ಕೇಂದ್ರ ಸರಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ
Team Udayavani, May 8, 2019, 5:50 AM IST
ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ಸರಕಾರದ ವಿವಿಧ ಇಲಾಖೆ ಗಳಲ್ಲಿ ಖಾಲಿ ಇರುವ 8,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮೇ 29 ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ ಮೇ 31, 2019. ಕೇಂದ್ರ ಸರಕಾರದ ವಿವಿಧ ಇಲಾಖೆಗಳು, ಸಚಿವಾ ಲಯಗಳು ಹಾಗೂ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಗ್ರೂಪ್ ಸಿ ವಿಭಾಗದಲ್ಲಿ ನಾನ್ ಗೆಜೆಟೆಡ್-ನಾನ್ ಮಿನಿಸ್ಟೇರಿಯಲ್ ಹುದ್ದೆಗಳು ಹಾಗೂ ಮಲ್ಟಿ ಟಾಸ್ಕಿಂಗ್ ಸಿಬಂದಿ ಸಹಿತ 8,000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕನಿಷ್ಠ 18ರಿಂದ ಗರಿಷ್ಠ 25 ವರ್ಷಗಳ ವಯೋ ಮಿತಿಯಿದೆ. ಪರಿಶಿಷ್ಟ ಜಾತಿ, ವರ್ಗದವರಿಗೆ 30ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 28 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 35 ವರ್ಷ ಮತ್ತು ವಿಧವೆ ಮತ್ತು ವಿಚ್ಛೇಧಿತ ಮಹಿಳೆಯರಿಗೆ 40 ವರ್ಷ ವಯೋಮಿತಿಯಿದೆ.
ಅರ್ಜಿ ಶುಲ್ಕ 100 ರೂ ಇದೆ. ಮಹಿಳೆಯರು, ಪರಿಶಿಷ್ಟ ಜಾತಿ, ವರ್ಗ, ವಿಕಲಾಂಗ ಚೇತನರಿಗೆ ಮತ್ತು ಮಾಜಿ ಸೈನಿಕರಿಗೆ ಶುಲ್ಕದಲ್ಲಿ ವಿನಾಯಿತಿ ಇದೆ. ಇದರಲ್ಲಿ ಎರಡು ಪರೀಕ್ಷೆಗಳಿವೆ. ಮೊದಲನೆಯ ಪೇಪರ್ ಬಹುಆಯ್ಕೆಯ ಮಾದರಿಯಾಗಿದ್ದು, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುತ್ತದೆ. ತಪ್ಪು ಉತ್ತರಗಳಿಗೆ 25% ಅಂಕ ಕಳೆಯಲಾಗುತ್ತದೆ. ಎರಡನೇ ಪೇಪರ್‌ನಲ್ಲಿ ಪ್ರಬಂಧ ಬರೆಯಬೇಕಾಗಿದ್ದು, ಇಂಗ್ಲಿಷ್‌ನಲ್ಲಿ ಅಥವಾ ಸಂವಿಧಾನದ 8ನೇ ಶೆಡ್ಯೂಲ್ನಲ್ಲಿರುವ ಯಾವುದೇ ಭಾಷೆಯಲ್ಲಾದರೂ ಪರೀಕ್ಷೆ ಬರೆಯಬಹುದು. ಕಂಪ್ಯೂಟರ್ ಆಧಾರಿತ ಮೊದಲ ಹಂತದ ಪರೀಕ್ಷೆಯು ಆಗಸ್ಟ್ 2 ರಿಂದ 6ರವರೆಗೆ ನಡೆಯಲಿದೆ. 2ನೇ ಹಂತದ ಪರೀಕ್ಷೆಯು ನವಂಬರ್‌ನಲ್ಲಿ ನಡೆಯಲಿದೆ.
ಎಸೆಸೆಲ್ಸಿ ಪಾಸಾದವರು ಮತ್ತು ಡಿಪ್ಲೊಮಾ ಪದವೀಧರರು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
https://ssc.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.