ಬಂಟ್ವಾಳ: ಇವಿಎಂ ಯಂತ್ರ ನಿಭಾವಣೆ ಮಾಹಿತಿ, ತರಬೇತಿ
Team Udayavani, Apr 1, 2019, 3:02 PM IST
ಇವಿಎಂ ಯಂತ್ರ ಸಹಿತ ವಿವಿಧ ಮಾಹಿತಿ ತರಬೇತಿ ಕಾರ್ಯಕ್ರಮ ನಡೆಯಿತು.
ಬಂಟ್ವಾಳ : ಲೋಕಸಭೆ ಚುನಾವಣೆ ಸಹಜ ಮತದಾನ ಪ್ರಕ್ರಿಯೆ ನಡೆಯುವಂತೆ ಮಾ. 31ರಂದು ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಇವಿಎಂ ಯಂತ್ರ ಸಹಿತ ವಿವಿಧ ಮಾಹಿತಿ ತರಬೇತಿ ಸಹಾಯಕ ಚುನಾವಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ನಡೆಯಿತು.
576 ಮಂದಿ ಅಧಿಕಾರಿಗಳು
ಒಟ್ಟು 576 ಮಂದಿ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದು ಇಬ್ಬರು ಗೈರಾಗಿದ್ದರು. ತರಬೇತಿ ಕೇಂದ್ರದ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ, ಊಟೋಪಚಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪವರ್ ಪಾಯಿಂಟ್ ಆಡಿಯೋ ಮತ್ತು ವೀಡಿಯೋ ಮೂಲಕ ಪ್ರಾತ್ಯಕ್ಷಿಕೆಯಲ್ಲಿ ಚುನಾವಣೆ ಹೇಗೆ ನಡೆಯುತ್ತದೆ. ಅಲ್ಲಿ ಬರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಧ್ಯಾಹ್ನ ಅನಂತರ ಇವಿಎಂ ಬಳಸುವುದು ಹೇಗೆ, ಅಂಧ ಮತದಾರರು ಬಂದರೆ ಅವರು ಹೇಗೆ ಮತದಾನ ಮಾಡುವುದು, ಇವಿಎಂ ದೋಷದ ಸಮಸ್ಯೆ ಬಂದರೆ ಅದನ್ನು ನಿಭಾಯಿಸುವ ಕ್ರಮ, ವಿವಿ ಪ್ಯಾಟ್ ಮತ್ತು ಮತದಾನ ಪ್ರಕ್ರಿಯೆಗಳಲ್ಲಿ ಆಧುನಿಕ ತಂತ್ರಜ್ಞಾನ ಕುರಿತು ತಿಳಿಸಲಾಯಿತು. ಇಬ್ಬರು ಇಡಿಸಿ ಅಧಿಕಾರಿಗಳು ಚುನಾವಣೆಯಂದು ಅರ್ಜಿ ನಮೂನೆ 12, 12ಎ ನೀಡುವ ಮತ್ತು ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ತರಬೇತಿ ಕೇಂದ್ರದ ಬಳಿ ವಿಶೇಷವಾಗಿ ಸ್ವಾಗತ ಕೊಠಡಿ ಇದ್ದು, ತರಬೇತಿ ಪಡೆಯಲು ಬಂದವರಿಗೆ ಸಹಕಾರಿಯಾಗಲು ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು.
ಮುಂದಿನ ಎ. 9 ರಂದು ಎರಡನೇ ಹಂತದ ತರಬೇತಿ ನಡೆಯಲಿದ್ದು ಅಂದು ಬೇರೆಬೇರೆ ತಾಲೂಕಿನ ಅಧಿಕಾರಿಗಳಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಸಣ್ಣರಂಗಯ್ಯ ತಿಳಿಸಿದರು.
ತಾ.ಪಂ. ಕಾ.ನಿ. ಅಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್, ಚುನಾವಣಾ ಉಪ ತಹಶೀಲ್ದಾರ್ ದಾದಾ ಫೈರೋಜ್, ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.
21 ತರಬೇತಿ ಕೊಠಡಿ
ತರಬೇತಿಗೆ ಒಟ್ಟು 21 ತರಬೇತಿ ಕೊಠಡಿಗಳಿದ್ದು ಪ್ರತೀ ಕೊಠಡಿಯಲ್ಲಿ ಓರ್ವ ಸೆಕ್ಟರ್ ಆಫೀಸರ್, ಒಬ್ಬರು ಗ್ರಾಮಕರಣಿಕರು, ಓರ್ವ ಡಾಟಾ ಎಂಟ್ರಿ ಆರೇಟರ್ ಇದ್ದು ಮತಗಟ್ಟೆ ಅಧಿಕಾರಿಗಳಾದ ಪಿಆರ್‌ಒ ಮತ್ತು ಎಪಿಆರ್‌ಒಗಳು ವಿವಿಧ ಮಾಹಿತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.