ 16 ಕಿ.ಮೀ. ಅಂತರವಿದೆ.
ಸಂಚಾರ ವ್ಯತ್ಯಯ ಸಂಭವ
ಸಮಾವೇಶದ ಸಂದರ್ಭ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವ್ಯತ್ಯಯವಾಗಲಿದೆ. ಪೂರ್ವಾಹ್ನ 11ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದು, ಬೆಳಗ್ಗೆ 7ರಿಂದಲೇ ವಾಹನಗಳ ಸಂಚಾರವನ್ನು ನಿರ್ಬಂಧಿಸಬಹುದು. ಮಂಗಳೂರಿನಿಂದ ಉಡುಪಿಯತ್ತ ಹೋಗುವ ವಾಹನಗಳಿಗೆ ಕೆಪಿಟಿ – ಕೂಳೂರು – ಹಳೆಯಂಗಡಿ ಮೂಲಕ ಮತ್ತು ಉಡುಪಿ ಯಿಂದ ಮಂಗಳೂರಿಗೆ ಹೋಗುವ ವಾಹನಗಳಿಗೆ ಪಡುಬಿದ್ರಿ, ಮೂಲ್ಕಿಯಿಂದ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.