ಮತ ಜಾಗೃತಿ; ಕೈಯಲ್ಲಿ ಎಷ್ಟು ಹಣ ಸಾಗಿಸಬಹುದು?
Team Udayavani, Apr 4, 2023, 6:52 AM IST
ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಘೋಷಣೆಯಾಗಿದ್ದು, ಈಗ ಹಣ ಸಾಗಾಟದ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಇದರ ನಡುವೆಯೇ ದಾಖಲೆ ಇಲ್ಲದ ನಗದು ಜಪ್ತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವೊಮ್ಮೆ ಹಣದ ಜರೂರತ್ತಿನಿಂದಾಗಿ ಕೆಲವರು ಕೈಯಲ್ಲಿ ನಗದು ಇರಿಸಿಕೊಂಡು ಹೋಗುತ್ತಿರುತ್ತಾರೆ. ಇಂಥವರು ಸಿಕ್ಕಿಬಿದ್ದು ನಾನಾ ಸಂಕಷ್ಟ , ಕಿರಿಕಿರಿ ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಬಳಿ ಕೈಯಲ್ಲಿ ನಗದು ಎಷ್ಟಿರಬೇಕು, ಹೆಚ್ಚು ನಗದು ಇದ್ದರೆ ಏನಾಗುತ್ತದೆ ಎಂಬ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ. ಈ ಬಗ್ಗೆ ಇಲ್ಲಿದೆ ಮಾಹಿತಿ.
ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ದಾಖಲೆಗಳು ಇಲ್ಲದೇನೆ ತನ್ನ ಬಳಿ ಗರಿಷ್ಠ 50 ಸಾವಿರ ರೂ. ನಗದು ಇಟ್ಟುಕೊಳ್ಳಬಹುದು. 50 ಸಾವಿರ ಮೇಲ್ಪಟ್ಟು ಇದ್ದರೆ ಅದಕ್ಕೆ ಸಮರ್ಪಕ ದಾಖಲೆಗಳನ್ನು ಹೊಂದಿರಬೇಕು. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ 2 ಲಕ್ಷ ಮೇಲ್ಪಟ್ಟು ಮೊತ್ತದ ನಗದು ರೂಪದಲ್ಲಿ ಪಾವತಿಗಳನ್ನು ಮಾಡುವಂತಿಲ್ಲ.
ಚೆಕ್, ಡಿಡಿ ಅಥವಾ ಆನ್‌ಲೈನ್ ಮೂಲಕವೇ ಪಾವತಿ ಆಗಬೇಕು. ಇಲ್ಲದಿದ್ದರೆ ಐಟಿ ನಿಯಮಗಳು ಸಹಿತ ಇತರ ಕಾನೂನು-ನಿಯಮಗಳ ಅನ್ವಯ ಕ್ರಮ ಜರಗಿಸಬೇಕಾಗುತ್ತದೆ. ಹಾಗೆ ನೋಡಿದರೆ ದಾಖಲೆಗಳಿಲ್ಲದೆ 50 ಸಾವಿರದವರೆಗೆ ನಗದು ಇಟ್ಟುಕೊಳ್ಳುವುದು, 50 ಸಾವಿರ ಮೇಲ್ಪಟ್ಟು ನಗದು ಇದ್ದರೆ ಸಮರ್ಪಕ ದಾಖಲೆಗಳನ್ನು ಇಟ್ಟುಕೊಳ್ಳುವುದು, 2 ಲಕ್ಷ ಮೇಲ್ಪಟ್ಟ ಪಾವತಿಗಳನ್ನು ನಗದು ರೂಪದಲ್ಲಿ ಮಾಡುವಂತಿಲ್ಲ ಎಂಬ ನಿಯಮಗಳು ಈಗಾಗಲೇ ಚಾಲ್ತಿಯಲ್ಲಿವೆ. ಆದರೆ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇದಕ್ಕೆ ಮಹತ್ವ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.