ಹೊಸ ಸವಾಲಿನ ಹಾದಿಯಲ್ಲಿ ಶಿವಲಿಂಗೇಗೌಡ ಹೆಜ್ಜೆ
Team Udayavani, Apr 3, 2023, 6:10 AM IST
ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ನ ಎರಡು ದಶಕಗಳ ರಾಜಕೀಯ ಸಂಬಂಧಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿರುವ ಶಿವಲಿಂಗೇಗೌಡ ಅವರು ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಬಹುದೊಡ್ಡ ರಾಜಕೀಯ ಸವಾಲನ್ನೂ ಎದುರು ಹಾಕಿಕೊಂಡಿದ್ದಾರೆ.
ಜೆಡಿಎಸ್‌ನಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನಾಗಿ ಸಕ್ರಿಯ ರಾಜಕಾರಣ ಆರಂಭಿಸಿದ್ದ ಶಿವಲಿಂಗೇಗೌಡ ಅವರು, ಇದುವರೆಗೆ ನಾಲ್ಕು ವಿಧಾನಸಭಾ ಚುನಾವಣೆಗಳನ್ನು ಜೆಡಿಎಸ್‌ನಿಂದಲೇ ಎದುರಿಸಿದ್ದರು. ಗಂಡಸಿ ವಿಧಾನಸಭಾ ಕ್ಷೇತ್ರದ ಕೊನೆಯ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಶಿವರಾಮು ಅವರೆದುರು 18 ಮತಗಳ ಅಂತರದಿಂದ ಮೊದಲ ಸೋಲು ಕಂಡರೂ ಆನಂತರ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಮು ಅವರನ್ನೂ ಸೋಲಿಸಿದ್ದವರು.
ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ ಗಂಡಸಿ ವಿಧಾನಸಭಾ ಕ್ಷೇತ್ರ ಹರಿದು ಹಂಚಿಹೋದ ನಂತರ ಅರಸೀಕೆರೆ ವಿಧಾನಸಭಾ ಕ್ಷೇತ್ರವನ್ನು 2008ರಿಂದ ಸತತ ಮೂರು ಬಾರಿ ಜೆಡಿಎಸ್‌ನಿಂದ ಪ್ರತಿನಿಧಿಸಿ ಆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ದಾಖಲೆಯನ್ನೂ ನಿರ್ಮಿಸಿದ್ದಾರೆ.
ಅರಸೀಕೆರೆ ತಾಲೂಕು, ಗಂಡಸಿ ಹೋಬಳಿ, ಕುಡುಕುಂದಿ ಗ್ರಾಮದ ಕೃಷಿಕ ಕುಟುಂಬದ ಶಿವಲಿಂಗೇಗೌಡ ಪದವೀಧರ. ವೃತ್ತಿಯಲ್ಲಿ ಗುತ್ತಿಗೆದಾರನಾಗಿ ಆರ್ಥಿಕ ಶಕ್ತಿ ರೂಢಿಸಿಕೊಳ್ಳುತ್ತಲೇ ರಾಜಕೀಯದಲ್ಲಿ ಗಟ್ಟಿ ನೆಲೆ ಸೃಷ್ಟಿಸಿಕೊಂಡಿರುವ ಶಿವಲಿಂಗೇಗೌಡ ಅವರು ತಮ್ಮ ಗ್ರಾಮೀಣ ಭಾಷಾ ಸೊಗಡಿನಿಂದಲೇ ರಾಜ್ಯದ ಗಮನ ಸೆಳೆದ ರಾಜಕಾರಣಿ. ಹಾಗೆಯೇ ಮಹತ್ವಾಕಾಂಕ್ಷಿಯೂ ಕೂಡ.
