ಗುಹೆ ಪತ್ತೆ; ವೀಕ್ಷಿಸಲು ಮುಗಿಬಿದ್ದ ಸ್ಥಳೀಯರು
Team Udayavani, Apr 3, 2019, 1:42 PM IST
ನಾಲ್ಕೂರು ಗ್ರಾಮದ ಮೆಟ್ಟಿನಡ್ಕದಲ್ಲಿ ಪತ್ತೆಯಾದ ಗುಹೆ.
ಗುತ್ತಿಗಾರು : ನಾಲ್ಕೂರು ಗ್ರಾಮದ ಮೆಟ್ಟಿನಡ್ಕದಲ್ಲಿ ಆಳವಾದ ಗುಹೆಯೊಂದು ಕಂಡುಬಂದಿದ್ದು, ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ.
ಮೆಟ್ಟಿನಡ್ಕ-ಕಂದ್ರಪ್ಪಾಡಿ ರಸ್ತೆ ವಿಸ್ತರಣೆ ಸಂದರ್ಭ ರಸ್ತೆಯ ಇಕ್ಕೆಲಗಳಿಗೆ ಮಣ್ಣು ತುಂಬಿಸಲು ಮೆಟ್ಟಿನಡ್ಕ ಶಾಲಾ ಬಳಿ ಗುಡ್ಡವನ್ನು ಜೆಸಿಬಿ ಮೂಲಕ ಅಗೆಯಲಾಗುತ್ತಿತ್ತು. ಕೆಲಸ ಮಾಡುತ್ತಿರುವಾಗ ಸುಮಾರು 15 ಅಡಿ ಅಗಲ ಹಾಗೂ 10 ಅಡಿಯಷ್ಟು ಆಳದ ಗುಹೆ ಕಂಡುಬಂದಿದ್ದು, ಸ್ಥಳೀಯರು ಹಾಗೂ ರಸ್ತೆ ಕೆಲಸಗಾರರು ಕಂಡು ವಿಸ್ಮಿತರಾಗಿದ್ದಾರೆ. ಇದನ್ನು ಕಂಡ ಅನಂತರ ಅಲ್ಲಿ ಮಣ್ಣು ಅಗೆಯುವ ಕಾರ್ಯವನ್ನು ಕೈಬಿಟ್ಟಿದ್ದು, ಸ್ಥಳೀಯರು ಸಹಿತ ಹಲವರು ಈ ಗುಹೆಯನ್ನು ನೋಡಲು ಸಾಗಿ ಬರುತ್ತಿದ್ದಾರೆ.
ನಿಧಿ ನಿಕ್ಷೇಪವೇ?
ಗುಹೆಯನ್ನು ನೋಡಿರುವ ಹಲವರು ಇದೊಂದು ನಿಧಿ ನಿಕ್ಷೇಪ ಇದ್ದ ಜಾಗವಾಗಿದ್ದು, ಇಲ್ಲಿ ಈ ಹಿಂದೆ ಕೊಪ್ಪರಿಗೆ ಇದ್ದಿರಬಹುದೆಂದು ಅಂದಾಜಿಸುತ್ತಿದ್ದಾರೆ. ಈ ಗುಹೆ ಕಂಡುಬಂದ ಜಾಗದ ಸಮೀಪವೇ ಭೂತ ಸ್ಥಾನವೊಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಪ್ರಶ್ನೆ ಚಿಂತನೆಯನ್ನೂ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.