ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!


Team Udayavani, Mar 18, 2020, 4:44 AM IST

stand-up-comedy

ಮಾತು ಬಂಗಾರ ಮೌನ ಬೆಳ್ಳಿ ಎನ್ನುವ ಮಾತೊಂದಿದೆ. ಆದರೆ ಇನ್ನೂ ಕೆಲವರಿಗೆ ಮಾತೇ ಬಂಡವಾಳ.
ಅಚ್ಚುಕಟ್ಟಾಗಿ ಆ ಸಮಯ ಸಂದರ್ಭಕ್ಕೆ ತಕ್ಕಂತೆ ಪಟಪಟನೆ ಮಾತನಾಡುವುದು ಒಂದು ಕಲೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಇರುವಂಥದ್ದಲ್ಲ. ಇಂದು ಮಾತೇ ಬಂಡವಾಳವಾಗಿರುವ ಹಲವು ವೃತ್ತಿಗಳಿವೆ. ನಿರೂಪಕ, ಆರ್‌ಜೆ, ಆ್ಯಂಕರ್‌ ಮತ್ತು ಸ್ಟಾಂಡಪ್‌ ಕಾಮಿಡಿ. ಇಂದು ಹೆಚ್ಚು ಮುನ್ನೆಲೆಗೆ ಬಂದಿರುವಂತ ಕಲೆಗಳಲ್ಲಿ ಸ್ಟಾಂಡಪ್‌ ಕಾಮಿಡಿಯೂ ಒಂದಾಗಿದೆ. ವಿದ್ಯಾರ್ಥಿಗಳು ಕಲಿಕೆಯೋದಿಗೆ ಮಾಡಬಹುದಾದ ಆಫ್ಬೀಟ್‌ ವೃತ್ತಿಗೆ ಇದು ಅನುಕೂಲ.

ಏನಿದು ಸ್ಟಾಂಡಪ್‌ ಕಾಮಿಡಿ?
ಯಾವುದೇ ಒಂದು ವೇದಿಕೆ ಮೇಲೆ ನಿಂತುಕೊಂಡು ತನ್ನ ವಿನೋದಮಯ ಮಾತು, ಪಂಚ್‌ ಡಯಲಾಗ್‌, ಚುಟುಕು ಹಾಸ್ಯ, ಮುಖದ ಹಾವ, ಭಾವದ ಮೂಲಕ ಪ್ರೇಕ್ಷಕರನ್ನು ಮನಸಾರೆ ನಗಿಸುವಂತಹ ಕಲೆಯೇ ಸ್ಟಾಂಡಪ್‌ ಕಾಮಿಡಿ. ಇದಕ್ಕೆ ಕನ್ನಡದಲ್ಲಿ ಗಂಗಾವತಿ ಪ್ರಾಣೇಶ್‌, ಪ್ರೊ| ಕೃಷ್ಣೇಗೌಡ್ರು, ಬಸವರಾಜ ಮಹಾಮನಿಯಂಥೆ ಇನ್ನೂ ಹಲವು ವ್ಯಕ್ತಿಗಳು ಇದಕ್ಕೋಂದು ಹೊಸ ರೂಪ ನೀಡಿದರು. ಇಂದು ಕನ್ನಡದಲ್ಲಿ ನಮ್ದುಕೆ, ಕನ್ನಡ್‌ ಗೊತ್ತಿಲ್ಲ ಡಾಟ್‌ ಕಾಮ್‌, ಲೋಲ್‌ಬಾಗ್‌ ಇನ್ನಿ°ತರ ಯುವ ತಂಡಗಳು ಹುಟ್ಟಿಕೊಂಡಿವೆ.

ಬೇಡಿಕೆ ಹೇಗಿದೆ?
ಜಗತ್ತಿನಾದ್ಯಂತ ಸ್ಟಾಂಡಪ್‌ ಕಾಮಿಡಿಯನ್‌ಗೆ ಹೆಚ್ಚು ಬೇಡಿಕೆ ಇದೆ. ಜನರು ತಮ್ಮ ಒತ್ತಡದ ಜೀವನದ ಮಧ್ಯೆ ನಗುವುದು ತುಂಬ ವಿರಳ. ಹಾಗಾಗಿ ಎಲ್ಲೊ ಕಚೇರಿ, ಸಂಭಾಂಗಣ, ಹೋಟೆಲ್‌ಗ‌ಳಲ್ಲಿ ಐಟಿ, ಬಿಟಿ ಕಚೇರಿಗಳಲ್ಲಿ ಚಿಕ್ಕ ಕಾರ್ಯಕ್ರಮ ಏರ್ಪಡಿಸಿ ಸ್ಟಾಂಡಪ್‌ ಕಾಮಿಡಿಯನ್‌ಗಳನ್ನು ಆಹ್ವಾನಿಸುತ್ತಾರೆ. ಜನಪ್ರಿಯತೆಗೆ ತಕ್ಕಂತೆ ಸಾವಿರದಿಂದ ಲಕ್ಷದ ವರೆಗೂ ಸಂಬಳವಿದೆ. ಯವುದೇ ಬಂಡವಾಳವಿಲ್ಲ ಗಂಟಲನ್ನು ಸ್ವಲ್ಪ ದುಡಿಸಿದರೆ ಸಾಕು.

