ಸಮಯ ಹೊಂದಾಣಿಕೆ ಪರೀಕ್ಷೆ ಅರ್ಧ ಗೆದ್ದಂತೆ


Team Udayavani, Feb 19, 2020, 5:25 AM IST

skin-19

ಯಾವುದೇ ವಿಷಯದ ಬಗ್ಗೆ ನಮಗೆ ಅರಿವಿರದಿದ್ದಾಗ ಭಯ ಸಾಮಾನ್ಯ. ರಸ್ತೆಯೇ ಇಲ್ಲದ ಊರಿಗೆ ಹೊರಟಾಗ ಅಳುಕು ಕಾಡುತ್ತದೆ, ಹೋಗಿ ಬಂದು, ಹೋಗಿ ಬಂದು ಅಭ್ಯಾಸವಾಗಿಬಿಟ್ಟರೆ “ಆನೆ ನಡೆದದ್ದೇ ದಾರಿ’ ಎಂಬಂತೆ ಸಣ್ಣ ಕಾಲುದಾರಿಯೇ ಮುಂದೊಂದು ದಿನ ಹೆದ್ದಾರಿಯಾಗಿ ಬದಲಾಗುತ್ತದೆ. ಪರೀಕ್ಷೆ ಎದುರಿಸಲು ಸುಲಭೋಪಾಯವೆಂದರೆ ಆರಂಭದಿಂದ ಓದಲು ಶುರು ಮಾಡುವುದು.

ಸರಿಯಾದ ವೇಳಾಪಟ್ಟಿಯನ್ನು ಅನುಸರಿಸುವುದು. ತರಗತಿಗೆ ಗೈರಾಗದಿರುವುದು. ಹೆಚ್ಚೆಚ್ಚು ಬಾರಿ ಪುನರಾವರ್ತನೆ ಮಾಡುವುದು. ಅಣಕು ಪರೀಕ್ಷೆಗಳಲ್ಲಿ ಭಾಗವಹಿಸುವುದು. ಇದಕ್ಕೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಪರಾಮರ್ಶಿಸುವುದು. ಹಿರಿಯ ವಿದ್ಯಾರ್ಥಿಗಳ ಸಲಹೆ- ಮಾರ್ಗದರ್ಶನ ಪಡೆಯಬೇಕು. ಮೊಬೈಲ್‌ ಬಳಕೆಗೆ ಸ್ವಯಂ ನಿಷೇಧ ವಿಧಿಸಿ, ಹೆಚ್ಚು ಸಮಯ ಲೈಬ್ರರಿಯಲ್ಲಿ ಸೆರೆಯಾಗುವಂತಾಗಬೇಕು. ವಿಷಯ ಜ್ಞಾನವನ್ನು ವೃದ್ದಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಮುಖ್ಯವಾದುವುಗಳು. ಚುಟುಕಾಗಿ ಹೇಳಬೇಕೆಂದರೆ ಸ್ವಯಂ ಶಿಸ್ತು ಅಳವಡಿಸಿಕೊಳ್ಳುವುದು.

ವಿಷಯವನ್ನು ಪ್ರೀತಿಸಿ
ಈ ಎಲ್ಲಾ ಸಂಗತಿಗಳು ನಿಮಗೆ ಗೊತ್ತಿಲ್ಲದವೇನಲ್ಲ. ಆದರೆ ಅವುಗಳನ್ನು ಅನುಸರಿಸದಿರುವುದೇ ನಾವು ಮಾಡುವ ತಪ್ಪು. ಮುಖ್ಯವಾಗಿ ಒಂದು ಮಾತನ್ನು ಚೆನ್ನಾಗಿ ನೆನಪಿಡಿ. ನಾವು ಆಯ್ದುಕೊಂಡ ಕೋರ್ಸ್‌ಗ ಳನ್ನು ಮೇಲೆ ನಮಗೆ ಅಪಾರ ಪ್ರೀತಿ ಇರಬೇಕು. ನಾವು ನಮ್ಮ ಕೋರ್ಸನ್ನು ಪ್ರೀತಿಸಬೇಕು. “ನನ್ನ ಗುರಿ ತಲುಪಲು ನಾನೇ ಹೋರಾಡುತ್ತೇನೆ’ ಎಂದು ಅಂದುಕೊಂಡ ಘಳಿಗೆಯಲ್ಲಿ ಅಡಗಿದೆ ನೋಡಿ ಯಶಸ್ಸಿನ ಸೀಕ್ರೆಟ್‌. ಹೇಗೆ ಅರ್ಜುನನಿಗೆ ಮರದ ಮೇಲೆ ಕುಳಿತ ಪಕ್ಷಿಯ ಕಣ್ಣಿನ ಹೊರತು ಬೇರೇನೂ ಕಾಣಿಸಲಿಲ್ಲವೋ, ಹಾಗೆಯೇ ನಮಗೆ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರದ ಹೊರತು ಬೇರೇನೂ ಕಾಣದಂತಿರಬೇಕು.

ಸಮಯ ಮುಖ್ಯ
ಸಮಯ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅತಿ ಅಗತ್ಯ. ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತಿರುತ್ತದೆ. ವಿದ್ಯಾರ್ಥಿ ಜೀವನದಲ್ಲಂತೂ ಸಮಯದ ಅಗತ್ಯ ಕಡಿಮೆ ಏನಲ್ಲ. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ವರೆಗೆ ವಿದ್ಯಾರ್ಥಿಗಳು ಸಮಯವನ್ನು ಹೊಂದಿಸಿಕೊಳ್ಳುವುದು ಮುಖ್ಯ. ಹೀಗೆ ಮಾಡಿದರೆ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಸಾಧ್ಯ.

