ಜಾಹೀರಾತಿನಲ್ಲಿ ಸೃಜನಶೀಲತೆಯೇ ಜೀವಾಳ
Team Udayavani, May 1, 2019, 12:11 PM IST
ಇಂದು ಕಾರ್ಪೊರೇಟ್ ಜಗತ್ತು ಬೆಳೆದು ನಿಂತಿದ್ದು, ಇದಕ್ಕೆ ಪೂರಕವಾಗಿ ಜಾಹೀರಾತು ಕ್ಷೇತ್ರವೂ ವಿಸ್ತರಿಸಿಕೊಂಡಿದೆ. ಜಾಹೀರಾತು ಕ್ಷೇತ್ರದಲ್ಲಿ ಇಂದು ಹಲವು ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ನಾವು ಗಮನಿಸಬಹುದಾಗಿದೆ.
ಕಾರ್ಪೊರೇಟ್ ಕಂಪೆನಿಯ ತಾನು ತಯಾರಿಸಿದ ಸರಕನ್ನು ಜನಸಾಮಾನ್ಯರಿಗೆ ಮಾಹಿತಿ ಮುಟ್ಟಿಸುವ ಮಾರ್ಗವೆಂದರೆ ಅದು ಜಾಹೀರಾತು. ವಸ್ತು, ಸೇವೆಗಳ ಬಗ್ಗೆ ಸಾಮಾಜಿಕ ವಿಷಯಗಳ ಬಗ್ಗೆ ಜನರ ಗಮನ ಸೆಳೆಯಲು ಜಾಹೀರಾತನ್ನು ಬಳಸಲಾಗುತ್ತದೆ. ಹಾಗಾಗಿ ಈ ಕ್ಷೇತ್ರದಲ್ಲಿ ಉತ್ತಮ ಸಂವಹನ ಕೌಶಲ, ಬುದ್ಧಿವಂತಿಕೆ, ಸೃಜನಾಶೀಲರಾದವರಿಗೆ ಇಲ್ಲಿ ಉದ್ಯೋಗಾವಕಾಶಗಳು ಹೆಚ್ಚಿನದವಾಗಿರುತ್ತವೆ.
ಜಾಹೀರಾತು ಕ್ಷೇತ್ರವನ್ನು ಗ್ರಾಹಕ ಸೇವೆ, ಕ್ರಿಯಾಶೀಲತೆ ಹಾಗೂ ಯೋಜನೆ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾದ ಜವಾಬ್ದಾರಿ, ಹೊಣೆಗಾರಿಕೆ ಇರುತ್ತದೆ. ಗ್ರಾಹಕ ಸೇವೆಯಲ್ಲಿ ಗ್ರಾಹಕರ ಅಭಿರುಚಿ ಹಾಗೂ ಇಷ್ಟಗಳ ಬಗ್ಗೆ ಗಮನಹರಿಸಿದರೆ, ಜಾಹೀರಾತಿನ ಸ್ಕ್ರಿಪ್ಟ್, ಬರೆವಣಿಗೆ ಹಾಗೂ ವಿಷ್ಯುವಲ್ ಬಗ್ಗೆ ಕ್ರೀಯಾಶೀಲ ವಿಭಾಗದವರೂ ಗಮನಹರಿಸಬೇಕಾಗುತ್ತದೆ. ಅನಂತರ ಜಾಹೀರಾತು ಯಶಸ್ಸಿಗೆ ತಂತ್ರ ಹೂಡುವುದು ಸ್ಟ್ರಾಟಜಿ (ಯೋಜನೆ) ವಿಭಾಗದವರ ಗಣನೀಯ ಪ್ರಯತ್ನ ಮಾಡಬೇಕಾಗುತ್ತದೆ. ಹಾಗಾಗಿ ಜಾಹೀರಾತು ಕ್ಷೇತ್ರದಲ್ಲಿ ಕ್ರಿಯವಿಟಿಯೇ ಇಲ್ಲಿನ ಮುಖ್ಯವಾದ ಸರಕು ಎಂದರೆ ತಪ್ಪಾಗಲಿಕ್ಕಿಲ್ಲ.
ಜಾಹೀರಾತು ಕ್ಷೇತ್ರದ ಉದ್ಯೋಗಕ್ಕೆ ಆರಿಸಬೇಕಾದರೆ, ಮಾರ್ಕೇಟಿಂಗ್ ವಿಭಾಗದ ಕೋರ್ಸ್‌ಗಳಾದ ಬಿಬಿಎಂ, ಎಂಬಿಎ ಪದವಿ ಪಡೆದಿರಬೇಕಾಗುತ್ತದೆ. ಅಲ್ಲದೇ ಪತ್ರಿಕೋದ್ಯಮ ಸಹಿತ ಇನ್ನು ಹಲವಾರು ಕ್ಷೇತ್ರಗಳಲ್ಲಿ ಪದವಿ ಪಡೆದವರಿಗೆ ಅವಕಾಶಗಳನ್ನು ನೀಡಲಾಗುತ್ತದೆ.
ಅನೇಕ ಉದ್ಯೋಗ ಅವಕಾಶ
ಜಾಹೀರಾತು ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಖಾಸಗಿ ಜಾಹೀರಾತು ಏಜೆನ್ಸಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಜಾಹೀರಾತು ವಿಭಾಗಗಳು, ದಿನಪತ್ರಿಕೆ, ಜರ್ನಲ್ಗಳು, ನಿಯತಕಾಲಿಕೆಗಳು, ರೇಡಿಯೊ ಮತ್ತು ದೂರದರ್ಶನಗಳ ಕಮರ್ಷಿಯಲ್ ವಿಭಾಗಗಳು, ಮಾರ್ಕೆಟ್ ರಿಸರ್ಚ್ ಸಂಸ್ಥೆಗಳು – ಈ ಎಲ್ಲೆಡೆ ಉದ್ಯೋಗಾವಕಾಶಗಳು ಹೆಚ್ಚಿವೆ. ಜತೆಗೆ ಫ್ರೀಲಾನ್ಸ್ (ಸ್ವತಂತ್ರ) ಆಗಿಯೂ ಜಾಹೀರಾತು ಸೇವೆ ಸಲ್ಲಿಸಬಹುದು. ಅಡ್ವರ್ಟೈಸಿಂಗ್ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್, ಸಾರ್ವಜನಿಕ ಸಂಪರ್ಕಾಧಿಕಾರಿ, ಕ್ರಿಯೇಟಿವ್ ಡೈರೆಕ್ಟರ್, ಕಾಪಿ ರೈಟರ್ ಮತ್ತು ಮಾರ್ಕೆಟಿಂಗ್ ಕಮ್ಯುನಿಕೇಷನ್ಸ್ ಮ್ಯಾನೇಜರ್‌ಗಳಾಗಿ ಹುದ್ದೆಗಳನ್ನು ಪಡೆಯಬಹುದು. ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗಳು ಇಂದು ಹೆಚ್ಚಿನ ಬೇಡಿಕೆಯಿದೆ. ಜಾಹೀರಾತು ಕಂಪೆನಿಗಳು ಬಹುತೇಕವಾಗಿ ಹೆಚ್ಚು ಸೃಜನಾಶೀಲ ಹಾಗೂ ಕ್ರಿಯಾಶೀಲರಾಗಿರುವ ಆಕಾಂಕ್ಷಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.