ಕಾಟನ್ ಕಮಾಲ್ , ಬದಲಾದ ಹವಾಮಾನ ಕುದುರಿದ ಬೇಡಿಕೆ
Team Udayavani, Jul 12, 2019, 5:19 AM IST
ಮನುಷ್ಯನ ಜೀವನಶೈಲಿ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬದಲಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿಗನುಗುಣವಾಗಿ ಹೊಸತನ್ನು ಅನುಭವಿಸಲು ಮನುಷ್ಯ ಸಂಕುಲ ಸದಾ ಸಿದ್ಧವಾಗಿರುತ್ತದೆ. ಆದರೆ, ಜೀವನಶೈಲಿ ಬದಲಾವಣೆಯಷ್ಟೇ ವೇಗವಾಗಿ ಪ್ರಾಕೃತಿಕ ಬದಲಾವಣೆಗಳೂ ಘಟಿಸುತ್ತಿರುವುದರಿಂದ ಕೆಲವೊಮ್ಮೆ ಹಳೆಯದೇ ಹೊಸತಾಗಿ ಬದಲಾಗಿ ಟ್ರೆಂಡ್ ಸೃಷ್ಟಿಸಿಬಿಡುವುದಿದೆ. ಈ ಸಾಲಿನಲ್ಲಿದೆ ಶುದ್ಧ ಕಾಟನ್ ಟ್ರೆಂಡ್.
ಶುದ್ಧ ಹತ್ತಿ ನಿಸರ್ಗದ ಕೊಡುಗೆ. ಹೆಚ್ಚು ತಾಪಮಾನ ಇರುವೆಡೆ ಇದೊಂದು ವರದಾನ. ಬಿಸಿಯನ್ನು ಹೀರಿಕೊಳ್ಳುವ ಶಕ್ತಿ ಇರುವುದರಿಂದ ಕಾಟನ್ ಬಟ್ಟೆ, ಹಾಸಿಗೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಮಂಗಳೂರಿನಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಶುದ್ಧ ಕಾಟನ್ ಬಟ್ಟೆ, ಹಾಸಿಗೆಗಳಿಗೆ ಬೇಡಿಕೆ ಹೆಚ್ಚು
ಉಡುಗೆ ತೊಡುಗೆಗಳ ಸ್ಟೈಲ್ ಪ್ರತಿ ದಿನವೂ ಬದಲಾಗುತ್ತಲೇ ಇರುತ್ತದೆ. ದೇಶೀಯ ಶೈಲಿಯ ಧಿರಿಸು, ಪಾಶ್ಚಾತ್ಯ ಶೈಲಿಯ ಉಡುಗೆಗಳೊಂದಿಗೆ ಬೆರೆತು ಹೊಸ ಶೈಲಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಮೇಲಂತೂ ಜನ ಖರೀದಿಗೆ ಮುಗಿ ಬೀಳುವಂತಾಯಿತು. ಆದರೆ, ಪಾಶ್ಚಾತ್ಯ ಉಡುಗೆಗಳ ಟ್ರೆಂಡ್ ಹೆಚ್ಚಾದಂತೆ ದೇಸೀ ಉಡುಗೆಗಳಿಗೆ ಎಲ್ಲಿ ಬೇಡಿಕೆ ಕಡಿಮೆಯಾಗಿ ಬಿಡುತ್ತದೆಯೋ ಎಂಬ ಸಣ್ಣ ಆತಂಕವೂ ವ್ಯಾಪಾರಸ್ಥರಲ್ಲಿತ್ತು. ಆದರೆ ಬದಲಾದ ಹವಾಗುಣ, ದೇಸೀ ಉಡುಗೆಗಳ ಮೋಹ ಜನರಲ್ಲಿ ಆ ಉಡುಗೆಗಳ ಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಅಂತಹ ದೇಸೀ ಉಡುಗೆ-ತೊಡುಗೆಗಳ ಪೈಕಿ ಕಾಟನ್ ಬಟ್ಟೆಗಳಿಗೆ ಸ್ಥಾನ ಇದ್ದೇ ಇದೆ.