ನಿರ್ವಹಣೆ ಹೇಗೆ?
ಕಾಲೇಜಿಗೆ ಬರುವ ಸಮಯವನ್ನು ಸರಿಯಾಗಿ ನಿಗದಿಪಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ವಿಚಾರಗೋಷ್ಠಿ, ಕಾರ್ಯ ಯೋಜನೆಯಂತಹ ಪಠ್ಯೇತರ ಚಟುವಟಿಕೆಗಳನ್ನು ಹೇಳಿದ ಸಮಯಕ್ಕೆ ಸರಿಯಾಗಿ ಹಾಜರುಪಡಿಸುವುದು. ಜತೆಗೆ ಅಂತಹ ಚಟುವಟಿಕೆಗಳನ್ನು ಸಮಯಕ್ಕಿಂತ ಮೊದಲೇ ಮಾಡಿ ಮುಗಿಸುವುದು ಉತ್ತಮ. ಅವಸರದಲ್ಲಿ ಮಾಡಿದರೆ ಅದರ ಮೌಲ್ಯ ಕುಸಿಯುತ್ತದೆ.

ಮೊಬೈಲ್‌ ಬಳಕೆಗೆ ಮಿತಿ ಇರಲಿ
ಇಂದು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಸಮಯವನ್ನು ಕಸಿದುಕೊಳ್ಳುತ್ತಿವೆ. ಶಾಲಾ ಕಾಲೇಜುಗಳಲ್ಲಿ ಮೊಬೈಲ್‌ ಬಳಕೆಯನ್ನು ನಿಯಂತ್ರಿಸಿದರೂ ಅದರ ಬಳಕೆ ಕಡಿಮೆಯಾಗುತ್ತಿಲ್ಲ. ಸಮಯವನ್ನು ಹೊಂದಿಸಿಕೊಂಡು ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದರೆ ಯಶಸ್ಸು ನಿಮ್ಮದಾಗುತ್ತದೆ. ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ತಪ್ಪಲ್ಲ. ಆದರೆ ಅವುಗಳ ಬಳಕೆಗೆ ಮಿತಿ ಇರಲಿ.

ವೇಳಾ ಪಟ್ಟಿ
ಸಮಯದ ಪರಿಪಾಲನೆಗೆ ಒಂದು ಉತ್ತಮ ಅಭ್ಯಾಸ ಕೆಲಸಗಳ ಪಟ್ಟಿಯನ್ನು ತಯಾರಿಸಿಕೊಳ್ಳುವುದು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ಅಂದಿನ ಕೆಲಸದ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದರಂತೆ ಕಾರ್ಯಗಳನ್ನು ಮಾಡತೊಡಗಿದರೆ ಯಾವುದೇ ಸಮಸ್ಯೆಯಾಗದು. ಆ ದಿನ ಕೆಲಸಗಳು ಸಲೀಸಾಗಿ ಮಾಡಿಕೊಂಡು ಹೋಗಲು ಹಾಗೂ ಸಮಯ ನಿರ್ವಹಣೆ ಕೂಡ ಸರಿಯಾಗಿ ಆಗುತ್ತದೆ. ವಿದ್ಯಾರ್ಥಿಗಳಂತೂ ಈ ವೇಳಾಪಟ್ಟಿಯನ್ನು ತಯಾರಿಸಿದ್ದಲ್ಲಿ ವಿದ್ಯಾಭ್ಯಾಸ, ಪಠ್ಯೇತರ ಚಟುವಟಿಕೆಗಳಿಗೆ ಸಮಯ ಸರಿಯಾಗಿ ಹೊಂದಿಸಿ ಕೊಳ್ಳಲು ಸಾಧ್ಯ. ಸಮಯ ಎಲ್ಲಿ ವ್ಯರ್ಥವಾಗುತ್ತಿದೆ ಎಂಬುದಕ್ಕೆ ಈ ವೇಳಾಪಟ್ಟಿ ಉತ್ತರ ನೀಡುತ್ತದೆ.

ಕಷ್ಟದ ವಿಷಯಕ್ಕೆ ಹೆಚ್ಚು ಸಮಯ
ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಲೇಬೇಕಾಗುತ್ತದೆ. ಆದರೆ ಅದಕ್ಕೂ ಒಂದು ಉತ್ತಮ ಪೂರ್ವ ಯೋಜನೆ ಬೇಕು. ಸಮಯದ ಹೊಂದಾಣಿಕೆ ಇಲ್ಲದೆ ಪರೀಕ್ಷೆಯನ್ನು ಯಶಸ್ವಿ ಯಾಗಿ ಎದುರಿಸಲು ಸಾಧ್ಯವೇ ಇಲ್ಲ. ಪರೀಕ್ಷೆಗೆ ಒಂದೆರಡು ತಿಂಗಳ ಮೊದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಪ್ರತಿಯೊಂದು ವಿಷಯಕ್ಕೂ ಇಂತಿಷ್ಟೇ ಸಮಯವನ್ನು ಮೀಸಲಿಡಬೇಕು. ಯಾವ ವಿಷಯ ಹೆಚ್ಚು ಕಷ್ಟವೋ ಅದಕ್ಕಾಗಿ ಅಧಿಕ ಸಮಯ ಮೀಸಲಿಡುವುದು ಒಳಿತು.

- ಅಭಿಮನ್ಯು

ಟಾಪ್ ನ್ಯೂಸ್

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Rey Mysterio Sr

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.