ಎಚ್.ಡಿ.ದೇವೇಗೌಡರ ಕಟ್ಟಾ ಅಭಿಮಾನಿಯಾಗಿ, ಅವರ ಕುಟುಂಬದ ಆಪ್ತನಾಗಿಯೇ ರಾಜಕಾರಣ ಮಾಡಿಕೊಂಡು ಬರುತ್ತಿದ್ದ ಶಿವಲಿಂಗೇಗೌಡರಿಗೆ ದೇವೇಗೌಡರ ಕುಟುಂಬದವರು ರಾಜಕೀಯವಾಗಿಯಷ್ಟೇ ಅಲ್ಲ, ಅರಸೀಕೆರೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತಲೇ ಆರ್ಥಿಕವಾಗಿ ಬಲಾಡ್ಯರಾಗಲೂ ಸಹಕರಿಸುತ್ತಲೇ ಬಂದಿದ್ದರು. ಕುಟುಂಬದ ಸಂಬಂಧ ಸಖ್ಯ, ಪಕ್ಷವನ್ನು ಬಿಡುತ್ತಾರೆಂಬ ನಿರೀಕ್ಷೆಯೂ ದೇವೇಗೌಡರ ಕುಟುಂಬಕ್ಕಿರಲಿಲ್ಲ.
ಆದರೆ, ಮಹತ್ವಾಕಾಂಕ್ಷಿ ಶಿವಲಿಂಗೇಗೌಡ ಅವರು ಶಾಸಕ ಸ್ಥಾನಕ್ಕಿಂತಲೂ ಹೆಚ್ಚಿನದನ್ನು ನಿರೀಕ್ಷಿಸುತ್ತಲೇ ಇದ್ದ ಅವರು ಜೆಡಿಎಸ್‌ನಿಂದ ದಿಢೀರನೆ ಹೋಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆ ಮತ್ತು ಆನಂತರದ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿಯೂ ಹೊರ ಹೋಗುವ ಸುಳಿವು ನೀಡಿದ್ದರು. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಸ್ಥಾನವನ್ನು ಅರಸೀಕೆರೆ ಕ್ಷೇತ್ರಕ್ಕೇ ದಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ರೇವಣ್ಣ ಕುಟುಂಬದವರು ಡಾ.ಸೂರಜ್‌ಗೆ ಆ ಸ್ಥಾನವನ್ನು ಮೀಸಲಿರಿಸಿಕೊಂಡ ನಂತರ ಗೌಡರ ಕುಟುಂಬ, ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಲೇ ಹೋದ ಶಿವಲಿಂಗೇಗೌಡ ಈಗ ಅಂತಿಮವಾಗಿ ಜೆಡಿಎಸ್ ತೊರೆದಿದ್ದಾರೆ.
ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡು ರಾಜಕಾರಣದಲ್ಲಿ ಯಶಸ್ವಿಯಾಗುವುದು ಕಷ್ಟ ಎಂಬ ಮಾತಿದೆ. ಕಾಕತಾಳೀಯವಾಗಿ ಮಾಜಿ ಶಾಸಕರಾದ ಗಂಡಸಿ ಕ್ಷೇತ್ರದ ಶಾಸಕರಾಗಿದ್ದ ಈ ನಂಜೇಗೌಡ, ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಶ್ರವಣಬೆಳಗೊಳ ಕ್ಷೇತ್ರದ ಸಿ.ಎಸ್.ಪುಟ್ಟೇಗೌಡ, ಮಾಜಿ ಸಂಸದ ಎಚ್.ಕೆ.ಜವರೇಗೌಡ ಸೇರಿದಂತೆ ದೇವೇಗೌಡರ ಕುಟುಂಬದ ಸಂಬಂಧ ಕಡಿದುಕೊಂಡ ನಂತರ ರಾಜಕಾರಣದಲ್ಲಿ ಯಶಸ್ಸು ಸಾಧಿಸಲಾಗಲಿಲ್ಲ. ಬೇಲೂರಿನ ವೈ.ಎನ್.ರುದ್ರೇಶಗೌಡ ಅವರು ಮಾತ್ರ ಜೆಡಿಎಸ್ ಹೊರ ಹೋದ ನಂತರವೂ ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಶಿವಲಿಂಗೇಗೌಡ ಅವರೂ ಈಗ ದೇವೇಗೌಡರ ಕುಟುಂಬದ ಎದುರು ಹಾಕಿಕೊಂಡು ರಾಜಕಾರಣ ಬೇಕಾದ ಅನಿವಾರ್ಯ ರಾಜಕೀಯ ಸವಾಲನ್ನು ಎದುರು ಹಾಕಿಕೊಂಡಿದ್ದಾರೆ.
-ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.