ನರ್ಸರಿ ಉದ್ಯೋಗದ ಜತೆಗೆ ಕೃಷಿ ಜ್ಞಾನ

Team Udayavani, Nov 27, 2019, 4:27 AM IST

as-29

ಓದಿನ ಜತೆ ಜತೆಗೆ ತಮ್ಮ ಓದಿಗೂ ಸಹಕಾರಿಯಾಗುವಂತ ಮತ್ತು ಕೌಶಲ ವೃದ್ಧಿ ಮಾಡುವಂತ ಕೆಲವು ಅರೆಕಾಲಿಕ ಕೆಲಸಗಳಲ್ಲಿ ನರ್ಸರಿ ನಡೆಸುವುದು ಕೂಡ ಒಂದು ಉತ್ತಮ ಮಾರ್ಗವಾಗಿದೆ. ಓದಿನ ಜತೆಗೆ ನರ್ಸರಿ ಮಾಡುವುದರಿಂದ ನಿಮ್ಮ ಓದಿಗೆ ಸಾಕಾಗುವಷ್ಟು ಹಣವನ್ನು ಸಂಪಾದಿಸಬಹುದು ಮತ್ತು ಸ್ವಾವಲಂಬಿಯಾಗಿ ವಿದ್ಯಾಭ್ಯಾಸ ಮುಂದುವರಿಸ ಬಹುದಾಗಿದೆ.

ಇತ್ತೀಚೆಗೆ ನಗರ ಮತ್ತು ಹಳ್ಳಿಗಳಲ್ಲಿ ಮನೆಯ ಅಂಧ ಹೆಚ್ಚಿಸುವಂತ ಗಿಡಗಳಿಗೆ ಜನರ ಬೇಡಿಕೆ ಹೆಚ್ಚಿದೆ. ಇದಕ್ಕಾಗಿ ಜನರು ನರ್ಸರಿಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಹಾಗಾಗಿ ಹೆಚ್ಚು ಮಾರಾಟವಾಗುವಂತ ಗಿಡಗಳನ್ನು ಹೆಚ್ಚಾಗಿ ಖರೀದಿಸಿ ಮತ್ತು ಸರಿಯಾಗಿ ನಿರ್ವಹಣೆ ಮಾಡಿದರೆ ಜನರು ನಿಮ್ಮ ಗಿಡಗಳನ್ನು ಹೆಚ್ಚು ಕೊಳ್ಳುವಂತೆ ಆಕರ್ಷಿಸಬಹುದು

ಬಂಡವಾಳ ಸಂಗ್ರಹಿಸುವುದು ಹೇಗೆ ?
ನರ್ಸರಿ ಮಾಡಬೇಕಾದರೆ ಮೊದಲಿಗೆ ಸ್ವಲ್ಪ ಮಟ್ಟದ ಬಂಡವಾಳದ ಆವಶ್ಯಕತೆ ಇದೆ. ಇದಕ್ಕಾಗಿ ನೀವು ಮನೆಯವರ ಸಹಾಯ ಅಥವಾ ನರ್ಸರಿ ಸ್ಥಾಪಿಸುವ ಇಚ್ಛೆ ಇರುವವರಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಮತ್ತು ಸಬ್ಸಿಡಿ ರೂಪದಲ್ಲಿ ಸಾಲ ನೀಡಲಾಗುತ್ತದೆ. ಈ ಮೂಲಕ ಸಾಲ ಪಡೆದು ನಂತರ ಬರುವ ಹಣದಲ್ಲಿ ಅದನ್ನು ತೀರಿಸಬಹುದಾಗಿದೆ.