ಇರಬೇಕಾದ ಕೌಶಲಗಳು
ಸ್ಟಾಂಡಪ್‌ ಕಾಮಿಡಿಯನ್ನು ಹೇಳಿ ಕೊಡುವುದಕ್ಕಾಗಿ ಯಾವುದೇ ಕೋರ್ಸ್‌, ತರಗತಿಗಳೇನು ಇರುವುದಿಲ್ಲ. ಅಷ್ಟಕ್ಕೂ ಸ್ಟಾಂಡಪ್‌ ಕಾಮಿಡಿ ಎನ್ನುವಂಥ‌ದ್ದು ಯಾರೋ ಹೇಳಿಕೊಟ್ಟು ಬರುವಂಥದ್ದಲ್ಲ. ಅದು ನಮ್ಮೊಳಗೇ ಇರುವಂತ ಕಲೆ ಅದು ನಮ್ಮ ಮಾತಿನ ಕಲೆಯನ್ನು ಬಳಸಿಕೊಳ್ಳುವ ಆಧಾರದ ಮೇಲೆ ನಿರ್ಧರಿತವಾಗುತ್ತದೆ.

 ಮಾತನಾಡುವ ಚಾಕಚಕ್ಯತೆ ಬೇಕು.
 ಗಂಟೆಗಟ್ಟಲೆ ನಿಲ್ಲುವ ಸಾಮರ್ಥ್ಯ ಮತ್ತು ಪ್ರೇಕ್ಷಕರು ನಿರಾಸಕ್ತರಾಗದಂತೆ ಹುರಿದುಂಬಿಸುವುದು.
 ಆ ಪರಿಸ್ಥಿತಿಗೆ ತಕ್ಕಂತೆ ಚುಟುಕು ಸಾಹಿತ್ಯ, ಹಾಸ್ಯ, ವಿನೋದಾವಳಿಗಳನ್ನು ಹೇಳುವ ಕಲೆ ಬೇಕು.
ಸವಾಲುಗಳೇನು?
ಸ್ಟಾಂಡಪ್‌ ಕಾಮಿಡಿಯನ್‌ಗಳಿಗೆ ಕೇವಲ ಉತ್ತಮ ಮಾತುಗಾರಿಕೆಯೊಂದೆ ಅಲ್ಲ, ಇತರೆ ಸವಾಲುಗಳು ಇರುತ್ತವೆ.
 ಇತರೆ ಪ್ರದೇಶಗಳಿಗೆ ಕಾರ್ಯಕ್ರಮಕ್ಕೆ ಹೋಗುವಾಗ ಆ ಪ್ರದೇಶ, ಜನ, ಅವರ ಭಾಷೆ, ಸಂಸ್ಕೃತಿಗೆ ತಕ್ಕಂತೆ ನಿಮ್ಮ ಮಾತುಗಳಿರಲಿ.
 ಪ್ರೇಕ್ಷಕರೊಂದಿಗೆ ನೇರವಾಗಿ ಸಂವಾದಕ್ಕಿಳಿಯುವ ಕಲೆ ಗೊತ್ತಿರಬೇಕಾಗುತ್ತದೆ.
 ಒಂದಾದ ಅನಂತರ ಒಂದು ಪಂಚ್‌ ಡೈಲಾಗ್‌ ಮೂಲಕ ಪ್ರೇಕ್ಷರನ್ನು ರಂಜಿಸಬೇಕು ಇಲ್ಲವಾದರೆ ಪ್ರೇಕ್ಷರಲ್ಲಿ ಆಸಕ್ತಿ ಕುಂದುತ್ತದೆ.
 ಕಾರ್ಯಕ್ರಮದ ಮಧ್ಯ ಪೋಲಿ ಹುಡುಗ, ಹುಡುಗಿಯರ ಗೇಲಿಗಳು ಇರಬಹುದು ಅದಕ್ಕೇ ಹಾಸ್ಯಮಯವಾಗಿಯೇ ಪಂಚ್‌ ನೀಡುವ ಸಮಯ ಪಜ್ಞೆ ಇರಬೇಕಾದದ್ದೇ. ಯಾವುದೇ ಕಾರಣಕ್ಕೂ ಮಾತನಾಡುವ ಭರದಲ್ಲಿ ಒಂದು ಜನಾಂಗ, ಸಂಸ್ಕೃತಿಯನ್ನು ಅವಮಾನಿಸಬಾರದು.

ಇಂದು ಸ್ಟಾಂಡಪ್‌ ಕಾಮಿಡಿಗೆ ಅನೇಕ ವೇದಿಕೆಗಳಿವೆ ಇವುಗಳನ್ನು ಬಳಸಿಕೊಂಡು ಕಾಲೇಜು ವಿದ್ಯಾರ್ಥಿಗಳು ತಮ್ಮ ಕಲೆಯನ್ನು ತೋರ್ಪಡಿಸಬಹುದು. ಯುಟ್ಯೂಬ್‌, ಫೆಸ್‌ಬುಕ್‌, ಇತರ ಸಾಮಾಜಿಕ ಜಾಲತಾಣಗಳು ಮತ್ತು ಇತರೆ ಖಾಸಗಿ ಕಾರ್ಯಕ್ರಮಗಳಲ್ಲಿ ತಮ್ಮ ಕಲೆ ತೋರಿಸಬಹುದು ಇದರ ಮೂಲಕ ಹಣವನ್ನೂ ಗಳಿಸಬಹುದಾಗಿದೆ.

 ಶಿವಾನಂದ ಎಚ್‌.

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.