ಮಾಡೆಲ್ ಆಗಿ, ಹೊಸ ಬದುಕು ರೂಪಿಸಿ
Team Udayavani, Apr 3, 2019, 1:07 PM IST
ಬೆಳೆಯುತ್ತಿರುವ ತಂತ್ರಜ್ಞಾನ, ಟಿವಿ, ಸಾಮಾಜಿಕ ಜಾಲತಾಣಗಳಿಂದಾಗಿ ಇಂದು ಸೌಂದರ್ಯವೂ ಸಮರಕ್ಕೊಡ್ಡಲ್ಪಟ್ಟಿದೆ. ಸೌಂದರ್ಯ ಎಲ್ಲರಲ್ಲೂ ಇರುತ್ತದೆ. ಆದರೆ ಅದರೊಂದಿಗೆ ಕೆಲವೊಂದು ಪ್ರತಿಭೆಯನ್ನು ಮೈಗೂಡಿಸಿಕೊಂಡರೆ ಮಾಡೆಲ್ ಆಗಿ ಹೊಸ ಬದುಕು ರೂಪಿಸಿಕೊಳ್ಳಬಹುದು. ಇಂದು ಮಾಡೆಲಿಂಗ್ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿದ್ದು, ಈ ಮೂಲಕ ಉತ್ತಮ ಆದಾಯ ಗಳಿಸಬಹುದು.
ಅರ್ಹತೆ
ಈ ಕ್ಷೇತ್ರವನ್ನು ಪ್ರವೇಶಿಸಲು ನಿರ್ದಿಷ್ಟ ಅರ್ಹತೆ ಅಥವಾ ವಯಸ್ಸಿನ ಮಿತಿ ಇಲ್ಲ. ಬಂಡವಾಳ ಮುಖ್ಯ. ವೃತ್ತಿಪರ ಛಾಯಾಚಿತ್ರ ಗ್ರಾಹಕ ತೆಗೆದ ಛಾಯಾಚಿತ್ರಗಳನ್ನು ಜಾಹೀರಾತು ಕಂಪೆನಿಗಳಿಗೆ ತೋರಿಸಬಹುದು. ಆವಶ್ಯಕತೆಗಳ ಪ್ರಕಾರ ಒಂದು ಸಂಸ್ಥೆ ಅಥವಾ ಫ್ಯಾಶನ್ ಡಿಸೈನರ್ ಅವುಗಳನ್ನು ಆರಿಸಿಕೊಳ್ಳುತ್ತಾರೆ. ವೃತ್ತಿ ಜೀವನಕ್ಕೆ ಮತ್ತೊಂದು ಮಾರ್ಗವೆಂದರೆ ನಿಯತಕಾಲಿಕೆಗಳು, ಪ್ರಾಯೋಜಿಸಿದ ಸ್ಪರ್ಧೆಗಳಲ್ಲಿ ಮತ್ತು ಸೌಂದರ್ಯ ಪ್ರದರ್ಶನಗಳಲ್ಲಿ ಭಾಗವಹಿಸುವುದು. ವಿದ್ಯಾರ್ಹತೆ ಕೂಡ ಇದಕ್ಕೆ ನಿರ್ದಿಷ್ಟವಾದುದಿಲ್ಲ. ಪದವಿ ಪಡೆದವರು ಅಥವಾ ಫ್ಯಾಶನ್ ಡಿಸೈನಿಂಗ್, ಫೋಟೋಗ್ರಾಫಿಗಳಲ್ಲಿ ಆಸಕ್ತಿ ಹೊಂದಿದವರು ಇದನ್ನು ಮಾಡಬಹುದಾಗಿದೆ. ಕ್ರಿಯಾಶೀಲತೆ ಮತ್ತು ಬಟ್ಟೆ ವಿನ್ಯಾಸಗಳಲ್ಲಿ ಆಸಕ್ತಿ ಇದ್ದರೆ ಈ ವೃತ್ತಿಯನ್ನು ಆರಿಸಿಕೊಳ್ಳಬಹುದು.
ತರಬೇತಿ ಕೇಂದ್ರಗಳು
ಮಾಡೆಲಿಂಗ್ ಕ್ಷೇತ್ರವನ್ನು ಸೇರಲು ಬಯಸುವವರಿಗೆ ಹೊಸದಿಲ್ಲಿ, ಮುಂಬಯಿಗಳಲ್ಲಿ ತರಬೇತಿ ಕೇಂದ್ರಗಳಿದ್ದು, ಕೆಲವು ತಿಂಗಳ ಅಥವಾ ವರ್ಷಗಳ ಕಾಲ ತರಬೇತಿ ಪಡೆಯಬಹುದಾಗಿದೆ. ಇದರಲ್ಲಿ ನಿಮ್ಮ ಸೌಂದರ್ಯದ ಆರೈಕೆ, ಕೂದಲಿನ ಶೈಲಿ, ಆಹಾರ ಮತ್ತು ವ್ಯಾಯಾಮದ ಬಗ್ಗೆ ಕೆಲವು ಸೂಚನೆಗಳು ಮತ್ತು ಫೋಟೋಶೂಟ್ ಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಲಿಸಿಕೊಡಲಾಗುತ್ತದೆ.
ಅರೆಕಾಲಿಕ ಉದ್ಯೋಗಕ್ಕೆ ಬೇಡಿಕೆ
ಮಾಡೆಲಿಂಗ್ ಕ್ಷೇತ್ರದಲ್ಲಿ ಆದಾಯ ಮತ್ತು ಅವಕಾಶಗಳು ಹೇರಳವಾಗಿದ್ದು, ಇದು ಗಂಟೆ, ದಿನ ಅಥವಾ ಯೋಜನೆಗಳಿಗೆ ಪೂರಕವಾಗಿರುತ್ತದೆ. ಮಾಡೆಲಿಂಗ್ ಅಲ್ಲದೆ ನೀವು ಯಾವುದೋ ಒಂದು ಉತ್ಪನ್ನಗಳ ಪ್ರಚಾರಗಳನ್ನು ಕೂಡ ಮಾಡಬಹುದಾಗಿದೆ. ಇದರಿಂದ ನೀವು ಇದನ್ನು ಪಾರ್ಟ್ ಟೈಮ್ ಆಗಿಯೂ ಮಾಡಿಕೊಳ್ಳಬಹುದು. ಇದರಿಂದ ನಿಮಗೆ ಬಿಡುವಿನ ವೇಳೆಯಲ್ಲಿ ಕೆಲವು ಯೋಜನೆಗಳನ್ನು ಕೈಗೆತ್ತಿಕೊಂಡು ಅದರಿಂದ ಆದಾಯಗಳಿಸಬಹುದು.
ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.