ತರಬೇತಿ ಪಡೆದುಕೊಳ್ಳಿ
ನರ್ಸರಿ ಸ್ಥಾಪಿಸುವುದಕ್ಕೂ ಮುನ್ನ ಅಂತರ್ಜಾಲದಲ್ಲಿ ಅದರ ನಿರ್ವಹಣೆಯ ಬಗ್ಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ಅದನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬಹುದು ಅಥವಾ ತೋಟಗಾರಿಕೆ ಇಲಾಖೆಯಿಂದ ಕಡಿಮೆ ಶುಲ್ಕ ಅಥವಾ ಉಚಿತ ಅರೆಕಾಲಿಕ ಕೋರ್ಸ್‌ ಗಳು ಲಭ್ಯವಿವೆ. ಈ ಕೋರ್ಸ್‌ಗಳನ್ನು ಪಡೆದುಕೊಂಡರೆ ಗಿಡಗಳ ಪೋಷಣೆ ಹೇಗೆ ಮತ್ತು ಅವುಗಳಿಗೆ ಔಷಧೋಪಚಾರ ಹೇಗೆ ಮಾಡಬೇಕೆಂದು ತಿಳಿಯುವುದರಿಂದ ನರ್ಸರಿಯನ್ನು ಮತ್ತಷ್ಟು ಉತ್ತಮವಾಗಿ ನಿರ್ವಹಣೆ ಮಾಡಬಹುದಾಗಿದೆ.

ನರ್ಸರಿ ಮಾಡುವಾಗ ಒಬ್ಬರಿಗೆ ಅದರ ನಿರ್ವಹಣೆ ಕಷ್ಟವಾಗಬಹುದು ಮತ್ತು ಅದರ ನಿರ್ವಣೆಗೆ ನೀವು ಕೆಲಸಗಾರರ ಮೊರೆ ಹೊಗಬೇಕಾಗಿ ಬರಬಹುದು. ಇದನ್ನು ತಪ್ಪಿಸಲು ನಿಮ್ಮ ಜತೆಗೆ ಓದುತ್ತಿರುವ ಮತ್ತು ಪಾರ್ಟ್‌ ಟೈಮ್‌ ಕೆಲಸ ಮಾಡಲು ಆಸಕ್ತಿ ಇರುವಂತ ನಿಮ್ಮ ಸ್ನೇಹಿತರನ್ನು ಸೇರಿಸಿಕೊಂಡು ನರ್ಸರಿ ನಡೆಸಬಹುದು. ಇದರಿಂದ ನಿರ್ವಹಣೆಯು ಸುಲಭ ಮತ್ತು ನಿಮ್ಮಿಂದ ನಿಮ್ಮ ಸ್ನೇಹಿತನ ವಿದ್ಯಾಭ್ಯಾಸಕ್ಕೂ ನೆರವಾದಂತೆ ಆಗುತ್ತದೆ.

ಸ್ಥಳದ ಆಯ್ಕೆ
ನರ್ಸರಿಯನ್ನು ಸ್ವಲ್ಪ ಜಾಗದಲ್ಲಿಯೂ ಮಾಡಬಹುದು. ನಿಮ್ಮ ಮನೆ ಆಥವಾ ಮೇಲ್ಛಾವಣಿಯನ್ನು ಬಳಸಿಕೊಂಡು ನರ್ಸರಿ ಆರಂಭಿಸಬಹುದಾಗಿದೆ. ಇದರಿಂದ ನಿಮ್ಮ ಬಿಡುವಿನ ವೇಳೆ ನೀರು, ಗೊಬ್ಬರ ನೀಡಿ ಗಿಡಗಳ ಪೊಷಣೆ ಮಾಡಲೂ ಸಹಕಾರಿಯಾಗುತ್ತದೆ.

ಅರ್ಹತೆಗಳು
·  ಸಸ್ಯಗಳ ಪೊಷಣೆ ಬಗ್ಗೆ ಪ್ರೀತಿ ಇರಬೇಕು.
·  ವಿಶೇಷ ಕಾಳಜಿ ಅಗತ್ಯ.
·  ಸರಿಯಾದ ಸ್ಥಳ ಇರಬೇಕು.
·  ಸಮಯಕ್ಕೆ ನೀರು, ಗೊಬ್ಬರ ನೀಡಿ.

- ಶಿವಾನಂದ್‌ ಎಚ್‌.

ಟಾಪ್ ನ್ಯೂಸ್

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.