karnataka election 2023; ಮತದಾನ ಜಾಗೃತಿಗೆ ಹಲವು ಪ್ರಯತ್ನ
ಸ್ವೀಪ್‌ನಿಂದ ಜಾಥಾ, ಮನೆಮನೆಗೆ ಭೇಟಿ, ವಿಚಾರ ಸಂಕಿರಣ
Team Udayavani, Apr 12, 2023, 5:00 PM IST
ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ಅಧಿಕ ಮತದಾನ ಆಗಬೇಕೆಂಬ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಕ್ರಿಯವಾಗಿ ಈ ಸಮಿತಿ ಕಾರ್ಯಾಚರಣೆ ಮಾಡುತ್ತಿದೆ. ಇದಕ್ಕಾಗಿ ನಿರ್ದಿಷ್ಟ ಅನುದಾನವು ಬೇಕಾಗುತ್ತದೆ.
ಕಳೆದ ಚುನಾವಣೆಯಲ್ಲಿ ಮತ ಜಾಗೃತಿಗೆ 20 ರಿಂದ 25 ಲಕ್ಷ ರೂ. ವೆಚ್ಚ ಮಾಡಿದ್ದ ಸಮಿತಿಯು ಈ ಬಾರಿ ಅದಕ್ಕಿಂತ ಹೆಚ್ಚಿನ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸಲ್ಲಿಸಿದೆ. ಅನುದಾನದ ಕೊರತೆಯಿಲ್ಲ. ಸಾಮಾಜಿಕ ಜಾಲತಾಣ ಸಹಿತವಾಗಿ ಪ್ರತಿ ಗ್ರಾ.ಪಂ. ನಗರ ಸ್ಥಳೀಯ ಸಂಸ್ಥೆಯಿಂದಲೂ ಪ್ರಚಾರ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಕೆಲವು ಆಯಾ ಸ್ಥಳೀಯಾಡಳಿತಗಳೇ ವೆಚ್ಚ ಭರಿಸಲಿವೆ. ಕೆಲವೊಂದು ಸ್ವೀಪ್ ಸಮಿತಿ ನಿರ್ವಹಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಚುನಾವಣೆಗಳಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚುನಾವಣ ಆಯೋಗ ವ್ಯವಸ್ಥಿತ ಮತದಾರರ ನೋಂದಣಿ ಶಿಕ್ಷಣ ಮತ್ತು ಮತದಾನದಲ್ಲಿ ಭಾಗವಹಿಸುವಿಕೆಯಲ್ಲಿ ದೇಶ ದಲ್ಲಿ 2009ಕ್ಕೆ ಜಾರಿಗೆ ತಂದಿತ್ತು. 2011ರಿಂದ ಇದು ಸಕ್ರಿಯ ವಾಗಿ ಕಾರ್ಯಾಚರಣೆ ಮಾಡಲು ಆರಂಭಿಸಿತು. ಒಂದು ಲೋಕಸಭಾ ಚುನಾವಣೆಯಿಂದ ಮತ್ತೂಂದು ಲೋಕ ಸಭಾ ಚುನಾವಣೆಗೆ ಹಾಗೂ ಒಂದು ವಿಧಾನಸಭಾ ಚುನಾ ವಣೆ ಯಿಂದ ಮತ್ತೂಂದು ವಿಧಾನಸಭಾ ಚುನಾ ವಣೆಗೆ ಮತಗಳಿಕೆ ಹೆಚ್ಚಿಸುವ ಉದ್ದೇಶವನ್ನು ಈ ಸಮಿತಿ ಹೊಂದಿದೆ.
ಮತದಾರರ ಕರ್ತವ್ಯಗಳು, ಎಲೆಕ್ಟ್ರಾನಿಕ್ ಮತಯಂತ್ರ, ಆಮಿಷಗಳಿಗೆ ಒಳಗಾಗದೆ ಮತಚಲಾಯಿಸುವ ಬಗ್ಗೆ ಹಾಗೂ ಜನರಲ್ಲಿ ಮತದಾನದ ಅರಿವು ಮೂಡಿಸುವ ಉದ್ದೇಶದಿಂದ ಇದು ಕಾರ್ಯಾಚರಣೆ ಮಾಡುತ್ತಿದೆ.
