Karnataka Election ಖಾಲಿ ಇರುವ 2.50 ಲಕ್ಷ ಹುದ್ದೆ ಭರ್ತಿ ಮಾಡ್ತೇವೆ: ಪ್ರಿಯಾಂಕ ಗಾಂಧಿ
ಕರ್ನಾಟಕದ ಜನ ಅರ್ಜುನನಂತೆ ಇರಬೇಕು
Team Udayavani, May 4, 2023, 8:18 PM IST
ಕೊಪ್ಪಳ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು 2.50 ಲಕ್ಷ ಹುದ್ದೆಗಳನ್ನು ಖಾಲಿಯಿಟ್ಟಿದೆ. ಅವುಗಳನ್ನು ಭರ್ತಿಮಾಡಿಕೊಂಡಿಲ್ಲ. ಒಂದೊಂದು ಹುದ್ದೆಗಳು 30, 50, 60 ಹಾಗೂ 80 ಲಕ್ಷ ರೂ. ಲಂಚ ಕೇಳುತ್ತಿದೆ. ಈ ಭ್ರಷ್ಟ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಿ ಅನುಮೋದಿತ ಎಲ್ಲ ಹುದ್ದೆ ಭರ್ತಿ ಮಾಡಲಾಗುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂದಿ ಹೇಳಿದರು.
ಕನಕಗಿರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಪರ ಪ್ರಚಾರ ನಡೆಸಿ ಮಾತನಾಡಿ,ರೈತರ ಆದಾಯ ಡಬಲ್ ಮಾಡುತ್ತೇವೆ ಎಂದವರು ತಮ್ಮ ಆದಾಯ ಡಬಲ್ ಮಾಡಿಕೊಂಡಿದ್ದು ಮನೆ ಮೇಲೆ ಮನೆ ಕಟ್ಟಿಸಿಕೊಂಡಿದ್ದಾರೆ. ದೇಶದ ರೈತ ಪ್ರತಿ ದಿನದ ಆದಾಯ 27 ರೂ. ಇದ್ದರೆ, ದೇಶದ ಪ್ರಧಾನಿ ಸ್ನೆಹಿತನ ಆದಾಯ ದಿನಕ್ಕೆ 16 ಸಾವಿರ ಕೋಟಿ ಇದೆ. ಜನಪರ ಕೆಲಸ ಮಾಡುವ ಯೋಜನೆಗಳನ್ನು ಮೋದಿ ತನ್ನ ಸ್ನೇಹಿತರಿಗೆ ಕೊಟ್ಟಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆ ಮುಚ್ಚಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸಣ್ಣ, ಮಧ್ಯಮ ಕೈಗಾರಿಕೆ ಆರಂಭಿಸಿ ಅನುದಾನದ ನೆರವು ಕೊಡುವೆವು. ಬೀದರ್-ಚಾಮರಾಜನಗರ ವರೆಗೂ ಕೈಗಾರಿಕಾ ಟೌನ್ ಶಿಪ್ ಮಾಡುವೆವು. ದುಬೈ ಮಾದರಿ ಬೆಂಗಳೂರು ವಜ್ರದ ವ್ಯಾಪಾರ ಕೇಂದ್ರ ಮಾಡುವೆವು. ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗದ ಪಟ್ಟಣದ ಪರಿವರ್ತನೆ ಮಾಡುವೆವು. ಪ್ರಣಾಳಿಕೆಯ ಎಲ್ಲ ಯೋಜನೆ ಜಾರಿ ಮಾಡುವೆವು ಎಂದರು.
ಬಿಜೆಪಿ ನೇತಾರರು, ಪ್ರಧಾನಿ, ಗೃಹ ಮಂತ್ರಿ, ಸಿಎಂ ಅವರು ನಿಮ್ಮ ಬಳಿ ಬಂದು ತಮ್ಮ ಭಾಷಣ ಮಾಡಿ ಹೋಗುತ್ತಾರೆ. ಆದರೆ ನಿಮ್ಮ ಸಮಸ್ಯೆ ಕೇಳಲು ಬರಲ್ಲ. ಅವರು ಶಾಲೆ, ಆಸ್ಪತ್ರೆ, ಮಹಿಳೆ, ಬೆಲೆ ಏರಿಕೆಯ ಬಗ್ಗೆ ಮಾತನಾಡಲ್ಲ. ಪ್ರಧಾನಿಯು ವಿಪಕ್ಷಗಳು ತಮಗೆ ಟೀಕೆ ಮಾಡಿರುವ ಬಗ್ಗೆ ಪಟ್ಟಿ ಮಾಡಿ ಹೇಳ್ತಾರೆ. ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಧರ್ಮ, ಜಾತಿ ಬಗ್ಗೆ ಮಾತಾಡುತ್ತಾರೆ. ಇದರಿಂದ ಜನರ ಹೊಟ್ಟೆ ತುಂಬಲ್ಲ ಎಂದರು.
ಕರ್ನಾಟಕದ ಜನ ಅರ್ಜುನಂತೆ ಆಗಬೇಕು. ಮೀನಿನ ಕಣ್ಣಿಗೆ ಧ್ಯಾನದಿಂದ ಗುರಿಮಾಡಿ ಹೊಡೆಯುವ ರೀತಿ ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಮತ ನೀಡಬೇಕು. ಯಾರ ಮಾತನ್ನೂ ಕೇಳಬೇಡಿ. ನಿಮ್ಮ ಧ್ಯಾನ ವಿಕಾಸ್, ಮಕ್ಕಳ ಶಿಕ್ಷಣ, ನಿಮ್ಮ ಸಮಸ್ಯೆಯ ಕಡೆ ಇರಲಿ. ನಿಮ್ಮ ನಾಯಕನು ಅಭಿವೃದ್ಧಿ ಮಾಡಲಿಲ್ಲ ಎಂದರೆ ಅವರು ನಾಯಕರಲ್ಲ. ಸರ್ಕಾರದ ಧರ್ಮ ಜನರ ಭವಿಷ್ಯ ಕಟ್ಟಬೇಕು. ಜನರ ವಿಕಾಸ, ಅಭಿವೃದ್ಧಿ ಮಾಡಬೇಕು. ನಿಮ್ಮ ಬಗ್ಗೆ ಏಳಿಗೆ ಬಗ್ಗೆ, ನಿಮ್ಮ ರಾಜ್ಯದ ಬಗ್ಗೆ ಜಾಗೃತರಾಬೇಕು. ಮತ ನೀಡುವ ಮೊದಲು ಬಿಜೆಪಿ ಏನು ಮಾಡಿದೆ ? ಕಾಂಗ್ರೆಸ್ ಏನು ಮಾಡಿದೆ ? ಮುಂದೆ ಏನು ಮಾಡಬೇಕು ಎಂದು ಯೋಚಿಸಿ ಮತ ನೀಡಿ. ಪೂರ್ಣ ಬಹುಮತದ ಸರ್ಕಾರ ಕೊಡಿ. ದುರ್ಬಲ ಸರ್ಕಾರ ಕೊಡಬೇಡಿ. ಅವರು ಸರ್ಕಾರ ಉಳಿಸಿಕೊಳ್ಳುವುದರಲ್ಲೇ ಕಾಲಹರಣ ಮಾಡುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.