ಮಳೆಗಾಲಕ್ಕೆ ಸಿಂಥೆಟಿಕ್, ಚಳಿಗಾಲಕ್ಕೆ ಉಣ್ಣೆ, ಖಾದಿ, ಬೇಸಗೆಗೆ ಕಾಟನ್ ಬಟ್ಟೆಗಳು ಬೆಸ್ಟ್ ಎಂಬುದು ಹಳೆ ಕಾಲದ ಮಾತು. ಈಗೇನಿದ್ದರೂ ಮಳೆ, ಚಳಿ, ಬೇಸಗೆಯೆಂಬ ಭೇದವಿಲ್ಲದೆ, ಎಲ್ಲ ಕಾಲಗಳಲ್ಲಿಯೂ ಕಾಟನ್ ಬಟ್ಟೆಯೇ ಬೆಸ್ಟ್ ಎಂಬುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಈ ರೀತಿಯ ಬದಲಾವಣೆಗೆ ಕಾರಣ ಹವಾಮಾನದಲ್ಲಾದ ಬದಲಾವಣೆಯೇ ಎಂದರೂ ತಪ್ಪಾಗದು. ಮೂರೂ ಕಾಲದಲ್ಲಿಯೂ ಸೆಕೆಯೇ ಹೆಚ್ಚಿರುವುದು ಕಳೆದೆರಡು ವರ್ಷಗಳಿಂದ ಗಮನಿಸಿರಬಹುದು. ಈ ಸೆಕೆಯಿಂದ ನಿರಾಳತೆ ಪಡೆದುಕೊಳ್ಳಲು ಕಾಟನ್ ಬಟ್ಟೆಗಳ ಮೊರೆ ಹೋಗುವುದು ಟ್ರೆಂಡ್ ಆಗಿ ಬಿಟ್ಟಿದೆ.
ಕಾಟನ್ ಕಮಾಲ್
ಹಾಗೆ ನೋಡಿದರೆ, ಶುದ್ಧ ಹತ್ತಿಯ ಬಟ್ಟೆಗಳು ಯಾವತ್ತೂ ಬೇಡಿಕೆ ಕಳೆದುಕೊಂಡಿದ್ದೇ ಇಲ್ಲ. ಆದರೆ, ಹವಾಮಾನದಲ್ಲಿ ಬದಲಾವಣೆ ಜಾಸ್ತಿಯಾದಂತೆ ಏರಿಕೆಯ ತಾಪಮಾನವಿರುವ ಪ್ರದೇಶಗಳಲ್ಲಿ ಶುದ್ಧ ಹತ್ತಿಯ ಬಟ್ಟೆಗಳ ಧರಿಸುವಿಕೆಯೇ ಹೆಚ್ಚಾಗುತ್ತಿದೆ. ಮಂಗಳೂರು ನಗರ ಹೇಳೀಕೇಳಿ ಅತೀ ಹೆಚ್ಚು ತಾಪಮಾನವಿರುವ ಪ್ರದೇಶ. ಕಡಲತಡಿ ಮಂಗಳೂರಿನಲ್ಲಿ ಇಲ್ಲಿನ ಬಿಸಿಯಾದ ಹವಾಮಾನಕ್ಕೆ ಶುದ್ಧ ಹತ್ತಿಯ ಬಟ್ಟೆಗಳ ಬಳಕೆಯೇ ಬೆಸ್ಟ್.
ಶುದ್ಧ ಹತ್ತಿಯ ಶರ್ಟ್, ಸೀರೆ ಸದ್ಯ ಟ್ರೆಂಡ್ ಆಗಿ ಚಾಲ್ತಿಯಲ್ಲಿದೆ. ಕಾಟನ್ ಸೀರೆಗೆ ವೈವಿಧ್ಯ ಕಲರ್‌ಫುಲ್ ಡಿಸೈನ್ ಹೊಂದಿರುವ ಬ್ಲೌಸ್ ಧರಿಸುವುದು ಹೊಸ ಸ್ಟೈಲ್. ಮದುವೆ ಸಮಾರಂಭಗಳಿಗೆ ರೇಷ್ಮೆ ಧರಿಸಿಯೋ, ಸಿಲ್ಕ್ ಸಾರಿ ಧರಿಸಿಯೋ ಹೋಗುವ ಕಾಲ ಮುಗಿಯಿತು. ಏಕೆಂದರೆ, ಮದುವೆ ಮನೆಗಳಲ್ಲಿಯೂ ಕಾಟನ್ ಸೀರೆಗಳದ್ದೇ ಕಮಾಲ್. ಪ್ಯೂರ್ ಕಾಟನ್ ಚೂಡಿದಾರ ಮೆಟೀರಿಯಲ್, ಜೀನ್ಸ್, ಕುರ್ತಾ, ಮಕ್ಕಳ ಉಡುಗೆಗೂ ಬೇಡಿಕೆ ಇದೆ.