ಮತದಾನ ಮಾಡಲು ಪ್ರೇರಣೆ
ಯುವ ಮತದಾರರಲ್ಲಿ ಜಾಗೃತಿ, ಜಾಥಾ, ಮನೆ ಮನೆಗೆ ಭೇಟಿ, ವಿಚಾರ ಸಂಕಿರಣ, ಜನಸಂದಣಿ ಇರು ವಲ್ಲಿ ಜಾಗೃತಿ ಕಾರ್ಯಕ್ರಮ ಹೀಗೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆ ಬಿಟ್ಟವರು, ವ್ಯಾಸಂಗ ಮಾಡುತ್ತಿರುವವರು, ಹಿರಿಯರು, ಅಂಗವಿಕಲರು ಸಹಿತ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿ ದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡು ವಂತೆ ಪ್ರೇರಣೆ ನೀಡಲಾಗುತ್ತಿದೆ. 9ನೇ ತರಗತಿ ಯಿಂದಲೇ ವಿದ್ಯಾರ್ಥಿಗಳಲ್ಲಿ ಚುನಾವಣೆ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ. ಇದಕ್ಕಾಗಿ ಶಾಲೆಗಳಲ್ಲಿ ಇಲೆಕ್ಟ್ರೋರಲ್ ಲಿಟರೆಸಿ ಕ್ಲಬ್ ಮೂಲಕ ವಿವಿಧ ಮಾಹಿತಿ ನೀಡಲಾಗುತ್ತಿದೆ.
ನಗರಕ್ಕೆ ಹೆಚ್ಚಿನ ಒತ್ತು
ಗ್ರಾಮಾಂತರಕ್ಕೆ ಹೋಲಿಸಿದರೆ ಕಡಿಮೆ ಮತದಾನ ವಾಗು ತ್ತಿರುವುದು ನಗರ ಭಾಗದಲ್ಲಿಯೇ. ಜತೆಗೆ 2018ರ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿ ರುವ ಬೂತ್ ಹಾಗೂ ಪ್ರದೇಶಗಳನ್ನು ಗುರುತಿಸಿ ಆ ಭಾಗ ದಲ್ಲಿ ಜಾಗೃತಿ ಚಟುವಟಿಕೆಗಳನ್ನು ಹೆಚ್ಚಿಸಲಾಗುತ್ತಿದೆ. ಈಗಾ ಗಲೇ ನಗರದ ಕೆಲವು ಭಾಗಗಳಲ್ಲಿ ಚುನಾವಣೆ ಜಾಗೃತಿ ಫಲಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ಹೇಗಿದೆ ವ್ಯವಸ್ಥೆ ?
ಈ ಬಾರಿಯ ಚುನಾವಣೆ ನಡೆಯಲಿರುವ ಮತಗಟ್ಟೆ ಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯಗಳು, ರ್‍ಯಾಂಪ್ ವ್ಯವಸ್ಥೆಗಳನ್ನು ಮಾಡಲಾಗು ತ್ತಿದೆ. ಅಲ್ಲದೆ ಮತ ಕೇಂದ್ರಗಳ ಶೃಂಗಾರ, ಸಖೀ ಬೂತ್, ವಿಶೇಷ ಚೇತನರ ಮತಗಟ್ಟೆ, ಟ್ರೈಬಲ್ ಮತಗಟ್ಟೆಗಳನ್ನು ಮಾಡಲಾಗಿದೆ. ಪ್ರಚಾರ, ವಿವಿಧ ಬಗೆಯ ತರಬೇತಿಗಳು, ಜಾಥಾ, ರಸಪ್ರಶ್ನೆ, ವಾಹನಗಳ, ರಾಯಭಾರಿಗಳ ಮೂಲಕ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಸ್ವೀಪ್ ಸಮಿತಿಯ ರಾಷ್ಟ್ರೀಯ ತರಬೇತುದಾರೆ ಶಾಂತಾ ಎಂ.
ಅಧಿಕ ಮತದಾನದ ಗುರಿ
ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈ ಬಾರಿ ಅತೀ ಹೆಚ್ಚು ಮತದಾನ ಆಗಬೇಕೆಂಬ ಉದ್ದೇಶ ಹೊಂದಲಾಗಿದೆ. ಸ್ವೀಪ್ ಸಮಿತಿಯ ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
– ಪ್ರಸನ್ನ ಎಚ್., ಅಧ್ಯಕ್ಷರು, ಜಿಲ್ಲಾ ಸ್ವೀಪ್ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.