ಪ್ಯೂರ್ ಕಾಟನ್ ಆಯ್ಕೆಗೆ ಸಲಹೆ
ನಗರವಾಸಿಗಳ ನೆಮ್ಮದಿಯ ನಿದ್ದೆಯನ್ನೂ ಕಸಿದುಕೊಂಡಿರುವ ಸೆಕೆ ಎಂಬ ರಾಕ್ಷಸನಿಂದ ಮುಕ್ತಿ ಪಡೆಯಲು ಕಾಟನ್ ಹಾಸಿಗೆಗಳ ಬಳಕೆಯೊಂದೇ ದಾರಿ. ಕಾಟನ್ ಹಾಸಿಗೆ, ಪಿಲ್ಲೋಗಳಿಗೂ ಬೇಡಿಕೆ ಜಾಸ್ತಿ ಇದೆ. ಮನೆಯಲ್ಲೇ ತಯಾರಿಸುವ ಹತ್ತಿಯ ಹಾಸಿಗೆ, ದಿಂಬುಗಳನ್ನು ನಗರದಲ್ಲಿ ಬಳಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.
ಕಾಟನ್ ಡ್ರೆಸ್, ಹಾಸಿಗೆ ಮಾರಾಟ ಮಾಡುವ ಮಂಗಳೂರಿನ ಬಹುತೇಕ ಅಂಗಡಿಗಳ ಸಿಬಂದಿ ಪ್ಯೂರ್ ಕಾಟನ್ ಬಟ್ಟೆ, ಹಾಸಿಗೆ, ದಿಂಬುಗಳನ್ನೇ ಕೊಳ್ಳುವಂತೆ ಸಲಹೆ ಮಾಡುತ್ತಾರೆ ಎಂಬುದು ಮತ್ತೂಂದು ವಿಶೇಷ. ದೈನಂದಿನ ವ್ಯವಹಾರಕ್ಕೆ ಬಟ್ಟೆ ಕೊಳ್ಳಲು ಬಂದವರಿಗೆ ನೈಲಾನ್ ಉಡುಪುಗಳಿಗಿಂತ ಕಾಟನ್ ಬಟ್ಟೆಗಳನ್ನೇ ಖರೀದಿಸಿ ಎಂದು ಹೇಳುತ್ತೇವೆ. ಇದರಲ್ಲಿ ಸೆಕೆ ಹೆಚ್ಚಾಗದಂತೆ ತಡೆಯುವ ಗುಣವಿದ್ದು, ಧರಿಸಿದವರಿಗೆ ಸ್ವಲ್ಪ ಮಟ್ಟಿನ ನಿರಾಳ ಸಿಗುತ್ತದೆ ಎಂಬುದೇ ಕಾರಣ ಎಂಬುದು ಬಟ್ಟೆ ಅಂಗಡಿಗಳ ಸಿಬಂದಿ ಮಾತು.
ಕಾಟನ್ ಮಾರಾಟ ಜಾಸ್ತಿ
ಬಟ್ಟೆ ಮಳಿಗೆಯೊಂದರ ಸಿಬಂದಿ ಶಿವಕುಮಾರ್ ಹೇಳುವ ಪ್ರಕಾರ, ಪುರುಷರ ಕಾಟನ್ ಶರ್ಟ್, ಇತರ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಇದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮಂಗಳೂರಿನ ಹವಾಗುಣ ಬದಲಾಗಿರುವುದರಿಂದ ಮತ್ತು ಉಷ್ಣತೆ ಜಾಸ್ತಿ ಇರುವುದರಿಂದ ಕಾಟನ್ ಬಟ್ಟೆಗಳೇ ಜಾಸ್ತಿ ಮಾರಾಟವಾಗುತ್ತಿವೆ ಎನ್ನುತ್ತಾರೆ.
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.